ಶ್ರೀ ಪುಂಡಲೀಕ ಹಾಲಂಬಿ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೨೪ ಪುಂಡಲೀಕ ಹಾಲಂಬಿ (೨0೧೨–೨0೧೫) ಜೀವನ  ಪ್ರಬುದ್ಧ ಸಂಘಟಕರು, ಹೋರಾಟಗಾರರು, ವಾಗ್ಮಿಗಳು ಕ್ರಿಯಾಶಾಲಿಗಳು ಆದ ಪುಂಡಲೀಕ ಹಾಲಂಬಿ ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಾಲಾಡಿ ಗ್ರಾಮದಲ್ಲಿ ಚಂದ್ರಶೇಖರ ಹಾಲಂಬಿ ವಾಸಂತಿ ದಂಪತಿಗಳ ಸುಪುತ್ರರಾಗಿ ೨೧-೧-೧೯೫೧ರಲ್ಲಿ ಜನಿಸಿದರು. ಹಾಸನಜಿಲ್ಲೆಯ ಅರಕಲಗೂಡಿನಲ್ಲಿ ಪ್ರಾಥಮಿಕ […]

ಡಾ. ನಲ್ಲೂರು ಪ್ರಸಾದ್

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೨೩ ನಲ್ಲೂರು ಪ್ರಸಾದ್ (೨00೮–೨0೧೨) ಜೀವನ  ಕನ್ನಡ ಅಧ್ಯಾಪಕರೂ ಕವಿಗಳೂ ಜಾನಪದ ವಿದ್ವಾಂಸರೂ ಆದ ಆರ್.ಕೆ. ನಲ್ಲೂರು ಪ್ರಸಾದ್ ಅವರು ೨೬-೧೧-೧೯೪೭ರಂದು ಸಂಜೀವಯ್ಯ-ಶಾಂತಮ್ಮ ದಂಪತಿಗಳಿಗೆ ಚೆನ್ನರಾಯಪಟ್ಟಣದ ನಲ್ಲೂರಿನಲ್ಲಿ ಜನಿಸಿದರು. ಪ್ರೌಢವಿದ್ಯಾಭ್ಯಾಸವನ್ನು ಚೆನ್ನರಾಯಪಟ್ಟಣದಲ್ಲಿ ಮುಗಿಸಿ ಶ್ರವಣಬೆಳಗೊಳದ ಶ್ರೀಗೊಮ್ಮಟೇಶ್ವರ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಮತ್ತು […]

ಡಾ. ಚಂದ್ರಶೇಖರ ಪಾಟೀಲ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೨೨ ಚಂದ್ರಶೇಖರ ಪಾಟೀಲ (ಚಂಪಾ) (೨00೪–೨00೮) ಜೀವನ ಕನ್ನಡದ ಕವಿ, ನಾಟಕಕಾರ, ವಿಮರ್ಶಕ, ಹೋರಾಟಗಾರರಾದ `ಚಂಪಾ’ ನಮದಿಂದ ಪ್ರಖ್ಯಾತರಾದ ಚಂದೃಶೇಖರ ಪಾಟೀಲ ಅವರು ೧೯೩೯ರಲ್ಲಿ ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನಲ್ಲಿ ಜನಿಸಿದರು. ಹತ್ತಿಮತ್ತೂರು-ಹಾವೇರಿಗಳಲ್ಲಿ ಕನ್ನಡ ಶಾಲೆ-ಹೈಸ್ಕೂಲ್ ಮುಗಿಸಿ, ೧೯೫೬ರಲ್ಲಿ ಕರ್ನಾಟಕ ಕಾಲೇಜಿಗೆ ಸೇರಿದವರು. […]

ಶ್ರೀ ಹರಿಕೃಷ್ಣ ಪುನರೂರು

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೨೧ ಹರಿಕೃಷ್ಣ ಪುನರೂರು (೨00೧–೨00೪) ಜೀವನ  ವ್ಯವಹಾರ ಚತುರರೂ, ಸಾಹಿತ್ಯ ಪ್ರೇಮಿಗಳೂ, ಕಲಾಪೋಷಕರೂ ಆದ ಹರಿಕೃಷ್ಣ ಪುನರೂರು ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಾಜ ಸೇವೆಯಲ್ಲಿ ನಿರತರು. ಅವರು ತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಿಗಾಗಿ  ಧರ್ಮದರ್ಶಿ ಎಂಬ ಬಿರುದನ್ನು […]

ಶ್ರೀ ಎನ್. ಬಸವಾರಾಧ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೨0 ಎನ್. ಬಸವಾರಾಧ್ಯ (೧೯೯೮–೨00೧) ಜೀವನ  ನಿಘಂಟು ತಜ್ಞರೂ ಹಳಗನ್ನಡ ವಿದ್ವಾಂಸರೂ ವೀರಶೈವ ಸಾಹಿತ್ಯ ಪರಿಣತರೂ ಆದ ಎನ್. ಬಸವಾರಾಧ್ಯರು ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ನಾರಸಿಂಹನಹಳ್ಳಿಯಲ್ಲಿ ನಂಜುಂಡಾರಾಧ್ಯ-ಗಿರಿಜಮ್ಮ ದಂಪತಿಗಳ ಸುಪುತ್ರರಾಗಿ ೨0-೭-೧೯೨೬ರಲ್ಲಿ ಜನಿಸಿದರು. ಗೌರಿಬಿದನೂರಿನಲ್ಲಿ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಮುಗಿಸಿ […]

ಡಾ. ಸಾ. ಶಿ. ಮರುಳಯ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೧೯ ಅಧ್ಯಕ್ಷರು : ಸಾ. ಶಿ. ಮರುಳಯ್ಯ (೧೯೯೫–೧೯೯೮) ಜೀವನ : ಕವಿಗಳೂ ವಿಮರ್ಶಕರೂ ಅಧ್ಯಾಪಕರೂ ಆಗಿರುವ ಸಾ.ಶಿ. ಮರುಳಯ್ಯ ಅವರು ತುಮಕೂರು ಜಿಲ್ಲೆಯ ಚಿಕ್ಕನಾಯನಹಳ್ಳಿ ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ೨೮-೧-೧೯೩೧ರಲ್ಲಿ ಶಿವರುದ್ರಯ್ಯ-ಸಿದ್ದಮ್ಮ ದಂಪತಿಗಳಿಗೆ ಸುಪುತ್ರರಾಗಿ ಜನಿಸಿದರು. ಬಾಲ್ಯದ ವಿದ್ಯಾಭ್ಯಾಸವನ್ನು ಚಿಕ್ಕನಾಯಕನಹಳ್ಳಿಯಲ್ಲಿ […]

ಶ್ರೀ ಗೊ. ರು. ಚನ್ನಬಸಪ್ಪ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೧೮ ಅಧ್ಯಕ್ಷರು : ಗೊ. ರು. ಚನ್ನಬಸಪ್ಪ (೧೯೯೨–೧೯೯೫) ಜೀವನ  ಜಾನಪದ ಸಾಹಿತಿಯಾಗಿ ಸಂಘಟಕರೂ ಸಾರ್ವಜನಿಕ ಸೇವಾಗ್ರೇಸರರೂ ಆಗಿರುವ ಗೊ.ರು. ಚನ್ನಬಸಪ್ಪ ಅವರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಗೊಂಡೇದಹಳ್ಳಿಯಲ್ಲಿ ರುದ್ರಪ್ಪಗೌಡರು-ಅಕ್ಕಮ್ಮ ದಂಪತಿಗಳಿಗೆ ಪುತ್ರರಾಗಿ ೧೮-೫-೧೯೩0ರಲ್ಲಿ ಹುಟ್ಟಿದರು. ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟಕ್ಕೆ […]

ಶ್ರೀ ಜಿ.ಎಸ್. ಸಿದ್ಧಲಿಂಗಯ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೧೭ ಅಧ್ಯಕ್ಷರು : ಜಿ.ಎಸ್. ಸಿದ್ಧಲಿಂಗಯ್ಯ (೧೯೮೯–೧೯೯೨) ಜೀವನ  ಶಿಕ್ಷಣತಜ್ಞರೂ ಕವಿಗಳೂ ವಚನ ಸಾಹಿತ್ಯ ವಿದ್ವಾಂಸರೂ ಆದ ಜಿ.ಎಸ್. ಸಿದ್ಧಲಿಂಗಯ್ಯನವರು ತುಮಕೂರಿನ ಬೆಳ್ಳಾವೆಯಲ್ಲಿ ೨0-೨-೧೯೩೧ರಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿಯನ್ನು, ವಿಶ್ವವಿದ್ಯಾನಿಲಯದಿಂದ ೧೯೬೧ರಲ್ಲಿ ಎಂ.ಎ. ಪದವಿ ಗಳಿಸಿದರು. […]

ಶ್ರೀ ಹೆಚ್. ಬಿ. ಜ್ವಾಲನಯ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೧೬ ಅಧ್ಯಕ್ಷರು : ಹೆಚ್. ಬಿ. ಜ್ವಾಲನಯ್ಯ ಜೀವನ : ನಾಟಕಕಾರರು ಸಾಹಿತಿಗಳು, ಸಂಘಟಕರು ಆದ ಹೆಚ್.ಬಿ. ಜ್ವಾಲನಯ್ಯ ಅವರು ಹಾಸನದವರು. ಹಾಸನದಲ್ಲೇ ವಿದ್ಯಾಭ್ಯಾಸ ಪೂರೈಸಿದ ಇವರು ವಿದ್ಯಾರ್ಥಿ ದೆಸೆಯಲ್ಲಿಯೇ ನಾಟಕ ಸಾಹಿತ್ಯದಲ್ಲಿ ಆಸಕ್ತಿ ತಳೆದರು. ಆಕಾಶವಾಣಿ ಮೂಲಕ ಇವರ ಅನೇಕ […]

ಡಾ. ಹಂಪನಾಗರಾಜಯ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೧೫ ಅಧ್ಯಕ್ಷರು : ಹಂಪನಾಗರಾಜಯ್ಯ (೧೯೭೮ – ೧೯೮೬) ಜೀವನ  ಭಾಷಾ ಶಾಸ್ತ್ರಜ್ಞರು, ಸಂಶೋಧಕರು, ಪ್ರಾಧ್ಯಾಪಕರು, ಜೈನ ವಿದ್ವಾಂಸರು ಆದ ಹಂಪನಾ ಅವರು (ಹಂಪಸಂದ್ರದ ಪದ್ಮನಾಥಯ್ಯನವರ ಪುತ್ರ ನಾಗರಾಜಯ್ಯ) ೭-೧0-೧೯೩೬ರಲ್ಲಿ ಪದ್ಮನಾಭಯ್ಯ-ಪದ್ಮಾವತಮ್ಮ ದಂಪತಿಗಳಿಗೆ ೪ನೇ ಮಗುವಾಗಿ ಗೌರಿಬಿದನೂರಿನ ಹಂಪಸಂದ್ರದಲ್ಲಿ ಜನಿಸಿದರು. ಪ್ರಾಥಮಿಕ […]

1 2 3