೮೨ನೇ ಸಾಹಿತ್ಯ ಸಮ್ಮೇಳನದ ನಿರ್ಣಯಗಳು

ಮನು ಬಳಿಗಾರ್

ಡಿಸೆಂಬರ್ ೨,೩ ಮತ್ತು ೪ರಂದು ರಾಯಚೂರಿನಲ್ಲಿ ನಡೆದ ೮೨ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾನುಮತದಿಂದ  ಕೈಗೊಂಡ ನಿರ್ಣಯಗಳು ಇಂತಿವೆ:

೧. ೮೨ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟ ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೂ ಮತ್ತು ವರ್ಣನಾತೀತ ಆತಿಥ್ಯವನ್ನು ನೀಡಿದ ಸಮಸ್ತಬಂಧುಗಳಿಗೂ, ಪ್ರೀತಿ ತೋರಿದ ರಾಯಚೂರಿನ ಸಮಸ್ತ ಜನತೆಗೂ ಈ ಮಹಾಸಭೆಯು ಹೃತ್ಪೂರ್ವಕ  ಧನ್ಯವದಾಗಳನ್ನು ಹಾಗೂ ಕೃತಜ್ಞತೆಗಳನ್ನು ಅರ್ಪಿಸುತ್ತದೆ.

೨. ಕರ್ನಾಟಕದೊಳಗೆ ಇರುವ ಕನ್ನಡ ಮಾಧ್ಯಮ ವ್ಯಾಸಂಗಿಗಳಿಗೆ ಸಿಗುತ್ತಿರುವ ಸಕಲ ಶೈಕ್ಷಣಿಕ ಮತ್ತು ಉದ್ಯೋಗ ಸಂಬಂಧಿ ಸೌಲಭ್ಯಗಳು ಇಡಿಯಾಗಿ ಹೊರನಾಡ ಕನ್ನಡಿಗರಿಗೂ ಸಿಗಬೇಕೆಂದು ಈ ಸಮ್ಮೇಳನವು ಸರ್ಕಾರವನ್ನು ಒತ್ತಾಯಿಸುತ್ತದೆ.

೩. ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಸಮಾನ ಶಿಕ್ಷಣಕ್ಕೆ ಸೂಕ್ತ ನೀಲಿನಕ್ಷೆಯನ್ನು ಸಿದ್ಧಗೊಳಿಸಿ ಶೀಘ್ರವಾಗಿ ಅನುಷ್ಠಾನಗೊಳಿಸಬೇಕೆಂದು ಈ ಸಮ್ಮೇಳನವು ಸರ್ಕಾರವನ್ನು ಒತ್ತಾಯಿಸುತ್ತದೆ.

೪.  ಸರ್ಕಾರ ಈಗ ಕೈಬಿಟ್ಟಿರುವ ರಾಷ್ಟ್ರಕವಿ ಆಯ್ಕೆಯನ್ನು ಚಾಲನೆಗೊಳಿಸಿ ರಾಷ್ಟ್ರಕವಿ ಪುರಸ್ಕಾರ ಕೊಡುವ ಪದ್ಧತಿಯನ್ನು ಮುಂದುವರೆಸಬೇಕೆಂದು ಈ ಸಮ್ಮೇಳನವು ಸರ್ಕಾರವನ್ನು ಒತ್ತಾಯಿಸುತ್ತದೆ.

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)