ಶ್ರೀ ಪಿ. ಮಲ್ಲಿಕಾರ್ಜುನಪ್ಪ

ಗೌರವ ಕೋಶಾಧ್ಯಕ್ಷರು

mallikarjunappa

ಮಂಡ್ಯ ಜಿಲ್ಲೆ ಕಿರುಗಾವಲು ಗ್ರಾಮದಲ್ಲಿ ಜನಿಸಿದ ಶ್ರೀ. ಪಿ. ಮಲ್ಲಿಕಾರ್ಜುನಪ್ಪ ಅವರು ಮಂಡ್ಯದಲ್ಲಿ ಶಿಕ್ಷಣವನ್ನು ಪಡೆದು, ಕೇಂದ್ರ ಸರ್ಕಾರದ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಹಿರಿಯ ಅಧಿಕಾರಿಯಾಗಿ ಮೂವತ್ತೈದು ವರ್ಷ ಸೇವೆಗೈದು ನಿವೃತ್ತಿ ಹೊಂದಿದ್ದಾರೆ.

ಕವಿಯಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳೂ ಸೇರಿದಂತೆ ಹಲವಾರು ಕವಿ ಗೋಷ್ಠಿಗಳಲ್ಲಿ ಭಾಗವಹಿಸಿ ಕವನಗಳನ್ನು ಮಂಡಿಸಿದ್ದಾರೆ. ಮಲ್ಲಿಕಾರ್ಜುನಪ್ಪ ಅವರಿಂದ ಇದುವರೆಗೆ ಹದಿಮೂರು ಕವಿತಾ ಸಂಕಲನಗಳು ಪ್ರಕಟಗೊಂಡಿವೆ. ಆತ್ಮಾವಲೋಕನ, ಪ್ರಸ್ತುತ ಪ್ರಸ್ಥಾನ, ಚಿತ್ತ ಎತ್ತ, ಭಾವಯಾನ, ಮತ್ತೆ ಮತ್ತೆ ಕವಿತೆ, ಈ ನೆಲದ ಮೇಲೆ, ಯಾರ ಮೇಲೆ ಯುದ್ಧ, ಹುಣ್ಣಿಮೆ, ತಹತಹ ಮುಂತಾದವು ಕವನ ಸಂಕಲನಗಳಾಗಿವೆ. ಡಾ. ನಲ್ಲೂರು ಪ್ರಸಾದ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಮಾವೇಶಗಳ ಸಂಚಾಲಕರಾಗಿದ್ದ ಪಿ. ಮಲ್ಲಿಕಾರ್ಜುನಪ್ಪ ಅವರು ಪರಿಷತ್ತಿನ ಅಧ್ಯಕ್ಷರಾಗಿದ್ದ ಶ್ರೀ ಪುಂಡಲೀಕ ಹಾಲಂಬಿ ಅವರ ಅವಧಿಯಲ್ಲಿ ಗೌರವ ಕೋಶಾಧ್ಯಕ್ಷರಾಗಿದ್ದರು. ನಂತರ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಕೆ. ದಯಾನಂದ ಅವರು ಮಲ್ಲಿಕಾರ್ಜುನಪ್ಪ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರರನ್ನಾಗಿ ನೇಮಕಮಾಡಿಕೊಂಡರು. ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರು ಇದೀಗ ಮಲ್ಲಿಕಾರ್ಜುನಪ್ಪ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರನ್ನಾಗಿ ಮತ್ತೆ ನೇಮಕ ಮಾಡಿಕೊಂಡಿದ್ದಾರೆ.

Tag: P. Mallikarjunappa, Koshadhyaksharu, Karyakarisamithi, Treasurer

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)