ಶ್ರೀ ವ.ಚ. ಚನ್ನೇಗೌಡ

ಗೌರವ ಕಾರ್ಯದರ್ಶಿಗಳು

cahannegowda

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ವಡೇರಹಳ್ಳಿಯಲ್ಲಿ ದಿ. ಚನ್ನೇಗೌಡ ಮತ್ತು ದಿ. ಕೆಂಪಮ್ಮ ದಂಪತಿಗಳ ಪುತ್ರರಾಗಿ 1963 ರಲ್ಲಿ ಜನಿಸಿದ ಶ್ರೀ ವ.ಚ. ಚನ್ನೇಗೌಡ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷರಾಗಿ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಗಳ ಉಳಿವು ಬೆಳವಣಿಗೆಗೆ ಮೌಲ್ಯಯುತ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ನಾಡು, ನುಡಿ, ನೆಲ, ಜಲಕ್ಕೆ ಹಾಗೂ ರೈತರಿಗೆ ಸಮಸ್ಯೆ ಎದುರಾದಾಗ ಚಳುವಳಿ ಹಾಗೂ ಹೋರಾಟಗಳಲ್ಲಿ ಸಕ್ರಿಯವಾಗಿ ಮುಂಚೂಣಿಯಲ್ಲಿ ಭಾಗವಹಿಸಿದ್ದಾರೆ. ಶ್ರೀಯುತರು ತಮ್ಮ ಸಾಹಿತ್ಯ ಕೃಷಿಯ ಮೂಲಕ ಕರ್ನಾಟಕದ ರಕ್ಷಣೆ ನಮ್ಮ ಹೊಣೆ, ನಮ್ಮ ಸಾಧನೆ : ಒಂದು ಹಕ್ಕಿನೋಟ ಎಂಬ ಕೃತಿಗಳನ್ನು ರಚಿಸಿದ್ದು, ನಾಡಾಭಿಮಾನ ಇವರ ಸಂಪಾದಿತ ಕೃತಿಯಾಗಿದೆ.

ಚನ್ನೇಗೌಡ ಅವರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಂಘಟಿತ ಕಾರ್ಯಗಳಿಗಾಗಿ ಕನ್ನಡ ಚಿರಂಜೀವಿ ಪ್ರಶಸ್ತಿ, ಕನ್ನಡ ಕಟ್ಟಾಳು ಪ್ರಶಸ್ತಿ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಸನ್ಮಾನ, ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪರಿಷತ್ತಿನ ವತಿಯಿಂದ ಗೌರವ ಸನ್ಮಾನ ಹಾಗೂ ಡಾ. ನಲ್ಲೂರು ಪ್ರಸಾದ್ ಪ್ರತಿಷ್ಠಾನದಿಂದ ಶ್ರೇಷ್ಠ ರಾಜ್ಯ ಸಂಘಟಕ ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪರಿಷತ್ತಿನಲ್ಲಿ ಒಂದೂವರೆ ಕೋಟಿ ರೂಪಾಯಿಗಳ ದತ್ತಿನಿಧಿ ಸ್ಥಾಪಿಸಿ, ಶ್ರೇಷ್ಠ ಸಾಹಿತಿಯೊಬ್ಬರಿಗೆ ಏಳು ಲಕ್ಷದ ಒಂದು ರೂ.ಗಳ ನಗದು ಪುರಸ್ಕಾರದೊಂದಿಗೆ ನೃಪತುಂಗ ಸಾಹಿತ್ಯ ಪ್ರಶಸ್ತಿ ನೀಡುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ಈ ಪ್ರಶಸ್ತಿಯ ಆಯ್ಕೆ ಸಮಿತಿಗೆ ಹಾಗೂ ಪರಿಷತ್ತಿನ ದತ್ತಿನಿಧಿ ಸಲಹಾ ಸಮಿತಿಗೆ ಸದಸ್ಯರಾಗಿ ಮತ್ತು ಬೆಂಗಳೂರು ನಗರ ಜಿಲ್ಲೆಯ ಶಾಂತಿನಗರ ವಿಧಾನಸಭಾ ಕ್ಷೇತ್ರ ಘಟಕದ ಕಸಾಪ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಶ್ರೀ ವ.ಚ. ಚನ್ನೇಗೌಡ ಅವರನ್ನು ಮಾನ್ಯ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಗೌರವ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿದ್ದಾರೆ.

Tag: Va.Cha. Channegowda, Karyadarshi, Karyakari Samithi, Secretary

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)