ವೆಂಕಟಾಚಲಶಾಸ್ತ್ರಿಗಳಿಗೆ ನೃಪತುಂಗ ಪುರಸ್ಕಾರ

tvv

ವೆಂಕಟಾಚಲಶಾಸ್ತ್ರಿಗಳಿಗೆ  ನೃಪತುಂಗ ಪುರಸ್ಕಾರ

tvv

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಯು 2015ನೇ ಸಾಲಿಗೆ ಹಿರಿಯ ವಿದ್ವಾಂಸ ಡಾ. ಟಿ. ವಿ. ವೆಂಕಟಾಚಲಶಾಸ್ತ್ರಿ ಅವರಿಗೆ ಸಂದಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕಸಾಪದಲ್ಲಿರಿಸಿರುವ 1.5 ಕೋಟಿ ರೂ. ದತ್ತಿಯ ಮೂಲಕ ಕನ್ನಡದ ಗಣ್ಯ ಸಾಧಕರಿಗೆ ನೃಪತುಂಗ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಮನು ಬಳಿಗಾರ್, ಕನ್ನಡ ವಿವಿ ಕುಲಪತಿಗಳಾದ ಡಾ. ಮಲ್ಲಿಕಾ ಘಂಟಿ, ವಿಮರ್ಶಕ ಡಾ. ಎಚ್.ಎಸ್. ರಾಘವೇಂದ್ರ ರಾವ್, ಬಿಎಂಟಿಸಿ ಅಧಿಕಾರಿಗಳು, ಕೇಂದ್ರೀಯ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷರನ್ನೊಳಗೊಂಡ ಆಯ್ಕೆ ಸಮಿತಿ ಈ ತೀರ್ಮಾನ ಕೈಗೊಂಡಿತ್ತು.

ಪ್ರಶಸ್ತಿಯು ಏಳು ಲಕ್ಷದ ಒಂದು ರೂ. ನಗದು, ಪ್ರಶಸ್ತಿ ಫಲಕ, ಶಾಲು ಹಾಗೂ ಫಲತಾಂಬೂಲವನ್ನು ಒಳಗೊಂಡಿದೆ.  ದಿನಾಂಕ 19.01.2017ರಂದು ಬೆಂಗಳೂರಿನ ಸರ್. ಪುಟ್ಟಣ್ಣಚೆಟ್ಟಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಎಲ್ಲ ಗಣ್ಯರ ಉಪಸ್ಥಿತಿಯಲ್ಲಿ ಧರ್ಮಸ್ಥಳದ  ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗಡೆ ಅವರು ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರಿಗಳಿಗೆ  ನೃಪತುಂಗ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

Tag: T.V. Venkatachala Shasthri, Nrupathunga Prashasthi

1 Comment

  1. ಪ್ರೋತ್ಸಾಹಿಸುವ ಈ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಹೀಗೆ ಬೆಳೆಯಲಿ..

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)