ಕನ್ನಡ - ನೇಪಾಳಿ ಪರಸ್ಪರ ಸಾಹಿತ್ಯ, ಸಂಸ್ಕೃತಿ ಪ್ರಚಾರ - ಮಹತ್ವದ ಒಪ್ಪಂದಕ್ಕೆ ಸಹಿ

ಕನ್ನಡ ಮತ್ತು ನೇಪಾಳಿ ಸಾಹಿತ್ಯ, ಸಂಸ್ಕೃತಿ ಪ್ರಚಾರದ ಮೂಲಕ ಶಾಂತಿ ಹಾಗೂ ಮಾನವತೆಯನ್ನು ಬಲಪಡಿಸುವ ಸದುದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತು, ನೆರೆರಾಷ್ಟ್ರವಾದ ನೇಪಾಳದಲ್ಲಿರುವ ನೇಪಾಳಿ ಕಲಾ ಡಾಟ್ ಕಾಂ ಪ್ರತಿಷ್ಠಾನ - ಇವರೊಂದಿಗೆ ಅಂತರರಾಷ್ಟ್ರೀಯ ಮಹತ್ವದ ಒಪ್ಪಂದಕ್ಕೆ ದಿನಾಂಕ 04-05-2017 ರಂದು ಸಹಿ ಹಾಕಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರು ಹಾಗೂ ನೇಪಾಳಿ ಕಲಾ ಡಾಟ್ ಕಾಂ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಮೊಮಿಲ ಜೋಶಿ ಅವರು ಈ ಒಡಂಬಡಿಕೆಗೆ ಸಹಿ ಮಾಡಿದರು.

ಈ ಒಪ್ಪಂದದ ಪ್ರಕಾರ ಕನ್ನಡದ 50 ಕವಿಗಳ 50 ಕವನಗಳನ್ನು ನೇಪಾಳಿ ಭಾಷೆಗೆ ಭಾಷಾಂತರಗೊಳಿಸಿ ಕನ್ನಡ ನಾಡು-ನುಡಿ, ಸಂಸ್ಕೃತಿಯ ಬಗ್ಗೆ ನೇಪಾಳದಲ್ಲಿ ಕನ್ನಡ ಸಂಸ್ಕೃತಿ ಪಸರಿಸುವಂತೆ ಮಾಡುವುದು ಹಾಗೇ ನೇಪಾಳಿಯಲ್ಲಿನ 50 ಕವಿತೆಗಳನ್ನು ಕನ್ನಡಕ್ಕೆ ಭಾಷಾಂತರಿಸುವುದು. ಹೀಗೆ ಪರಸ್ಪರ ದೇಶಗಳ / ರಾಜ್ಯಗಳ ಬರಹಗಾರರ ಸಾಹಿತ್ಯ ಕೃತಿಗಳನ್ನು (ಕವಿತೆ, ಸಣ್ಣಕತೆ, ಪ್ರಬಂಧ ಇತ್ಯಾದಿ) ಪರಸ್ಪರ ಭಾಷಾಂತರಿಸಿ ಪ್ರಕಟಿಸಲು ಉಭಯತ್ರರರು ಒಪ್ಪಿ ಸಹಿ ಮಾಡಿರುತ್ತಾರೆ.

ಭಾಷಾ ಬೆಳವಣಿಗೆಗೆ ಹಾಗೂ ಸಾಹಿತ್ಯ, ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪ್ರಚಾರ ಮಾಡುವ ಈ ನೋದ್ದೇಶಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಪ್ರಪ್ರಥಮವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಒಪ್ಪಂದಕ್ಕೆ ಸಹಿ ಮಾಡಿರುವುದು ಅತ್ಯಂತ ಸಂತಸದ ವಿಚಾರವಾಗಿದೆ.

IMG_0409
IMG_0423