ಪರಿಷತ್ತಿನ ಪ್ರಕಟಣೆಗಳು

 

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಗ್ರಂಥ ಪ್ರಕಟಣೆಗಳ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ೧೭೫೦ಕ್ಕೂ ಮಿಗಿಲಾದ ಸಂಖ್ಯೆಯಲ್ಲಿ ಗ್ರಂಥಗಳನ್ನು ಪ್ರಕಟಿಸಿರುವ ಪರಿಷತ್ತಿನ ಗ್ರಂಥಗಳಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಉಲ್ಲೇಖಿಸಲೇಬೇಕಾದ ಅನೇಕ ಗ್ರಂಥಗಳಿವೆ. ಜನಸಾಮಾನ್ಯರಿಗೆ , ಮಕ್ಕಳಿಗೆ, ಮಹಿಳೆಯರಿಗೆ, ಕನ್ನಡೇತರರಿಗೆ, ವಿದ್ವಾಂಸರಿಗೆ ಬೇಕಾದ ಅನೇಕ ಗ್ರಂಥಗಳನ್ನು ಪರಿಷತ್ತು ಪ್ರಕಟಿಸುತ್ತಾ ಬಂದಿದೆ.