ಸಾಹಿತ್ಯ ಸಮ್ಮೇಳನ-೩೬ : ಕುಮಟಾ
ಡಿಸೆಂಬರ್ ೧೯೫೩

೩೬ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ವಿ. ಸೀತಾರಾಮಯ್ಯ ಕನ್ನಡದ ಕವಿ, ವಿದ್ವಾಂಸ, ವಿಮರ್ಶಕ, ಸದಭಿರುಚಿಯ ಕಲಾರಾಧಕರಾಗಿದ್ದ ವಿ. ಸೀತಾರಾಮಯ್ಯನವರ ತಂದೆ ವೆಂಕಟರಾಮಯ್ಯ ಮತ್ತು ತಾಯಿ ದೊಡ್ಡ ವೆಂಕಮ್ಮ. ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ ೨-೧0-೧೮೯೯ರಲ್ಲಿ ಜನನ. ಬೆಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ೧೯೨0ರಲ್ಲಿ ಬಿ. ಎ. ೧೯೨೨ರಲ್ಲಿ ಎಂ. ಎ. […]

ಸಾಹಿತ್ಯ ಸಮ್ಮೇಳನ-೩೫ : ಬೇಲೂರು
ಮೇ ೧೯೫೨

೩೫ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಶಿ.ಚ. ನಂದೀಮಠ ಸಂಸ್ಕೃತ, ಕನ್ನಡಗಳಲ್ಲಿ ಪಾಂಡಿತ್ಯ ಪಡೆದ ಎಸ್. ಸಿ. ನಂದೀಮಠರು  (ಶಿವಲಿಂಗಯ್ಯ ಚನ್ನಬಸವಯ್ಯ ನಂದೀಮಠ) ೧೨-೧೨-೧೯00ರಲ್ಲಿ ಗೋಕಾಕ ತಾಲ್ಲೂಕಿನ ನಂದೀಗ್ರಾಮದಲ್ಲಿ ಜನಿಸಿದರು. ಗೋಕಾಕ ಮತ್ತು ಬೆಳಗಾವಿಗಳಲ್ಲಿ ಆರಂಭದ ವಿದ್ಯಾಭ್ಯಾಸ ಮಾಡಿದ ಇವರು ಧಾರವಾಡದಲ್ಲಿ ಬಿ.ಎ. ಪದವಿಯನ್ನೂ, ೧೯೨೬ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನೂ […]

ಸಾಹಿತ್ಯ ಸಮ್ಮೇಳನ-೩೪ : ಮುಂಬಯಿ
ಡಿಸೆಂಬರ್ ೧೯೫೧

೩೪ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಎಂ. ಗೋವಿಂದ ಪೈ ಕನ್ನಡದ ಪ್ರಥಮ ರಾಷ್ಟ್ರಕವಿ ಎಂಬ ಪ್ರಶಸ್ತಿಗೆ ಪಾತ್ರರಾದವರು ಎಂ. ಗೋವಿಂದ ಪೈ. ಹಳಗನ್ನಡ ವಿದ್ವಾಂಸರೂ ಕವಿಗಳೂ ಆದ ಇವರು ಸಾಹುಕಾರ ತಿಮ್ಮಪ್ಪ – ದೇವಕಿಯಮ್ಮ ದಂಪತಿಗಳ ಪುತ್ರರಾಗಿ ೨೩-೩-೧೮೮೩ರಲ್ಲಿ ಮಂಜೇಶ್ವರದಲ್ಲಿ ಜನಿಸಿದರು. ಮಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮಾಡಿ ಮದರಾಸ್ ವಿಶ್ವವಿದ್ಯಾಲಯದಲ್ಲಿ […]

ಸಾಹಿತ್ಯ ಸಮ್ಮೇಳನ-೩೩ : ಸೊಲ್ಲಾಪುರ
ಮೇ ೧೯೫0

೩೩ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಎಂ.ಆರ್. ಶ್ರೀನಿವಾಸಮೂರ್ತಿ ಕನ್ನಡ ಶ್ರೀರತ್ನತ್ರಯರಲ್ಲಿ ಒಬ್ಬರಾದ (ಬಿಎಂಶ್ರೀ, ಎಂ ಆರ್‍ ಶ್ರೀ, ತೀನಂಶ್ರೀ) ಎಂ. ಆರ್. ಶ್ರೀನಿವಾಸಮೂರ್ತಿ ಅವರು ಹಾಸನದಲ್ಲಿ ರಾಮಚಂದ್ರಯ್ಯ ಸಾವಿತ್ರಮ್ಮ ದಂಪತಿಗಳಿಗೆ ೨೮-೮-೧೮೯೨ರಲ್ಲಿ  ಜನಿಸಿದರು. ಮೈಸೂರು, ಬೆಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಪೂರೈಸಿ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು (೧೯೧೫) ಪಡೆದರು. ವಿದ್ಯಾ […]

ಸಾಹಿತ್ಯ ಸಮ್ಮೇಳನ-೩೨ : ಕಲಬುರ್ಗಿ
ಮಾರ್ಚ್ ೧೯೪೯

೩೨ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ರೆವರೆಂಡ್ ಉತ್ತಂಗಿಚೆನ್ನಪ್ಪ ಅಭಿನವ ಸರ್ವಜ್ಞ ಕವಿ ಎಂದೇ ಬಿರುದಾಂಕಿತರಾದ ರೆವರೆಂಡ್ ಉತ್ತಂಗಿ ಚೆನ್ನಪ್ಪನವರು ದಾನಿಯೇಲಪ್ಪ – ಸುಭದ್ರವ್ವ ದಂಪತಿಗಳಿಗೆ ೨೮-೧0-೧೮೮೧ರಂದು ಹಿರಿಯ ಮಗನಾಗಿ ಧಾರವಾಡದಲ್ಲಿ ಜನಿಸಿದರು. ಪೂರ್ವಜರು ಮೂಲದಲ್ಲಿ ವೀರಶೈವರಾಗಿ ಊರು ಪಾರುಪತ್ತೇಗಾರಿಕೆ ನಡೆಸುತ್ತಿದ್ದರು. ಇವರ ಶಾಲಾ ಶಿಕ್ಷಣವು ಧಾರವಾಡ, ಗದಗ, ಬೆಟಗೇರಿಗಳಲ್ಲಿ ನಡೆಯಿತು. […]

ಸಾಹಿತ್ಯ ಸಮ್ಮೇಳನ-೩೧ : ಕಾಸರಗೋಡು
ಡಿಸೆಂಬರ್ ೧೯೪೮

೩೧ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ತಿರುಮಲೆ ತಾತಾಚಾರ್ಯಶರ್ಮ ಮೊನೆಚಾದ ಬರಹ ಸಿಡಿಲಿನಂಥ ಮಾತಿಗೆ ಪ್ರಸಿದ್ಧರಾಗಿ ವಿಶ್ವಕರ್ನಾಟಕ ಪತ್ರಿಕೆಯ ಮೂಲಕ ಇತಿಹಾಸವನ್ನೇ ನಿರ್ಮಿಸಿದ ಕನ್ನಡ ಭೀಷ್ಮರು ಎಂದರೆ ತಿರುಮಲೆ ತಾತಾಚಾರ್ಯಶರ್ಮರು. ಇವರು ಶ್ರೀನಿವಾಸ ತಾತಾಚಾರ್ಯ-ಜಾನಕಿ ಅವರ ಪುತ್ರರಾಗಿ ೨೭-೪-೧೮೯೫ರಲ್ಲಿ ಚಿಕ್ಕಬಳ್ಳಾಪುರದಲ್ಲಿ ರಾಜಮನೆತನದಲ್ಲಿ ಜನಿಸಿದರು. ಗುರುಕುಲಪದ್ಧತಿಯ ಶಿಕ್ಷಣ ಮನೆಯಲ್ಲಿ ಸಿಕ್ಕಿತು. ಶಾಲಾ ವಿದ್ಯಾಭ್ಯಾಸ […]

ಸಾಹಿತ್ಯ ಸಮ್ಮೇಳನ-೩0 : ಹರಪನಹಳ್ಳಿ, ಬಳ್ಳಾರಿ
ಮೇ ೧೯೪೭

೩0ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಸಿ. ಕೆ. ವೆಂಕಟರಾಮಯ್ಯ ಪ್ರಸಿದ್ಧ ವಾಗ್ಮಿಗಳು, ಗ್ರಂಥಕರ್ತರೂ ಆದ ಸಿ. ಕೆ. ವೆಂಕಟರಾಮಯ್ಯನವರು ಕೃಷ್ಣಪ್ಪ-ನಂಜಮ್ಮನವರಿಗೆ ಪುತ್ರರಾಗಿ ೧0-೧೨-೧೮೯೬ರಲ್ಲಿ ಜನಿಸಿದರು. ಸೋಲೂರು, ಕುಂದೂರು ಮಾಗಡಿ, ಚೆನ್ನಪಟ್ಟಣಗಳಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದ ಮೇಲೆ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ಬಿ.ಎ. ಪದವಿ ಗಳಿಸಿದರು.  ಮುಂಬೈಗೆ ಹೋಗಿ ಎಂ.ಎ. […]

ಸಾಹಿತ್ಯ ಸಮ್ಮೇಳನ-೨೯ : ಮದರಾಸು
ಡಿಸೆಂಬರ್ ೧೯೪೫

೨೯ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಟಿ. ಪಿ. ಕೈಲಾಸಂ ಕನ್ನಡ ನಾಟಕರಂಗದಲ್ಲಿ ಹೊಸಶಕೆಯನ್ನು ಆರಂಭಿಸಿದ ಟಿ ಪಿ. ಕೈಲಾಸಂ ಅವರು ಬೆಂಗಳೂರಿನಲ್ಲಿ ೨೯-೭-೧೮೮೫ರಲ್ಲಿ ತ್ಯಾಗರಾಜ ಪರಮಶಿವ ಅಯ್ಯರ್ – ಕಲಮಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಬೆಂಗಳೂರು, ಹಾಸನ, ಮೈಸೂರುಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ೧೯0೮ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿ […]

ಸಾಹಿತ್ಯ ಸಮ್ಮೇಳನ-೨೮ : ರಬಕವಿ
ಡಿಸೆಂಬರ್ ೧೯೪೪

೨೮ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಶಿ. ಶಿ. ಬಸವನಾಳ ನವಕರ್ನಾಟಕದ ನಿರ್ಮಾಪಕರಲ್ಲಿ ಒಬ್ಬರಾಗಿ ವೀರಶೈವ ಧರ್ಮ ಸಾಹಿತ್ಯಕ್ಕೆ ಶ್ರಮಿಸಿದ ವಿದ್ವಾಂಸ ಶಿ. ಶಿ. ಬಸವನಾಳರು (ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳ) ಶಿವಯೋಗಪ್ಪ ಮತ್ತು ಸಿದ್ದಮ್ಮನವರ ಪುತ್ರರಾಗಿ ೭-೧೧-೧೮೯೩ರಲ್ಲಿ ಜನಿಸಿದರು. ಮೆಟ್ರಿಕ್ ಪರೀಕ್ಷೆಯನ್ನು ೧೯೧0ರಲ್ಲಿ ಮುಗಿಸಿ ೧೯೧೫ರಲ್ಲಿ ಡೆಕ್ಕನ್ ಕಾಲೇಜಿನಲ್ಲಿ ಎಂ. ಎ. […]

ಸಾಹಿತ್ಯ ಸಮ್ಮೇಳನ-೨೭ : ಶಿವಮೊಗ್ಗ
ಜನವರಿ ೧೯೪೩

೨೭ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ದ.ರಾ. ಬೇಂದ್ರೆ ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು ರಾಮಚಂದ್ರ ಬೇಂದ್ರೆ-ಅಂಬವ್ವನವರ ಪುತ್ರರಾಗಿ ೩೧-೧-೧೮೯೬ರಲ್ಲಿ ಧಾರವಾಡದಲ್ಲಿ ಜನಿಸಿದರು. ಧಾರವಾಡದಲ್ಲಿ ೧೯೧೩ರಲ್ಲಿ ಮೆಟ್ರಿಕ್ ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ೧೯೧೮ರಲ್ಲಿ ಬಿ.ಎ. ಮಾಡಿದರು. ಕೆಲವು ಕಾಲ ಅಧ್ಯಾಪಕ ವೃತ್ತಿ […]

1 2