ಸಾಹಿತ್ಯ ಸಮ್ಮೇಳನ-೨೪ : ಬೆಳಗಾವಿ
ಡಿಸೆಂಬರ್ ೧೯೩೯

೨೪ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಮುದವೀಡು ಕೃಷ್ಣರಾಯ ಮುದದ ಬೀಡಾಗಿದ್ದ ಮುದವೀಡು ಕೃಷ್ಣರಾಯರು ಕನ್ನಡಿಗರನ್ನು ಅಭಿಮಾನಧನರನ್ನಾಗಿಸಿದವರಲ್ಲಿ ಅಗ್ರಗಣ್ಯರು. ಹನುಮಂತರಾಯ ಗಂಗಾಬಾಯಿ ದಂಪತಿಗಳಿಗೆ ೨೪-೨-೧೮೭೪ರಲ್ಲಿ ಸುಪುತ್ರರಾಗಿ ಜನಿಸಿದ ಇವರು ಬಾಲ್ಯದಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡಿದ್ದರಿಂದ ಚಿಕ್ಕಮ್ಮನ ಮನೆಯಲ್ಲಿ ಬೆಳೆದರು. ಪ್ರಾಥಮಿಕ ಶಿಕ್ಷಣ ಕಾರವಾರದಲ್ಲಿ ಮರಾಠಿ ಭಾಷೆಯಲ್ಲಿ ಆಗಿ, ಧಾರವಾಡದಲ್ಲಿ ಕನ್ನಡ […]

ಸಾಹಿತ್ಯ ಸಮ್ಮೇಳನ-೨೩ : ಬಳ್ಳಾರಿ
ಡಿಸೆಂಬರ್ ೧೯೩೮

೨೩ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ದಿವಾಕರ ರಂಗರಾಯರು ಕರ್ನಾಟಕ ಏಕೀಕರಣದ ನೇತಾರರೂ, ದಕ್ಷ ಆಡಳಿತಗಾರರೂ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರೂ ಆದ ರಂಗರಾವ್ ರಾಮಚಂದ್ರ ದಿವಾಕರ (ಆರ್.ಆರ್. ದಿವಾಕರ್) ಅವರು ರಾಮಚಂದ್ರರಾವ್-ಸೀತಮ್ಮ ದಂಪತಿಗಳಿಗೆ ೩0-೯-೧೮೯೪ರಲ್ಲಿ ಧಾರವಾಡದಲ್ಲಿ ಜನಿಸಿದರು. ಧಾರವಾಡ, ಬೆಳಗಾವಿ, ಪುಣೆ, ಹುಬ್ಬಳ್ಳಿ, ಮುಂಬಯಿಗಳಲ್ಲಿ ವ್ಯಾಸಂಗ ಮಾಡಿ ಪದವಿ ಪಡೆದ […]

ಸಾಹಿತ್ಯ ಸಮ್ಮೇಳನ-೨೨ : ಜಮಖಂಡಿ
ಡಿಸೆಂಬರ್ ೧೯೩೭

೨೨ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಬೆಳ್ಳಾವೆ ವೆಂಕಟನಾರಣಪ್ಪ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ, ವಿಜ್ಞಾನರಂಗದಲ್ಲಿ ಮತ್ತು ಸಾರ್ವಜನಿಕರಂಗದಲ್ಲಿ ಅವಿಶ್ರಾಂತವಾಗಿ ದುಡಿದ ಮಹನೀಯರು ಬೆಳ್ಳಾವೆ ವೆಂಕಟನಾರಣಪ್ಪ.  ಅವರು ವೆಂಕಟಕೃಷ್ಣಯ್ಯ- ಲಕ್ಷ್ಮೀದೇವಿ ಅವರ ಪುತ್ರರಾಗಿ ೨-೧0-೧೮೭೨ರಲ್ಲಿ ಜನಿಸಿದರು. ತುಮಕೂರಿನಲ್ಲಿ ಪ್ರೌಢಶಾಲಾಶಿಕ್ಷಣ ಮುಗಿಸಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ೧೮೯೨ ರಲ್ಲಿ ಬಿ.ಎ. ಪದವಿ ಪಡೆದು […]

ಸಾಹಿತ್ಯ ಸಮ್ಮೇಳನ-೨೧ : ಮುಂಬಯಿ
ಡಿಸೆಂಬರ್ ೧೯೩೫

೨೧ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಎನ್.ಎಸ್. ಸುಬ್ಬರಾವ್ ದಿಟ್ಟ ನಿಲುವು, ಸ್ಪಷ್ಟನಡೆ ಅಸಾಮಾನ್ಯ ಸ್ಮೃತಿಶಕ್ತಿಯ ಶಿಕ್ಷಣ ತಜ್ಞ ಎನ್.ಎಸ್. ಸುಬ್ಬರಾಯರು (ನಂಜನಗೂಡು ಸುಬ್ಬಣ್ಣರಾಯರ ಮಗ ಸುಬ್ಬರಾವ್) ಶ್ರೀಮಂತ ಕುಟುಂಬದಲ್ಲಿ ೧೮೮೫ರಲ್ಲಿ ಹುಟ್ಟಿ ಬೆಳೆದವರು. ಬೆಂಗಳೂರು, ಮದರಾಸುಗಳಲ್ಲಿ ಶಿಕ್ಷಣ ಪಡೆದು ಎಂ.ಎ. ಮತ್ತು ಬಾರ್ ಅಟ್ ಲಾ ಪದವಿಗಳನ್ನು ಕೇಂಬ್ರಿಜ್ […]

ಸಾಹಿತ್ಯ ಸಮ್ಮೇಳನ-೨೦ : ರಾಯಚೂರು
ಡಿಸೆಂಬರ್ ೧೯೩೪

೨0ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಪಂಜೆ ಮಂಗೇಶರಾಯರು ಮಕ್ಕಳ ಸಾಹಿತಿಯಾಗಿ, ಶಿಕ್ಷಣಾಧಿಕಾರಿಗಳಾಗಿ, ಹೆಸರು ಮಾಡಿದ್ದ ಪಂಜೆ ಮಂಗೇಶರಾಯರು ರಾಮಪ್ಪಯ್ಯ- ಶಾಂತದುರ್ಗ ದಂಪತಿಗಳ ಎರಡನೇ ಮಗನಾಗಿ ೨೨-೨-೧೮೭೪ರಲ್ಲಿ ದಕ್ಷಿಣಕನ್ನಡದ ಬಂಟವಾಳದಲ್ಲಿ ಜನಿಸಿದರು. ಪಂಜೆಯವರು ೧೮೯೫ರಲ್ಲಿ ಬಿ.ಎ. ಇಂಗ್ಲಿಷ್ ಕನ್ನಡ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ೧೯00ರಲ್ಲಿ ಐಚ್ಛಿಕ ವಿಷಯಗಳನ್ನು ಮುಗಿಸಿದರು. ೧೯0೪ರಲ್ಲಿ […]

ಸಾಹಿತ್ಯ ಸಮ್ಮೇಳನ-೧೯ : ಹುಬ್ಬಳ್ಳಿ
ಡಿಸೆಂಬರ್ ೧೯೩೩

೧೯ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ವೈ. ನಾಗೇಶಶಾಸ್ತ್ರಿ ಸಂಸ್ಕೃತ-ಕನ್ನಡ ವಿದ್ವಾಂಸರಾದ ವೈ. ನಾಗೇಶಶಾಸ್ತ್ರಿಗಳು ಬಳ್ಳಾರಿ ಜಿಲ್ಲೆಯ ಏಳುಬೆಂಚೆಯಲ್ಲಿ ೧೮೯೩ರಲ್ಲಿ ವೀರಶೈವ ಗುರುಸ್ಥಲಮಠದ ನೀಲಾಂಬಿಕೆ-ನಮನಸ್ವಾಮಿಗಳ ಪುತ್ರರಾಗಿ ಜನಿಸಿದರು. ನಿಜಾಮ ಕರ್ನಾಟಕದ ಕೊಪ್ಪಳ ಗವಿಮಠದ ಕೊಂಗೋಡು ವೀರಭದ್ರಶಾಸ್ತ್ರಿಗಳಲ್ಲಿ ೩ ವರ್ಷ ಸಂಸ್ಕೃತ ಸಾಹಿತ್ಯ ಅಭ್ಯಾಸ ಮಾಡಿ ಪಂಡಿತರಾದರು. ಕನ್ನಡ, ಸಂಸ್ಕೃತ, ತೆಲುಗು, […]

ಸಾಹಿತ್ಯ ಸಮ್ಮೇಳನ-೧೮ : ಮಡಿಕೇರಿ
ಡಿಸೆಂಬರ್ ೧೯೩೨

೧೮ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಡಿ.ವಿ. ಗುಂಡಪ್ಪ ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬರಾಗಿ ಮಂಕುತಿಮ್ಮನ ಕಗ್ಗದಿಂದ ಲೋಕವಿಖ್ಯಾತರಾದ ಡಿವಿಜಿ ಅವರು (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ) ವೆಂಕಟರಮಣಯ್ಯ-ಅಲಮೇಲಮ್ಮ ದಂಪತಿಗಳಿಗೆ ಮಗನಾಗಿ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ೧೭-೩-೧೮೮೭ರಂದು ಜನಿಸಿದರು. ಶಾಲಾ ವಿದ್ಯಾಭ್ಯಾಸವನ್ನು ಮುಳುಬಾಗಿಲಿನಲ್ಲಿ, ಪ್ರೌಢಶಾಲಾ ಶಿಕ್ಷಣವನ್ನು ಮೈಸೂರು ಮಹಾರಾಜ ಪ್ರೌಢಶಾಲೆಯಲ್ಲಿ ಮುಗಿಸಿದರು. […]

ಸಾಹಿತ್ಯ ಸಮ್ಮೇಳನ-೧೭ : ಕಾರವಾರ
ಡಿಸೆಂಬರ್ ೧೯೩೧

೧೭ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಮುಳಿಯ ತಿಮ್ಮಪ್ಪಯ್ಯ ಶ್ರೇಷ್ಠ ಅಧ್ಯಾಪಕರಾಗಿ ಪ್ರಸಿದ್ಧ ಸಾಹಿತಿಗಳಾಗಿ ಕನ್ನಡದಲ್ಲಿ ಪ್ರಸಿದ್ಧರಾದ ಮುಳಿಯ ತಿಮ್ಮಪ್ಪಯ್ಯನವರು ದಕ್ಷಿಣ ಕನ್ನಡ ಜಿಲ್ಲೆಯ ಮುಳಿಯ ಗ್ರಾಮದಲ್ಲಿ ೩-೩-೧೮೮೮ರಲ್ಲಿ ಕೇಶವಭಟ್ಟ-ಮೂಕಾಂಬಿಕಾ ದಂಪತಿಗಳ ಸುಪುತ್ರರಾಗಿ ಜನಿಸಿದರು. ಸ್ಥಳೀಯ ವಿದ್ವಾಂಸರಿಂದ ಸಂಸ್ಕೃತ ಕಲಿತ ಅವರು ಜ್ಞಾನತೃಷೆಯಿಂದ ತಿರುವಾಂಕೂರಿಗೆ ೧೯0೬ರಲ್ಲಿ ಹೋಗಿ ಅನಂತರ ಅಲ್ಲಿಂದ […]

ಸಾಹಿತ್ಯ ಸಮ್ಮೇಳನ-೧೬ : ಮೈಸೂರು
ಅಕ್ಟೋಬರ್ ೧೯೩0

೧೬ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಆಲೂರು ವೆಂಕಟರಾಯರು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಕಾರಣಕರ್ತರಲ್ಲಿ ಒಬ್ಬರು ಮತ್ತು ಪರಿಷತ್ತಿಗೆ ಪ್ರಾರಂಭದಲ್ಲಿ ದುಡಿದವರು ಎಂದರೆ ಆಲೂರರು. ಭೀಮರಾಯ-ಭಾಗೀರಥಿ ದಂಪತಿಗಳಿಗೆ ೧೨-೭-೧೮೮0ರಲ್ಲಿ ಜನಿಸಿದರು. ಶಾಲಾ ಶಿಕ್ಷಣವನ್ನು ಧಾರವಾಡದಲ್ಲಿ ಪೂರೈಸಿ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ೧೯0೩ರಲ್ಲಿ ಬಿಎ ಪದವಿಯನ್ನು ೧೯0೫ರಲ್ಲಿ ಎಲ್.ಎಲ್.ಬಿ. ಪದವಿಯನ್ನು […]

ಸಾಹಿತ್ಯ ಸಮ್ಮೇಳನ-೧೫ : ಬೆಳಗಾವಿ
ಮೇ ೧೯೨೯

೧೫ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು          ಮಾಸ್ತಿ ವೆಂಕಟೇಶ ಅಯ್ಯಂಗಾರ್ ‘ಕನ್ನಡದ ಆಸ್ತಿ’ ಎಂದೇ ಪರಿಗಣಿತರಾದ ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ಅವರು ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ ರಾಮಸ್ವಾಮಿ ಅಯ್ಯಂಗಾರ್ – ತಿರುಮಲ್ಲಮ್ಮ ದಂಪತಿಗಳಿಗೆ ೮-೬-೧೮೯೧ರಲ್ಲಿ ಜನಿಸಿದರು. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ […]

1 2