ಪರಿಷತ್ತಿನ ಪ್ರಕಟಣೆಗಳು

 

ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಪೈಕಿ ಅತಿ ಮುಖ್ಯವಾದುದು ಅದರ ಪ್ರಸಾರಂಗ. ಕನ್ನಡ ಸಾಹಿತ್ಯ ಪರಿಷತ್ತು ೧೯೧೫ರಲ್ಲಿ ಆರಂಭವಾಯಿತು. ಪರಿಷತ್ತಿಗೆ ಆರಂಭದ ವರ್ಷದಲ್ಲಿ ಯಾವುದೇ ಪ್ರಕಟಣೆಯನ್ನೂ ಹೊರತರಲು ಆಗಿರಲಿಲ್ಲ. ಕಾರಣ ಅದು ಸ್ಥಿರಗೊಳ್ಳಬೇಕಾಗಿತ್ತು. ೧೯೧೬ರಲ್ಲಿ ಪುಸ್ತಕ ಪ್ರಕಟಣೆಯನ್ನು ಆರಂಭಿಸಿತು. ಪರಿಷತ್ತು ಹೊರತಂದ ಮೊದಲ ಕೃತಿ; ವೈ.ಕೆ. ರಾಮಚಂದ್ರರಾವ್ ಅವರು ಕನ್ನಡಕ್ಕೆ ಅನುವಾದಿಸಿದ `ಜೇಮ್ಸ್ ಏಬ್ರಾಮ್ ಗಾರ್ಫೀಲ್ಡ್ ಚರಿತೆ’. ಅನಂತರ ಅದರ ಪ್ರಕಟಣೆಗಳು ಒಂದೊಂದಾಗಿ ಹೊರಬಂದವು. ಪರಿಷತ್ತು ಇದುವರೆಗೆ ಸುಮಾರು ೧೭೫೦ ಕೃತಿಗಳನ್ನು ಪ್ರಕಟಿಸಿದೆ. ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಸಂಬಧಿಸಿದ ಕೆಲವು ಇಂಗ್ಲಿಷ್ ಕೃತಿಗಳೂ ಇದರಲ್ಲಿ ಸೇರಿವೆ. ಇವುಗಳಲ್ಲಿ ಹಲವು ಮರುಮುದ್ರಣಗಳನ್ನು ಕಂಡು ದಾಖಲೆ ಸ್ಥಾಪಿಸಿವೆ.

ಯಾವ ಪ್ರಕಾರವೇ ಇರಲಿ, ಯಾವ ಕೃತಿಯೇ ಆಗಿರಲಿ ಈ ಪ್ರಕಟಣೆಗಳ ಪೈಕಿ ಪರಿಷತ್ತನ್ನು ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿಸಿದ್ದು ಅದು ಹೊರತಂದಿರುವ ಬಹೂಪಯೋಗಿ ನಿಘಂಟುಗಳು. ಪರಿಷತ್ತಿನ ಸ್ಥಾಪನೆಯ ಮೂಲ ಉದ್ದೇಶಗಳಲ್ಲಿ ಪಂಡಿತ ಮಾನ್ಯವಾದ, ಪರಾಮರ್ಶನ ಮೌಲ್ಯವುಳ್ಳ ಕನ್ನಡ-ಕನ್ನಡ ನಿಘಂಟಿನ ಪ್ರಕಟಣೆ ಮಹತ್ತ್ವವಾದುದು. ೪೫ ವರ್ಷಗಳ ಕಾಲ ಹತ್ತಿರ ಹತ್ತಿರ ನೂರು ಘನ ವಿದ್ವಾಂಸರ ಅಹರ್ನಿಶಿ ಬೌದ್ಧಿಕ ಶ್ರಮದ ಫಲವಾಗಿ ಹೊರಬಂದ ಒಟ್ಟು ಎಂಟು ಸಂಪುಟಗಳ ೯೨೦೦ ಪುಟಗಳ ಬೃಹತ್ ಸ್ವರೂಪದ ಕನ್ನಡ-ಕನ್ನಡ ನಿಘಂಟು ಪ್ರಕಟವಾಯಿತು. ಈ ಸ್ವರೂಪದ ನಿಘಂಟು ಭಾರತೀಯ ಭಾಷೆಗಳ ಪೈಕಿ ಅತ್ಯಂತ ಅಮೋಘವಾದುದು, ಅಪರೂಪವಾದುದು. ಇದು ಭಾರತೀಯ ಭಾಷೆಗಳ ನಿಘಂಟುಗಳಲ್ಲೇ `ಏಕಂ ಏವಾ ಅದ್ವಿತೀಯ’ವಾದುದು. ಪರಿಷತ್ತಿನ ಮತ್ತೊಂದು ಮಹತ್ವದ ಪ್ರಕಟಣೆ ಸುಮಾರು ೧೪೫೦ ಪುಟಗಳಷ್ಟಿರುವ ಸಂಕ್ಷಿಪ್ತ ಕನ್ನಡ ನಿಘಂಟು. ವಿದ್ಯಾರ್ಥಿಗಳಿಗೆ ನೆರವಾಗುವಂತಹ ಸಣ್ಣ ಆಕಾರದ `ಕನ್ನಡ ರತ್ನಕೋಶ’ ಎಂಬ ನಿಘಂಟು ಪರಿಷತ್ತಿನ ಖ್ಯಾತಿಯನ್ನು ಮನೆಮನೆಗೂ ಹರಡಿತು. ಇದುವರೆಗೆ ಇದರ ೧೦ ಲಕ್ಷ ಪ್ರತಿಗಳು ಮಾರಾಟವಾಗಿವೆ. ಕನ್ನಡ ಪ್ರಕಟಣ ಕ್ಷೇತ್ರದ ವಿಕ್ರಮವಿದು. ಸುಭಾಷಿತ ಮಂಜರಿ ಕೃತಿಯು ಸಹ ಪರಿಷತ್ತಿಗೆ ಅಸ್ಮಿತೆ ನೀಡಿದೆ.

ಹಲವಾರು ಹಳಗನ್ನಡ ಕಾವ್ಯಗಳ ಹೊಸಗನ್ನಡ ಗದ್ಯಾನುವಾದ ಪರಿಷತ್ತಿಗೆ ಅನನ್ಯತೆಯನ್ನು ನೀಡಿದೆ. ಇದರಿಂದಾಗಿ ಶ್ರೀಸಾಮಾನ್ಯ ಓದುಗರೂ ಸಹ ಅದರ ಸಾರ ಮತ್ತು ಸತ್ತ್ವವನ್ನು ಪರಿಚಯಿಸಿಕೊಳ್ಳುವಂತಾಯಿತು. ಬಳ್ಳಿ ಬಿಟ್ಟ ಬೆಳ್ಳಿ ಮಾಲೆ ೧೦೮ ಕೃತಿಗಳು, ವಿವಿಧ ನಿಘಂಟುಗಳು, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ಸಂಪುಟಗಳು, ದಲಿತ ಸಾಹಿತ್ಯ ಸಂಪುಟಗಳು, ಮಹಿಳಾ ಸಾಹಿತ್ಯ ಸಂಪುಟಗಳು, ಜಿಲ್ಲಾ ಕಥಾ ಸಂಕಲನಗಳು, ಜೀವನ ಚರಿತ್ರೆ, ಮಕ್ಕಳ ಪುಸ್ತಕಗಳು, ಸ್ಮರಣ ಸಂಚಿಕೆಗಳು, ಮಹಿಳಾ ಮಾಲೆ; ಇವೆಲ್ಲಾ ಪರಿಷತ್ತಿನ ಹೆಮ್ಮೆ. ಪ್ರಕಟಣೆಗಳ ಸಂಬಂಧವಾಗಿ ಪರಿಷತ್ತು ತಾನು ಆಯೋಜಿಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಸಂದರ್ಭದಲ್ಲಿ ಆಯಾ ಸಮ್ಮೇಳನದ ಸಂಖ್ಯೆಯಷ್ಟು ಕೃತಿಗಳ ಪ್ರಕಟಣೆಯನ್ನು ೧೯೯೯ರಿಂದ ಆರಂಭಿಸಿತು. ಆಗ ಕನಕಪುರದಲ್ಲಿ ನಡೆದ ಸಮ್ಮೇಳನದಲ್ಲಿ ೬೬ ಕೃತಿಗಳನ್ನು ಮೊದಲಬಾರಿಗೆ ಹೊರತಂದಿತು. ಅನಂತರ ಹಲವು ಸಮ್ಮೇಳನಗಳ ಸಂದರ್ಭದಲ್ಲಿ ಈ ಪರಿಪಾಟ ಮುಂದುವರೆದು ೨೦೨೨ರಲ್ಲಿ ಹಾವೇರಿಯಲ್ಲಿ ಆಯೋಜಿಸಲಾಗಿರುವ ೮೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಷ್ಟೇ ಸಂಖ್ಯೆಯ ಕೃತಿಗಳು ಪ್ರಕಟವಾಗಲಿವೆ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಕನ್ನಡ ಪ್ರವೇಶ, ಕನ್ನಡ ಕಾವ, ಕನ್ನಡ ಜಾಣ, ಕನ್ನಡ ರತ್ನ ಪರೀಕ್ಷೆಗಳ ಎಲ್ಲ ಪಠ್ಯಪುಸ್ತಕಗಳನ್ನೂ ಇದೀಗ ಪರಿಷತ್ತೇ ಪ್ರಕಟಿಸುತ್ತಿದೆ. ಹಾಗಾಗಿ ಈಗ ಪಠ್ಯಪುಸ್ತಕಗಳು ಅಲಭ್ಯ ಎಂಬ ದೂರಿಗೆ ಆಸ್ಪದವಿಲ್ಲದಂತಾಗಿದೆ. ಪರಿಷತ್ತು ೧೦೬ ವರ್ಷಗಳಿಂದ ವಿದ್ವತ್ಪೂರ್ಣವಾದ ಸಂಶೋಧನಾತ್ಮಕ ಷಾಣ್ಮಾಸಿಕ ಪತ್ರಿಕೆಯನ್ನು ಪ್ರಕಟಿಸುತ್ತಿದೆ. ಪರಿಷತ್ತಿನ ವಾರ್ತಾಪತ್ರ `ಕನ್ನಡನುಡಿ’ ಪತ್ರಿಕೆ ತನ್ನ ಪ್ರಕಟಣೆಯನ್ನು ಆರಂಭಿಸಿದ್ದು ೧೯೩೮ರ ಅಕ್ಟೋಬರ್ ೪ರಂದು. ಈಗಲೂ ಈ ನಿಯತಕಾಲಿಕೆ ತನ್ನ ನಿರಂತರತೆಯನ್ನು ಕಾಯ್ದುಕೊಂಡಿದೆ. ಇನ್ನು ಮುಂದೆ ಅದರ ಡಿಜಿಟಲ್ ಆವೃತ್ತಿ ಪ್ರಕಟಗೊಳ್ಳಲಿದೆ.

ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳೂ ಅನೇಕ ಕೃತಿಗಳನ್ನು ಪ್ರಕಟಿಸಿವೆ. ಅವು ನಡೆಸುವ ಸಾಹಿತ್ಯ ಸಮ್ಮೇಳನಗಳ ಸಂದರ್ಭಗಳಲ್ಲಿ ಸ್ಮರಣ ಸಂಚಿಕೆಗಳನ್ನು ಹೊರತಂದಿವೆ. ಕೇಂದ್ರ ಪರಿಷತ್ತು ಸಹ ಸ್ಮರಣ ಸಂಚಿಕೆಗಳ ಪ್ರಕಟಣೆಯ ಮೂಲಕ ತಾನು ನಡೆದು ಬಂದ ಹಾದಿಯನ್ನು ದಾಖಲಿಸಿದೆ. ಇವೆಲ್ಲ ಇಂದಿಗೂ ಪರಾಮರ್ಶನಯೋಗ್ಯ ಸಂದರ್ಭ ಗ್ರಂಥಗಳು.

ಪರಿಷತ್ತಿನ ಸಮಗ್ರ ಕೃತಿಗಳ ಪಟ್ಟಿ ಇಲ್ಲಿದೆ

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಳ ಪಟ್ಟಿ
ಕ್ರಮ ಸಂಖ್ಯೆ ಶೀರ್ಷಿಕೆ ಲೇಖಕರು
  ಗದ್ಯಾನುವಾದ ಅನುವಾದಕರು
ಪಂಪ ಮಹಾಕವಿ ವಿರಚಿತ ಪಂಪಭಾರತಂ (ವಿಕ್ರಮಾರ್ಜುನ ವಿಜಯಂ) ಎನ್. ಅನಂತರಂಗಾಚಾರ್
 ಪಂಪ ಮಹಾಕವಿ ವಿರಚಿತ ಆದಿಪುರಾಣಂ ಕೆ.ಎಲ್. ನರಸಿಂಹಶಾಸ್ತ್ರಿ
ಶಿವಕೋಟ್ಯಾಚಾರ್ಯನ ವಡ್ಡಾರಾಧನೆ ಟಿ.ಕೇಶವಭಟ್ಟ
ದುರ್ಗಸಿಂಹನ ಕರ್ಣಾಟಕ ಪಂಚತಂತ್ರ (ಗುಂಡ್ಮಿ) ಚಂದ್ರಶೇಖರ ಐತಾಳ
ಹರಿಹರಕವಿಯ ಗಿರಿಜಾಕಲ್ಯಾಣ ಮಹಾಪ್ರಬಂಧಂ ವಿದ್ವಾನ್ ಎಂ.ಜಿ. ನಂಜುಂಡಾರಾಧ್ಯ
ಶಕ್ತಿಭದ್ರ ವಿರಚಿತ ಆಶ್ಚರ್ಯ ಚೂಡಾಮಣಿ ಡಾ. ಎಸ್.ಆರ್. ಲೀಲಾ
ರುದ್ರಭಟ್ಟನ ಜಗನ್ನಾಥ ವಿಜಯಂ ಎಂ.ಆರ್. ವರದಾಚಾರ್ಯ
ಬಸವರಾಜ ವಿಜಯಂ ಭಾಗ-೧ ಪಂಡಿತ ಚನ್ನಪ್ಪ ಎರೇಸೀಮೆ
ಬಸವರಾಜ ವಿಜಯಂ ಭಾಗ-೨ ಪಂಡಿತ ಚನ್ನಪ್ಪ ಎರೇಸೀಮೆ
೧೦ ಷಡಕ್ಷರ ದೇವನ ರಾಜಶೇಖರ ವಿಳಾಸಂ ಚನ್ನಪ್ಪ ಎರೇಸೀಮೆ
೧೧ ಜನ್ನಕವಿಯ ಯಶೋಧರ ಚರಿತೆ ತೆಕ್ಕುಂಜೆ ಗೋಪಾಲ ಕೃಷ್ಣಭಟ್ಟ
೧೨ ಆಂಡಯ್ಯನ ಕಬ್ಬಿಗರ ಕಾವಂ ಆರ್.ವಿ. ಕುಲಕರ್ಣಿ
೧೩ ಲಿಂಗಣ್ಣ ಕವಿಯ ಕೆಳದಿ ನೃಪವಿಜಯ ಕೆಳದಿ ಗುಂಡಾಜೋಯಿಸ್
೧೪ ರಾಘವಾಂಕ ಕವಿಯ ಸಿದ್ಧರಾಮ ಚಾರಿತ್ರ ಆರ್.ಎಸ್. ರಾಮರಾವ್
೧೫ ಚಾಮರಸ ವಿರಚಿತ ಪ್ರಭುಲಿಂಗಲೀಲೆ ಅನು: ಡಾ. ಎಸ್. ವಿದ್ಯಾಶಂಕರ್
೧೬ ಬಸವಪ್ಪಶಾಸ್ತ್ರಿಗಳ ದಮಯಂತೀ ಸ್ವಯಂವರ ಕೆ.ಆರ್. ಲಕ್ಷ್ಮೀಕಾಂತಯ್ಯ
೧೭ ಕನಕದಾಸರ ನಳಚರಿತ್ರೆ ಹಾತೂರು ಶಂಕರನಾರಾಯಣ ಭಟ್ಟ
೧೮ ನಾಗವರ್ಮ ವಿರಚಿತ ಕರ್ಣಾಟಕ ಕಾದಂಬರಿ ಹ.ವೆಂ. ನಾರಾಯಣಶಾಸ್ತ್ರಿ
೧೯ ಚಾವುಂಡರಾಜನ ಅಭಿನವ ದಶಕುಮಾರ ಚರಿತ್ರೆ ಜಿ.ಆರ್. ಶ್ರೀನಿವಾಸ ಅಯ್ಯಂಗಾರ್
೨೦ ಕುಮಾರ ವಾಲ್ಮೀಕಿ ವಿರಚಿತ ತೊರವೆ ರಾಮಾಯಣ ಸಂ:೧, ೨ ಕೆ.ಎಸ್. ಕೃಷ್ಣಮೂರ್ತಿ
೨೧ ನಯಸೇನ ವಿರಚಿತ ಧರ್ಮಾಮೃತ ಕೆ. ವೆಂಕಟರಾಮಪ್ಪ
೨೨ ಸಂಚಿಯ ಹೊನ್ನಮ್ಮ ವಿರಚಿತ ಹದಿಬದೆಯ ಧರ್ಮ ಎನ್. ರಂಗನಾಥಶರ್ಮಾ
೨೩ ಚೆನ್ನಬಸವ ಪುರಾಣ ಸಂಪುಟ ೧, ೨ ಎಂ. ಚಂದ್ರಶೇಖರ್
೨೪ ನಳಚಂಪು ಡಾ.ಜಿ. ವರದರಾಜರಾವ್
೨೫ ನೇಮಿನಾಥ ಪುರಾಣ- ಸಂಪುಟ ೧,೨ ಹಂಪನಾಗರಾಜಯ್ಯ, ಆರ್.ವಿ. ಕುಲಕರ್ಣಿ
೨೬ ವರದ ಕರಕಮಲಸ್ತವಂ  ಶ್ರೀ ಹೆಮ್ಮಿಗೆ ದೇಶಿಕಾಚಾರ್ಯ
೨೭ ಪರ್ವದರ್ಶನ ಸಂಗ್ರಹಃ  ಶ್ರೀ ಲಕ್ಷ್ಮೀಪುರಂ ಶ್ರೀನಿವಾಸಚಾರ್ಯ
೨೮ ಮಹಾಪುರಾಣ (ಪೂರ್ವ ಪುರಾಣ) ಸಂ.೧-೨ ಎ. ಶಾಂತಿರಾಜ ಶಾಸ್ತ್ರಿಗಳು
೨೯ ಮಹಾಪುರಾಣ (ಉತ್ತರ ಪುರಾಣ) ಸಂ.೧-೨ ಎ. ಶಾಂತಿರಾಜ ಶಾಸ್ತ್ರಿಗಳು
೩೦ ರಾಘವಾಂಕನ ಹರಿಶ್ಚಂದ್ರ ಚರಿತೆ ಎನ್. ರಂಗನಾಥಶರ್ಮಾ
೩೧ ಭಿಕ್ಷಾಟನ ಚರಿತೆ ಡಾ. ಬಿ.ವ್ಹಿ. ಶಿರೂರ
೩೨ ತಿರುಮಲಾರ್ಯ ವಿರಚಿತ ಚಿಕ್ಕದೇವರಾಯ ವಂಶಾವಳಿ ಮ.ಬಾ. ಭೋಯಿ
೩೩ ಶಾಂತಿಪುರಾಣಂ ಸಂ: ಹಂಪ ನಾಗರಾಜಯ್ಯ
೩೪ ಶ್ರೀ ಶಾಂತೀಶ್ವರ ಪುರಾಣಂ ಆರ್.ವಿ. ಕುಲಕರ್ಣಿ
೩೫ ಅಗ್ಗಳ ವಿರಚಿತ ಚಂದ್ರಪ್ರಭ ಪುರಾಣಂ ಆರ್.ವಿ. ಕುಲಕರ್ಣಿ
೩೬ ರತ್ನಾಕರವರ್ಣಿಯ ಭರತೇಶ ವೈಭವ (ಸಾಂಗತ್ಯ ಕೃತಿ) ಸಂ: ಪ್ರೊ. ಜಿ. ಬ್ರಹ್ಮಪ್ಪ, ಡಾ. ಹಂಪ ನಾಗರಾಜಯ್ಯ, ಡಾ. ಸಿ.ಆರ್. ಕಮಲಮ್ಮ ಹಂಪನಾ
೩೭ ಸಾಹಸಭೀಮ ವಿಜಯಂ ಆರ್.ವಿ. ಕುಲಕರ್ಣಿ
೩೮ ಜೈಮಿನಿ ಭಾರತ- ಕಡಬದ ನಂಜುಂಡ ಶಾಸ್ತ್ರಿಗಳು ಎನ್. ರಂಗನಾಥಶರ್ಮಾ
೩೯ ಕೇಶೀರಾಜ ವಿರಚಿತ ಶಬ್ದಮಣಿದರ್ಪಣಂ (ಪರಿಷ್ಕೃತ) ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ
೪೦ ಶಬರ ಶಂಕರ ವಿಳಾಸಂ ದಿಬ್ಬೂರು ಶ್ರೀನಿವಾಸರಾವ್
೪೧ ವಿದುರನೀತಿ ಅನು: ಎನ್. ರಂಗನಾಥಶರ್ಮ
೪೨ ಕನಕದಾಸ ವಿರಚಿತ ಮೋಹನ ತರಂಗಿಣಿ ಎಸ್.ಎಸ್. ಕೋತಿನ
೪೩ ಜೈಮಿನಿ ಭಾರತದ ಕನ್ನಡ ಗದ್ಯಾನುವಾದ (ಅಶ್ವಮೇಧಿಕ ಪರ್ವ)
೪೪ ಭರತೇಶ ವೈಭವ ಸಂ: ಡಾ. ಹಂಪ ನಾಗರಾಜಯ್ಯ             ಡಾ. ಕಮಲಾ ಹಂಪನಾ, ಪ್ರೊ. ಬ್ರಹ್ಮಪ್ಪ
೪೫ ಶ್ರೀ ಶಿವರಹಸ್ಯ ಸಂಪುಟ -೧ ಆಸ್ಥಾನವಿದ್ವಾನ್ ಎಚ್. ಗಂಗಾಧರಶಾಸ್ತ್ರಿ
೪೬ ಶ್ರೀ ಶಿವರಹಸ್ಯ ಸಂಪುಟ -೨ ಆಸ್ಥಾನವಿದ್ವಾನ್ ಎಚ್. ಗಂಗಾಧರಶಾಸ್ತ್ರಿ
೪೭ ಶ್ರೀ ಶಿವರಹಸ್ಯ ಸಂಪುಟ -೩ ಆಸ್ಥಾನವಿದ್ವಾನ್ ಎಚ್. ಗಂಗಾಧರಶಾಸ್ತ್ರಿ
೪೮ ಶ್ರೀ ಶಿವರಹಸ್ಯ ಸಂಪುಟ -೪ ಆಸ್ಥಾನವಿದ್ವಾನ್ ಎಚ್. ಗಂಗಾಧರಶಾಸ್ತ್ರಿ
ಗೌರವ ಸದಸ್ಯತ್ವದ ಪುಸ್ತಕಗಳು
೪೯ ವಿಚಾರ ಕ್ರಾಂತಿಗೆ ಆಹ್ವಾನ ಡಾ. ಕುವೆಂಪು
೫೦ ಮೈಸೂರು ಮಲ್ಲಿಗೆ ಡಾ. ಕೆ.ಎಸ್. ನರಸಿಂಹಸ್ವಾಮಿ
೫೧ ಪ್ರತಿಧ್ವನಿ ನಿರಂಜನ
೫೨ ಯಶೋಧರಾ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್
೫೩ ಸಾಗರ ಸಿಂಪಿ ಸಂ: ಡಾ. ಎಂ.ಜಿ. ಬಿರಾದಾರ
೫೪ ವ್ಯಾಕರಣತೀರ್ಥ ಸಂ: ಡಾ. ಬಸವರಾಜ ಮಲಶೆಟ್ಟಿ
೫೫ ಸಿಂಧುಶ್ರೀ ಸಂ: ಟಿ.ವಿ. ಸುಬ್ರಮಣ್ಯ
೫೬ ನವಿಲುಗರಿ ಸಂ: ಡಾ. ಸುಜನಾ
೫೭ ಶಾಂತಕಿರಣ ಸಂ: ಶ್ರೀಮತಿ ಎಚ್.ಎಂ.ಬೀಳಗಿ
ಅಮೃತೋತ್ಸವ ಮಾಲೆ
೫೮ ಕನ್ನಡ ಸಾಂಗತ್ಯ ಸಾಹಿತ್ಯ ಡಾ. ವೀರಣ್ಣ ರಾಜೂರ
೫೯ ಜಾನಪದ ಸಾಮಾಜಿಕ ಕಥನ ಗೀತೆಗಳಲ್ಲಿ ದುಃಖಾಂತ ನಿರೂಪಣೆ ಡಾ. ದೇವೇಂದ್ರಕುಮಾರ ಹಕಾರಿ
೬೦ ಅಂಡಯ್ಯ ಡಾ. ಎಸ್.ಎಸ್. ಕೋತಿನ
೬೧ ತುಳು ಜನಪದ ಸಾಹಿತ್ಯ ಡಾ. ಬಿ.ಎ. ವಿವೇಕ ರೈ
೬೨ ಶ್ರೀ ಉತ್ಸವ ಸಂ: ವಿಶಾಲಾಕ್ಷಿ
೬೩ ಧ್ವನ್ಯಾಲೋಕ - ಒಂದು ಅಧ್ಯಯನ ಡಾ. ಕೆ.ವಿ. ನಾರಾಯಣ
೬೪ ಕನ್ನಡ ಸಾಹಿತ್ಯದಲ್ಲಿ ಪುರಾಣಪ್ರಜ್ಞೆ ಡಾ. ಕೆ.ಎಲ್. ಗೋಪಾಲಕೃಷ್ಣಯ್ಯ
೬೫ ರಾಘವಾಂಕ - ಒಂದು ಅಧ್ಯಯನ ಡಾ. ಎಲ್.ಎ. ಸೂರ್ಯನಾರಾಯಣ
೬೬ ಡಿ.ವಿ.ಜಿ. ಅವರ ಸಾಹಿತ್ಯ ಕೃತಿಗಳು- ಒಂದು ಅಧ್ಯಯನ ಡಾ. ಗುಂಡ್ಮಿ ಚಂದ್ರಶೇಖರ ಐತಾಳ
೬೭ ಮಧ್ಯಕಾಲೀನ ಭಕ್ತಿ ಮತ್ತು ಅನುಭಾವ ಸಾಹಿತ್ಯ ಹಾಗೂ ಚಾರಿತ್ರಿಕ ಪ್ರಜ್ಞೆ ಡಾ. ಬಸವರಾಜ ಕಲ್ಗುಡಿ
ಬೆಳ್ಳಿ ಬಿಟ್ಟ ಬಳ್ಳಿ ಮಾಲೆ
೬೮ ಬರಕೋ ಪದಾ ಬರಕೋ ಡಾ. ಶಿವಾನಂದ ಗುಬ್ಬಣ್ಣವರ
೬೯ ಗೊಮ್ಮಟೇಶ್ವರ ಚರಿತೆ ಡಾ. ಎಂ.ವಿ. ಶಿರೂರ
೭೦ ನಿಂಬ ಸಾಮಂತ ಚರಿತೆ ಡಾ. ಎಂ.ಎಂ. ಕಲಬುರ್ಗಿ
೭೧ ಕುಮುದೇಂದು ರಾಮಾಯಣ ಡಾ. ಪಿ.ವಿ. ನಾರಾಯಣ
೭೨ ಕಂನುಡಿಯ ಹುಟ್ಟು ಡಾ. ಶಂ.ಬಾ. ಜೋಶಿ
೭೩ ಸಾಹಿತ್ಯ ವಿಹಾರ ಡಾ. ಬೆಟಗೇರಿ ಕೃಷ್ಣಶರ್ಮ
೭೪ ತೊರವೆ ರಾಮಾಯಣ ಕಥಾವಸ್ತು ವಿವೇಚನೆ ಡಾ. ಎಸ್.ಎಸ್. ಬ್ಯಾತನಾಳ
೭೫ ಕನ್ನಡ ಪ್ರತಿಭಟನೆ ಕಾವ್ಯ ಡಾ. ಸಿ. ವೀರಣ್ಣ
೭೬ ಅಮೆರಿಕಾದಲ್ಲಿ  ಗೊರೂರು ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್
೭೭ ಮಹಾಭಾರತದ ಭೀಮ ಬಿ.ಎಸ್. ಗೋಪಾಲಕೃಷ್ಣ
೭೮ ರಂಗಗೀತೆಗಳು ಕೆ.ವಿ. ಆಚಾರ್
೭೯ ಪಾರಿಜಾತ ಎಚ್.ಜಿ.ಸಣ್ಣಗುಡ್ಡಯ್ಯ
೮೦ ಜಾನಪದ ಅಧ್ಯಯನ ವಿಚಾರ ಸಂಕಿರಣ ಹಂಪ  ನಾಗರಾಜಯ್ಯ
೮೧ ಚಂದುಳ್ಳ ಮಕ್ಕಳ ಒಂಬತ್ತು ಕೊಡು ಸ್ವಾಮಿ ಬಿ. ಸಿದ್ದಗಂಗಯ್ಯ ಕಂಬಾಳು
೮೨ ದಾಸಪ್ಪ ಜೋಗಪ್ಪ ಹಿ.ಚಿ. ಬೋರಲಿಂಗಯ್ಯ
೮೩ ಕತ್ತಾಲ ದಾರಿ ದೂರ ಕೃಷ್ಣಮೂರ್ತಿ ಹನೂರು
೮೪ ಜಾನಪದ ಜಾಣ್ಮೆ ಡಾ. ವೀರಣ್ಣ ರಾಜೂರ, ಬಿ.ವಿ. ಬಿರಾದಾರ
೮೫ ಸುವ್ವಿ ಸುವ್ವಮ್ಮ ಲಾಲಿ ಸುವ್ವಲಾಲೆ ಸುಶೀಲಾ ಸೊಂಡೂರ್
೮೬ ತುಮಕೂರು ಜಿಲ್ಲೆಯ ಜಾನಪದ ನಂಬಿಕೆಗಳು ಎನ್.ಎಸ್. ತಿಮ್ಮೇಗೌಡ
೮೭ ಮುತ್ತು ಮುತ್ತಿನ ತ್ವಾಟ ಡಾ. ಚಂದ್ರಶೇಖರ ಕಂಬಾರ, ಜಯಪ್ರಕಾಶ ಬರಗೂರು
೮೮ ಬಣ್ಣವಾಡು ದೇವಂಗಿ ಟಿ. ಚಂದ್ರಶೇಖರ
೮೯ ಮೂವತ್ತು ಜನಪದ ಕಥೆಗಳು ಡಾ. ಕೆ.ಆರ್. ಸಂಧ್ಯಾರೆಡ್ಡಿ
೯೦ ಜಾನಪದ ಅಧ್ಯಯನ ಸಂಕ್ಷಿಪ್ತ ಇತಿಹಾಸ ಡಾ. ನಂ. ತಪಸ್ವೀಕುಮಾರ್
೯೧ ಉತ್ತರ  ಕನ್ನಡದ ಹವ್ಯಕರ ಜನಪದ ಕಥೆಗಳು ಡಾ. ಶಾಂತಿ  ನಾಯಕ
೯೨ ಐವರು ಹೇಳಿದ ಜಾನಪದ ಕಥೆಗಳು ತರೀಕೆರೆ ರಹಮತ್
೯೩ ಧರ್ಮದೇವತೆ ಡಾ. ಮಲ್ಲಿಕಾರ್ಜುನ ಶಿವಪ್ಪ ಲಠ್ಠೆ
೯೪ ಜನಪದ ಬಸವ ಪುರಾಣ ಪಿ.ಕೆ. ರಾಜಶೇಖರ
೯೫ ಸಾತು ಕ್ಯಾಮಣ್ಣನ ಲಾವಣಿಗಳು ನಿಂಗಣ್ಣ ಸಣ್ಣಕ್ಕಿ
೯೬ ಬೆಳವಲ ಬೆಳಕು ಜಿ.ಬಿ. ಖಾಡೆ
೯೭ ವಡ್ಡಗೆರೆ ನಾಗಮ್ಮ ವೈಜಯಂತಿಮಾಲ
೯೮ ಎರಡು ಕಿನ್ನರಿಜೋಗಿ ಕಾವ್ಯಗಳು ಜಿ.ಎಸ್. ವಸಂತಮಾಲ
೯೯ ಉತ್ತರ ಕರ್ನಾಟಕದ ಬೈಗುಳಗಳು ಮೃತ್ಯುಂಜಯ ಹೊರಕೇರಿ
೧೦೦ ಗ್ರಾಮೀಣ ಗಾದೆಗಳು ಬಿ. ಕೃಷ್ಣಪ್ಪ ರೆಡ್ಡಿ
೧೦೧ ಜನಪದ ಶಿಶುಪ್ರಾಸಗಳು ಶ್ರೀಕಂಠ ಕೊಡಿಗೆ
೧೦೨ ಗುಲಗಂಜಿ ಮಾದೇವಿ ಕುರುವ ಬಸವರಾಜ್
೧೦೩ ಹಸರ ಗಿಡದ ಮ್ಯಾಲ ಮೊಸರ ಚಲ್ಲೇದ ಜಂಬುನಾಥ ಕಂಚ್ಯಾಣಿ
೧೦೪ ಸಂಸಾರಿ ಹೆಚ್ಚೋ ಸನ್ಯಾಸಿ ಹೆಚ್ಚೋ ಡಾ. ಎಂ.ಎ. ಜಯಚಂದ್ರ
೧೦೫ ಜಾನಪದ ಒಡಪುಗಳು ಶಂಕರಾನಂದ ಉತ್ಲಾಸರ
೧೦೬ ಹಳ್ಳಿ ಹಬ್ಬಿಸಿದ ಹೂಬಳ್ಳಿ ಜಿ.ಬಿ. ಖಾಡೆ
೧೦೭ ಜನಪದದಲ್ಲಿ ಮಳೆರಾಯನ ಮುನಿಸು ಬಸವರಾಜ ಆಕಳವಾಡಿ
೧೦೮ ಲಂಬಾಣಿಗರ ಜನಪದ ಗೀತೆಗಳು ಬೇನಹಳ್ಳಿ ಜಿ. ನಾಯಕ್
೧೦೯ ಕಥೆ ಕೇಳೇ ಗುಬಲಾಡಿ ಜೀನಹಳ್ಳಿ ಸಿದ್ಧಲಿಂಗಪ್ಪ
೧೧೦ ಎಣ್ಣೆಗೆರೆಯ ಜನಪದ ಗೀತೆಗಳು ಎಣ್ಣೆಗೆರೆ ಆರ್. ಸಿದ್ಧಹನುಮಪ್ಪ
೧೧೧ ಲಂಬಾಣಿ ಗಾದೆಗಳು ಸಣ್ಣರಾಮ
೧೧೨ ನಲ್ಲೂರು ದೊರೆಕಾಳಿ ಡಾ. ನಲ್ಲೂರು ಪ್ರಸಾದ್ ಆರ್.ಕೆ.
೧೧೩ ಕನ್ನಡ ನಾಟಕ ಸಂಪುಟ ಡಾ. ಚಂದ್ರಶೇಖರ ಕಂಬಾರ
೧೧೪ ಕೋಲಾಟದ ಪದಗಳು ಬಸವರಾಜ ಮಲಶೆಟ್ಟಿ
೧೧೫ ಮರಾಠಿ ಲೋಕಸಾಹಿತ್ಯ ಡಾ. ಎಸ್.ಎಸ್. ಬ್ಯಾತನಾಳ
೧೧೬ ಜನಪದ ಜೀವನ ತರಂಗಗಳು ಪ್ರೊ. ಎಂ.ಎನ್. ವಾಲಿ
೧೧೭ ಬಂದೀರೆ ನನ್ನ ಜಡೆವೊಳಗೆ ಡಾ. ಚಂದ್ರಶೇಖರ ಕಂಬಾರ, ಡಾ. ಜಿ.ಆರ್. ತಿಪ್ಪೇಸ್ವಾಮಿ
೧೧೮ ಕರ್ನಾಟಕದ ವೀರಗಲ್ಲುಗಳು ಡಾ. ಆರ್. ಶೇಷಶಾಸ್ತ್ರೀ
೧೧೯ ಜನಪದ ಕಲಾವಿದರ ಸೂಚಿ ಡಾ. ಹಂಪ ನಾಗರಾಜಯ್ಯ
೧೨೦ ಕನ್ನಡ ಗಾದೆಗಳ ಮಹಾಕೋಶ ಸಂ-೧ ಹು.ಮ. ರಾಮಾರಾಧ್ಯ
೧೨೧ ಕನ್ನಡ ಗಾದೆಗಳ ಮಹಾಕೋಶ ಸಂ-೨ ಹು.ಮ. ರಾಮಾರಾಧ್ಯ
೧೨೨ ಕಾದಂಬರಿಕಾರನ ಕಥೆ ಬಸವರಾಜ ಕಟ್ಟೀಮನಿ
೧೨೩ ನಾನು ಯಾರು ಜಿ.ವಿ.ಡಿ.
೧೨೪ ಜನಪದ ಝೇಂಕಾರ ಬಿ.ಎಸ್. ಸ್ವಾಮಿ
೧೨೫ ನಮ್ಮ ಕಣ್ಣು ಡಾ. ಎಸ್.ಬಿ. ವಸಂತಕುಮಾರ್
೧೨೬ ರಿವಾಯತ ಪದಗಳು ತೇಜಸ್ವಿ ಕಟ್ಟೀಮನಿ
೧೨೭ ಕನ್ನಡ ಜನಪದ ಕಥೆಗಳು ಡಾ. ಕೆ.ಆರ್. ಸಂಧ್ಯಾರೆಡ್ಡಿ
೧೨೮ ಹಠಮಾರಿ ಹೆಣ್ಣು ಮತ್ತು ಇತರ ಜನಪದ ಕಥೆಗಳು ಬಸವರಾಜ ನೆಲ್ಲಿಸರ
೧೨೯ ಕೋಲಾಟಗಳು ಮತ್ತು ಕೋಲಪದಗಳು ಡಾ. ಎಸ್.ಪಿ. ಪದ್ಮಪ್ರಸಾದ್
೧೩೦ ಮಹಿಳೆಯರ ಕೆಲವು ಮರಾಠಿ ಕಥೆಗಳು ಅನು: ಎಸ್.ಪಿ. ಪಾಟೀಲ
೧೩೧ ಶಿವಗಂಗೆ ಸುತ್ತಿನ ಜನಪದ ಕಥೆಗಳು ಸುಧಾಕರ
೧೩೨ ಭಾರತದ ಪ್ರಾಚೀನ ವಿದ್ಯಾಪೀಠಗಳು ಬಿ.ಪಿ. ಶಿವಾನಂದರಾವ್
೧೩೩ ಕನ್ನಡ ವೃತ್ತಿಗಾಯಕ ಕಾವ್ಯಗಳು ಡಾ. ಜೀ.ಶಂ. ಪರಮಶಿವಯ್ಯ
೧೩೪ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ ವಿವಿಧ ಲೇಖಕಿಯರು
೧೩೫ ನಮ್ಮ ಲೇಖಕಿಯರು ಸಂ: ಸಂಧ್ಯಾಶರ‍್ಮ, ಕುಲಶೇಖರಿ
೧೩೬ ರಿವಾಯತಗಳು ಪ್ರೊ. ಶ್ರೀಮತಿ ಎಚ್.ಎಂ. ಬೀಳಗಿ
೧೩೭ ಕೊಡವ ಕನ್ನಡ ನಿಘಂಟು ಐ.ಮಾ. ಮುತ್ತಣ್ಣ
೧೩೮ ಹಾಸಿಗೆ ಹಾವಾಯಿತಲ್ಲ
೧೩೯ ಚಿನ್ನದ ಕರ‍್ಹಾಂಗೆ ಸಲಹಿನಿ ಗುಂಡ್ಮಿ ಚಂದ್ರಶೇಖರ ಐತಾಳ
೧೪೦ ಕೂಸಾಯ್ತು ನಮ್ಮ ಕೊಮರಾಗೆ ಡಾ. ಎನ್.ಆರ್. ನಾಯಕ್
೧೪೧ ವೀರಶೈವ ಪುರಾಣಗಳು ಡಾ. ಎಸ್. ವಿದ್ಯಾಶಂಕರ
೧೪೨ ಸರ್ವಜ್ಞನ ಸಮಾಜ ದರ್ಶನ ಮತ್ತು ಸಾಹಿತ್ಯ ಸತ್ವ ಡಾ. ಎಂ. ಅಕಬರ ಅಲಿ
೧೪೩ ಸರ್ವಜ್ಞನ ವಚನ ಸಂಗ್ರಹ
೧೪೪ ಚಿತ್ರಾಂಗದ ಮತ್ತು ಇಸ್ಪೀಟ್ ರಾಜ್ಯ
೧೪೫ ನಾಗಚಂದ್ರ ಒಂದು ಅಧ್ಯಯನ ಡಾ. ವಿಜಯಾ ದಬ್ಬೆ
೧೪೬ ಭಕ್ತ ಮಾರ್ಕಂಡೇಯ ಎಮ್.ಟಿ.ಧೂಪದ
೧೪೭ ಕೊಡಗು ಇತಿಹಾಸ ಪುಟಗಳಿಂದ ಕಾಕೆಮಾನಿ
೧೪೮ ಸ್ವಾತಂತ್ರ್ಯೋತ್ತರ ವಿಚಾರ ಸಾಹಿತ್ಯ ಗೌರೀಶ  ಕಾಯ್ಕಿಣಿ
೧೪೯ ಗುಮ್ನಳ್ಳಿ ಕದನ ಹೆಚ್.ವಿ. ವೀರನಾಯಕ
೧೫೦ ತಿಳಿದ ಮಾಡು ಹಾದರಾ ಬೈರಮಂಗಲ ರಾಮೇಗೌಡ
೧೫೧ ಹನುಮಾನ್ ವೆಂಕಟರಾಯರು ಕ.ರಾ. ಲಕ್ಷ್ಮೀಕಾಂತಯ್ಯ
೧೫೨ ಸಂಪ್ರದಾಯದ ಗೀತೆಗಳು
೧೫೩ ಹಳ್ಳಿಯ ಹಾಡುಗಳು ಗೊರೂರು ರಾಮಸ್ವಾಮಿ ಅಯ್ಯಂಗಾರ್
೧೫೪ ಹತ್ತೊಂಬತ್ತನೆಯ ಶತಮಾನದ ಕನ್ನಡ ಸಾಹಿತ್ಯ ಚರಿತ್ರೆ ಎ.ಎಸ್. ಜಯರಾಂ
ಕಾವ್ಯ
೧೫೫ ಹಳೆಯ ಬೇರು ಹೊಸ ಚಿಗುರು ಪು.ತಿ.ನ.
೧೫೬ ಜೈನ ಪರಿಭಾಷಾ ರತ್ನಕೋಶ ಸಂ: ತ.ಸು. ಶಾಮರಾಯರು, ಪ. ನಾಗರಾಜಯ್ಯ
೧೫೭ ಕಲಿಗಣನಾಥನ ಸಾಂಗತ್ಯ ಎಸ್. ಉಮಾಪತಿ
೧೫೮ ಕಪೋತ ಚರಿತೆ ಟಿ.ಎಸ್. ಸತ್ಯನಾಥ್
೧೫೯ ಕರ್ಣಾಟ ಕೃಷ್ಣರಾಯ ಭಾರತ ತಿಮ್ಮಣ್ಣ ಕವೀಂದ್ರ ವಿರಚಿತ
೧೬೦ ಕುಸುಮಾವಳೀ ಕಾವ್ಯ ದೇವಕವಿ
೧೬೧ ಕಾವ್ಯಸಾರಂ ಸಂ: ಎನ್. ಅನಂತರಂಗಾಚಾರ್
೧೬೨ ರಾಮಚಂದ್ರ ಚರಿತ ಪುರಾಣಂ ನಾಗಚಂದ್ರ
೧೬೩ ವರ್ಧಮಾನ ಪುರಾಣ (ಜಿನಸೇನ ದೇಶವ್ರತಿ ವಿರಚಿತ) ಸಂ: ಬಿ.ಎಸ್. ಸಣ್ಣಯ್ಯ
೧೬೪ ಚೇರಮಕಾವ್ಯಂ ಸಂ: ಎನ್. ಬಸವಾರಾಧ್ಯ
೧೬೫ ಉದ್ಭಟದೇವಚರಿತೆ ಸಂ: ಎನ್. ಬಸವಾರಾಧ್ಯ
೧೬೬ ತ್ರಿಪುರ ದಹನ ಸಾಂಗತ್ಯ ಸಂ: ಎನ್. ಬಸವಾರಾಧ್ಯ
೧೬೭ ಕನಕದಾಸ ವಿರಚಿತ ಹರಿಭಕ್ತಿಸಾರ ಅನು: ಎನ್. ರಂಗನಾಥಶರ್ಮ
೧೬೮ ಕವನಗಳ ಸಂಗ್ರಹ ವಿವಿಧ ಲೇಖಕರು
೧೬೯ ಕವನಗಳು ವಿವಿಧ ಲೇಖಕರು
೧೭೦ ಕಾವ್ಯಸೌಂದರ್ಯ ವಿವಿಧ ಲೇಖಕರು
೧೭೧ ಚೆನ್ನಬಸವ ಪುರಾಣ ಸಂಗ್ರಹ ಸಂ: ಎಂ.ಆರ್. ಶ್ರೀನಿವಾಸಮೂರ್ತಿ
೧೭೨ ಭಕ್ತವಾಣಿ
೧೭೩ ಸೋಮೇಶ್ವರ ಶತಕ ಸಂ: ಬೆಳ್ಳಾವೆ ವೆಂಕಟನಾರಣಪ್ಪ
೧೭೪ ಎಡತೊರೆ ಅರ್ಕ ಪುಷ್ಕರಣೀ ಮಹಾತ್ಮೆ ಟಿ.ಆರ್. ಶಾಂತ
೧೭೫ ಸುಸ್ಮಿತ ಅ.ರಾ.ಸೇ.
೧೭೬ ನವೋದಯ ಕಾವ್ಯದಲ್ಲಿ ಪ್ರಕೃತಿ ಎಚ್.ಎಸ್. ಪಾರ್ವತಿ
೧೭೭ ಪದ್ಮಿನೀ ಪರಿಣಯ ಡಾ. ಪಿ.ವಿ. ನಾರಾಯಣ
೧೭೮ ಚಂದ್ರಸಾಗರ ವರ್ಣಿಯ ಕೃತಿಗಳು ಸಂ: ಡಾ. ಹಂಪ ನಾಗರಾಜಯ್ಯ, ಎಸ್. ಶಿವಣ್ಣ
೧೭೯ ನಿರಂಜನ ಸ್ತೋತ್ರ ಸಂಗ್ರಹ
೧೮೦ ಸೀತಾಪರಿತ್ಯಾಗ ಸಂಗ್ರಹ
೧೮೧ ನಾಂದಿ ಸಂ: ಟಿ.ಆರ್. ಮಹದೇವಯ್ಯ
೧೮೨ ಹೊಸಧ್ವನಿ ವಿವಿಧ ಲೇಖಕರು
೧೮೩ ಹೊಸಹೆಜ್ಜೆ ಸಂ: ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ವೀಣಾ ಶಾಂತೇಶ್ವರ
ಸಾಹಿತ್ಯ
೧೮೪ ಸಾಹಿತ್ಯ ವಿಹಾರ ವಿವಿಧ ಲೇಖಕರು
೧೮೫ ಆಧುನಿಕ ಗದ್ಯ ಸಾಹಿತ್ಯ (ಲಲಿತ) ಸಂ: ಕೆ. ಗೋಪಾಲಕೃಷ್ಣರಾಯರು
೧೮೬ ಆಧುನಿಕ ಗದ್ಯ ಸಾಹಿತ್ಯ (ವಿಚಾರ) ಸಂ: ಕೆ. ಗೋಪಾಲಕೃಷ್ಣರಾಯರು
೧೮೭ ಸಾಹಿತ್ಯಯ ಶಾಸ್ತ್ರ ಕರ್ಪೂರ ಶ್ರೀನಿವಾಸರಾವ್
೧೮೮ ಸಾಹಿತ್ಯ ವಿಮರ್ಶೆ ವಿವಿಧ ಲೇಖಕರು
೧೮೯ ಭಾರತೀಯ ಸಾಹಿತ್ಯದಲ್ಲಿ ಇತ್ತೀಚಿನ ಒಲವುಗಳು ವಿವಿಧ ಲೇಖಕರು
೧೯೦ ಸಂಸ್ಕೃತ ಸಾಹಿತ್ಯಕ್ಕೆ ಕಾಶ್ಮೀರದ ಕೊಡುಗೆ ಡಾ. ಕೆ.ಎಸ್. ನಾಗರಾಜನ್
೧೯೧ ಗಾಂಧಿ ಸಾಹಿತ್ಯ ಜಿ.ವಿ. ನಾರಾಯಣಮೂರ್ತಿ
ವಿಮರ್ಶೆ
೧೯೨ ಭವಭೂತಿ ಮಹಾಕವಿ ಸಿ.ಕೆ. ವೆಂಕಟರಾಮಯ್ಯ
೧೯೩ ಪ್ರಬಂಧಗಳು ವಿವಿಧ ಲೇಖಕರು
೧೯೪ ಶ್ರೀ ವೈಷ್ಣವ ದರ್ಶನ ವಿವಿಧ ಲೇಖಕರು
ಸಂಗೀತ 
೧೯೫ ಹರಿದಾಸ ಕೃತಿ ಮಂಜರಿ ಎಲ್. ರಾಜಾರಾವ್
೧೯೬ ಸಂಗೀತ ಸರಿತಾ ಎಸ್. ಕೃಷ್ಣಮೂರ್ತಿ
೧೯೭ ನಾದಯಾತ್ರೆ ವಸಂತ ಕವಲಿ
೧೯೮ ಪುರಂದರದಾಸರ ಸಾಹಿತ್ಯ ವಿಮರ್ಶೆ ವಿವಿಧ ಲೇಖಕರು
೧೯೯ ಓಂಕಾರನಾದಸುಧಾ ಸಿ. ಹೊನ್ನಪ್ಪ ಭಾಗವತರ್
ಗಮಕ
೨೦೦ ಗಮಕ ಸೌರಭ ಸಂಪಾದಕ ಮಂಡಲಿ
೨೦೧ ಗಮಕ ಕಲೆ ವಿವಿಧ ಲೇಖಕರು
೨೦೨ ಗಮಕ ಕಲ್ಪವಲ್ಲರಿ ಸಂಪಾದಕ ಮಂಡಲಿ
೨೦೩ ಗಮಕ ಚಿಂತಾಮಣಿ ಸಂಪಾದಕ ಮಂಡಲಿ
೨೦೪ ಗಮಕ ಪ್ರಚಾರ ಬೋಧಿನಿ ಎಂ. ರಾಘವೇಂದ್ರರಾವ್
೨೦೫ ಕರ್ನಾಟಕದ ಗಮಕಿಗಳು ಸಂಪಾದಕ ಮಂಡಲಿ
೨೦೬ ಕಾವ್ಯಗಾಯನ ಕಲಾ ಸಂಗ್ರಹ ಎಂ.ರಾಘವೇಂದ್ರರಾವ್
೨೦೭ ಚಂದ್ರಹಾಸನ ಕಥೆ ಎನ್. ಬಸವಾರಾಧ್ಯ
೨೦೮ ಗಮಕ-ಗಮಕಿ ಸಂ: ಎಚ್.ಎಂ. ರಾಮಾರಾಧ್ಯ
೨೦೯ ಗಮಕ ಚಂದ್ರಿಕೆ ಎಚ್.ಎಂ. ರಾಮಾರಾಧ್ಯ
ಶಿಶು ಸಾಹಿತ್ಯ
೨೧೦ ಬಾಲಾಪರಾಧಿ ಕೆ.ಜಿ. ಬೆಳ್ಳುಬ್ಬಿ
೨೧೧ ಕರ್ನಾಟಕ ಶಿಶುಪ್ರಾಸಗಳು ಜಿವಿಡಿ
ಜನಪದ  ಸಾಹಿತ್ಯಯ
೨೧೨ ಸೋಬಾನೆ ಚಿಕ್ಕಮ್ಮನ ಪದಗಳು ಸಂ: ಎಚ್.ಎಲ್. ನಾಗೇಗೌಡ
೨೧೩ ಬಯಲು ಸೀಮೆಯ ಜನಪದ ಗೀತೆಗಳು ಸಂ: ಡಿ. ಲಿಂಗಯ್ಯ
೨೧೪ ಗೊಂಡರ ಪದಗಳು ಡಾ. ಎಲ್.ಆರ್. ಹೆಗಡೆ
೨೧೫ ಕರ್ನಾಟಕ ಜನಪದ ಕಥೆಗಳು ಸಂ: ಎಚ್.ಎಲ್. ನಾಗೇಗೌಡ
೨೧೬ ಕರ್ನಾಟಕ ಜನಪದ ಕಲೆಗಳು ಸಂ: ಗೊ.ರು. ಚನ್ನಬಸಪ್ಪ
೨೧೭ ಜನಪದ ಸಾಹಿತ್ಯ ವಿವಿಧ ಲೇಖಕರು
೨೧೮ ಕರ್ನಾಟಕದ ಜನಪದ ಕಲಾಮಹೋತ್ಸವ ಸಂ: ಗೊ.ರು. ಚನ್ನಬಸಪ್ಪ
೨೧೯ ಬೀಗರ ಹಾಡು ಕೆ.ವಿ. ಆಚಾರ್ಯ
೨೨೦ ಕರ್ನಾಟಕದ ಕಲೆಗಳು - ಭೂಮಿಕೆ. ಸಂ-೧ ಪ್ರೊ. ಎಸ್.ಕೆ. ರಾಮಚಂದ್ರರಾವ್
೨೨೧ ಕರ್ನಾಟಕದ ಕಲೆಗಳು - ಸಂಗೀತ ಸಂ-೨ ಡಾ. ರಾ. ಸತ್ಯನಾರಾಯಣ
೨೨೨ ಕರ್ನಾಟಕದ ಕಲೆಗಳು - ಕರಕುಶಲಕಲೆ ಬೆನಕನಹಳ್ಳಿ ಜಿ. ನಾಯಕ್
೨೨೩ ಕರ್ನಾಟಕದ ಕಲೆಗಳು-ಕನ್ನಡ ನಾಡಿನ ಕಲಾವಿದರು ಡಾ. ಜಿ.ಆರ್. ತಿಪ್ಪೇಸ್ವಾಮಿ
೨೨೪ ಸುಭಾಷಿತ ಮಂಜರಿ ಸಂಪಾದಿತ
೨೨೫ ಕರ್ನಾಟಕದ ಜಾತ್ರೆಗಳು ಪ್ರೊ. ಹಂಪ ನಾಗರಾಜಯ್ಯ
೨೨೬ ಜಾನಪದ ದರ್ಶನ ಗೊ.ರು. ಚನ್ನಬಸಪ್ಪ, ಬೈರಮಂಗಲ ರಾಮೇಗೌಡ, ಚಕ್ಕೆರೆ ಶಿವಶಂಕರ್
೨೨೭ ಜೇನವ್ವನ ಸಂಸಾರ ಶಾ. ಬಾಲೂರಾವ್
ವಿಜ್ಞಾನ
೨೨೮ ನಕ್ಷತ್ರಗಳು  ಮತ್ತು ಗ್ರಹಗಳು ವಿ. ಚಲುವರಾಜ ಅಯ್ಯಂಗಾರ್
೨೨೯ ವಿದ್ಯುಚ್ಛಕ್ತಿ ವಿವಿಧ ಲೇಖಕರು
೨೩೦ ಯಂತ್ರಶಿಲ್ಪ ವಿವಿಧ ಲೇಖಕರು
೨೩೧ ಮಾರ್ಗಗಳ ನಿರ್ಮಾಣ ವಿವಿಧ ಲೇಖಕರು
೨೩೨ ದಿನಬಳಕೆಯ ವಸ್ತುಗಳು ವಿವಿಧ ಲೇಖಕರು
೨೩೩ ಪ್ಲಾಸ್ಟಿಕ್ ಪ್ರಪಂಚ ಬೆ.ಗೋ ರಮೇಶ್
೨೩೪ ಜೀವಿಗಳಲ್ಲಿ ವಿದ್ಯುತ್ತು ಎಸ್.ಕೆ. ವಿಜಯಲಕ್ಷ್ಮಮ್ಮ
೨೩೫ ಕಾಲ ಡಾ. ಎಂ. ಶಿವರಾಂ
ಸ್ವಯಂಬೋಧಿನಿಗಳು
೨೩೬ ಕನ್ನಡ ತಮಿಳು ಸ್ವಯಂಬೋಧಿನಿ - ಭಾಗ-೧ ಕೆ.. ಪಟ್ಟಾಭಿರಾಮಯ್ಯ
೨೩೭ ಕನ್ನಡ ತಮಿಳು ಸ್ವಯಂಬೋಧಿನಿ - ಭಾಗ-೨ ಕೆ. ಪಟ್ಟಾಭಿರಾಮಯ್ಯ
೨೩೮ ಕನ್ನಡ ಮಲೆಯಾಳ ಬೋಧಿನಿ ಡಾ. ಬಿ.ಕೆ. ತಿಮ್ಮಪ್ಪ, ಎಸ್.ಎಂ. ಕುಮಾರ್
೨೩೯ ಕನ್ನಡ ತೆಲುಗು ಸ್ವಯಂಬೋಧಿನಿ ಎಸ್.ಎಂ. ಕುಮಾರ್
ಇತಿಹಾಸ
೨೪೦ ಕನ್ನಡ ನಾಡಿನ ಚರಿತ್ರೆ ಭಾಗ-೧ ಡಾ. ಬಿ.ಎ. ಸಾಲೆತ್ತೂರೆ/ ಡಾ. ದೇಸಾಯಿ ಪಾಂಡುರಂಗರಾಯರು
೨೪೧ ಕನ್ನಡ ನಾಡಿನ ಚರಿತ್ರೆ ಭಾಗ-೨ ಡಾ. ಎಸ್.ಸಿ. ನಂದಿಮಠ
೨೪೨ ಕನ್ನಡ ನಾಡಿನ ಚರಿತ್ರೆ ಭಾಗ-೩ ಡಾ. ಎಂ.ಎಚ್. ಕೃಷ್ಣ
೨೪೩ ಚಾರಿತ್ರಿಕ ದಾಖಲೆಗಳು ಆರ್.ವಿ.ಎಸ್. ಸುಂದರಂ
೨೪೪ ದ್ವಿತೀಯ ಮಹಾಯುದ್ಧ ತಿ.ತಾ. ಶರ್ಮ
೨೪೫ ಕರ್ನಾಟಕ ಯಾತ್ರೆ ಕೃಷ್ಣ ಕೊಲ್ಹಾರ ಕುಲಕರ್ಣಿ
೨೪೬ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶ್ರೀ ಸಾಮಾನ್ಯ ………………………………………………………..
೨೪೭ ಕರ್ನಾಟಕದ ವೀರಯೋಧರು ವಿ.ಎಸ್. ನಾರಾಯಣರಾವ್
೨೪೮ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಡಾ. ವಸುಂಧರಾ ಫಿಲಿಯೋಜಾ
೨೪೯ ಮ್ಯಾಕ್ಸ್ ಪಾಂಕ್  ಡಾ. ಬಿ. ಸಿದ್ಧಲಿಂಗಪ್ಪ
೨೫೦ ಆಲ್ಬರ್ಟ್ ಐನ್‌ಸ್ಟೈನ್ ಡಾ. ಬಿ. ಸಿದ್ಧಲಿಂಗಪ್ಪ
೨೫೧ ನೀಲ್ಸ್ಬೋರ್  ಡಾ. ಬಿ. ಸಿದ್ಧಲಿಂಗಪ್ಪ
೨೫೨ ಲೂಯಿಸ್ ಡಿ. ಬೋಗ್ಲಿ ಡಾ. ಬಿ. ಸಿದ್ಧಲಿಂಗಪ್ಪ
೨೫೩ ವರ್ನರ್ ಹೈಸನ್ ಬರ್ಗ್ ಡಾ. ಬಿ. ಸಿದ್ಧಲಿಂಗಪ್ಪ
೨೫೪ ಇರ್ವಿನ್ ಶ್ರೋಡಿಂಜರ್ ಡಾ. ಬಿ. ಸಿದ್ಧಲಿಂಗಪ್ಪ
೨೫೫ ಮ್ಯಾಕ್ಸ್ ಬಾರ್ನ್ ಡಾ. ಬಿ. ಸಿದ್ಧಲಿಂಗಪ್ಪ
೨೫೬ ವುಲ್ಘ್‍ಗೆಂಗ್ ಪೌಲಿ ಡಾ. ಬಿ. ಸಿದ್ಧಲಿಂಗಪ್ಪ
೨೫೭ ಪಿ.ಎ. ಎಂ. ಡರ‍್ಯಾಕ್ ಡಾ. ಬಿ. ಸಿದ್ಧಲಿಂಗಪ್ಪ
೨೫೮ ಸುಬ್ರಮಣ್ಯನ್ ಚಂದ್ರಶೇಖರ್ ಡಾ. ಬಿ. ಸಿದ್ಧಲಿಂಗಪ್ಪ
ಮಹಿಳಾ ಮಾಲಿಕೆ
೨೫೯ ಮಹಿಳೆ ಮತ್ತು ದಾದಿಯರ ವೃತ್ತಿ ಟಿ. ಗಿರಿಜ
೨೬೦ ಮಹಿಳೆ ಮತ್ತು ಉದ್ಯೋಗ ವೈ.ಕೆ. ಸಂಧ್ಯಾ
೨೬೧ ಮಹಿಳೆ ಮತ್ತು ಧರ್ಮ ಪ್ರಭಾಮಣಿ
೨೬೨ ಮಹಿಳೆ ಮತ್ತು ವಿವಾಹ ನಿರುಪಮಾ
೨೬೩ ಕೊಳಚೆ ಪ್ರದೇಶದಲ್ಲಿ ಮಹಿಳೆಯರು ಕೆ. ಸಾವಿತ್ರಿ
೨೬೪ ಮಹಿಳೆ ಮತ್ತು ಮಕ್ಕಳ ಪೋಷಣೆ ಸಿ.ವಿ. ಗೀತಾ
೨೬೫ ಮಹಿಳೆ ಮತ್ತು ನಗರ ಜೀವನ ವಿಮಲಾ ರಾಮರಾವ್
೨೬೬ ಮಹಿಳೆ ಮತ್ತು ಆಸ್ತಿಯ ಹಕ್ಕು ಕೆ. ಪದ್ಮಾವತಮ್ಮ
೨೬೭ ಮಹಿಳೆ ಮತ್ತು ಉಳಿತಾಯ ಲೀಲಾದೇವಿ ಆರ್. ಪ್ರಸಾದ್
೨೬೮ ರಾಜಕಾರಣದಲ್ಲಿ ಮಹಿಳೆ ಡಾ. ಎಂ.ಎ. ಸಿಂಗಮ್ಮಾಳ್
೨೬೯ ಮಹಿಳೆ ಮತ್ತು ಕನ್ನಡ ಎಂ. ಜಯಂತಿ ಬಾಯಿ
೨೭೦ ಮಹಿಳೆ ಮತ್ತು ಸಾಕ್ಷರತೆ ಎಸ್.ಎನ್. ರತ್ನಮ್ಮ
೨೭೧ ಮಹಿಳೆ ಮತ್ತು ಕುಟುಂಬ ಯೋಜನೆ ಡಾ. ಲಲಿತಾ ಭಟ್
೨೭೨ ಮಹಿಳೆ ಮತ್ತು ಸಮಾಜ ಕಲ್ಯಾಣ ಪ್ರಮೀಳಾ ಬಿ. ದೇಶಪಾಂಡೆ
೨೭೩ ಮಹಿಳೆ ಮತ್ತು ಕಲೆ ಯ.ಶ್ರೀ. ಜ್ಯೋತಿ
೨೭೪ ಮಹಿಳೆ ಮತ್ತು ವಿಜ್ಞಾನ ಶೋಭಾ ಕಟ್ಟಿ
೨೭೫ ಮಹಿಳೆ ಮತ್ತು ಕೋಮುವಾದ ಡಾ.ಮಾಧವಿ ಎಸ್.ಭಂಡಾರಿ
೨೭೬ ಮಹಿಳೆಯರ ಸ್ಥಾನಮಾನ ಮತ್ತು ಸಂಘಟನೆ  ಶ್ರೀಮತಿ ಬಾ.ಹ.ರಮಾಕುಮಾರಿ
೨೭೭ ಮಹಿಳಾ  ಸ್ವಾತಂತ್ರ್ಯ ಎನ್.ವಿ. ಭಾಗ್ಯಲಕ್ಷ್ಮೀ
೨೭೮ ಮಹಿಳೆ ಮತ್ತು ಶಿಕ್ಷಣ ಶಾಲಿನಿ ರಾಮಚಂದ್ರ ಹೆಗಡೆ
೨೭೯ ಅನಾಥ ಮಹಿಳೆಯರು ಅಂಜನಾ ಗೋವಿಂದರಾಜು
೨೮೦ ವಿಧವೆಯರ ಸಮಸ್ಯೆಗಳು ನಂದಿನಿ
೨೮೧ ಮಹಿಳೆ ಮತ್ತು ಅಲಂಕರಣ ಜಿ. ಸರಸ್ವತಿ
೨೮೨ ಗ್ರಾಮೀಣ ಮಹಿಳೆಯರು ಎ.ಪಿ. ಮಾಲತಿ
೨೮೩ ಮೂಢನಂಬಿಕೆ ಮತ್ತು ಮಹಿಳೆ ಎಂ. ಲೀಲಾವತಿ
೨೮೪ ನಮಗೆಂಥ ಮಕ್ಕಳು ಬೇಕು ಡಾ. ಶಮಂತಕಮಣಿ ನರೇಂದ್ರನ್
೨೮೫ ಮಹಿಳಾ ಚೇತನ ಶಾಂತಾದೇವಿ ಮಾಳವಾಡ
೨೮೬ ಇಂಗ್ಲಿಷ್‌ನಲ್ಲಿ ಕೃತಿರಚನೆ ಮಾಡಿದ ಭಾರತೀಯಮಹಿಳೆಯರು ವಿಮಲಾ ರಾಮರಾವ್
೨೮೭ ಶಿಲ್ಪದಲ್ಲಿ ಸ್ತ್ರೀ ಎಸ್.ಕೆ. ಕಿಟ್ಟಮ್ಮ
೨೮೮ ಪ್ರಗತಿಪಥದಲ್ಲಿ ಕರ್ನಾಟಕದ ಮಹಿಳೆಯರು ವಿವಿಧ ಲೇಖಕರು
೨೮೯ ಭಾರತೀಯ ಸ್ತ್ರೀ, ಸಂಸ್ಕೃತಿ ಮತ್ತು ಸಮಾಜ ಪದ್ಮಾ ಎಂ. ಶೆಣೈ
ಜೀವನ ಚರಿತ್ರೆ
೨೯೦ ಆಲೂರು ವೆಂಕಟರಾಯರು ವೆಂಕಟೇಶ  ಸಾಂಗ್ಲಿ
೨೯೧ ಎಚ್.ವಿ. ನಂಜುಂಡಯ್ಯ ಎಚ್.ವಿ. ಸಾವಿತ್ರಮ್ಮ
೨೯೨ ಮಧುರಚೆನ್ನರ ಜೀವನ ಮತ್ತು ಕಾರ್ಯ ಸಿಂಪಿ ಲಿಂಗಣ್ಣ
೨೯೩ ರಾ. ನರಸಿಂಹಾಚಾರ್ಯ ಎಚ್. ಅನಂತರಂಗಾಚಾರ್ಯ
೨೯೪ ಗಳಗನಾಥ ಮಾಸ್ತರರು ಡಾ. ಶ್ರೀನಿವಾಸ ಹಾವನೂರ
೨೯೫ ಸುಭೋಧ ರಾಮರಾಯರು ಡಾ. ಕೆ.ಎಂ. ಕೃಷ್ಣರಾವ್
೨೯೬ ನಾಟಕಕಾರ ನರಹರಿ ಶಾಸ್ತ್ರಿಗಳು ಬ.ನ. ಸುಂದರರಾವ್
೨೯೭ ಮುಳಿಯ ತಿಮ್ಮಪ್ಪಯ್ಯ ತೆಕ್ಕುಂಜೆ ಗೋಪಾಲ ಕೃಷ್ಣಭಟ್ಟ
೨೯೮ ಶ್ಯಾಮರಾವ ವಿಠಲ ಕೈಕಿಣಿ ಗೌರೀಶ ಕಾಯ್ಕಿಣಿ
೨೯೯ ಬೆಳ್ಳಾವೆ ವೆಂಕಟನಾರಣಪ್ಪ ಡಿ. ಲಿಂಗಯ್ಯ
೩೦೦ ತಿರುಳುಗನ್ನಡ ತಿರುಕ ವರದರಾಜ ಹುಯಿಲಗೋಳ
೩೦೧ ಬಿ.ಎಂ. ಶ್ರೀಕಂಠಯ್ಯ ಎ.ಎನ್. ಮೂರ್ತಿರಾವ್
೩೦೨ ಗೋವಿಂದ ಪೈ ಹಂಪನಾ ಮತ್ತು ಕಾವ್ಯಜೀವಿ
೩೦೩ ಬಾಲಗಂಗಾಧರ ತಿಲಕ ತಿ.ತಾ. ಶರ್ಮ
೩೦೪ ಜನರಲ್ ಕಾರ್ಯಪ್ಪ ಐ.ಮಾ. ಮುತ್ತಣ್ಣ
೩೦೫ ಜನರಲ್ ತಿಮ್ಮಯ್ಯ ಐ.ಮಾ. ಮುತ್ತಣ್ಣ
೩೦೬ ನಾಟಕ ಶಿರೋಮಣಿ - ಎ.ವಿ. ವರದಾಚಾರ್ಯ ಎಂ.ಜಿ. ಮರಿರಾವ್
೩೦೭ ಮಿರ್ಜಾ ಇಸ್ಮಾಯಿಲ್ ವಿ.ಎಸ್. ನಾರಾಯಣರಾವ್
೩೦೮ ಅ.ನ.ಕೃ ಜೀವನ ಮತ್ತು ಕಾರ್ಯ ಮ.ಗ.ಶೆಟ್ಟಿ
೩೦೯ ಬೆನಗಲ್ ರಾಮರಾವ್ ಶೇಕರ ಇಡ್ಕ
೩೧೦ ಎಂ.ಆರ್.ಶ್ರೀ ಜೀವನ ಮತ್ತು ಕಾರ್ಯ ಹೊ.ರಾ. ಸತ್ಯನಾರಾಯಣರಾವ್, ರಾ.ಶಾ. ಪ್ರಸನ್ನ ವೆಂಕಟೇಶಮೂರ್ತಿ
೩೧೧ ಶರತ್ ಚಂದ್ರ ವಿವಿಧ ಲೇಖಕರು
೩೧೨ ಚ. ವಾಸುದೇವಯ್ಯ ಬ.ನ. ಸುಂದರರಾವ್
೩೧೩ ಡಾಕ್ಟರ್ ಕರೇನ್ ಹರ‍್ನಿ ಬಿ.ಜೆ. ಸುವರ್ಣ
೩೧೪ ಆರ್. ಕಲ್ಯಾಣಮ್ಮ ಜೀವನ ಮತ್ತು ಕಾರ್ಯ ಎಚ್.ಎಸ್. ಪಾರ್ವತಿ
೩೧೫ ತ್ರಿವೇಣಿ ವ್ಯಕ್ತಿ ಮತ್ತು ಸಾಹಿತ್ಯ ಎಸ್.ವಿ. ವಿಮಲ
೩೧೬ ವಿಶ್ವದ ಶ್ರೇಷ್ಠ ಮಹಿಳಾ ಮಣಿಗಳು ಹೇಮಲತಾ ಪದಕಿ
೩೧೭ ಅದೃಷ್ಟ ಶಿಲ್ಪಿ ರಜತಾದ್ರಿ
೩೧೮ ಶಿ.ಶಿ. ಬಸವನಾಳ ಡಾ. ಬಿ.ಸಿ. ಜವಳಿ
೩೧೯ ಹೆಲನ್ ಕೆಲರ್ ಎಂ.ಆರ್. ರಾಮಯ್ಯ
೩೨೦ ಜಾನಪದ ದರ್ಶನ ಗೊ.ರು. ಚನ್ನಬಸಪ್ಪ, ಬೈರಮಂಗಲ ರಾಮೇಗೌಡ, ಚಕ್ಕೆರೆ ಶಿವಶಂಕರ್
೩೨೧ ಕರ್ನಾಟಕ ಸಂಸ್ಕೃತಿ ಡಾ. ಎಂ. ಚಿದಾನಂದಮೂರ್ತಿ
೩೨೨ ತಿರುಮಲಾಂಬಾ   ಚಿ.ನ. ಮಂಗಳಾ
೩೨೩ ದ.ರಾ. ಬೇಂದ್ರೆ ಎನ್ಕೆ ಕುಲಕರ್ಣಿ
೩೨೪ ಸಿದ್ಧವನಹಳ್ಳಿ ಕೃಷ್ಣಶರ್ಮ ಹ.ವೆಂ. ನಾಗರಾಜರಾವ್
೩೨೫ ಡಾ. ಎಂ.ಎಚ್. ಕೃಷ್ಣ ಕೆ.ಜಿ. ನಾಗರಾಜನ್
೩೨೬ ಉತ್ತಂಗಿ  ಚನ್ನಪ್ಪ ಪ್ರೊ. ಎಸ್.ಆರ್. ಗುಂಜಾಳ
೩೨೭ ನಾ. ಕಸ್ತೂರಿ ಡಾ. ಎ.ಎಸ್. ವೇಣುಗೋಪಾಲರಾವ್
೩೨೮ ನಾನೊಂದು ಕನಸುಕಂಡೆ ಡಾ. ಸರೋಜಿನಿ ಶಿಂತ್ರಿ
೩೨೯ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಎಲ್.ಎಸ್. ಶೇಷಗಿರಿರಾವ್
೩೩೦ ತಿರುಮಲೆ ರಾಜಮ್ಮ ಎಚ್.ಎಸ್. ಪಾರ್ವತಿ
೩೩೧ ಎಂ. ಶಿವರಾಂ ಎಂ. ಶಿವಕುಮಾರ್
೩೩೨ ಆ.ನೇ. ಉಪಾಧ್ಯೆ ಡಾ. ಎಂ.ಎ. ಜಯಚಂದ್ರ
೩೩೩ ಡಿ.ಎಲ್. ನರಸಿಂಹಾಚಾರ್ ಡಾ. ಎಸ್. ವಿದ್ಯಾಶಂಕರ
೩೩೪ ತೀ.ನಂ. ಶ್ರೀಕಂಠಯ್ಯ ಎಚ್.ಜಿ.ಸಣ್ಣಗುಡ್ಡಯ್ಯ
೩೩೫ ದೇವುಡು ಡಾ. ಸಂ.ಶಿ. ಮರುಳಯ್ಯ
ಕಥೆಗಳು
೩೩೬ ಅತ್ಯುತ್ತಮ ಸಣ್ಣ ಕಥೆಗಳು ಸಂ: ಕೆ. ನರಸಿಂಹಮೂರ್ತಿ
೩೩೭ ಗೋವಾ ಕಥೆಗಳು ಅನು: ಮ.ಗ.ಶೆಟ್ಟಿ
೩೩೮ ತೆಲುಗು ಕಥೆಗಳು ಅನು: ಕಾರುಪಲ್ಲಿ ಜಾನಕಿರಾಮಯ್ಯ
೩೩೯ ತೆಲುಗು ಕಥೆಗಳು ಅನು: ಕೆ.ಎಸ್. ಕರುಣಾಕರನ್
೩೪೦ ಕಥೆಗಳು (ಉ.ಲೇ.ಕ.ಸಂಗ್ರಹ) ವಿವಿಧ ಲೇಖಕರು
೩೪೧ ಸಣ್ಣ ಕಥೆಗಳು ವಿವಿಧ ಲೇಖಕರು
೩೪೨ ಉದಯೋನ್ಮುಖರ ಕಥೆಗಳು ವಿವಿಧ ಲೇಖಕರು
ನಾಟಕಗಳು
೩೪೩ ಠಾಕೂರರ ಎರಡು ನಾಟಕಗಳು ಅನು:ಎನ್.ಎಸ್. ಲಕ್ಷ್ಮೀನಾರಾಯಣಭಟ್ಟ, ಬಿ.ಎಲ್. ಮಂಜುನಾಥ್
೩೪೪ ಕರ್ನಾಟಕ ರಂಗಭೂಮಿ ಕೆ.ವಿ. ಆಚಾರ್
೩೪೫ ನಾಟಕ ವಿವಿಧ ಲೇಖಕರು
೩೪೬ ಕನ್ನಡ ನಾಟಕ ಪ್ರಪಂಚ ವಿವಿಧ ಲೇಖಕರು
೩೪೭ ಆಕಾಶ ಬಾಣಗಳು ಯಶೋಧರಾ ಆತ್ಮಾನಂದ ಭಟ್
ಹಾಸ್ಯ ಬರಹಗಳು
೩೪೮ ನಗೆಗಡಲು ರಂ. ನರಸಿಂಹಾಚಾರ್ಯ
೩೪೯ ಆಧುನಿಕ ನಗೆ ಸಾಹಿತ್ಯ ಟಿ. ಸುನಂದಮ್ಮ
೩೫೦ ಹಾಸ್ಯ ಲೇಖನಗಳು ವಿವಿಧ ಲೇಖಕರು
೩೫೧ ಹಾಸ್ಯದರ್ಶನ ತವಗ ಭೀಮಸೇನರಾವ್
೩೫೨ ವ್ಯಂಗ್ಯ ದರ್ಪಣ ವಿವಿಧ ವ್ಯಂಗ್ಯಚಿತ್ರ ಕಲಾವಿದರು
೩೫೩ ಹರಟೆಗಳು ವಿವಿಧ ಲೇಖಕಿಯರು
ಸ್ಮರಣ ಸಂಚಿಕೆಗಳು
೩೫೪ ಚಿನ್ನದ ಬೆಳಸು ಸಂ: ಎಂ.ವಿ. ಸೀತಾರಾಮಯ್ಯ
೩೫೫ ಪುಸ್ತಕ ಭಾಗ್ಯ ಸಂ: ಹಿ.ಮ. ನಾಗಯ್ಯ
೩೫೬ ಸುಚೇತನ ಸಂ: ಚಿ.ನ. ಮಂಗಳಾ
೩೫೭ ಇಕ್ಷುಕಾವೇರಿ ಸಂ: ಕೆ.ಟಿ. ವೀರಪ್ಪ, ಸಿ.ಪಿ. ಕೃಷ್ಣಕುಮಾರ್
೩೫೮ ಇಕ್ಷುಗಂಗಾ ಸಂ:ಜೀ.ಶಂ.ಪ, ಕೃ. ಭೈರವಮೂರ್ತಿ
೩೫೯ ಸಿಹಿಮೊಗೆ ಸಂ: ಪ್ರೊ. ಎಸ್. ಪಂಚಾಕ್ಷರಿ
೩೬೦ ಕೌಸ್ತುಭ ಸಂ:ಎಂ.ವಿ. ಸೀತಾರಾಮಯ್ಯ
೩೬೧ ಅಂತರಭಾರತಿ ಸಂ:ಎಲ್.ಎಸ್. ಶೇಷಗಿರಿರಾವ್
೩೬೨ ಲಿಪಿಕಾರ
೩೬೩ ತರುಣ ಸಂಚಿಕೆ ಗೌ.ಸಂ:ಎಂ.ಕೆ. ವೆಂಕಟೇಶನ್
೩೬೪ ದಲಿತ ಮಕ್ಕಳು ಗೌ.ಸಂ: ಕಲ್ಲೆ ಶಿವೋತ್ತಮರಾವ್
೩೬೫ ಶ್ರೀಲಿಪಿ ಸಂ: ಲಕ್ಷ್ಮಣ್ ತೆಲಗಾವಿ, ಎಸ್.ಆರ್. ಸಿದ್ಧರಾಜು
೩೬೬ ಅಮೃತಶ್ರೀ ಸಂ: ಸಿ.ಕೆ. ನಾಗರಾಜರಾವ್, ಡಾ. ಹಂಪ ನಾಗರಾಜಯ್ಯ
೩೬೭ ಕನ್ನಡ ನುಡಿಯ ಸುವರ್ಣ ಮಹೋತ್ಸವ ಸಂಚಿಕೆ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ
೩೬೮ ಪರಿಷತ್ತು-೮೦ ಕನ್ನಡ ನುಡಿ ವಿಶೇಷ ಸಂಚಿಕೆ
೩೬೯ ಹಚ್ಚೇವು ಕನ್ನಡದ ದೀಪ  ೫೯ನೇ ಸಾಹಿತ್ಯ ಸಮ್ಮೇಳನ, ಹುಬ್ಬಳ್ಳಿ
೩೭೦ ವಜ್ರದೀಪ್ತಿ ೬೦ನೇ ಸಾಹಿತ್ಯ ಸಮ್ಮೇಳನ, ಮೈಸೂರು
೩೭೧ ದವನಸಿರಿ ೬೧ನೇ ಸಾಹಿತ್ಯ ಸಮ್ಮೇಳನ, ದಾವಣಗೆರೆ
೩೭೨ ರನ್ನಗನ್ನಡಿ ೬೪ನೇ ಸಾಹಿತ್ಯ ಸಮ್ಮೇಳನ, ಮುಧೋಳ
೩೭೩ ಕಡಗೋಲು ೬೩ನೇ ಸಾಹಿತ್ಯ ಸಮ್ಮೇಳನ, ಮಂಡ್ಯ
೩೭೪ ಕನಕಸಿರಿ (೬೭ನೇ. ಕ.ಸಾ. ಸಮ್ಮೇಳನ ಸ್ಮರಣ ಸಂಚಿಕೆ)
೩೭೫ ಅರ್ಕಾವತಿ
೩೭೬ ಚೈತ್ರೋತ್ಸವ (ಕವನ ಸಂಕಲನ)  ಸಂ. ಪಾ. ಕೆ. ವಿ. ಚಂದ್ರಣ್ಣಗೌಡ.
೩೭೭ ದೇವಶ್ರೀ (ಅ. ಭಾ. ೬೫ನೇ ಕ.ಸಾ. ಸಮ್ಮೇಳನ ಸ್ಮರಣ ಸಂಚಿಕೆ - ಹಾಸನ)
೩೭೮ ಹೊಯ್ಸಳ ಸಂಪದ (ಅ.ಭಾ. ೬೫ನೇ ಕ.ಸಾ.ಪ. ಸ್ಮರಣ ಸಂಜಿಕೆ)
೩೭೯ ಪೊನ್ನ ಕಂಠಿ(ಅ.ಭಾ.೬೬ನೇ ಕಸಾಸ ಸ್ಮರಣ ಸಂಚಿಕೆ)
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಸಂಪುಟಗಳು
೩೮೦ ಧರ್ಮಸ್ಥಳ ಸಾಹಿತ್ಯ ಸಮ್ಮೇಳನ ವಿವಿಧ ಲೇಖಕರು
೩೮೧ ಬೆಳಗಾವಿ ಸಾಹಿತ್ಯ ಸಮ್ಮೇಳನ ವಿವಿಧ ಲೇಖಕರು
೩೮೨ ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನ ವಿವಿಧ ಲೇಖಕರು
೩೮೩ ಮಡಿಕೇರಿ ಸಾಹಿತ್ಯ ಸಮ್ಮೇಳನ ವಿವಿಧ ಲೇಖಕರು
೩೮೪ ಶಿರಸಿ ಸಾಹಿತ್ಯ ಸಮ್ಮೇಳನ ವಿವಿಧ ಲೇಖಕರು
೩೮೫ ಕೈವಾರ ಸಾಹಿತ್ಯ ಸಮ್ಮೇಳನ ವಿವಿಧ ಲೇಖಕರು
೩೮೬ ಬೀದರ್ ಸಾಹಿತ್ಯ ಸಮ್ಮೇಳನ ವಿವಿಧ ಲೇಖಕರು
೩೮೭ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣ-ಸಂ-೧ ಕನ್ನಡ ಸಾಹಿತ್ಯ ಪರಿಷತ್ತು
೩೮೮ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣ-ಸಂ-೨ ಕನ್ನಡ ಸಾಹಿತ್ಯ ಪರಿಷತ್ತು
೩೮೯ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣ-ಸಂ-೩ ಕನ್ನಡ ಸಾಹಿತ್ಯ ಪರಿಷತ್ತು
೩೯೦ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣ-ಸಂ-೪ ಕನ್ನಡ ಸಾಹಿತ್ಯ ಪರಿಷತ್ತು
೩೯೧ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣ-ಸಂ-೫ ಕನ್ನಡ ಸಾಹಿತ್ಯ ಪರಿಷತ್ತು
೩೯೨ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣ-ಸಂ-೬ ಕನ್ನಡ ಸಾಹಿತ್ಯ ಪರಿಷತ್ತು
೩೯೩ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣ-ಸಂ-೭ ಸಂ: ಪ್ರೊ. ಜಿ. ಅಶ್ವತ್ಥನಾರಾಯಣ
ವಿಚಾರ ಸಂಕಿರಣಗಳು
೩೯೪ ಕುಮಾರವ್ಯಾಸ ಪ್ರಶಸ್ತಿ ವಿವಿಧ ಲೇಖಕರು
೩೯೫ ರನ್ನಕವಿ ಪ್ರಶಸ್ತಿ ವಿವಿಧ ಲೇಖಕರು
೩೯೬ ಸಂಭಾವನೆ ವಿವಿಧ ಲೇಖಕರು
೩೯೭ ಹರಿಹರದೇವ ವಿವಿಧ ಲೇಖಕರು
೩೯೮ ಕುಮಾರವ್ಯಾಸ ವಿವಿಧ ಲೇಖಕರು
೩೯೯ ಪ್ರೇಮಚಂದ್ ವಿವಿಧ ಲೇಖಕರು
೪೦೦ ಬಿ.ಎಂ.ಶ್ರೀ ಅವರ ಬದುಕು ಬರಹ ವಿವಿಧ ಲೇಖಕರು
೪೦೧ ರನ್ನ ಕವಿ ಕಾವ್ಯ ವಿಮರ್ಶೆ ವಿವಿಧ ಲೇಖಕರು
೪೦೨ ರತ್ನಾಕರವರ್ಣಿ ಕವಿ ಕಾವ್ಯ ವಿಚಾರ ವಿವಿಧ ಲೇಖಕರು
೪೦೩ ರಾಘವಾಂಕ ವಿವಿಧ ಲೇಖಕರು
೪೦೪ ಹರಿಹರ ವಿವಿಧ ಲೇಖಕರು
೪೦೫ ರುದ್ರಭಟ್ಟ ಕವಿ ವಿವಿಧ ಲೇಖಕರು
೪೦೬  ಲಕ್ಷ್ಮೀಶ ಕವಿ ವಿಚಾರ ಸಂಕಿರಣ ವಿವಿಧ ಲೇಖಕರು
೪೦೭ ಉತ್ತಂಗಿ ಚೆನ್ನಪ್ಪನವರು ವಿವಿಧ ಲೇಖಕರು
೪೦೮ ಚಾಮರಸ ವಿಚಾರ ಸಂಕಿರಣ ವಿವಿಧ ಲೇಖಕರು
೪೦೯ ವಚನ ವಾಙ್ಮಯ ದರ್ಶನ ವಿವಿಧ ಲೇಖಕರು
ಆರೋಗ್ಯ
೪೧೦ ಆರೋಗ್ಯ ಮತ್ತು ಇತರ ಪ್ರಬಂಧಗಳು ಡಾ. ಪಿ.ಎಸ್. ಶಂಕರ
೪೧೧ ಕೆಲವು ಆರೋಗ್ಯ ವಿಚಾರಗಳು ರಾಮಲಿಂಗಯ್ಯ ಉಪ್ಪಿನಕೆರೆ
೪೧೨ ಚರ್ಮ ಮತ್ತು ಮೇಹರೋಗಗಳು ಡಾ. ಡಿ.ಪಿ. ಜಯರಾಂ, ಡಾ. ಎನ್. ಕೃಷ್ಣಮೂರ್ತಿ
೪೧೩ ರೋಗನಿರೋಧ ಮತ್ತು ಶಸ್ತ್ರಚಿಕಿತ್ಸೆ ಡಾ. ಎಸ್.ವಿ. ರಾಮರಾವ್
೪೧೪ ಡಾ. ಸಿ.ಎಫ್.ಎಸ್.ಹಾನಿಮನ್ನರ ಹೋಮಿಯೋಪತಿ ಡಾ. ಬಿ. ಶಾಮಸುಂದರ
೪೧೫ ಶಿಕ್ಷಣಶಾಸ್ತ್ರಮತ್ತು ಮನೋವಿಜ್ಞಾನ ಡಾ. ಎನ್.ಎಸ್. ವೀರಪ್ಪ
೪೧೬ ಸ್ವಸ್ಥ ಜೀವನ ಡಾ. ಎಂ. ಗೋಪಾಲಕೃಷ್ಣರಾವ್
೪೧೭ ಹದಿವಯಸ್ಸು ಅಸ್ವಸ್ಥ ಮನಸ್ಸು ಡಾ. ಸಿ.ಆರ್. ಚಂದ್ರಶೇಖರ್
೪೧೮ ಮನಮಂಥನ ಡಾ. ಎಂ. ಶಿವರಾಂ
೪೧೯ ಅಲರ್ಜಿ ಓಂ ಪ್ರಕಾಶ್
೪೨೦ ಲೆಮೂರಿಯ ರಹಸ್ಯ ಕೆ. ನಾಗರಾಜರಾವ್
ಮಕ್ಕಳ ಪುಸ್ತಕಗಳು
೪೨೧ ಪ್ರಾರ್ಥನಾ ಶ್ಲೋಕಗಳು ಎನ್. ರಂಗನಾಥಶರ್ಮಾ
೪೨೨ ಗಾಳಿ ಸರಿತಾ ಜ್ಞಾನಾನಂದ
೪೨೩ ಭೂಮಿ ಶಾರದಾ ನಾಗಭೂಷಣ
೪೨೪ ಅರಣ್ಯ ಬೆ.ಗೋ. ರಮೇಶ್
೪೨೫ ನದಿಗಳು ಸಿ.ವಿ. ಕೆರಿಮನಿ
೪೨೬ ಕುಂಕುಮ ಕೇಸರಿ ಎಂ. ಜಯಂತಿ ಬಾಯಿ
೪೨೭ ನಾಯಿ ಎಂ. ಗಣೇಶ್
೪೨೮ ವನರಾಜ ಹುಲಿ ಸಿ.ಎಚ್. ಬಸಪ್ಪನವರ
೪೨೯ ಕ್ಯಾಮೆರಾ ಕೇಶವ ಎಸ್. ವಟಿ
೪೩೦ ದುರ್ಬೀನು ಎಸ್. ರಾಮಪ್ರಸಾದ್
೪೩೧ ಗಡಿಯಾರ ಕ.ರಾ. ಮೋಹನ್
೪೩೨ ದೂರವಾಣಿ ಬಿ.ಎಸ್. ಶೈಲಜಾ
೪೩೩ ಮನೆಯಲ್ಲೊಂದು ಹವಾವೀಕ್ಷಣಾಲಯ ವೀರಬ್ರಹ್ಮಯ್ಯ
೪೩೪ ನಮ್ಮ ಶರೀರ ಎಂ. ದಯಾಕರ
೪೩೫ ಕಾಯಿಲೆಗಳು ಪಿ.ಎಸ್. ಶಂಕರ್
೪೩೬ ವೀಣೆ ರಂಜಶ್ರೀ
೪೩೭ ಗಾಳಿ ವಾದ್ಯಗಳು ಆರ್.ಆರ್. ಕೇಶವಮೂರ್ತಿ
೪೩೮ ಪುಸ್ತತಕೋದ್ಯಮ ಅಂದನೂರು ಶೋಭಾ
೪೩೯ ಆಟಗಳು ಜಯಲಕ್ಷ್ಮೀ ಶ್ರೀನಿವಾಸನ್, ಮಾಲತೀ ಸುಬ್ರಹ್ಮಣ್ಯಂ
೪೪೦ ಆಟಿಕೆಗಳು ಕೆ.ಎಸ್.ಲಕ್ಷ್ಮಣರಾವ್
೪೪೧ ಸರ್ವಧರ್ಮ ಸಮಭಾವ ಗೊರೂರು ರಾಮಸ್ವಾಮಿ ಅಯ್ಯಂಗಾರ್
೪೪೨ ಸುಂದರ ಕರ್ನಾಟಕ ಅನಸೂಯರಾವ್
೪೪೩ ಕನ್ನಡದ ಕಥೆ ಎಂ.ವಿ. ಸೀತಾರಾಮಯ್ಯ
೪೪೪ ನಗು ಎಂ. ಶಿವರಾಂ
೪೪೫ ಗೆಳೆತನ ಈಶ್ವರಚಂದ್ರ
೪೪೬ ಕುಟುಂಬ ಶಾಂತಾದೇವಿ ಮಾಳವಾಡ
೪೪೭ ಸಂತೆ ಕೆ. ವಿಜಯಕುಮಾರ್
೪೪೮ ಜಾತ್ರೆಗಳು ಕರೀಗೌಡ ಬೀಚನಹಳ್ಳಿ
೪೪೯ ಹಬ್ಬಗಳು ಎ.ಕೆ. ರಾಮೇಶ್ವರ
೪೫೦ ನಾಣ್ಯದ ಕತೆ ವೈ.ಜಿ. ಶಾಂತರಾಜಯ್ಯ
೪೫೧ ಬಾವುಟ ಆರ್.ಎಸ್. ರಾಮರಾವ್
೪೫೨ ನಾನಾ ಫಡ್ನವೀಸ್ ಕೇಶವ ಮೊಕಾಶಿ
೪೫೩ ಕವಿ ರವೀಂದ್ರ ಗುರುಲಿಂಗ ಕಾಪಸೆ
೪೫೪ ಗಾಂಧಿ ಕೆ.ಎಸ್. ನಾರಾಯಣಸ್ವಾಮಿ
೪೫೫ ಅರವಿಂದರು ಸಿಂಪಿ ಲಿಂಗಣ್ಣ
೪೫೬ ಸರ್ ಎಂ. ವಿಶ್ವೇಶ್ವರಯ್ಯ ಎ.ಎಚ್. ಶಿವಾನಂದ
೪೫೭ ಎನ್.ಎಸ್. ಹರ್ಡೀಕರ್ ವಿ.ಎಸ್. ನಾರಾಯಣರಾವ್
೪೫೮ ರಜತಗಿರಿಯ ರಾಜ ಮಾದೇವ ಮಿತ್ರ
೪೫೯ ಷೇಕ್ಸ್ಪಿಯರ್ ಎಲ್.ಎಸ್. ಶೇಷಗಿರಿರಾವ್
೪೬೦ ಗ್ಯಾರಿಬಾಲ್ಡಿ ಕೈವಾರ ವಾಮನರಾವ್
೪೬೧ ಒಡಪುಗಳು ಐ.ಎ. ಚಿಂತಾಮಣಿ
೪೬೨ ಪುಟ್ಟನ ಪ್ರಶ್ನೆ ಅಮ್ಮನ ಉತ್ತರ ಜಯಶ್ರೀ ಜಯರಾಂ
೪೬೩ ಮಹಿಮೆಯ ಉಂಗುರ ಪ. ಸೀತಾರಾಮಭಟ್ಟ
೪೬೪ ಬಲಿಗುಹೆ ಜಿ. ಲಕ್ಷ್ಮೀನಾರಾಯಣ
೪೬೫ ಹಳ್ಳಿಗೆ ಬಂದ ಎಳೆಯರು ಎ.ಪಿ. ಮಾಲತಿ
೪೬೬ ಭೂತಯ್ಯನ ಗುಡಿ ಎಸ್.ಎಸ್. ಸರಸ್ವತೀ ವೆಂಕಟೇಶ್
೪೬೭ ನಾಗ-ಸಾಕಿ ಜಗ್ಗು ಪ್ರಿಯದರ್ಶಿನಿ
೪೬೮ ರಶ್ಮಿ ಸರ್ಕಸ್ ಕಂಪನಿ ಲಲಿತಮ್ಮ ಚಂದ್ರಶೇಖರ್
೪೬೯ ಹಿಮಾನಿ ಮತ್ತು ಏಳು ಜನ ಕುಳ್ಳರು ಎನ್.ಎಸ್. ವೆಂಕಟರಾಮ್
೪೭೦ ಜಾಣ ಮೊಲ ಉಷಾದೇವಿ
೪೭೧ ವಿದ್ಯುತ್ ವಿ. ಚೆಲುವರಾಜಯ್ಯಂಗಾರ್
೪೭೨ ಗುಡುಗು-ಮಿಂಚು ಡಿ.ಆರ್. ಬಳೂರಗಿ
೪೭೩ ಅಂಕಿಗಳು ಎನ್. ಸುಬ್ರಹ್ಮಣ್ಯ
೪೭೪ ಮೀನುಗಳು ಕೆ.ವಿ. ದೇವರಾಜ್
೪೭೫ ಆನೆ ಮೈಸೂರು ನಾಗರಾಜಶರ್ಮ
೪೭೬ ಹೆಲಿಕ್ಯಾಪ್ಟರ್ ಡಾ. ಕೆ. ಶ್ರೀನಿವಾಸ್
೪೭೭ ಕಣ್ಣು ಡಾ. ಎಸ್.ಬಿ. ವಸಂತಕುಮಾರ್
೪೭೮ ಮಿದುಳು ಡಾ. ಸಿ.ಆರ್. ಚಂದ್ರಶೇಖರ್
೪೭೯ ಹಿಮಾಲಯ ಡಿ. ರಂಗಯ್ಯ
೪೮೦ ಚಿನ್ನ ಬಿ.ಪಿ. ರಾಧಾಕೃಷ್ಣ
೪೮೧ ಗಾಜು ಎಸ್. ವೆಂಕಟೇಶ ಮೂರ್ತಿ
೪೮೨ ಅಂಚೆ ಕೆ.ಆರ್. ಮೂರ್ತಿ
೪೮೩ ಕ್ರಿಕೆಟ್ ಎಂ.ಎನ್. ಪಾರ್ಥಸಾರಥಿ
೪೮೪ ಟೆನ್ನಿಸ್ ಲೀಲಾ ಶಾಂತಮಲ್ಲಪ್ಪ
೪೮೫ ಮಣ್ಣು ಬಿ.ವಿ. ವೆಂಕಟರಾವ್
೪೮೬ ಬೆಳೆಗಳು ಡಾ. ಕೆ. ಶಿವಶಂಕರ್
೪೮೭ ಹತ್ತಿ ವಿಜಯಕುಮಾರ ಗಿಡ್ನವರ
೪೮೮ ಸಕ್ಕರೆ ಕೆ.ಎನ್. ನರಸಿಂಹೇಗೌಡ
೪೮೯ ಕಾಫಿ ಡಾ. ವೈ.ಎಸ್. ಲೂಯಿಸ್
೪೯೦ ಭಾಷೆ ಡಾ. ಜಯವಂತ ಕುಳ್ಳಿ
೪೯೧ ಕಲ್ಯಾಣದ ಚಾಳುಕ್ಯರು ಡಾ. ಬಾ.ರಾ.ಗೋಪಾಲ
೪೯೨ ಕಾಮನಬಿಲ್ಲು ವಿವಿಧ ಕವಿಗಳು
೪೯೩ ಹೂಗೊಂಚಲು ವಿವಿಧ ಕವಿಗಳು
೪೯೪ ಕಣ್ಣು ತೆರೆದಾಗ ಎ.ಪಿ. ಮಾಲತಿ
೪೯೫ ಕಿಟ್ಟನ ಕಥೆ ಪ. ಸೀತಾರಾಮಭಟ್ಟ
೪೯೬ ಮರುಭೂಮಿ ಪ್ರೊ. ಎ. ಸಾಂಬೇಗೌಡ
೪೯೭ ಮನುಷ್ಯ ವಂಶಾವಳಿ ಅಡ್ಯನಡ್ಕ ಕೃಷ್ಣಭಟ್ಟ
೪೯೮ ಜಾನುವಾರು ಎಂ. ಸತ್ಯನಾರಾಯಣರಾವ್
೪೯೯ ಕೋತಿ ಎಂ.ಡಿ. ಪಾರ್ಥಸಾರಥಿ, ಎಂ.ಜಿ. ವೆಂಕಟೇಶ್
೫೦೦  ಬೆಂಕಿಕಡ್ಡಿ ಎಸ್.ಕೆ. ವಿಜಯಲಕ್ಷ್ಮಮ್ಮ
೫೦೧ ಹಕ್ಕಿಗಳ ವಲಸೆ ಎಚ್.ಆರ್. ಕೃಷ್ಣಮೂರ್ತಿ
೫೦೨ ಸಸ್ತನಿಗಳು ಎಂ. ಸುವರ್ಣಲತಾ
೫೦೩ ಕೋಳಿಗಳು ಆರ್.ಎನ್. ಶ್ರೀನಿವಾಸಗೌಡ
೫೦೪ ಹೂ ಬಿಡದ ಸಸ್ಯಗಳು ಎಂ.ಕೆ. ನಂಜಪ್ಪ
೫೦೫ ಐಸಾಕ್ ನ್ಯೂಟನ್ ಅಡ್ಯನಡ್ಕ ಕೃಷ್ಣಭಟ್ಟ
೫೦೬ ಐನ್​ಸ್ಟೈನ್ ಶ್ರೀರಂಗರಾಜು
೫೦೭ ಕೀಟಾಹಾರಿ ಸಸ್ಯಗಳು ಎಂ.ಎಸ್.ಎಸ್.ರಾವ್
೫೦೮ ಕಾರಾಗೃಹಗಳು ಸಿ.ಎಸ್. ಮಲ್ಲಯ್ಯ
೫೦೯ ಸೌರವ್ಯೂಹ ಡಿ.ಟಿ. ನಾರಾಯಣರಾವ್
೫೧೦ ವನಸಂಪತ್ತು ಜಿ.ವಿ.ಟಿ. ನಾಯ್ಡು
೫೧೧ ಸಾಕು ಪ್ರಾಣಿಗಳು ಎಂ.ಜಿ. ವೆಂಕಟೇಶ್
೫೧೨ ಬಂದರುಗಳು ವೈ. ಲಿಂಗರಾಜು
೫೧೩ ದೇಹರಕ್ಷಣೆ ಡಾ. ಎಸ್.ವಿ. ರಾಮರಾವ್
೫೧೪ ಹೂ ಗಿಡಗಳು ಕೆ. ಲಕ್ಷ್ಮೀನರಸಿಂಹಮೂರ್ತಿ
೫೧೫ ಅನುವಂಶೀಯತೆ ಹೆಚ್.ಹೆಚ್. ಷಣ್ಮುಖಯ್ಯ
೫೧೬ ಜೀವವಿಕಾಸ ಡಾ. ಎಚ್.ಬಿ. ದೇವರಾಜ್ ಸರ್ಕಾರ್
೫೧೭ ಬೇಸಾಯ ಪ್ರೊ. ವಿ.ಸಿ. ಹಿತ್ತಲಮನಿ
೫೧೮ ಉಳಿತಾಯ ಟಿ.ಎನ್. ವಿಜಯಪ್ಪ
೫೧೯ ಜರೀಗಿಡಗಳು ಪಿ.ಕೆ. ರಾಜಗೋಪಾಲ್
೫೨೦ ಫುಟ್‌ಬಾಲ್ ಅ.ರಾ. ಆನಂದ
೫೨೧ ಪ್ರಥಮ ಚಿಕಿತ್ಸೆ ಡಾ. ಎಂ. ಬಸವರಾಜ ಅರಸ್
೫೨೨ ಮಳೆ ಡಾ. ಬಿ.ಆರ್. ಹೆಗಡೆ
೫೨೩ ಕಲ್ಲಿದ್ದಲು ಎಸ್.ಜಿ. ಪರಮಶಿವಯ್ಯ
೫೨೪ ಗಗನಯಾತ್ರಿಗಳು ಡಾ. ಪಿ.ಎಸ್. ವೆಂಕಟಸ್ವಾಮಿಶೆಟ್ಟಿ
೫೨೫ ದೀಪಸ್ತಂಭಗಳು ಹೆಚ್.ಆರ್. ಕೃಷ್ಣಮೂರ್ತಿ
೫೨೬ ಪರ್ವತಗಳು ಎನ್.ಎಚ್. ನಾಗರಾಜ
೫೨೭ ಹೈನುಗಾರಿಕೆ ಡಾ. ಎಸ್.ಆರ್. ಸಂಪತ್
೫೨೮ ಗಣಕಯಂತ್ರ ಡಾ. ಎಂ.ಆರ್. ಚಿದಂಬರ್
೫೨೯ ಸಮತೋಲನ ಆಹಾರ ಇಂದಿರಾ ಕೃಷ್ಣ
೫೩೦ ಜನಪದ ಪ್ರಾಣಿ ಕತೆಗಳು ಡಿ. ಲಿಂಗಯ್ಯ
೫೩೧ ಸೂಕ್ಷ್ಮದರ್ಶಕ ಡಾ. ಎನ್. ಮಾದಯ್ಯ
೫೩೨ ಎಡಿಸನ್ ಡಾ. ಎಚ್. ಸಂಜೀವಯ್ಯ
೫೩೩ ಸಂವಿಧಾನ ಹೆಚ್.ಆರ್. ದಾಸೇಗೌಡ
೫೩೪ ಬಿಸಿ ನೀರಿನ ಬಗ್ಗೆಗಳು ಟಿ.ಆರ್. ಅನಂತರಾಮು
೫೩೫ ಋತುಗಳು ಡಾ. ಆರ್. ನಿಜಗುಣಪ್ಪ
೫೩೬ ವಾಹನಗಳು ಎಚ್.ಎಚ್.ಗಂಗಾಧರಾಚಾರ್
೫೩೭ ಚಾರ್ಲ್ಸ್ಡಾರ್ವಿನ್ ಎಚ್.ವಿ. ದೇವರಾಜ ಸರ್ಕಾರ್
೫೩೮ ರಾಷ್ಟ್ರಗೀತೆ ಡಾ.ಜಿ. ವರದರಾಜಾರಾವ್
೫೩೯ ದ್ಯುತಿ ಸಂಶ್ಲೇಷಣೆ ಡಾ. ಪಿ.ಎಸ್. ಚಿಕ್ಕಣ್ಣಯ್ಯ
೫೪೦ ಪವಾಡ ಪರೀಕ್ಷೆ ಬಿ.ವಿ. ವೀರಭದ್ರಪ್ಪ
೫೪೧ ಕನಸುಗಳು ಡಾ ಎಂ. ಬಸವಣ್ಣ
೫೪೨ ವೈದ್ಯಕೀಯ ಉಪಕರಣಗಳು ಡಾ. ಎಂ. ಚಂದ್ರಶೇಖರ ಉಡುಪ
೫೪೩ ಸರ್. ಸಿ.ವಿ. ರಾಮನ್ ಎ.ಎಸ್. ಕಲ್ಲೂರ
೫೪೪ ಲೆನಿನ್ ಡಾ. ಜಿ. ರಾಮಕೃಷ್ಣ
೫೪೫ ಪರಮಾಣು ಡಾ. ಕೆ. ಶೇಷಾದ್ರಿ ಐಯ್ಯಂಗಾರ್
೫೪೬ ಕೋಪರ್ನಿಕಸ್ ಎಚ್.ಎನ್. ಸುಧೀಂದ್ರ
೫೪೭ ಉಪಗ್ರಹಗಳು ಸಿ. ರಾಮಚಂದ್ರ
೫೪೮ ಯಂತ್ರಮಾನವ ಡಿ.ವಿ. ಹೆಗಡೆ
೫೪೯ ಬೆರಳಚ್ಚು ಯಂತ್ರ ಎಸ್.ಆರ್.ಸಿದ್ದರಾಜು
೫೫೦ ಕೃಷಿ ಉಪಕರಣಗಳು ಕೆ.ಸಿ ಕೃಷ್ಣಮೂರ್ತಿ
೫೫೧ ಅಹಿಂಸೆ ಹೆಚ್.ಎಸ್. ದೊರೆಸ್ವಾಮಿ
೫೫೨ ಸಮಾಜ ಎಂ. ನಂಜಮ್ಮಣ್ಣಿ
೫೫೩ ರೆಂಬ್ರಾಂಡ್ ರಜನಿ ಪ್ರಸನ್ನ
೫೫೪ ಸಿಗ್ಮಂಡ್ ಫ್ರಾಯ್ಡ್ ಅಚಲಾ ಉಮಾಪತಿ
೫೫೫ ಮನುಷ್ಯ ಪ್ರಯತ್ನ ಟಿ. ಗೋವಿಂದರಾಜು
೫೫೬ ಹೊಲಿಗೆ ಸಿ.ವಿ. ಗೀತಾ
೫೫೭ ಬುದ್ಧವಂತಿಕೆ ಕಥೆಗಳು ಎಂ.ವಿ. ಜಯಚಂದ್ರ
೫೫೮ ನ್ಯಾಯಾಲಯದ ಕಥೆಗಳು ಟಿ.ಕೆ. ತುಕೋಳ್
೫೫೯ ಅಂಕಿ ಸಂಖ್ಯೆ ಸ್ವಾರಸ್ಯ ವಿ.ಕೆ. ದೊರೆಸ್ವಾಮಿ
೫೬೦ ರೇಡಿಯೋ ಶ್ರೀನಾಥ ಶಾಸ್ತ್ರಿ
೫೬೧ ಹಾಲು ಜಿ. ಸರಸ್ವತಿ
೫೬೨ ಚಿತ್ರಕಲೆ ಬಿ.ಪಿ. ಬಾಯಿರಿ
೫೬೩ ಚೌಬೀನೆ ಬಿ.ಕೆ.ಸಿ. ರಾಜನ್
೫೬೪ ಜನಪದ ಸಾಹಸ ಕತೆಗಳು ಕ್ಯಾತನಹಳ್ಳಿ ರಾಮಣ್ಣ
೫೬೫ ಮೋಟಾರು ಎಸ್. ವಿಶ್ವನಾಥ
೫೬೬ ಚಹಾ ಕಿ.ಶಾ. ರಘುನಂದನ
೫೬೭ ಜನಪದ ಮಕ್ಕಳ ಆಟಗಳು ಸುಶೀಲಾ ಹೊನ್ನೇಗೌಡ
೫೬೮ ಭಾಸ್ಕರ ಎನ್.ಕೆ. ನರಸಿಂಹಮೂರ್ತಿ
೫೬೯ ವಸ್ತುಸಂಗ್ರಹಾಲಯಗಳು ಎ.ಎಸ್. ಬಾಲಸುಬ್ರಹ್ಮಣ್ಯ
೫೭೦ ಸರೋವರ ಎಂ.ಜಿ. ಚಂದ್ರಶೇಖರಗೌಡ
೫೭೧ ಹೋಮಿ ಜೆ. ಬಾಬಾ ವ್ಯಾಸರಾವ್ ನಿಂಜೂರ್
೫೭೨ ಆರ್ಯಭಟ ಎಸ್. ಬಾಲಚಂದ್ರರಾವ್
೫೭೩ ಟೆಲಿಪ್ರಿಂಟರ‍್ಸ್ ಸಿ.ಎಚ್. ಗೋಪಾಲಕೃಷ್ಣಭಟ್
೫೭೪ ವಿಶ್ವದ ಆಶ್ಚರ್ಯಗಳು ಮೋಹನ ಸಾಸನೂರ
೫೭೫ ಗೊಂಬೆಯಾಟಗಳು ಡಾ.ಎಚ್.ಎಸ್.ರಾಮಚAದ್ರೇಗೌಡ
೫೭೬ ಪತ್ರಿಕೋದ್ಯಮ ಬಿ.ಎ. ಶ್ರೀಧರ
೫೭೭ ಹೊಗೆಸೊಪ್ಪು ಎಸ್. ಶಿವಾನಂದಪ್ಪ
೫೭೮ ಗಾದೆಗಳು ಟಿ.ವಿ. ವೆಂಕಟರಮಣಯ್ಯ
೫೭೯ ಶಕ್ತಿಯ ಮೂಲಗಳು ಡಾ. ಎನ್. ರುದ್ರಯ್ಯ
೫೮೦ ವಿಚಿತ್ರ ಪ್ರಾಣಿಗಳು ಡಾ. ಕೆ.ಎಂ. ಕದಂ
೫೮೧ ಅಂತರ್ಜಲ  ಬಿ.ಪಿ. ರಾಧಾಕೃಷ್ಣ
೫೮೨ ಹಣ ಸಿ.ಕೆ. ರೇಣುಕಾರ್ಯ
೫೮೩ ಪೆಟ್ರೋಲ್ ಗೋಪಾಲ ಆಶ್ರಿತ
೫೮೪ ದೂರದರ್ಶಕ ಬಿ.ಎಸ್. ಶೈಲಜಾ
೫೮೫ ನೇಯ್ಗೆ ಡಿ.ಎಂ. ಮುನಿಸ್ವಾಮಿ
೫೮೬ ಕಾರ್ಲ್ಮಾರ್ಕ್ಸ್ ಜಿ.ಬಿ. ಮನ್ವಾಚಾರ್
೫೮೭ ಅನಿಲಗಳು ಕೆ. ಹರಿದಾಸಭಟ್
೫೮೮ ಕುಸ್ತಿ ಟಿ.ಆರ್. ಸ್ವಾಮಿ
೫೮೯ ರಕ್ತ ಡಾ. ಮಹಾಬಲೇಶ್ವರಯ್ಯ
೫೯೦ ಪ್ರಮಾಣಿಕತೆ ಉ.ಕಾ. ಸುಬ್ಬರಾಯಾಚಾರ್
೫೯೧ ವಾಸ್ತುಶಿಲ್ಪ ಪ್ರೊ. ಕೆ.ಎಸ್. ಸದಾನಂದ
೫೯೨ ವಾಗ್ಗೇಯಕಾರರು ಎಂ.ಆರ್. ಶಂಕರಮೂರ್ತಿ
೫೯೩ ಪ್ಲಾಸ್ಟಿಕ್  ಕೆ.ಎಸ್. ಲಕ್ಷö್ಮಣರಾವ್
೫೯೪ ಯಕ್ಷಗಾನ ಬಯಲಾಟ ಡಾ. ಡಿ.ಕೆ. ರಾಜೇಂದ್ರ
೫೯೫ ಬಣ್ಣಗಳು ದು. ವೈ . ಮುನಿಸ್ವಾಮಿ
೫೯೬ ನೃತ್ಯ ಎಸ್.ಎನ್. ಚಂದ್ರಶೇಖರ
೫೯೭ ಸಂಗೀತ ರತ್ನ ಶಿವಶಂಕರ್
೫೯೮ ಜೀವಸತ್ವಗಳು ಡಾ. ಕೆ. ಪದ್ಮಾ ಉಮಾಪತಿ
೫೯೯ ಒಲಂಪಿಕ್ ಆಟಗಳು ಸೂರಿ
೬೦೦ ನಮ್ಮ ಜನಪದ ವಾದ್ಯಗಳು ಪಿ.ಕೆ. ರಾಜಶೇಖರ
೬೦೧ ಜನಪದ ವೀರರ ಕಥೆಗಳು ಸದಾಶಿವ ಎಣ್ಣೆಹೊಳೆ
೬೦೨ ಪುರಾತತ್ವ ಶೋಧನೆ ಡಾ. ಎ.ವಿ. ನರಸಿಂಹಮೂರ್ತಿ
೬೦೩ ತರಕಾರಿ ಎಂ.ಎ. ನಾರಾಯಣರೆಡ್ಡಿ
೬೦೪ ವಿಜ್ಞಾನದೃಷ್ಟಿ ಕುವೆಂಪು, ಪ್ರಭುಶಂಕರ್
೬೦೫ ಶಾಸನಗಳು ಮತ್ತು ವೀರಗಲ್ಲುಗಳು ಪಿ. ಕೃಷ್ಣಭಟ್ಟ
೬೦೬ ಮೂಢನಂಬಿಕೆಗಳು ಮತ್ತು ವೈಜ್ಞಾನಿಕ ಮನೋಭಾವ ಡಾ. ಎಚ್. ನರಸಿಂಹಯ್ಯ
೬೦೭ ನೆಲ ಮುಟ್ಟದ ಹೊಟ್ಟೆಪ್ಪ ಸಿ. ವೀರಣ್ಣ
೬೦೮ ಗುಲ್ಪುಟ್ಟಿ-ಮುನ್ಪುಟ್ಟಿ ಹೆಚ್.ಎಸ್. ಗೋಪಾಲರಾವ್
೬೦೯ ಒಂದಾನೊಂದು ಕಾಡಿನಲ್ಲಿ ಎ.ಎನ್. ಪ್ರಸನ್ನ
೬೧೦ ಹಾಸಿಗೆ ಹೂವಾಯಿತಲ್ಲ ಕೆ.ಎಸ್. ರಂಗಪ್ಪ
೬೧೧ ಕಾಬೂಲಿ ವಾಲ ಎಚ್.ಜಿ. ಸೀತಾರಾಂ
೬೧೨ ಡಾ. ಬಿ.ಆರ್. ಅಂಬೇಡ್ಕರ್ ಕಮಲಾ ಹಂಪನಾ
೬೧೩ ರಬ್ಬರ್ ಎಲ್.ಡಿ. ಮೇರವಾಡೆ
೬೧೪ ಪ್ಯಾರಾಚೂಟ್ ಕೆ.ವಿ.ಘನಶ್ಯಾಮ
೬೧೫ ಹಲ್ಲು ಡಾ. ಶಿವರತ್ನ ಸಿ. ಸವದಿ
೬೧೬ ಮಾನವ ಕುಲ ಕೆ.ಎನ್. ಸೋಮಯ್ಯ
೬೧೭ ಕೆಳದಿ ಅರಸರು ಕೆಳದಿ ಗುಂಡಾಜೋಯಿಸ್
೬೧೮ ನೊಳಂಬರು ಡಾ. ಎ.ವಿ. ನರಸಿಂಹಮೂರ್ತಿ
೬೧೯ ಬಾದಾಮಿ ಚಾಲುಕ್ಯರು  ಡಾ. ಬಾ.ರಾ. ಗೋಪಾಲ್
೬೨೦ ಚಿಟ್ಟೆಗಳು ಡಾ. ಎ. ಮಂಜುಳ
೬೨೧  ರಾಷ್ಟ್ರಕೂಟರು ಡಾ. ಎಂ.ವಿ. ಶ್ರೀನಿವಾಸ
೬೨೨ ಗ್ರಹಣ ಯಳನಾಡು ಆಂಜನಪ್ಪ
೬೨೩ ಶಶಿ ಕಂಡ ಜರ್ಮನಿ ಹೊ. ಶ್ರೀನಿವಾಸಯ್ಯ
೬೨೪ ಬೆಳಕು ತಂದ ಬಾಲಕ  ಲೀಲಾ ಶ್ರೀನಿವಾಸನ್
ನವಸಾಕ್ಷರ ಮಾಲೆ
೬೨೫ ಭಾರತದ ಸ್ವಾತಂತ್ರ್ಯ ಚಳುವಳಿ ಎಂ.ಪಿ. ಶ್ರೀನಿವಾಸಮೂರ್ತಿ
೬೨೬ ಸರ್. ಎಂ. ವಿಶ್ವೇಶ್ವರಯ್ಯ ಎಂ.ಪಿ. ಶ್ರೀನಿವಾಸಮೂರ್ತಿ
೬೨೭ ಸಂಜೀವಿನಿಗಳ ನಡುವೆ ಡಾ. ನಡಿಬೈಲು ಉದಯಶಂಕರ್
೬೨೮ ತಾಯ್ತನ ಗರ್ಭಪಾತ ಶೇಖರ್ ಖತ್ತಿಗೆ
೬೨೯ ಭಾರತದ ಪುರುಷ ಸಿಂಹ ಮೂರ್ತಿ ರಾಮನಾಥೆಪುರ
೬೩೦ ಭಟ್ಟಿ ಜಾರುವುದು ಡಾ. ಎಚ್.ಡಿ. ಚಂದ್ರಪ್ಪಗೌಡ
೬೩೧ ನಮ್ಮ ಸರಕಾರ ಶ್ರೀ ಪಾಲ್ತಾಡಿ ರಾಮಕೃಷ್ಣ ಆಚಾರ್
೬೩೨ ಎರೆಹುಳು ಎಂ.ಎಸ್. ಜಯಲಕ್ಷಿö್ಮ
೬೩೩ ಜಗಳದ ಬೋರಯ್ಯ ಚಂದ್ರಶೇಖರಯ್ಯ
೬೩೪ ಆರೋಗ್ಯವೇ ಭಾಗ್ಯ ಎಚ್.ಆರ್. ಚಂದ್ರವದನರಾವ್
೬೩೫ ಕನ್ನಡ ಮನರಂಜನೆ ಡಾ. ಎಚ್.ಟಿ. ಚಂದ್ರಪ್ಪಗೌಡ
೬೩೬ ನಮ್ಮು ಕೇಂದ್ರ ಬ್ಯಾಂಕು ಡಾ. ಸಿ.ಕೆ. ರೇಣುಕಾರ್ಯ
೬೩೭ ಕನ್ನಡ ಸೇನಾನಿ ಕೊತ್ತಪಲ್ಲಿ ಶೇಖರ
೬೩೮ ನಮ್ಮ ಬೇಸಾಯ ಡಾ. ಎಂ.ಜಿ. ಈಶ್ವರಪ್ಪ
೬೩೯ ಡಾ. ಎಸ್. ರಾಧಾಕೃಷ್ಣನ್ ಶೀಲಾಕಾಂತ ಪತ್ತಾರ
೬೪೦ ರಂಗಣ್ಣನ ಕತೆ ಎಚ್.ಎಸ್. ಸಿದ್ದಗಂಗಪ್ಪ
೬೪೧ ಕಲಿಯೋಣ ಬಾ ವಿಜಯಮಾಲಾ ರಂಗನಾಥ್
೬೪೨ ಬಾಳು ಬೆಳಗಿತು ಸುಮತಿ ಪಾಂಗಾಳ್
೬೪೩ ಮಬ್ಬು ಹರಿದಾಗ ವೈ.ಎನ್. ಗುಂಡೂರಾವ್
೬೪೪ ಮದ್ಯಪಾನ ಒಂದು ರೋಗ ಡಾ. ಎಸ್. ಲಲಿತ
೬೪೫ ಆರೋಗ್ಯ ರಕ್ಷಣೆ ಮತ್ತು ಜನಸಂಖ್ಯಾ ನಿಯಂತ್ರಣ ಶ್ರೀ ಸ.ರಾ ಸುಳಕೂಡೆ
೬೪೬ ಹರಕೆ ಕೆ. ಗಣೇಶರಾವ್
೬೪೭ ವಚನ ಸಾಹಿತ್ಯ ಕೆ.ಎಂ. ರೇವಣ್ಣ
೬೪೮ ಒಕ್ಕಲುತನ ಸೌಜನ್ಯ ಸುಭಾಷ್
೬೪೯ ಅಣ್ಣ ತಮ್ಮ ಎಂ.ಬಿ. ಕೊತವಾಲ
೬೫೦ ಮುಪ್ಪನ್ನು ಮುಂದೂಡುವುದು ಹೇಗೆ ಪ್ರೊ. ಕೆ. ರಾಮಕೃಷ್ಣ ಉಡುಪ
೬೫೧ ಜನಸೇವೆಯೇ ಜನಾರ್ಧನ ಸೇವೆ ಲ.ನಾ. ಅರೋರ
೬೫೨ ತೇನ್‌ಸಿಂಗ್ ಕೆ. ಶಾಂತಮಣಿ
೬೫೩ ವರದಕ್ಷಿಣೆ ಶಾಂತಾ ಸನ್ಮತಿಕುಮಾರ್
೬೫೪ ಪರಿಸರ ಸುಬ್ಬರಾಯ ಕೋಡಶಿಂಗೆ
ಸಮುದಾಯ ಸಾಹಿತ್ಯ ಮಾಲೆ
೬೫೫ ಜನಸಂಖ್ಯೆ ಅಂದು ಇಂದು ಮುಂದು ಪ್ರೊ. ಸಿ.ವಿ. ನಾಗರಾಜ್
೬೫೬ ಹನಿ ನೀರಾವರಿ ಎಂ.ಎ. ನಾರಾಯಣ ಗೌಡ
೬೫೭ ಸಾಂಕ್ರಾಮಿಕ ರೋಗಗಳು ಡಾ. ಕರವೀರಪ್ರಭು ಕ್ಯಾಲಕೊಂಡ
೬೫೮ ಒಣ ಬೇಸಾಯ ಡಾ. ಎ.ಎಸ್. ಕುಮಾರಸ್ವಾಮಿ
೬೫೯ ಪಾರ್ಥೇನಿಯಂ ಡಾ. ಎಂ. ಮಹದೇವಪ್ಪ
೬೬೦ ಗಿಡಮೂಲಿಕೆಗಳು ಡಾ.ಟಿ.ಎಲ್. ದೇವರಾಜ್
೬೬೧ ಜ್ಞಾನಪೀಠ ಪ್ರಶಸ್ತಿ ವಿಜೇತರು ಪ್ರೊ. ಹೆಚ್.ಆರ್. ದಾಸೇಗೌಡ
೬೬೨ ಸಾಹಸ ಕ್ರೀಡೆಗಳು  ಎಂ.ಕೆ. ಶ್ರೀಧರ
೬೬೩ ಕನ್ನಡ  ಶಾಸನಗಳು ಡಾ. ಬಾ.ರಾ. ಗೋಪಾಲ
೬೬೪ ಕತೆ ಹೇಳುವ ಅಂಕಿ ಅಂಶಗಳು ಡಾ. ಎಂ. ಶಿವಮೂರ್ತಿ
೬೬೫ ಕರ್ನಾಟಕದ ಏಕೀಕರಣ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಸಿ. ಗೋವಿಂದರಾಜು
೬೬೬ ಸೂರ್ಯ ನಮಸ್ಕಾರಗಳು ಎಚ್.ಎನ್. ಓಂಕಾರ
೬೬೭ ಕ್ಯಾನ್ಸರ್ ಡಾ. ಪಿ.ಎಸ್. ಶಂಕರ್
೬೬೮ ಜನಪದ ಸಾಹಿತ್ಯದಲ್ಲಿ ಮಹಿಳೆ ಡಾ. ಕೆ.ಆರ್. ಸಂಧ್ಯಾರೆಡ್ಡಿ
೬೬೯ ಅಂತರ್ ರಾಷ್ಟ್ರೀಯ ದಿನಗಳು ಪ್ರವೀಣ್ ಫರ್ನಾಂಡೀಸ್
೬೭೦ ಅಂತರ್ಜಲ ಡಾ. ಟಿ.ವಿ. ವೆಂಕಟಾಚಲಶಾಸ್ತಿç
೬೭೧ ಸಮಾಜವಾದ ಎಚ್.ಎನ್. ನಾಗಮೋಹನದಾಸ್
೬೭೨ ಕನ್ನಡ ಚಲನಚಿತ್ರರಂಗ ಪಿ.ಜಿ. ಶ್ರೀನಿವಾಸಮೂರ್ತಿ
೬೭೩  ಕನ್ನಡ ಸಾಹಿತ್ಯ ಪರಿಷತ್ತು ಜಗನ್ನಾಥ ಹೇಮಾದ್ರಿ
ಸಮ್ಮೇಳನಗಳ ಕವಿ ಪರಿಚಯ
೬೭೪ ಅಖಿಲ ಭಾರತ ೫೯ನೇ ಕ.ಸಾ. ಸಮ್ಮೇಳನಗಳ ಕವಿ ಪರಿಚಯ ಗೊ.ರು. ಚನ್ನಬಸಪ್ಪ
೬೭೫ ಅಖಿಲ ಭಾರತ ೬೦ನೇ ಕ.ಸಾ. ಸಮ್ಮೇಳನಗಳ ಕವಿ ಪರಿಚಯ ಗೊ.ರು. ಚನ್ನಬಸಪ್ಪ
೬೭೬ ಅಖಿಲ ಭಾರತ ೬೧ನೇ ಕ.ಸಾ. ಸಮ್ಮೇಳನಗಳ ಕವಿ ಪರಿಚಯ ಎಸ್. ವಿ. ಮನ್ವಾಚಾರ್
೬೭೭ ಅಖಿಲ ಭಾರತ ೬೨ನೇ ಕ.ಸಾ. ಸಮ್ಮೇಳನಗಳ ಕವಿ ಪರಿಚಯ ಎನ್. ಚಕ್ರಪಾಣಿ 
೬೭೮ ಅಖಿಲ ಭಾರತ ೬೩ನೇ ಕ.ಸಾ. ಸಮ್ಮೇಳನಗಳ ಕವಿ ಪರಿಚಯ ಹೆಚ್. ಎಸ್. ಸಿದ್ಧಗಂಗಪ್ಪ
೬೭೯ ಅಖಿಲ ಭಾರತ ೬೪ನೇ ಕ.ಸಾ. ಸಮ್ಮೇಳನಗಳ ಕವಿ ಪರಿಚಯ ಹೆಚ್.ಎಚ್. ಸಿದ್ಧಗಂಗಪ್ಪ
೬೮೦ ಅಖಿಲ ಭಾರತ ೬೫ನೇ ಕ.ಸಾ. ಸಮ್ಮೇಳನಗಳ ಕವಿ ಪರಿಚಯ ಹೆಚ್. ಎಸ್. ಸಿದ್ಧಗಂಗಪ್ಪ, 
ಜಿಲ್ಲಾ ಕಥಾಸಂಕಲನಗಳು
೬೮೧ ಚಿಕ್ಕಮಗಳೂರು ಜಿಲ್ಲಾ ಕಥಾಸಂಕಲನ ಸಂ. ಅಜ್ಜಂಪುರ ಜಿ. ಸೂರಿ
೬೮೨ ಕೊಡಗು ಜಿಲ್ಲಾ ಕಥಾಸಂಕಲನ ಸಂ. ಎಸ್. ಸಿ. ರಾಜಶೇಖರ
೬೮೩ ರಾಯಚೂರು ಜಿಲ್ಲಾ ಕಥಾಸಂಕಲನ ಸಂ. ಎಸ್. ಶರಣೇಗೌಡ
೬೮೪ ಬಾಗಲಕೋಟೆ ಜಿಲ್ಲಾ ಕಥಾಸಂಕಲನ ಸಂ. ಅನ್ನದಾನಿ ಹಿರೇಮಠ
೬೮೫ ಬಳ್ಳಾರಿ ಜಿಲ್ಲಾ ಕಥಾಸಂಕಲನ ಸಂ.ಹೆಚ್. ಹಂಪನಗೌಡ
೬೮೬ ಮಹಾರಾಷ್ಟ್ರ ಕನ್ನಡ ಕಥಾಸಂಕಲನ ಸಂ. ಡಾ. ಜಿ. ಡಿ. ಜೋಶಿ
೬೮೭ ಬೆಳಗಾವಿ ಜಿಲ್ಲಾ ಕಥಾಸಂಕಲನ ಸಂ.ಡಾ.ಎಸ್.ಎಂ.ಹರದಗಟ್ಟಿ
೬೮೮ ಹಾವೇರಿ ಜಿಲ್ಲಾ ಕಥಾಸಂಕಲನ ಸಂ. ಎಸ್.ವೈ. ಗುಬ್ಬಣ್ಣವರ
೬೮೯ ಉತ್ತರ ಕನ್ನಡ ಜಿಲ್ಲಾ ಕಥಾಸಂಕಲನ ಸಂ. ಶಾಂತಿನಾಯಕ್
೬೯೦ ಹಾಸನ ಜಿಲ್ಲಾ ಕಥಾಸಂಕಲನ ಸಂ. ಹೆಚ್.ಬಿ. ಮದನಗೌಡ
೬೯೧ ಗದಗ ಜಿಲ್ಲಾ ಕಥಾಸಂಕಲನ ಸಂ. ಸಿ. ವಿ. ಕೆರಿಮನಿ
೬೯೨ ಗುಲ್ಬರ್ಗಾ ಜಿಲ್ಲಾ ಕಥಾಸಂಕಲನ ಸಂ. ಅಪ್ಪಾರಾವ್ ಅಕ್ಕೋಣಿ
೬೯೩ ಬೀದರ್ ಜಿಲ್ಲಾ ಕಥಾಸಂಕಲನ ಸಂ. ಸಿದ್ರಾಮಪ್ಪ ಮಾಸಿಮಡೆ
೬೯೪ ಬೆಂ|| ಗ್ರಾಮಾಂತರ ಜಿಲ್ಲಾ ಕಥಾಸಂಕಲನ  ಸಂ. ಸು.ತ. ರಾಮೇಗೌಡ
೬೯೫