>ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವ ಪಡೆದುಕೊಂಡ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ಪಾಟೀಲ ಹಾಗೂ ಅವರ ಕುಟುಂಬ
ಭಾವಚಿತ್ರ: ಸುಪ್ರಿಂ ಕೋರ್ಟ್‌ನ ನಿವೃತ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯದ ಮಾಜಿ ಲೋಕಾಯುಕ್ತರು ಆಗಿರುವ ನ್ಯಾಯಮೂರ್ತಿ ಶಿವರಾಜ್ ಪಾಟೀಲರು ಕನ್ನಡಿಗರ ಪ್ರಾತಿನಿದಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವನ್ನು ಪಡೆದುಕೊಂಡರು.
ಬೆಂಗಳೂರು : ಸುಪ್ರಿಂ ಕೋರ್ಟ್‌ನ ನಿವೃತ ನ್ಯಾಯಮೂರ್ತಿ, ಕರ್ನಾಟಕ ರಾಜ್ಯದ ಮಾಜಿ ಲೋಕಾಯುಕ್ತರು ಹಾಗೂ ಹಿರಿಯರು ಆಗಿರುವ ನ್ಯಾಯಮೂರ್ತಿ ಶಿವರಾಜ್ ಪಾಟೀಲರು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವನ್ನು ಪಡೆದುಕೊಂಡಿದ್ದಾರೆ.
ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಹಾಗೂ ಕನ್ನಡ-ಕನ್ನಡಿಗ-ಕರ್ನಾಟಕದ ಹಿನ್ನೆಲೆಯಲ್ಲಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ರೂಪಿಸುವ ಉದ್ದೇಶದಿಂದ ಮನೆ ಮನೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ರಾಜ್ಯಾದ್ಯಂತ ಗಣ್ಯರಿಂದ ಜನಸಾಮಾನ್ಯರವರೆಗೆ , ವಿವಿಧ ಕ್ಷೇತ್ರಗಳಲ್ಲಿ ಸಾಧನಗೈದ ಮಹನೀಯರುಗಳ ಮನೆಗೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ನ್ಯಾ.ಶಿವರಾಜ್ ಪಾಟೀಲರ ಮನೆಗೆ ತೆರಳಿದಾಗ ಮಾನ್ಯ ನ್ಯಾಯಮೂರ್ತಿಗಳು ಹಾಗೂ ಅವರ ಕುಟುಂಬಸ್ತರಾದ ಶ್ರೀಮತಿ ಅನ್ನಪೂರ್ಣಾ ಶಿವರಾಜ ಪಾಟೀಲ, ಡಾ|| ಶರಣ ಶಿವರಾಜ್ ಪಾಟೀಲ ಮತ್ತು ಶ್ರೀಮತಿ ಮೀನಾ ಶರಣ ಪಾಟೀಲ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶ್ಯಾಧ್ಯಕ್ಷರಾದ ಬಿ.ಎಂ. ಪಟೇಲ್‌ಪಾಂಡು ಉಪಸ್ಥಿತರಿದ್ದರು.
Press Note_Shivraj patil-09-06-2022
ಪ್ರತಿಕ್ರಿಯೆ