ಜನವರಿ 31ರಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬೇಂದ್ರೆ ವಿಶೇಷ ಉಪನ್ಯಾಸ ಕಾರ್ಯಕ್ರಮ

ಜನವರಿ 31ರಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬೇಂದ್ರೆ ವಿಶೇಷ ಉಪನ್ಯಾಸ ಕಾರ್ಯಕ್ರಮ

kasapa_bendre

ಬೆಂಗಳೂರು: ಜನವರಿ 31ರಂದು ಕನ್ನಡ ಸಾಹಿತ್ಯ ಪರಿಷತ್ತು ವರಕವಿ ಬೇಂದ್ರೆಯವರ 128ನೆಯ ಜನ್ಮ ದಿನ ಕಾರ್ಯಕ್ರಮವನ್ನು ವಿಶೇಷವಾಗಿ ಹಮ್ಮಿಕೊಂಡಿದೆ. ಕನ್ನಡ ಸಾಹಿತ್ಯಕ್ಕೆ ಶಕ್ತಿ ತುಂಬಿದ ಕವಿಗಳಲ್ಲಿ ಪ್ರಮುಖರಾದ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು 1896ರ ಜನವರಿ 31ರಂದು ಜನಿಸಿದರು. ಅವರು ಒಂದು ರೀತಿಯಲ್ಲಿ ಹುಟ್ಟು ಕವಿ. ಅವರ ಮಾತೇ ಕಾವ್ಯದ ಪ್ರವಾಹದಂತೆ ಇರುತ್ತಿತ್ತು. ‘ಗರಿ’ ಸಂಕಲನದಲ್ಲಿನ ‘ನರಬಲಿ’ ಕವಿತೆ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಸೆರೆವಾಸವನ್ನೂ ಕೂಡ ಅವರು ಅನುಭವಿಸಿದ್ದರು. ಇಹ ಮತ್ತು ಪರ ಎರಡೂ ನೆಲೆಯ ಕವಿತೆಗಳನ್ನು ಬರೆದ ಬೇಂದ್ರೆ ರಂಗಭೂಮಿ, ಚಲನಚಿತ್ರದ ಕುರಿತೂ ಆಸಕ್ತಿಯನ್ನು ಇಟ್ಟು ಕೊಂಡಿದ್ದರು. 1943ರಲ್ಲಿ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. ಅವರ ‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಗೌರವ ಬಂದರೆ ‘ನಾಕುತಂತಿ’ ಜ್ಞಾನಪೀಠ ಪುರಸ್ಕಾರಕ್ಕೆ ಪಾತ್ರವಾಗಿತ್ತು. ಪದ್ಮಶ್ರೀ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರಾದ ಅಂಬಿಕಾ ತನಯ ದತ್ತರು ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿದ ಮಹನೀಯರಲ್ಲಿ ಪ್ರಮುಖರು. 1934ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಸಂತೋತ್ಸವದಲ್ಲಿ ಬೇಂದ್ರೆಯವರು ನೀಡಿದ ಉಪನ್ಯಾಸ ಇವತ್ತಿಗೂ ಚಾರಿತ್ರಿಕ ಎಂದು ಪರಿಗಣಿತವಾಗಿದೆ.

ಜನವರಿ 31ರ ಸಂಜೆ 5.00 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ನವೀಕೃತ ಕುವೆಂಪು ಸಭಾಂಗಣದಲ್ಲಿ ಖ್ಯಾತ ಚಿಂತಕಿ ಮತ್ತು ಬೇಂದ್ರೆಯವರ ಕಾವ್ಯದ ಕುರಿತು ಪರಿಣಿತರೂ ಆಗಿರುವ ಡಾ.ಗೀತ ವಸಂತ ಅವರು ಬೇಂದ್ರೆಯವರ ಕಾವ್ಯದ ಅನುಭಾವಿಕ ನೆಲೆಗಳ ಕುರಿತು ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ಖ್ಯಾತ ಬರಹಗಾರರಾದ ಡಾ.ಬಸವರಾಜ ಸಬರದ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿಲಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಅಧ್ಯಕ್ಷತೆಯನ್ನು ವಹಿಸಿಲಿದ್ದಾರೆ
ಸಾಂಸ್ಕೃತಿಕವಾಗಿ ಬಹಳ ಮಹತ್ವದ ಈ ಕಾರ್ಯಕ್ರಮದ ಕುರಿತು ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ ಸಾರ್ವಜನಿಕರು ಭಾಗವಹಿಸಲು ಅನುಕೂಲ ಮಾಡಿಕೊಡುವುದರ ಜೊತೆಗೆ ಕಾರ್ಯಕ್ರಮಕ್ಕೆ ನಿಮ್ಮ ವರದಿಗಾರರನ್ನು ಮತ್ತು ಛಾಯಾಗ್ರಾಹಕರನ್ನು ಕಳುಹಿಸಿ ಕೊಡ ಬೇಕಾಗಿ ವಿನಂತಿ

ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ

ಕನ್ನಡ ಸಾಹಿತ್ಯ ಪರಿಷತ್ತು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)