ನಿಬಂಧನೆಗಳ ಕುರಿತು

ಯಾವುದೇ ಸಂಸ್ಥೆಗಾಗಲಿ ಅಂಗರಚನೆ ಅಥವಾ ನಿಬಂಧನೆ ಆಧಾರಪ್ರಾಯವಾದುದು. ಸಂಸ್ಥೆಗೆ ಚೌಕಟ್ಟು ಅದು. ಪರಿಷತ್ತಿನ ನಿಬಂಧನೆಗಳು ನೂರುವರ್ಷಗಳಲ್ಲಿ ಹತ್ತಾರುಬಾರಿ ಚರ್ಚೆಗೆ ಒಳಗಾಗಿ ಪರಿಷ್ಕೃತಗೊಂಡಿದೆ.

೧೯೧೫ರಲ್ಲಿ ಪ್ರಥಮ ಬಾರಿಗೆ ರೂಪುಗೊಂಡ ಕಸಾಪ ನಿಬಂಧನೆಗಳು ಜಾರಿಗೆ ಬಂದ ಅನಂತರ ೧೯೧೬ರಲ್ಲಿ ಕೆಲವು ತಿದ್ದುಪಡಿಗಳಿಗೆ ಒಳಗಾದವು. ಅನಂತರ ಹಲವಾರು ವರ್ಷ ಬಳಕೆಯಲ್ಲಿತ್ತು

ಅನಂತರ ೧೯೨೫, ೧೯೩೫, ೧೯೪0, ೧೯೪೭, ೧೯೫೪, ೧೯೬೭, ೧೯೭೩ ೧೯೭೮, ೧೯೮೩, ೧೯೮೮ ೧೯೯೧, ೧೯೯೭, ಈ ರೀತಿಯಾಗಿ ೧೨ ಬಾರಿ ತಿದ್ದುಪಾಟುಗಳಾಗಿವೆ. ೧೩ನೇ ಬಾರಿ ತಿದ್ದುಪಾಟು ಸಮಿತಿ ಮಾಡಿದ ಸಲಹೆಗಳು ಅಂಗೀಕಾರವಾಗದೆ ಉಳಿದಿದೆ. ಈಗ ಸದ್ಯಕ್ಕೆ ೨0೧೫ರಲ್ಲಿ ಚಾಲ್ತಿಯಲ್ಲಿರುವ ನಿಬಂಧನೆಗಳನ್ನು (ಬೈಲಾ) ಎಂದರೆ ಕರ್ನಾಟಕ ಸೊಸೈಟಿಗಳ ರಿಜಿಸ್ಟ್ರಾರ್ ಅವರಿಂದ ೧೫-೪-೧೯೯೮ರಲ್ಲಿ ಅಂಗೀಕೃತವಾಗಿರುವ ನಿಬಂಧನೆಗಳನ್ನು ಇಲ್ಲಿ ಕೊಡಲಾಗಿದೆ. ಇದರೊಂದಿಗೆ ಪರಿಷತ್ತು ಪ್ರಾರಂಭವಾದಾಗ ನಿಬಂಧನೆಗಳು ಹೇಗಿದ್ದವು ಎಂಬುದಕ್ಕೆ ನಿದರ್ಶನಕ್ಕಾಗಿ ೧೯೧೫ರ ನಿಬಂಧನೆಗಳನ್ನು (೧೯೧೬ರಲ್ಲಿ ಆದ ತಿದ್ದುಪಡಿಗಳೊಡನೆ ಇಲ್ಲಿ ಕೊಟ್ಟಿದೆ) ಹಾಗೆಯೇ ಈಗ ಚಾಲ್ತಿಯಲ್ಲಿರುವ ನಿಬಂಧನೆಗಳ ಪೂರ್ಣ ಪಾಠವನ್ನು ಕೊಡಲಾಗಿದೆ. ನೂರುವರ್ಷಗಳಲ್ಲಿ ಪರಿಷತ್ತಿನ ನಿಬಂಧನೆಗಳು ಹೇಗೆ ಮಾರ್ಪಾಟುಗಳಾಗಿವೆ ಎಂಬುದನ್ನು ಇವೆರಡನ್ನು ಹೋಲಿಸುವುದರಿಂದ ತಿಳಿಯುತ್ತದೆ.

ಪರಿಷತ್ತಿನ  ನಿಬಂಧನೆಗಳು  ಪರಿಷ್ಕೃತಗೊಳ್ಳಬೇಕು ಎಂಬ  ಹಿನ್ನಲೆಯಲ್ಲಿ ಈ ಕೆಳಕಂಡ ನಿಬಂಧನಾ  ವಿಶೇಷ  ಉಪಸಮಿತಿಯು ಅಸ್ತಿತ್ವದಲ್ಲಿದ್ದು  ಸಮಿತಿಯ  ಸಲಹಾ  ವರದಿ  ದೊರೆತ  ನಂತರದಲ್ಲಿ  ಸರ್ವಸದಸ್ಯರ  ಸಭೆಯಲ್ಲಿ  ಅಂಗೀಕಾರಕ್ಕಾಗಿ  ಪ್ರಸ್ತುತಗೊಳ್ಳುತ್ತದೆ.

 

ನಿಬಂಧನೆ ತಿದ್ದುಪಡಿ ಹಾಗೂ ಚುನಾವಣಾ ಸುಧಾರಣಾ ಸಲಹಾ ಸಮಿತಿ ಪಟ್ಟಿ

 

ಅಧ್ಯಕ್ಷರು

ಡಾ. ಮನು ಬಳಿಗಾರ್

ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು

ಬೆಂಗಳೂರು

 

ಕನ್ನಡ ಸಾಹಿತ್ಯ ಪರಿಷತ್ತಿನ  ಪದಾಧಿಕಾರಿಗಳು

 

ಡಾ. ರಾಜಶೇಖರ ಹತಗುಂದಿ

ಗೌರವ ಕಾರ್ಯದರ್ಶಿಗಳು

ಬೆಂಗಳೂರು

 

ಶ್ರೀ ವ.ಚ. ಚನ್ನೇಗೌಡ

ಗೌರವ ಕಾರ್ಯದರ್ಶಿಗಳು

ಬೆಂಗಳೂರು

 

ಶ್ರೀ ಪಿ. ಮಲ್ಲಿಕಾರ್ಜುನಪ್ಪ

ಗೌರವ ಕೋಶಾಧ್ಯಕ್ಷರು

ಬೆಂಗಳೂರು

 

ಗೌರವ ಸಂಚಾಲಕರು

 

ಶ್ರೀ ಎನ್.ಕೆ. ನಾರಾಯಣ

ಬೆಂಗಳೂರು

 

ಸದಸ್ಯರು

 

ಶ್ರೀಮತಿ ಹೇಮಲತಾ ಮಹಿಷಿ

ವಕೀಲರು

ಬೆಂಗಳೂರು

 

ಶ್ರೀಮತಿ ಎಸ್. ಪ್ರಮೀಳಾ ನೇಸರ್ಗಿ

ವಕೀಲರು

ಬೆಂಗಳೂರು

 

ಶ್ರೀ ಅಶೋಕ ಪೂಜಾರ

ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು

ಬೆಂಗಳೂರು

 

ಶ್ರೀ ಕೆ. ನಾಗರಾಜು

ಬೆಂಗಳೂರು

 

ಶ್ರೀ ಎಸ್.ಟಿ. ಮೋಹನ್‍ರಾಜು

ಬೆಂಗಳೂರು

 

ಶ್ರೀ ಮಲ್ಲಿಕಾರ್ಜುನ ಯಂಡಿಗೇರಿ

ವಿಜಯಪುರ

 

ಶ್ರೀ ಪಂಪಯ್ಯ ಶೆಟ್ಟಿ

ಬೆಂಗಳೂರು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)