ಮಂಡ್ಯದಲ್ಲಿ ಅಯೋಜನೆಗೊಂಡಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಬರಹಗಾರ ವಿವೇಕ್ ಶಾನಭಾಗ್ ಒಪ್ಪಿಗೆ

ಮಂಡ್ಯದಲ್ಲಿ ಅಯೋಜನೆಗೊಂಡಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಬರಹಗಾರ ವಿವೇಕ್ ಶಾನಭಾಗ್ ಒಪ್ಪಿಗೆ

WhatsApp Image 2024-10-15 at 4.50.14 PM

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ವ್ಯಾಪ್ತಿಯನ್ನು ಗಮನಾರ್ಹವಾಗಿ ಹಿಗ್ಗಿಸಲು ಪ್ರಯತ್ನಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕ್ರಿಯಾಶೀಲ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಇದುವರೆಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸದ ಆದರೆ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿರುವ ಸಾಹಿತಿಗಳ ಮನೆಗಳಿಗೆ ಭೇಟಿ ನೀಡಿ ಅವರನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸುವ ಮೂಲಕ ಹೊಸ ಪರಂಪರೆಯನ್ನು ಆರಂಭಿಸಿದ್ದಾರೆ. ಈ ಮುಖಾಂತರ ಸಮ್ಮೇಳನದ ವ್ಯಾಪ್ತಿ ಬಹುಮುಖಿಯಾಗಲಿ ಎಂಬ ಆಶಯ ನಾಡೋಜ ಡಾ.ಮಹೇಶ ಜೋಶಿಯವರದ್ದು.

ಇದರ ಅಂಗವಾಗಿ ಇದುವರೆಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸದ ಆದರೆ ಜಾಗತಿಕವಾಗಿ ಕನ್ನಡದ ವ್ಯಾಪ್ತಿಯನ್ನು ವಿಸ್ತರಿಸಿರುವ ಕನ್ನಡದ ಪ್ರಮುಖ ಕಥೆಗಾರ ವಿವೇಕ್ ಶಾನಭಾಗ್ ಅವರ ಮನೆಗೆ ಭೇಟಿ ನೀಡಿ ನಾಡೋಜ ಡಾ.ಮಹೇಶ ಜೋಶಿಯವರು ಸಮ್ಮೇಳನದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಆಹ್ವಾನಿಸಿದರು. ಅದಕ್ಕೆ ಪೂರಕವಾಗಿ ಸ್ಪಂದಿಸಿದ ವಿವೇಕ ಶಾನಭೋಗ ಅವರು ಸಮ್ಮೇಳನದಲ್ಲಿ ಭಾಗವಹಿಸುವುದಾಗಿ ಒಪ್ಪಿಗೆ ನೀಡಿದ್ದು ಮಾತ್ರವಲ್ಲದೆ ಸಮ್ಮೇಳನದ ಕುರಿತಾಗಿ ಹಲವು ಮಹತ್ವದ ಸಲಹೆಗಳನ್ನೂ ನೀಡಿದ್ದಾರೆ.

ಅಮೆರಿಕಾ, ಇಂಗ್ಲೇಡ್ನಲ್ಲಿ ಕೂಡ ನೆಲೆಸಿ ಅಲ್ಲಿನ ಸಾಂಸ್ಕೃತಿಕ ವಾತಾವರಣವನ್ನು ಅರಿತಿರುವ ವಿವೇಕ್ ಶಾನಭೋಗ ಅವರು ಬಹುಭಾಷೆಗಳಲ್ಲಿ ಪರಿಣಿತರು. ಕನ್ನಡದಲ್ಲಿ 5 ಕಥಾ ಸಂಕಲನ, 5 ಕಾದಂಬರಿ, 3 ನಾಟಕ ಹೀಗೆ ವೈವಿಧ್ಯಮಯ ಕೃತಿಗಳನ್ನು ರಚಿಸಿರುವ ಅವರು ಏಳು ವರ್ಷಗಳ ಕಾಲ ‘ದೇಶಕಾಲ’ ಎನ್ನುವ ಸಾಂಸ್ಕೃತಿಕ ಪತ್ರಿಕೆಯನ್ನು ಬಹಳ ವಿಶಿಷ್ಟವಾಗಿ ನಡೆಸಿದ್ದರು. ಅವರ ಇತ್ತೀಚಿನ ‘ಘಾಚರ್ ಘೋಚರ್’ ನೀಳ್ಗತೆ ಜಗತ್ತಿನ ಗಮನ ಸೆಳೆದಿದ್ದು ಮಾತ್ರವಲ್ಲದೆ ಹದಿನೆಂಟು ಭಾಷೆಗಳಿಗೆ ಅನುವಾದಗೊಂಡು ಕನ್ನಡದ ಹಿರಿಮೆಯನ್ನು ಹೆಚ್ಚಿಸಿದೆ, ವಿವೇಕ ಶಾನಭೋಗ ಅವರ ಭಾಗವಹಿಸುವಿಕೆಯಿಂದ ಮಂಡ್ಯದಲ್ಲಿ ಅಯೋಜಿತಗೊಂಡಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಹತ್ವ ಹೆಚ್ಚಲಿದೆ ಎಂದು ನಾಡೋಜ ಡಾ.ಮಹೇಶ ಜೋಶಿ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)