ಮೊದಲು ತಾಯ ಹಾಲ ಕುಡಿದು
ನಲ್ಮೆಯಿಂದ ತೊದಲಿ ನುಡಿದು
ಗೆಳೆಯರೊಡನೆ ಬೆಳೆದು ಬಂದ ಮಾತದಾವುದು
ಸವಿಯ ಹಾಡ ಕತೆಯ ಕಟ್ಟಿ
ಕಿವಿಯಲೆರದು ಕರುಳ ತಟ್ಟಿ
ನಮ್ಮ ಜನರು ನಮ್ಮ ನಾಡು ಎನಿಸಿತಾವುದು
ನಮ್ಮ ಕವಿಗಳೆಂಬ ಕೋಡು ತಲೆಗದಾವುದು
ಕನ್ನಡ ನುಡಿ ನಮ್ಮ ಹೆಣ್ಣು
ನಮ್ಮ ತೋಟದಿನಿಯ ಹಣ್ಣು
ಬಳಿಕ ಬೇರೆ ಬೆಳೆದ ಹೆಣ್ಣು
ಬಳಿಗೆ ಸುಳಿದಳು
ಹೊಸದು ರಸದ ಬಳ್ಳಿ ಹಣ್ಣು
ಒಳಗೆ ಸುಳಿದಳು
ಬಲ್ಲವರಿಗೆ ಬೆರಗೆ ಇಲ್ಲಿ
ಅರಿಯದವರು ನಾಲ್ವರಲ್ಲಿ
ಕಳೆಯ ಬೆಳಕು ಹೊಳೆಯಲಂದು ದಣಿದು ಹೋದೆನು
ಬಡವನಳಿಲು ಸೇವೆ ಎಂದು ಧನ್ಯನಾದೆನು
ಸಾಹಿತ್ಯ: ಬಿ.ಎಂ.ಶ್ರೀ
ಪ್ರತಿಕ್ರಿಯೆ