ಸಮ್ಮೇಳನಾಧ್ಯಕ್ಷರಿಗೆ ಪರಿಷತ್ತಿನ ಅಧಿಕೃತ ಆಹ್ವಾನ

ಸಮ್ಮೇಳನಾಧ್ಯಕ್ಷರಿಗೆ ಪರಿಷತ್ತಿನ ಅಧಿಕೃತ ಆಹ್ವಾನ

WhatsApp Image 2022-12-29 at 7.39.01 PM

ಹಾವೇರಿಯಲ್ಲಿ ಜನವರಿ ೬, ೭ ಮತ್ತು ೮ರಂದು ನಡೆಯುವ ೮೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ದೊಡ್ಡರಂಗೇಗೌಡರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ದೊಡ್ಡರಂಗೇಗೌಡರ ಮನೆಗೆ ಭೇಟಿ ನೀಡಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಅಧಿಕೃತ ಆಹ್ವಾನವನ್ನು ನೀಡಿದರು. ಸಾಹಿತ್ಯ ಸಮ್ಮೇಳನವು ತಮ್ಮ ಅಧ್ಯಕ್ಷತೆಯಲ್ಲಿ ಕನ್ನಡಪರ ಚಿಂತನೆಗಳಿಗೆ ಪೂರಕವಾಗಿ ಕನ್ನಡಿಗರ ಆಶೋತ್ತರಗಳಿಗೆ ತಕ್ಕಂತೆ ನಡೆಯಲಿ ಎಂದು ಆಶಿಸಿದರು. ಇದಕ್ಕೆ ಸ್ಪಂದಿಸಿದ ಡಾ.ದೊಡ್ಡರಂಗೇಗೌಡರು ಸಮ್ಮೇಳನಕ್ಕೆ ನಡೆದಿರುವ ಸಿದ್ಧತೆಗಳ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿ ಈ ಸಮ್ಮೇಳನವು ಚಾರಿತ್ರಿಕವಾಗಿ ಮೂಡಿ ಬಂದು ಪರಂಪರೆಯನ್ನು ರೂಪಿಸುವಲ್ಲಿ ತಮಗೆ ಯಾವ ಸಂದೇಹವೂ ಇಲ್ಲ ಎಂದು ಭರವಸೆಯನ್ನು ವ್ಯಕ್ತಪಡಿಸಿದರು. ಎಲ್ಲರನ್ನೂ ಒಳಗೊಳ್ಳುವಂತೆ ಸಮಗ್ರತೆಯ ನೆಲೆಯಲ್ಲಿ ಸಮ್ಮೇಳನದ ಕಾರ್ಯಕ್ರಮಗಳನ್ನು ರೂಪಿಸಿರುವುದಕ್ಕೆ ಅವರು ಸಂತೋಷವನ್ನು ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ. ಪದ್ಮಿನಿ ನಾಗರಾಜು ಮತ್ತು ಪರಿಷತ್ತಿನ ಪದಾಧಿಕಾರಿಗಳು ಇದ್ದರು.

ಎನ್‌ .ಎಸ್. ಶ್ರೀಧರ ಮೂರ್ತಿ
ಪ್ರಕಟಣಾ ವಿಭಾಗದ ಸಂಚಾಲಕರು
ಕನ್ನಡ ಸಾಹಿತ್ಯ ಪರಿಷತ್ತು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)