ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಛೇರಿಗೆ ಮಾಧ್ಯಮ ಸಮನ್ವಯಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಶತಮಾನವನ್ನು ಕಂಡಿರುವ ಕನ್ನಡಿಗರ ಮಾತೃಸಂಸ್ಥೆ. ರಾಜಾಶ್ರಯದಿಂದ ಹಿಡಿದು ಇಂದಿನ ಪ್ರಜಾಪ್ರಭುತ್ವದವರೆಗೂ ಕನ್ನಡ-ಕನ್ನಡಿಗ-ಕರ್ನಾಟಕದ ಹಿತವನ್ನು ಕಾಪಾಡುತ್ತಾ ಬಂದಿರುವುದು ಈ ಸಂಸ್ಥೆಯ ಹೆಗ್ಗಳಿಕೆ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಕನ್ನಡದ ಸಾಂಸ್ಕೃತಿಕ ಇತಿಹಾಸವೇ ಆಗಿದೆ. ಮಂಡ್ಯದಲ್ಲಿ ಡಿಸಂಬರ್ 20,21,22ರಂದು ಆಯೋಜನೆಗೊಂಡಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ಕೇಂದ್ರ ಕಛೇರಿಗೆ ಮಾಧ್ಯಮ ಸಮನ್ವಾಯಾಧಿಕಾರಿಗಳ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಮುದ್ರಣ ಅಥವಾ ದೃಶ್ಯ ಮಾಧ್ಯಮದಲ್ಲಿ ಅನುಭವ ಹೊಂದಿದ್ದು ಮಾಧ್ಯಮ ಸಂವಹನದ ಅಗತ್ಯಗಳನ್ನು ಅರಿತಿರಬೇಕು. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾರ್ವಜನಿಕರ ನಡುವೆ ಸಂವಹನ ಸೇತುವೆಯಾಗುವ ಸಾಮರ್ಥ್ಯವನ್ನು ಹೊಂದಿದ್ದು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವರೂಪವನ್ನು ಅರಿತಿರಬೇಕು.
ಈ ಉದ್ಯೋಗವು ತಾತ್ಕಾಲಿಕವಾದದ್ದಾಗಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸ, ಸ್ವರೂಪ ಮತ್ತು ಕನ್ನಡ ನಾಡು-ನುಡಿ ಬಗೆಗಿನ ತಿಳುವಳಿಕೆ ಅಪೇಕ್ಷಣೀಯ.
ಇದು ಕನ್ನಡದ ಮೇಲಿನ ಪ್ರೀತಿ ಮತ್ತು ಗೌರವದಿಂದ ಮಾಡುವ ಕೆಲಸವಾಗಿದ್ದು ಇದಕ್ಕಾಗಿ ಗೌರವ ಧನವನ್ನು ನೀಡಲಾಗುವುದು. ಯುವಕರಿಗೆ ಆದ್ಯತೆ ಇದ್ದರೂ ಇತ್ತೀಚೆಗೆ ನಿವೃತ್ತಿಯಾದವರೂ ಅರ್ಜಿ ಸಲ್ಲಿಸ ಬಹುದು, ಸಮಂಜಸ ವೃತ್ತಿ ಅನುಭವವನ್ನು ಇಂತಹ ಸಂದರ್ಭದಲ್ಲಿ ಪರಿಗಣಿಸಲಾಗುವುದು.
ಬೆಂಗಳೂರು ವಾಸಿಯಾಗಿರುವ ಅರ್ಹ ಅರ್ಜಿದಾರರು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಛೇರಿಯಿಂದ ಅರ್ಜಿಯನ್ನು ಜುಲೈ 31ರೊಳಗೆ ಪಡೆದು ಭರ್ತಿ ಮಾಡಿ ಆಗಸ್ಟ 10ರೊಳಗೆ ಖುದ್ದಾಗಿ ಸಲ್ಲಿಸ ಬಹುದು ಇಲ್ಲವೆ ‘ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು-18’ ಇಲ್ಲಿಗೆ ತಲುಪುವಂತೆ ಕಳುಹಿಸಬಹುದು.
ಪ್ರತಿಕ್ರಿಯೆ