MENU

ಕನ್ನಡ ಸಾಹಿತ್ಯ ಪರಿಷತ್ತು ೨೦೨೩-೨೪ನೆಯ ಸಾಲಿನ “ಶಾಸನಶಾಸ್ತ್ರ ಡಿಪ್ಲೊಮಾ” ತರಗತಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ.

ಕನ್ನಡ ಸಾಹಿತ್ಯ ಪರಿಷತ್ತು ೨೦೨೩-೨೪ನೆಯ ಸಾಲಿನ “ಶಾಸನಶಾಸ್ತ್ರ ಡಿಪ್ಲೊಮಾ” ತರಗತಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ.

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ೨೦೨೩-೨೪ನೆಯ ಸಾಲಿನ “ಶಾಸನಶಾಸ್ತ್ರ ಡಿಪ್ಲೊಮಾ” ತರಗತಿಗೆ ಅರ್ಜಿಗಳನ್ನು ೨೦೨೩ರ ಸೆಪ್ಟೆಂಬರ್ ೩೦ ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಹೆಚ್ಚುವರಿಯಾಗಿ ಅಕ್ಟೋಬರ್‌ ೩೧ ರ ವರೆಗೆ ದಂಡ ಶುಲ್ಕ ರೂ. ೫೦-೦೦ ಗಳನ್ನು ನೀಡಿ ಅರ್ಜಿ ಸಲ್ಲಿಸಲು ಕನ್ನಡ ಸಾಹಿತ್ಯ ಪರಿಷತ್ತು ಅವಕಾಶ ಕಲ್ಪಿಸಲಾಗಿದೆ.

ಪರೀಕ್ಷಾ ನಿಯಮಾವಳಿ ಹಾಗೂ ಅರ್ಜಿಯನ್ನು ರೂ. ೨೫-೦೦ಗಳ ಶುಲ್ಕ ಪಾವತಿಸಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾರಾಟ ಮಳಿಗೆಯಲ್ಲಿ (ಬೆಂಗಳೂರು) ಪಡೆಯಬಹುದು. ಪರೀಕ್ಷಾ ಅರ್ಜಿಗಳನ್ನು ಅಂತರ್ಜಾಲ ತಾಣ www.kasapa.in ಮೂಲಕ ಪಡೆದುಕೊಳ್ಳಬಹುದು. ಅಂತರ್ಜಾಲ ತಾಣದಲ್ಲಿ ಅರ್ಜಿ ನಮೂನೆಯನ್ನು ಪಡೆದವರು ಪರೀಕ್ಷಾ ಶುಲ್ಕದೊಂದಿಗೆ ಅರ್ಜಿ ಶುಲ್ಕ ರೂ.೨೫/-ಗಳನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುವುದು.

ಚ್ಚಿನ ವಿವರಗಳಿಗೆ ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು – ೫೬೦೦೧೮. ದೂರವಾಣಿ : ೦೮೦ ೨೬೬೧೨೯೯೧, ೨೬೬೨೩೫೮೪, ೨೨೪೨೩೮೬೭ ಮೂಲಕ ಸಂಪರ್ಕಿಸಬಹುದು.

“ಶಾಸನಶಾಸ್ತ್ರ ಡಿಪ್ಲೊಮಾ” ಅವಧಿಯು ಒಂಬತ್ತು ತಿಂಗಳದ್ದಾಗಿದ್ದು, ವಾರಕ್ಕೆ ೪ ದಿನ ತರಗತಿಗಳು ಇರುತ್ತವೆ (ಮಂಗಳವಾರದಿಂದ ಶುಕ್ರವಾರದ ವರೆಗೆ). ಎಲ್ಲಾ ತರಗತಿಗಳು ಸಂಜೆ ೬ ರಿಂದ ೭ ಗಂಟೆಯವರೆಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿಯೇ ನಡೆಸಲಾಗುವುದು. ಶಾಸನಶಾಸ್ತ್ರದಲ್ಲಿ ಶಾಸನಗಳ ಲಿಪಿಗಳನ್ನು ಓದುವ, ಶಾಸನಗಳ ಸಂಗ್ರಹ ವಿಧಾನ, ಅಧ್ಯಯನ, ಸಂಪ್ರಬಂಧ ರಚನೆ ಇತ್ಯಾದಿ ಮೌಲಿಕ ಅಂಶಗಳನ್ನು ತರಗತಿಗಳಲ್ಲಿ ಬೋಧಿಸಲಾಗುವುದು. ಆಸಕ್ತರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ಕೋರಿದೆ.

ಶ್ರೀನಾಥ್‌ ಜೆ.
ಮಾಧ್ಯಮ ಸಲಹೆಗಾರರು
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
Loading...

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)