ಮಕ್ಕಳಲ್ಲಿ ಭಾಷಾ ತಾರತಮ್ಯಕ್ಕೆ ಮುಂದಾದ ಅಧಿಕಾರಿ ವಿರುದ್ಧ ಸರಕಾರದ ಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದನೆ.

ಮಕ್ಕಳಲ್ಲಿ ಭಾಷಾ ತಾರತಮ್ಯಕ್ಕೆ ಮುಂದಾದ ಅಧಿಕಾರಿ ವಿರುದ್ಧ ಸರಕಾರದ ಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದನೆ.

ಬೆಂಗಳೂರು – ಕೇಂದ್ರ ಸರಕಾರದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ʻಒಂದು ಭಾರತ – ಶ್ರೇಷ್ಠ ಭಾರತʼ ಎನ್ನವ ಕಾರ್ಯಕ್ರಮದಡಿಯಲ್ಲಿ ಪ್ರೌಢಶಾಲಾ ಮತ್ತು ಪಿಯು ವಿದ್ಯಾರ್ಥಿಗಳಿಗೆ ಹೊರ ರಾಜ್ಯಗಳ ಪ್ರವಾಸಕ್ಕೆ ಕರೆದುಕೊಂಡು ಹೊಗುವಲ್ಲಿ ಹಿಂದಿ ಭಾಷೆ ಬಲ್ಲ ವಿದ್ಯಾರ್ಥಿಗಳಿಗೆ ಆಧ್ಯತೆ ಎನ್ನುವ ಸುತ್ತೋಲೆಯನ್ನು ವಾಪಸ್‌ ಪಡೆಯುವಂತೆ ಶಿಕ್ಷಣ ಸಚಿವರು ಸೂಚಿಸಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತಿಸುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೊಜ ಡಾ. ಮಹೇಶ ಜೋಶಿ ಹೇಳಿದ್ದಾರೆ.

ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳಲ್ಲಿ ಭಾಷಾ ಗೊಂದಲ ಹುಟುಹಾಕಿದ್ದನ್ನು ಕನ್ನಡ ಸಾಹಿತ್ಯ ಪರಿಷತ್ತು ವಿರೋಧಿಸಿತ್ತು ಬೆಂಗಳೂರು ಧಕ್ಷಿಣ ಉಪ ನಿರ್ದಶಕರು ಹೊರಡಿಸಿರುವ ಸುತ್ತೋಲೆಯಲ್ಲಿ ಹಿಂದಿ ಭಾಷೆ ಬಲ್ಲ ಮಕ್ಕಳನ್ನೇ ಆಯ್ಕೆ ಮಾಡಿ ಎಂದು ಹೇಳಲಾಗಿತ್ತು. ರಾಜ್ಯದಲ್ಲಿ ಆಡಲಿತ ಭಾಷೆ ಕನ್ನಡ ಇರುವಾಗ ʻಆಜಾದಿಕಾ ಅಮೃತ್‌ ಮಹೋತ್ಸವʼ ಎನ್ನುವ ಹಿಂದಿ ಶಿರ್ಸಿಕೆಯನ್ನು ಕನ್ನಡ ಅನುವಾದ ಮಾಡಿ ʻಸ್ವಾತಂತ್ರೋತ್ಸವದ ಅಮೃತ ಮಹೋತ್ಸವʼ ಎಂದು ಕನ್ನಡದಲ್ಲಿ ಬಳಸಲಾಗುತ್ತಿದೆ. ಈ ಮಧ್ಯ ಅದಿಕಾರಿಗಳ ಈ ಕ್ರಮ ಕನ್ನಡ ವಿರೋಧಿ ಏಂದು ಕಟುವಾಗಿ ಖಂಡಿಸಲಾಗಿತ್ತು.

ಕನ್ನಡ ಸಾಹಿತ್ಯ ಪರಿಷತ್ತು ಈ ಬಗ್ಗೆ ಶಿಕ್ಷಣ ಇಲಾಖೆಗೆ ಪತ್ರ ಬರೆಯುವ ಮೂಲಕ ಭಾಷಾ ತಾರತಮ್ಯವನ್ನು ಮಕ್ಕಳಲ್ಲಿ ಮಾಡಬಾರದು ಎಂದು ಆಗ್ರಹಿಸಿತ್ತು. ತಕ್ಷಣ ಸರಕಾರ ಎಚ್ಚತು ಕೊಂಡಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಶ್ರೀ ಬಿ.ಸಿ.ನಾಗೇಶ್‌ ಅವರು ಪ್ರೌಢಶಾಲಾ ಮತ್ತು ಪಿಯು ವಿದ್ಯಾರ್ಥಿಗಳಿಗೆ ಹೊರ ರಾಜ್ಯಗಳ ಪ್ರವಾಸಕ್ಕೆ ಕರೆದುಕೊಂಡು ಹೊಗುವಲ್ಲಿ ಹಿಂದಿ ಭಾಷೆ ಬಲ್ಲ ವಿದ್ಯಾರ್ಥಿಗಳಿಗೆ ಆಧ್ಯತೆ ಎನ್ನುವ ಸುತ್ತೋಲೆಯನ್ನು ವಾಪಸ್‌ ಪಡೆಯುವಂತೆ ಆದೇಶ ಮಾಡಿದ್ದಾರೆ. ಜೊತೆಗೆ ಕೇಂದ್ರ ಅಥವಾ ರಾಜ್ಯ ಸರಕಾರದ ಯಾವುದೇ ಮಾರ್ಗದರ್ಶನ ಇಲ್ಲದಿದ್ದರು ಆದೇಶ ಹೋರಡಿಸಿದ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚಿದ್ದಾರೆ ಈ ಕ್ರಮ ಸ್ವಾಗತಾರ್ಹ ಎಂದು ನಾಡೋಜ ಡಾ. ಮಹೇಶ ತಿಳಿಸಿದ್ದಾರೆ.

ಅಧಿಕಾರಿಗಳ ಮಟ್ಟದಲ್ಲಿ ಇಂತಹ ಯಾವುದೇ ತಪ್ಪುಗಳಾದಲ್ಲಿ ಅದನ್ನುಸರಕಾರ ತಕ್ಷಣ ಗಮನಿಸಿ ಅವಾಂತರಕ್ಕೆ ಅವಕಾಶ ಮಾಡಿ ಕೊಡಬಾರದು. ಪ್ರಸ್ತುತ ಪ್ರಕಣದಲ್ಲಿ ಸರಕಾರ ಹಾಗೂ ಶಿಕ್ಷಣ ಸಚಿವರು ಕೈಗೊಂಡಿದ್ದನ್ನು ತುರ್ತು ಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್‌ ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Press Note_ಭಾಷಾ ತಾರತಮ್ಯ ಸರಿ ಮಾಡಿದಕ್ಕೆ ಅಭಿನಂದೆ-17-06-2022

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)