ಮೊದಲ ಕನ್ನಡ ನಿಘಂಟನ್ನು ರಚಿಸಿದ ಕಿಟಲ್ ಕುಟುಂಬದವರನ್ನು ಭೇಟಿ ಮಾಡಿದ ನಾಡೋಜ ಡಾ.ಮಹೇಶ ಜೋಶಿ
ಬೆಂಗಳೂರು: ಜರ್ಮನಿಯ ಪ್ರವಾಸದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಕನ್ನಡದ ಮೊದಲ ನಿಘಂಟನ್ನು ರಚಿಸಿದ ಫರ್ಡಿನ್ಯಾಂಡ್ ಕಿಟಲ್ ಅವರ ಕುಟುಂಬದವರನ್ನು ಭೇಟಿ ಮಾಡಿ ಕಿಟಲ್ ನಿಘಂಟಿನ ಪ್ರತಿಯನ್ನು ಅವರಿಗೆ ನೀಡಿದರು. ಅವರು ಅತೀವ ಸಂತೋಷವನ್ನು ವ್ಯಕ್ತ ಪಡಿಸಿ ಕಿಟಲ್ ನಿಘಂಟನ್ನು ನೋಡಿದ್ದರೂ ಅದರ ಪ್ರತಿ ತಮ್ಮ ಬಳಿ ಇರಲಿಲ್ಲವೆಂದರು. ಜರ್ಮನಿಯಿಂದ ಬಂದು ಕ್ರಿ.ಶ 1894ರಲ್ಲಿಯೇ ಎಪ್ಪತ್ತು ಸಾವಿರ ಪದಗಳ ಅಧಿಕೃತವವೆನ್ನಿಸಿ ಕೊಂಡ ಮೊದಲ ನಿಘಂಟನ್ನು ರಚಿಸಿದ ಕಿಟಲ್ ಕುಟುಂಬ ವರ್ಗದವರಿಗೆ ನಿಘಂಟಿನ ಪ್ರತಿಯನ್ನು ನೀಡಿದ್ದು ಭಾವನಾತ್ಮಕವಾಗಿಯೂ ಧನ್ಯತೆಯನ್ನು ನೀಡಿದ ಸಂಗತಿ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.
ಪ್ರತಿಕ್ರಿಯೆ