ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದ ನವೀಕೃತ ಕಟ್ಟಡ ಬಾಡಿಗೆಗೆ ಸಿದ್ಧ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದ ನವೀಕೃತ ಕಟ್ಟಡವು ನವೆಂಬರ್ ತಿಂಗಳಿಂದ ʻಬಾಡಿಗೆ ಆಧಾರದಲ್ಲಿʼ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಿದೆ, ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ನಾಡೋಜ. ಡಾ.ಮಹೇಶ ಜೋಶಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ನವೀಕೃತ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರವು ಪಾರಂಪರಿಕ ಕಟ್ಟಡವಾಗಿದೆ. ಶ್ರೀಕೃಷ್ಣರಾಜ ಮಂದಿರವನ್ನು ಆಧುನಿಕ ಸ್ಪರ್ಶದೊಂದಿಗೆ ನೂತನವಾಗಿ ಅಭಿವೃದ್ಧಿಪಡಿಸಲಾಗಿದ್ದು, ಕಟ್ಟಡದಲ್ಲಿÀ, ಸಂಪೂರ್ಣ ಹವಾ ನಿಯಂತ್ರಣದ ವ್ಯವಸ್ಥೆ, ಸುಸಜ್ಜಿತವಾದ ಪ್ರಸಾದನ ಕೊಠಡಿ, ಸುರಕ್ಷಿತವಾದ ಗಣ್ಯರ ಕೊಠಡಿ, ಆಧುನಿಕ ವ್ಯವಸ್ಥೆಗಳನ್ನೊಳಗೊಂಡ ನೂತನ ವೇದಿಕೆ, ಅತ್ಯಾಧುನಿಕ ಧ್ವನಿ ವ್ಯವಸ್ಥೆ (ಸೌಂಡ್ ಸಿಸ್ಟಮ್) ಬೃಹತ್ ಎಲ್ ಇ ಡಿ ವಾಲ್ ಸ್ಕಿçÃನ್, ಆಧುನಿಕ ತಂತ್ರಜ್ಞಾನಗಳುಳ್ಳ ಬೆಳಕಿನ ವ್ಯವಸ್ಥೆ, ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಸುತ್ತ ಮುತ್ತಲಿನ ಪರಿಸರ, sಸುಸಜ್ಜಿತ ಶೌಚಾಲಯ ವ್ಯವಸ್ಥೆ ಹಾಗೂ ೧೨೮ ಸ್ಥಿರ ಸುಖಾಸೀನಗಳು, ೬ ಸೋಫಾ, ೩೦ ಕುರ್ಚಿ, ಒಟ್ಟಾರೆ ೧೬೪ ಖುರ್ಚಿ, ಇರುವ ಆಸನಗಳ ವ್ಯವಸ್ಥೆ, ನೀರಿನ ಬಾಟಲಿ ಇಡಲು ಪ್ರತ್ಯೇಕ ಸ್ಥಳಾವಕಾಶ, ಬರವಣಿಗೆಯ ಒತ್ತು ಅಳವಡಿಸಿದ ಆಸನಗಳು, ಸೇರಿದಂತೆ ವಿವಿಧ ಸೌಲಭ್ಯ ಮತ್ತು ಅನುಕೂಲತೆಗಳನ್ನು ಒಳಗೊಂಡ ಸಭಾಂಗಣವನ್ನು ನವೀಕರಣಗೊಳಿಸಲಾಗಿದೆ.
ಆಧುನಿಕ ವ್ಯವಸ್ಥೆಗಳನ್ನು ಹೊಂದಿರುವ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದ ದರವನ್ನು ಸಾಮಾನ್ಯ ಜನರಿಗೂ ಕೈಗೆಟುಕುವಂತೆ ನಿಗದಿಪಡಿಸಲಾಗಿದೆ. ಇದರ ಪ್ರಯೋಜನವನ್ನು ಕನ್ನಡಿಗರು ಪಡೆದು ಕೊಳ್ಳಬೇಕೆಂದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ. ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.
ಕನ್ನಡದ ಕಾರ್ಯಕ್ರಮಗಳು,ವಿಚಾರ ಸಂಕಿರಣ, ಉಪನ್ಯಾಸ, ಕವಿಗೋಷ್ಠಿ, ಗಣ್ಯರಿಗೆ ಶ್ರದ್ಧಾಂಜಲಿ, ಸುಗಮ ಸಂಗೀತ, ವಾರ್ಷಿಕೋತ್ಸವ, ಸನ್ಮಾನ, ಅಭಿನಂದನೆ, ಖಾಸಗಿ ಕಾರ್ಯಕ್ರಮಗಳು, ಶಾಲಾ ಹಾಗೂ ಕಾಲೇಜು ಕಾರ್ಯಕ್ರಮ, ನಾಟಕ ಹಾಗೂ ಇತ್ಯಾದಿ ಕಾರ್ಯಕ್ರಮಗಳಿಗೆ ಅನುಕೂಲವಾಗುಂತೆ ನವೀಕೃತ ಸಭಾಭವನವನ್ನು ಸಿದ್ಧಪಡಿಸಲಾಗಿದೆ. ಸುತ್ತ ಮುತ್ತಲಿನ ಪರಿಸರದಲ್ಲಿ ಇರುವ ಇತರೇ ಸಭಾಭವನಗಳಿಗಿಂತ ಸುಸಜ್ಜಿತವಾಗಿದ್ದು, ದರವನ್ನು ಸಹ ಕೈಗೆಟುಕುವಂತೆ ಇಟ್ಟಿರುವುದು ಕನ್ನಡದ ಕೈಂಕರ್ಯದ ಪ್ರತೀಕವಾಗಿದೆ ಎಂದು ನಾಡೋಜ. ಡಾ. ಮಹೇಶ ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಕ್ರಿಯೆ