sir_mirja_ismail

ಸರ್ ಮಿರ್ಜಾ ಇಸ್ಮಾಯಿಲ್ (೧೮೮೩ – ಜನವರಿ ೮, ೧೯೫೯), ಮೈಸೂರಿನ ದೀವನರು

 

ಮಿರ್ಜಾ ಇಸ್ಮಾಯಿಲ್ (೧೮೮೩ – ಜನವರಿ ೮, ೧೯೫೯) ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ, ಮೈಸೂರಿನ ದಿವಾನರಾಗಿದ್ದರು.. ಕಾಗದದ ಕಾರ್ಖಾನೆ , ಸಕ್ಕರೆ ಕಾರ್ಖಾನೆ, ಮೊದಲಾದ ಕಾರ್ಖಾನೆಗಳನ್ನು ಸ್ಥಾಪಿಸಲು ಕಾರಣರ‍್ತರಾದವರು. ವೃಂದಾವನ ಉದ್ಯಾನವನ್ನು ನರ‍್ಮಿಸಿದವರು ಮರ‍್ಜಾರವರು. ಸಂಸ್ಥಾನದ ಸಮೃದ್ಧಿ ಮತ್ತು ಸೊಬಗುಗಳಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಅವರು ಹಿಂದೂ ಮುಸ್ಲಿಮ್ ಸೌಹರ‍್ದತೆಗೂ ಕಾರಣರಾಗಿದ್ದರು.
ಮಿರ್ಜಾ ಇಸ್ಮಾಯಿಲ್ ಅವರು ಕನ್ನಡ ಸಾಹಿತ್ಯ ಪರಿಷತ್ತಿಗೆ ಕಟ್ಟಡ ನಿರ್ಮಾಣಕ್ಕೆ ನೀಡಿದ ನಿವೇಶನವು ಒಂದು ಬಯಲುಪ್ರದೇಶ. ಎದುರುಗಡೆ ಹಾರ್ಡಿಂಜ್ ರಸ್ತೆ. (ಈಗ ಪಂಪಮಹಾಕವಿರಸ್ತೆಯಾಗಿದೆ) ಅಕ್ಕಪಕ್ಕ ೨ ಹಾಗೂ ೩ನೇ ಮುಖ್ಯರಸ್ತೆ. ಹಿಂಭಾಗದಲ್ಲಿ ಎರಡು ಖಾಸಗಿ ಮನೆಗಳು. ಈ ಬಯಲಿನ ಅಂಚಿನಲ್ಲಿ ಆ ಎರಡೂ ಮನೆಗಳ ನಡುಭಾಗದಲ್ಲಿ ಮೂರು ದೊಡ್ಡ ಹೊಂಗೆಮರಗಳು. ಸಂಜೆಯ ಸೂರ‍್ಯನ ಬಿಸಿಲನ್ನು ತಡೆದು ಬಯಲಿಗೆ ನೆರಳೀಯುತ್ತಿದ್ದವು. ಭಾರತ ಸ್ವಾತಂತ್ರ್ಯ ಚಳುವಳಿಗೆ ಸಂಬಂಧಿಸಿದ ಎಲ್ಲ ಸಭೆಗಳೂ ಈ ಬಯಲಿನಲ್ಲಿ ನಡೆಯುತ್ತಿದ್ದವು. ಜನರು ಅದನ್ನು ಗಾಂಧೀಮೈದಾನ ಎಂದು ಕರೆಯುತ್ತಿದ್ದರು.
ಕೃಷ್ಣರಾಜಪರಿಷನ್ಮಂದಿರ ನಿರ್ಮಾಣವಾದಾಗ ಈಗಿನ ಸಭಾ ಮಂದಿರಕ್ಕೆ ಬದಲಾಗಿ ಎರಡು ಕೋಟೆಗಳನ್ನು ಕಟ್ಟಿರುವುದನ್ನು ಕಟ್ಟಡ ಏಳುವಾಗ ಆಗಾಗ ಬಂದು ನೋಡುತ್ತಿದ್ದ ಮಿರ್ಜಾ ಸಾಹೇಬರು ತಮ್ಮ ಗುರುಗಳಾದ ವೆಂಕಟನಾರಣಪ್ಪ ಅವರನ್ನು ಕಂಡು “ನಿಮಗೆ ಸಭೆ ಸಮಾರಂಭಗಳಿಗಾಗಿ ಒಂದು ಹಾಲ್ ಬೇಡವೇ? ಈ ಭಾಗವನ್ನು ಎರಡು ರೂಮುಗಳಾಗಿ ಒಡೆಯಬೇಡಿ. ಒಂದು ಹಾಲ್ ಮಾಡಿಕೊಳ್ಳಿ ಎಂದು ಬೋಧನೆ ಮಾಡಿ ಹಾಲ್ ವ್ಯವಸ್ಥೆ ಮಾಡಿದರು. ಅವರ ವಿವೇಕ ಹಾಗೂ ದೂರದೃಷ್ಟಿಯಿಂದ ಮಾಡಿದ ಈ ಕಾರ್ಯ ಪರಿಷತ್ತಿಗೆ ಅನುಕೂಲಕರವಾಯಿತು. ಕಾಲಕಾಲಕ್ಕೆ ಮೈಸೂರು ಸಂಸ್ಥಾನದಿಂದ ಧನಸಹಾಯ ತರಿಸಲು ಕಾರಣರಾದರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮುದ್ರಣವಾಗಿರುವ ಸರ್ ಮಿರ್ಜಾ ಇಸ್ಮಾಯಿಲ್ ಎಂಬ ಪುಸ್ತಕದಲ್ಲಿ ಇವರ ಕುರಿತು ವಿಸ್ತೃತ ಮಾಹಿತಿ ದೊರೆಯುತ್ತದೆ.