ಸಾಹಿತ್ಯ ಸಮ್ಮೇಳನ-೭೬ : ಗದಗ
ಫೆಬ್ರವರಿ ೨0೧0

ಅಧ್ಯಕ್ಷತೆ: ಗೀತಾ ನಾಗಭೂಷಣ

geetha-nagabhushan

೭೬ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಗೀತಾ ನಾಗಭೂಷಣ

ಕನ್ನಡದ ಹೆಸರಾಂತ ಲೇಖಕಿಯರಲ್ಲಿ ಒಬ್ಬರಾದ ಶ್ರೀಮತಿ ಗೀತಾ ನಾಗಭೂಷಣ ಅವರು ಗುಲ್ಬರ್ಗದ ಬಡ ಕುಟುಂಬದಲ್ಲಿ ಶಾಂತಪ್ಪ-ಶರಣಮ್ಮ ದಂಪತಿಗಳಿಗೆ ಮಗಳಾಗಿ ೨೫-೩-೧೯೪೨ರಲ್ಲಿ ಜನಿಸಿದರು. ಇವರು ಮೆಟ್ರಿಕ್ ಮುಗಿಸಿದ ಮೇಲೆ ಕೆಲವುಕಾಲ ಕಲೆಕ್ಟರ್ ಕಛೇರಿಯಲ್ಲಿ ಉದ್ಯೋಗ ಮಾಡಿ ಬೆಳಗಿನ ಶಾಲೆಯಲ್ಲಿ ಓದಿ ಪದವಿ ಪಡೆದು, ಸಂಜೆ ಕಾಲೇಜಿನಲ್ಲಿ ಓದಿ ಬಿಎಡ್ ಮತ್ತು ಎಂ.ಎ. ಪದವಿ ಗಳಿಸಿದರು.

ಓದುವಾಗಲೇ ಉದ್ಯೋಗ ಮಾಡುತ್ತಿದ್ದ ಇವರು ಎಂ.ಎ. ಪದವಿ ಗಳಿಸಿದ ನಂತರ ಶ್ರೀ ನಗರೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯೆಯಾಗಿ ೩0ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದರು.

‘ಬದುಕು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಇವರು ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ(೨00೨) ಕರ್ನಾಟಕ ರಾಜ್ಯ ಪ್ರಶಸ್ತಿ(೧೯೯೮), ನಾಡೋಜ ಪ್ರಶಸ್ತಿ(೨00೪), ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಪರಿಷತ್ತಿನಿಂದ ಮಲ್ಲಿಕಾ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಹೆಗ್ಗಳಿಕೆ ಇವರದು.

ಇವರು ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ.

ಹಸಿಮಾಂಸ ಮತ್ತು ಹದ್ದುಗಳು (ಕಾದಂಬರಿ), ಬದುಕು (ಕಾದಂಬರಿ), ಅವ್ವ ಮತ್ತು ಇತರ ಕಥೆಗಳು (ಕಥಾಸಂಗ್ರಹ), ಸಪ್ತವರ್ಣದ ಹಾಡು, ದುರಗಮುರಗಿಯವರ ಸಂಸ್ಕೃತಿ (ಸಂಶೋಧನೆ) ಜ್ವಲಂತ (ಕಥಾಸಂಗ್ರಹ) ಜೋಗಿಣಿ (ನಾಟಕ), ನನ್ನ ಚೆಲುವು ನಿನ್ನ ಒಲವು ಇತ್ಯಾದಿ.

ಕನ್ನಡ ಸಾಹಿತ್ಯ ಸಮ್ಮೇಳನ೭೬

ಅಧ್ಯಕ್ಷರು, ಗೀತಾ ನಾಗಭೂಷಣ

ದಿನಾಂಕ ೧೯,0,೨೧ ಫೆಬ್ರವರಿ ೨00

ಸ್ಥಳ : ಗದಗ

ಕರ್ನಾಟಕದ ಶರಣ ಪರಂಪರೆಯ  ಮಠಗಳ ನಡುವೆ ವೈಚಾರಿಕ ಮಠವೆಂದೇ ಕರೆಸಿಕೊಂಡಿರುವ ತೋಂಟದಾರ್ಯರ ಫೌಳಿಯವರೆಗೆ ಮಹಿಳೆಯೊಬ್ಬಳು ಸವೆಸಿದ ಸಾಹಿತ್ಯಿಕ ದಾರಿಯು ಕನ್ನಡ ಸಂಸ್ಕ್ಕೃತಿಯ ವೈಶಿಷ್ಟ್ಯವೆಂದೇ ನನಗೆ ಅನಿಸಿದೆ.  ಏಕೆಂದರೆ ಎರಡು ಸಾವಿರ ವರುಷಕ್ಕೂ ಮಿಕ್ಕ ಪರಂಪರೆ ಹೊಂದಿರುವ ಕನ್ನಡ ಸಾಹಿತ್ಯ ಹಿರಿಮೆ-ಗರಿಮೆಯನ್ನು ಎಷ್ಟು ಕೊಂಡಾಡಿದರೂ ಒಟ್ಟು ಸಾಹಿತ್ಯದಲ್ಲಿ ಮಹಿಳೆಯರ ಚಿತ್ರಣ ಮತ್ತು ಸಾಹಿತಿಯಾಗಿ ಮಹಿಳೆಯ ಪಾಲುದಾರಿಕೆ ನಗಣ್ಯವೇ ಸರಿ.

ಹತ್ತೊಂಬತ್ತು ವರ್ಷ ಅಂದರೆ ಹತ್ತಿರ ಹತ್ತಿರವೆಂದರೂ ಒಂದು ಶತಮಾನ ಗತಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ನಂಥಹ ಗೌರವಾನ್ವಿತ ಸಂಸ್ಥೆಯಲ್ಲಿ ಅದು ನಡೆಸಿಕೊಂಡು ಬಂದಿರುವ ಎಪ್ಪತ್ತಾರು ಸಮ್ಮೇಳನಗಳಲ್ಲಿ ಮಹಿಳೆಯರಿಗೆ ಸಂದ ಪಾಲು ಎಷ್ಟು? ಕೇವಲ ಮೂರು ಈ ಹೊತ್ತು ನಾನು ನಾಲ್ಕನೆಯವಳು.

ಸಂಘರ್ಷ ಮತ್ತು ಕನ್ನಡ ಸಾಹಿತ್ಯ

ಈವರೆಗೆ ನಡೆದು ಬಂದ ಬಹುತೇಕ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಒಟ್ಟು ಕನ್ನಡ ಸಾಹಿತ್ಯದ ಪರಂಪರೆ ಪ್ರಯೋಗ ಕುರಿತು ಸುರ್ದೀರ್ಘವಾಗಿ ಚರ್ಚಿಸಲಾಗಿದೆ. ಕೆಲವೊಮ್ಮೆಯಂತೂ  ತೀರ ಚರ್ವಿತ ಚರ್ವಣ ಎನ್ನುವಷ್ಟು ಬಾರಿ ಪ್ರಸ್ತಾಪಿಸಲಾಗಿದೆ. ನಾನಂತೂ ಅಖಂಡ ಕನ್ನಡ ಸಾಹಿತ್ಯವನ್ನು ಆಯಾ ಕಾಲಟ್ಟದ ಸೃಜನಶೀಲ ಸಂಘರ್ಷದ ಮೊತ್ತವಾಗಿಯೇ ಗ್ರಹಿಸುತ್ತೇನೆ.

Tag: Kannada Sahitya Sammelana 76, Geetha Nagabhushana,

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)