ಮಾನ್ಯ ಮುಖ್ಯಮಂತ್ರಿಗಳ ಯೋಗಾಸನ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಅಮಾನವೀಯತೆಯ ಟ್ರೋಲ್ ಗೆ ಕ.ಸಾ.ಪ. ಖಂಡನೆ – ನಾಡೋಜ ಡಾ. ಮಹೇಶ ಜೋಶಿ

ಮಾನ್ಯ ಮುಖ್ಯಮಂತ್ರಿಗಳ ಯೋಗಾಸನ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಅಮಾನವೀಯತೆಯ ಟ್ರೋಲ್ ಗೆ ಕ.ಸಾ.ಪ. ಖಂಡನೆ – ನಾಡೋಜ ಡಾ. ಮಹೇಶ ಜೋಶಿ

ಮೈಸೂರಿನಲ್ಲಿ ನಿನ್ನೆ (21-6-2022) ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಂಡು ಯೋಗಾಸನ ನಡೆಸಿದ್ದನ್ನು, ಕೆಲವು ವಿಕೃತ ಮನಸ್ಸುಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮೂಲಕ ಅಪಹಾಸ್ಯ ಮಾಡುತ್ತಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳು ಯೋಗ ದಿನಾಚರಣೆ ಪ್ರಯುಕ್ತ ಅವರ ಮೊಣಕಾಲು ನೋವಿನ ನಡುವೆಯೂ ಯೋಗಾಸನ ನಡೆಸುವ ಮೂಲಕ ಜಾಗೃತಿ ಮೂಡಿಸುವ ಹಾಗೂ ಪ್ರೇರಣೆದಾಯಕವಾದ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ. ಈ ಸಂದರ್ಭದ ಅವರ ವಿಡಿಯೋ ತುಣಕೊಂದನ್ನು ಅಪಹಾಸ್ಯದ ರೀತಿಯಲ್ಲಿ ಬಿಂಬಿಸುತ್ತಾ, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೊಳಿಸಿ, ಅದನ್ನು ವೈರಲ್ ಗೊಳಿಸುತ್ತಿರುವುದು ಅತ್ಯಂತ ಅಮಾನವೀಯ ಕೃತ್ಯವಾಗಿದೆ. ಯಾರು ಈ ಕುಕೃತ್ಯವನ್ನು ನಡೆಸುತ್ತಿದ್ದಾರೋ ಅವರ ಮನಸ್ಥಿತಿ ವಿಕೃತವಾಗಿದೆ ಎಂಬುದು ಇದನ್ನು ನೋಡಿದರೆ ತಿಳಿಯುತ್ತದೆ ಎಂದು ನಾಡೋಜ ಡಾ. ಮಹೇಶ ಜೋಶಿ ಅವರು ಖೇದ ವ್ಯಕ್ತಪಡಿಸಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳನ್ನು ಗೌರವಿಸದೇ, ಅವರನ್ನು ಅಪಹಾಸ್ಯಗೊಳಿಸಿರುವುದು ಖಂಡನಾರ್ಹವಾದುದ್ದು. ಇಂತಹ ವಿಕೃತ ಮನಸ್ಸಿನಿಂದ ಹೊರಬಂದು, ಸಮಾಜದಲ್ಲಿ ಸೌಜನ್ಯದಿಂದ, ಎಲ್ಲರನ್ನೂ, ಎಲ್ಲವನ್ನೂ ಗೌರವಿಸುವ ಮನೋಭಾವನೆಯನ್ನು ಹೊಂದಬೇಕು ಹಾಗೂ ಶ್ರಮವಹಿಸುವವರನ್ನು ಉತ್ತೇಜಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ಬಯಸುತ್ತದೆ ಎಂಬುದಾಗಿ ನಾಡೋಜ ಡಾ. ಮಹೇಶ ಜೋಶಿ ಅವರು ಆಶಿಸಿದ್ದಾರೆ.

ಶ್ರೀನಾಥ್ ಜೆ.
ಮಾಧ್ಯಮ ಸಲಹೆಗಾರರು
Press Note KSP

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)