ಚಿಂತನಾ ಗೋಷ್ಠಿ- ಮಾಧ್ಯಮ ಆಹ್ವಾನ

ಚಿಂತನಾ ಗೋಷ್ಠಿ- ಮಾಧ್ಯಮ ಆಹ್ವಾನ

ಕಸಾಪ ಚಿಂತನಾ ಗೋಷ್ಠಿ ಆಮಂತ್ರಣ-೧_1
ಕಸಾಪ ಚಿಂತನಾ ಗೋಷ್ಠಿ ಆಮಂತ್ರಣ-೨

ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ದಿನಾಂಕ ೧೨-೧೦-೨೦೨೨ರಂದು ಬುಧವಾರ ಬೆಳಗ್ಗೆ ೧೧.೦೦ ಗಂಟೆಗೆ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨’ ಜಾರಿಗೆ ತರುವ ಕುರಿತಂತೆ ಚರ್ಚಿಸಲು ನಾಡಿನ ಗಣ್ಯರನ್ನೊಳಗೊಂಡ “ಚಿಂತನಾ ಗೋಷ್ಠಿ” ಹಮ್ಮಿಕೊಳ್ಳಲಾಗಿದೆ.

ನ್ಯಾಯಮೂರ್ತಿ ಶ್ರೀ ಎಸ್.ಆರ್. ಬನ್ನೂರಮಠ ನೇತೃತ್ವದ ಕರ್ನಾಟಕ ಕಾನೂನು ಆಯೋಗವು ತನ್ನ ಐವತ್ತೇಳನೇ ವರದಿಯಲ್ಲಿ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨” ಅನ್ನು ಸಿದ್ಧಪಡಿಸಿ, ವರದಿಯ ಅನುಷ್ಠಾನಕ್ಕಾಗಿ ಅಗತ್ಯ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಈ ವಿಚಾರಗೋಷ್ಠಿಯಲ್ಲಿ *ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ. ಮಾಧುಸ್ವಾಮಿ, ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ಶ್ರೀ ವಿ ಸುನೀಲ್ ಕುಮಾರ್‌, ಮಾಜಿ ಕಾನೂನು ಸಚಿವ ಶ್ರೀ ಎಚ್‌.ಕೆ. ಪಾಟೀಲ, ಜ್ಞಾನಪೀಠ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ಹಿರಿಯ ಸಾಹಿತಿ ಡಾ. ಎಸ್‌.ಎಲ್‌. ಭೈರಪ್ಪ, ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ, ಕರ್ನಾಟಕ ಉಚ್ಚನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಶ್ರೀ ಅರಳಿ ನಾಗರಾಜ , ಶ್ರೀ ಎಚ್‌.ಎಸ್‌. ನಾಗಮೋಹನ್‌ದಾಸ್‌, ಪ್ರಮುಖ ಮಾಧ್ಯಮ ಸಂಸ್ಥೆಯ ಸಂಪಾದಕರು, ವಿಚಾರವಾದಿಗಳು, ಸಾಹಿತಿಗಳು, ಹೋರಟಗಾರರು ಸೇರಿದಂತೆ ವಿವಿಧ ಗಣ್ಯರು, ವಿಷಯ ತಜ್ಞರು* ಭಾಗವಹಿಸಿ ವಿಚಾರ ಮಂಡಿಸಲಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ ‘ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨’ ಜಾರಿಗೆ ತರುವ ಕುರಿತಂತೆ ಚರ್ಚಿಸಲು ನಾಡಿನ ಗಣ್ಯರನ್ನೊಳಗೊಂಡ “ಚಿಂತನಾ ಗೋಷ್ಠಿ”ಗೆ ಮಾಧ್ಯಮ ಪ್ರತಿನಿಧಿಗಳಿಗೆ, ಛಾಯಾಚಿತ್ರಗ್ರಾಹಕರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಆದರದ ಆಮಂತ್ರಣ ನೀಡಿದ್ದಾರೆ.

ಎಲ್ಲರ ಸಮಯಕ್ಕೆ ಗೌರವ ಕೊಟ್ಟು ನಿಗದಿತ ಸಮಯಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ತಮ್ಮ ವರದಿಗಾರರನ್ನು ಹಾಗೂ ಛಾಯಾಚಿತ್ರಗಾರರನ್ನು ೧೨-೧೦-೨೦೨೨ ರಂದು ಬುಧವಾರ ಬೆಳಗ್ಗೆ ೧೧.೦೦ ಗಂಟೆಗೆ ಕಳುಹಿಸಬೇಕಾಗಿ ವಿನಂತಿ.

ಶ್ರೀನಾಥ್‌ ಜೆ.
ಮಾಧ್ಯಮ ಸಲಹಾಗಾರರು
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
Ksapa-ಮಾಧ್ಯಮ ಆಹ್ವಾನ -11-10-2022

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)