ಶಿಕ್ಷಣ

ಸಾಹಿತ್ಯ ಪರೀಕ್ಷೆಗಳು

೧೯೪೦ನೇ ಇಸವಿಯಿಂದ ಪ್ರಾರಂಭವಾಗಿರುವ ಸಾಹಿತ್ಯ ಪರೀಕ್ಷೆಗಳು ಪರಿಷತ್ತಿನ ಜನಪ್ರಿಯ ಕಾರ್ಯ ಚಟುವಟಿಕೆಗಳಲ್ಲಿ ಒಂದು. ಕನ್ನಡ ಸಾಹಿತ್ಯ-ಸಂಸ್ಕೃತಿಯ ತಿಳುವಳಿಕೆ ನೀಡುವ ಕನ್ನಡ ಕಾವ, ಜಾಣ, ರತ್ನ ಪರೀಕ್ಷೆಗಳನ್ನು ಪ್ರತಿ ವರ್ಷ ನಡೆಸಿಕೊಂಡು ಬರುವುದರ ಜೊತೆಗೆ ಹೊಸದಾಗಿ ಕನ್ನಡ ಕಲಿಯುವ ಆಸಕ್ತರಿಗಾಗಿ ‘ಕನ್ನಡ ಪ್ರವೇಶ’ವೆಂಬ ಪರೀಕ್ಷೆಯನ್ನು ಏರ್ಪಡಿಸುತ್ತಿದೆ. ಪರೀಕ್ಷೆಗಳು ಸರ್ಕಾರದಿಂದ ಅಂಗೀಕಾರ ಪಡೆದಿರುತ್ತವೆ. ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಜನ ಸಾಹಿತ್ಯ ಪರೀಕ್ಷೆಗಳ ಪ್ರಯೋಜನ ಪಡೆದಿದ್ದಾರೆ.

ಜನ ಸಾಮಾನ್ಯರಲ್ಲಿ ಅದರಲ್ಲಿಯೂ ವಿಶೇಷವಾಗಿ ಕನ್ನಡ ಯುವಜನತೆಯಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಕುರಿತು ಆಸಕ್ತಿ ಮೂಡಿಸಲು ಆಗ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಬಿ.ಎಂ.ಶ್ರೀಯವರು ರೂಪಿಸಿದ ಮುಖ್ಯ ಯೋಜನೆ ಕನ್ನಡ ಸಾಹಿತ್ಯ ಪರೀಕ್ಷೆಗಳು. 1940ರ ಜೂನ್ ತಿಂಗಳಿನಿಂದ ‘ಕನ್ನಡ ಅಣುಗ’ ‘ಕನ್ನಡ ಕಾವ’ ‘ಕನ್ನಡ ಜಾಣ’ ಪರೀಕ್ಷೆಗಳು ಆರಂಭವಾದವು. 1948ರಲ್ಲಿ ‘ಅಣುಗ’ವನ್ನು ಕೈ ಬಿಡಲಾಯಿತು. 1966ರಲ್ಲಿ ‘ಕನ್ನಡ ರತ್ನ’ ಪರೀಕ್ಷೆ ಆರಂಭವಾಗಿದ್ದು 1992ರಲ್ಲಿ ‘ಕನ್ನಡ ಪ್ರವೇಶ’ ಆರಂಭವಾಯಿತು. ಈ ಎಲ್ಲಾ ಪರೀಕ್ಷೆಗಳು ಲಕ್ಷಾಂತರ ಕನ್ನಡಿಗರಲ್ಲಿ ಭಾಷೆ ಮತ್ತು ಸಾಹಿತ್ಯದ ಕುರಿತು ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದು ನಿರಂತರವಾಗಿ ನಡೆದು ಕೊಂಡು ಬರುತ್ತಿದೆ.

ಕನ್ನಡ ಸಾಹಿತ್ಯ ಪರಿಷತ್ತು ೨೦೨೪-೨೫ನೆಯ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ ಹಾಗೂ ರತ್ನ ಪರೀಕ್ಷೆಗಳನ್ನು ರಾಜ್ಯಾದ್ಯಂತ 18 ಕೇಂದ್ರದಲ್ಲಿ ದಿನಾಂಕ 07-02-2025 ರಿಂದ 09-02-2025ರ ವರೆಗೆ ಏಕಕಾಲದಲ್ಲಿ ನಡೆಸಲಾಗಿತ್ತು. ಪ್ರವೇಶ, ಕಾವ, ಜಾಣ ಹಾಗೂ ರತ್ನ ಪರೀಕ್ಷೆಗಳನ್ನು ತೆಗೆದುಕೊಂಡ ಒಟ್ಟು ಅಭ್ಯರ್ಥಿಗಳು ಸಂಖ್ಯೆ 1534

ಪ್ರವೇಶ ಪರೀಕ್ಷೆಯನ್ನು ತೆಗೆದುಕೊಂಡವರು ಒಟ್ಟು 610 ಅಭ್ಯರ್ಥಿಗಳು ಅದರಲ್ಲಿ ಪರೀಕ್ಷೆಗೆ ಹಾಜರಾದವರು 536 ಅಭ್ಯರ್ಥಿಗಳು, ಉತ್ತೀರ್ಣರಾದವರ ಸಂಖ್ಯೆ 457 ಶೇ. 85.26% ರಷ್ಟು ಫಲಿತಾಂಶ ಬಂದಿದ್ದು, ಸೌಜನ್ಯಾ ಅನಿಲಕುಮಾರ ಗುಣದಾಳ ಪ್ರಥಮ ರ್ಯಾಂ ಕ್, ಸಮರ್ಥ ಚಂ. ನಾಗನಗೌಡ್ರ, ದ್ವಿತೀಯ ರ್ಯಾಂ ಕ್ , ಸವಿತಾ ಉದ್ದಪ್ಪ ಪೋಟಿ ತೃತೀಯ ರ್ಯಾಂ ಕ್ ಪಡೆದಿರುತ್ತಾರೆ.

ಕಾವ ಪರೀಕ್ಷೆಯನ್ನು ತೆಗೆದುಕೊಂಡವರು ಒಟ್ಟು 791 ಅಭ್ಯರ್ಥಿಗಳು, ಅದರಲ್ಲಿ ಪರೀಕ್ಷೆಗೆ ಹಾಜರಾದವರು 655 ಅಭ್ಯರ್ಥಿಗಳು, ಉತ್ತೀರ್ಣರಾದವರ ಸಂಖ್ಯೆ 519 ಶೇ. 79.24% ರಷ್ಟು ಫಲಿತಾಂಶ ಬಂದಿದ್ದು, ಕೀರ್ತನಾ ಎಂ. ಪ್ರಥಮ ರ್ಯಾಂ ಕ್, ಛಾಯಾದೇವಿ ಎಂ. ದ್ವಿತೀಯ ರ್ಯಾಂ ಕ್, ಕೊಲಗಾನಿ ಹರಿಣಿ ತೃತೀಯ ರ್ಯಾಂ ಕ್ ಪಡೆದಿರುತ್ತಾರೆ.

ಜಾಣ ಪರೀಕ್ಷೆಯನ್ನು ತೆಗೆದುಕೊಂಡವರು ಒಟ್ಟು 45 ಅಭ್ಯರ್ಥಿಗಳು, ಅದರಲ್ಲಿ ಪರೀಕ್ಷೆಗೆ ಹಾಜರಾದವರು 37 ಅಭ್ಯರ್ಥಿಗಳು, ಉತ್ತೀರ್ಣರಾದವರ ಸಂಖ್ಯೆ 29 ಶೇ. 78.38 ರಷ್ಟು ಫಲಿತಾಂಶ ಬಂದಿದ್ದು, ಶ್ರೀನಿವಾಸ ಕೆ. ಪ್ರಥಮ ರ್ಯಾಂ ಕ್, ವೈಷ್ಣವಿ ಸಿದ್ದಪ್ಪ ಅಗಸಗಿ ದ್ವಿತೀಯ ರ್ಯಾಂ ಕ್ , ಪೂರ್ಣಿಮಾ ಪ್ರಕಾಶ ಮಾತನವರ ತೃತೀಯ ರ್ಯಾಂ ಕ್ ಪಡೆದಿರುತ್ತಾರೆ.

ರತ್ನ ಪರೀಕ್ಷೆಯನ್ನು ತೆಗೆದುಕೊಂಡವರು ಒಟ್ಟು 88 ಅಭ್ಯರ್ಥಿಗಳು, ಪರೀಕ್ಷೆಗೆ ಹಾಜರಾದವರು 62 ಅಭ್ಯರ್ಥಿಗಳು, ಉತ್ತೀರ್ಣರಾದವರ ಸಂಖ್ಯೆ 44 ಶೇ. 70.97 ರಷ್ಟು ಫಲಿತಾಂಶ ಬಂದಿದ್ದು, ಇಸ್ಮಾಯಿಲ್ ಸಾಬ್ ಐರಣಿ ಪ್ರಥಮ ರ್ಯಾಂ ಕ್, ರಾಜು ಎಸ್. ದ್ವಿತೀಯ ರ್ಯಾಂ ಕ್ , ರಿಯೋನಾ ಬೆನಡಿಕ್ಚ ಪಿಂಟೊ ತೃತೀಯ ರ್ಯಾಂ ಕ್ ಪಡೆದಿರುತ್ತಾರೆ.

೨೦೨೪-೨೫ನೇ ಸಾಲಿನ ಸಾಹಿತ್ಯ ಪರೀಕ್ಷೆಗಳ ಫಲಿತಾಂಶ

೨೦೨೪-೨೫ನೇ ಸಾಹಿತ್ಯ ಪರೀಕ್ಷೆಗಳ ಅಂಕಪಟ್ಟಿ ವಿವರ

೨೦೨೩-೨೪ನೇ ಸಾಲಿನ ಸಾಹಿತ್ಯ ಪರೀಕ್ಷೆಗಳ ಪ್ರವೇಶ ಪತ್ರಗಳ ವಿವರ :

ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳು

೨೦೨೨ – ೨೩ನೇ ಸಾಲಿನ ಪ್ರಶ್ನೆ ಪತ್ರಿಕೆಗಳು
೨೦೧೯-೨೦ನೇ ಸಾಲಿನ ಪ್ರಶ್ನೆ ಪತ್ರಿಕೆಗಳು
೨೦೧೮-೧೯ನೇ ಸಾಲಿನ ಪ್ರಶ್ನೆ ಪತ್ರಿಕೆಗಳು
೨೦೧೫-೧೬ನೇ ಸಾಲಿನ ಪ್ರಶ್ನೆ ಪತ್ರಿಕೆಗಳು
೨೦೧೪ -೨೦೧೫ ನೇ ಸಾಲಿನ ಪ್ರಶ್ನೆ ಪತ್ರಿಕೆಗಳು
೨೦೧೩ -೨೦೧೪ ನೇ ಸಾಲಿನ ಪ್ರಶ್ನೆ ಪತ್ರಿಕೆಗಳು

ಸಂಶೋಧನೆ

ಸಂಶೋಧನೆಯ ವಿಧಿ -ವಿಧಾನಗಳು, ಪ್ರಾತ್ಯಕ್ಷಿಕೆ, ತರಬೇತಿ ಮುಂತಾದ ಕಾರ್ಯಕ್ರಮಗಳನ್ನು ಶಾಸನ ತರಗತಿಗಳ ಮೂಲಕ ಹಮ್ಮಿಕೊಂಡಿದೆ. ಇದಕ್ಕಾಗಿ ಸಂಶೋಧನಾ ಕೇಂದ್ರವನ್ನು ಪ್ರತ್ಯೇಕವಾಗಿ ಅಭಿವೃದ್ಧಿ ಗೊಳಿಸಲಾಗುತ್ತಿದೆ. ಸಂಶೋಧನಾಸಕ್ತರಿಗೆ ಮಾರ್ಗದರ್ಶನ ಕ್ಕಾಗಿ ವಿಶೇಷ ತರಬೇತಿ ಶಿಬಿರಗಳನ್ನು ಏರ್ಪಡಿಸ ಲಾಗುತ್ತಿದೆ. ಪ್ರಾಚೀನವಾದ ತಾಡೋಲೆಗಳ, ಕೈಬರಹದ ಅಮೂಲ್ಯ ಭಂಡಾರವನ್ನು ಪರಿಷತ್ತು ಹೊಂದಿದೆ. ಇವುಗಳು ಕೆಡದಂತೆ ವೈಜ್ಞಾನಿಕವಾಗಿ ಸಂರಕ್ಷಿಸಿಡಲಾಗಿದೆ. ಇವುಗಳ ಸಂಪಾದನೆ ಕಾರ್ಯ ಕೈಗೊಳ್ಳಲಾಗುತ್ತಿದೆ.

ದಕ್ಷಿಣ ದ್ರಾವಿಡ ಭಾಷಾ ಜ್ಞಾತಿ ಪದಕೋಶ

ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಲಿ ಎಂಬ ದೃಷ್ಟಿಯಿಂದ ಕನ್ನಡ ಸಾಹಿತ್ಯ ಪರಿಷತ್ತು “ದಕ್ಷಿಣ ದ್ರಾವಿಡ ಜ್ಞಾತಿ ಪದಕೋಶವನ್ನು” ಸಿದ್ಧಪಡಿಸಬೇಕೆಂದು ದಿನಾಂಕ ೨೦-೦೪-೨೦೧೧ರಂದು ನಡೆದ ತಜ್ಞರ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಡಾ. ಹಂಪ ನಾಗರಾಜಯ್ಯ, ಪ್ರೊ. ಎನ್. ಬಸವರಾಧ್ಯ, ಪ್ರೊ. ಎ.ವಿ. ನಾವಡ, ಪ್ರೊ. ಕಾರ್ಲೋಸ, ಪ್ರೊ. ಜಿ.ಎಸ್. ಮೋಹನ್, ಪ್ರೊ. ಮೋಹನ ಕುಂಟ್ಯಾರ, ಪ್ರೊ. ಕಷ್ಣಭಟ್ಟ ಅವರುಗಳು ಸದಸ್ಯರಾಗಿರುವ ಈ ಸಮಿತಿಯು, ಕನ್ನಡ ಭಾಷೆಯ ಜೊತೆಗೆ ಸುತ್ತಮುತ್ತಲ ದ್ರಾವಿಡ ಭಾಷೆಗಳಾದ(ಲಿಪಿ ಇರುವ) ತೆಲುಗು, ತಮಿಳು, ಮಲೆಯಾಳಂ ಅಲ್ಲದೆ ಕನ್ನಡದ ಉಪಭಾಷೆಗಳಾದ ತುಳು, ಕೊಡವ ಭಾಷೆಗಳನ್ನೊಳಗೊಂಡ ಜ್ಞಾತಿ ಪದಕೋಶವನ್ನು ಸಿದ್ಧಪಡಿಸಲು ನಿರ್ಧರಿಸಿತು. ಸಾಧ್ಯವಾದ ಕಡೆ ಹವ್ಯಕ ಭಾಷೆಯನ್ನೂಬಳಸಿಕೊಳ್ಳಲಾಗುವುದು. ಈಗಾಗಲೇ ಸಿದ್ಧತಾ ಕಾರ್ಯವನ್ನು ಆರಂಭಿಸಲಾಗಿದ್ದು, ಇನ್ನು ಆರು ತಿಂಗಳಲ್ಲಿ ಪದಕೋಶವನ್ನು ಪ್ರಕಟಿಸಿ ಕನ್ನಡಿಗರ ಕೈಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)