ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ, ಕನ್ನಡ ಭಾಷೆಯ, ಸಂಸ್ಕೃತಿಯ, ಪರಂಪರೆಯ, ಎಲ್ಲಕ್ಕಿಂತ ಹೆಚ್ಚಿನದಾಗಿ, “ನಮ್ಮತನದ” ಅಂದರೆ “ಕನ್ನಡದ ಅಸ್ಮಿತೆಯ” ವಾಸ್ತವಿಕ ಚಿತ್ರಣವನ್ನು, ಮಾನ್ಯ ಉಚ್ಚ ಕರ್ನಾಟಕ ನ್ಯಾಯಾಲಯದಲ್ಲಿ ನೀಡುವ ಸಂದರ್ಭದಲ್ಲಿ, ತಮ್ಮ ಅಮೂಲ್ಯವಾದ ಬೆಂಬಲವನ್ನು , ಎಲ್ಲ ಮಾಧ್ಯಮಗಳ ಮುಖಾಂತರ, ಅಂದರೆ ಸಾಮಾಜಿಕ ಜಾಲತಾಣ, ಇಮೇಲ್, ಲಿಖಿತ ರೂಪ, ಮುಂತಾದವುಗಳ ಮುಖಾಂತರ ತಿಳಿಸಲು, ಏಳು ಕೋಟಿ ಕನ್ನಡಿಗರನ್ನು ಪ್ರತಿನಿಧಿಸುವ ಸಂಸ್ಥೆಯಾದ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ತಮ್ಮನ್ನು ಕೋರುತ್ತೇನೆ.
WhatsApp +91 94484 90240
Email :nadojamj@gmail.com
ವಿಶೇಷ ಮನವಿ.
ತಮಗೆ ಪರಿಚಯವಿರುವ, ಯಾವುದೇ ಭೌಗೋಳಿಕ ಹಾಗೂ ಆಡಳಿತಾತ್ಮಕ ಗಡಿ ಇಲ್ಲದೆ, ಎಲ್ಲಾ ಕನ್ನಡದ ಅಭಿಮಾನಿಗಳಿಗೆ ಹಾಗೂ ಕನ್ನಡ ಸಂಘ ಸಂಸ್ಥೆಗಳಿಗೆ ಈ ವಿಷಯ ತಿಳಿಸಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಬೆಂಬಲ ನೀಡಲು, ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ,ತಾವು ಬೆಂಬಲ ಪಡೆಯಲು ತ ಮಗೆ ಸಂಪೂರ್ಣ ಸ್ವಾತಂತ್ರವಿರುತ್ತದೆ ಹಾಗೂ ಈ ಸಂಬಂಧವಾಗಿ ತಾವು ವಹಿಸುವ ಶ್ರಮಕ್ಕೆ,ಕನ್ನಡ ಸಾಹಿತ್ಯ ಪರಿಷತ್ತು ಗೌರವವನ್ನು ಸೂಚಿಸುತ್ತದೆ ಎಂಬುದನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ತಿಳಿಸುತ್ತಿದ್ದೇನೆ.
ಹಾಗೂ ಈ ಸಂಬಂಧವಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೆ ತಮ್ಮ ಮೂಲಕ ದೊರೆತ ಬೆಂಬಲದ ಮಾಹಿತಿಯನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ತಿಳಿಸಲು ಕನ್ನಡ ಸಾಹಿತ್ಯ ಪರಿಷತ್ತಿಗೆ ಹೆಮ್ಮೆ ಎನಿಸುತ್ತದೆ.
ಪ್ರತಿಕ್ರಿಯೆ