ಕನ್ನಡ ಸಾಹಿತ್ಯ ಪರಿಷತ್ತು

ಸಾಹಿತ್ಯ ಪರೀಕ್ಷೆಗಳು

ಮೈಸೂರು ಮಹಾರಾಜರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪೋಷಣೆಯೊಂದಿಗೆ, ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ಸರ್ ಮಿರ್ಜಾ ಇಸ್ಮಾಯಿಲ್ ಅವರ ಸಹಕಾರದೊಂದಿಗೆ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತು ೧೧೦ ವರ್ಷಗಳ ಸುದೀರ್ಘ ಹಾಗೂ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನಪದ ಇವುಗಳ ಜೊತೆಗೆ ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆಯ ಜವಾಬ್ದಾರಿಯನ್ನು ಹೊಂದಿರುವ ಪರಿಷತ್ತು ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆ ಹಾಗೂ ಎಲ್ಲ ಕನ್ನಡ ಸಂಘ-ಸAಸ್ಥೆಗಳಿಗೆ ಮಾತೃಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಪರಿಷತ್ತು ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಸೇವೆ ಸಲ್ಲಿಸುತ್ತಿರುವುದರ ಜೊತೆಗೆ ಶೈಕ್ಷಣಿಕವಾಗಿಯೂ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡುತ್ತಾ ಬಂದಿದೆ.
ಜನ ಸಾಮಾನ್ಯರಲ್ಲಿ ಅದರಲ್ಲಿಯೂ ವಿಶೇಷವಾಗಿ ಕನ್ನಡ ಯುವಜನತೆಯಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಕುರಿತು ಆಸಕ್ತಿ ಮೂಡಿಸಲು ಆಗ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಬಿ.ಎಂ.ಶ್ರೀಯವರು ರೂಪಿಸಿದ ಮುಖ್ಯ ಯೋಜನೆ ಕನ್ನಡ ಸಾಹಿತ್ಯ ಪರೀಕ್ಷೆಗಳು.
೧೯೪೦ರ ಜೂನ್ ತಿಂಗಳಿನಿAದ ‘ಕನ್ನಡ ಅಣುಗ’ ‘ಕನ್ನಡ ಕಾವ’ ‘ಕನ್ನಡ ಜಾಣ’ ಪರೀಕ್ಷೆಗಳು ಆರಂಭವಾದವು. ೧೯೪೮ರಲ್ಲಿ ‘ಅಣುಗ’ವನ್ನು ಕೈ ಬಿಡಲಾಯಿತು. ೧೯೬೬ರಲ್ಲಿ ‘ಕನ್ನಡ ರತ್ನ’ ಪರೀಕ್ಷೆ ಆರಂಭವಾಗಿದ್ದು ೧೯೯೨ರಲ್ಲಿ ‘ಕನ್ನಡ ಪ್ರವೇಶ’ ಆರಂಭವಾಯಿತು. ಈ ಎಲ್ಲಾ ಪರೀಕ್ಷೆಗಳು ಲಕ್ಷಾಂತರ ಕನ್ನಡಿಗರಲ್ಲಿ ಭಾಷೆ ಮತ್ತು ಸಾಹಿತ್ಯದ ಕುರಿತು ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದು ನಿರಂತರವಾಗಿ ನಡೆದು ಕೊಂಡು ಬರುತ್ತಿದೆ.
ಕನ್ನಡ ಯುವ ಜನತೆಯಲ್ಲಿ ಕನ್ನಡ ಭಾಷಾ ಸಾಹಿತ್ಯ ಅಧ್ಯಯನದ ಬಗೆಗೆ ಆಸಕ್ತಿಯನ್ನು ಮೂಡಿಸಲು ಹಾಗೂ ಕನ್ನಡ ವಿದ್ಯಾಭ್ಯಾಸದಲ್ಲಿಯ ಕೊರತೆಯನ್ನು ನೀಗಿಸಲು ಆಚಾರ್ಯ ಬಿ.ಎಂ.ಶ್ರೀ ಅವರು ರೂಪಿಸಿ ಪ್ರಾರಂಭಿಸಿದ ಮುಖ್ಯ ಯೋಜನೆ ಕನ್ನಡ ಕನ್ನಡ ಸಾಹಿತ್ಯ ಪರೀಕ್ಷೆಗಳಿಗೆ ೮೦ ವರ್ಷಗಳ ಇತಿಹಾಸವಿದೆ. ಅಂದಿನಿAದ ಇಂದಿನವರೆಗೂ ಪರೀಕ್ಷೆಗಳ ಸ್ವರೂಪದಲ್ಲಿ ಸ್ವಲ್ಪ ಬದಲಾವಣೆಯೊಂದಿಗೆ ನಿಯಮಾನುಸಾರ ವರ್ಷಕ್ಕೊಮ್ಮೆ ನಡೆದುಕೊಂಡು ಬರುತ್ತಿದೆ.  ಆಸಕ್ತರ ಕನ್ನಡ ಭಾಷಾ ಜ್ಞಾನವನ್ನು ಬೆಳೆಸುವ ನಿಟ್ಟಿನಲ್ಲಿ ಮತ್ತು ಸಾಹಿತ್ಯಾಸಕ್ತಿಯನ್ನು ಹೆಚ್ಚಿಸುವ ಆಶಯದಿಂದ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. 
ತಜ್ಞರ ಸಮಿತಿಯನ್ನೊಳಗೊಂಡ ಪಠ್ಯಕ್ರಮ, ಸಾಹಿತ್ಯ ಪರೀಕ್ಷೆಗಳ ಪಾರದರ್ಶಕತೆ, ಯಾವುದೇ ಅಕ್ರಮಗಳಿಗೂ ಅವಕಾಶವಿಲ್ಲದಂತೆ ನಡೆಯುವ ಸಾಹಿತ್ಯ ಪರೀಕ್ಷೆಗಳಲ್ಲಿ ತೇರ್ಗಡೆಯಾದರೆ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಭಾಷಾ ಪರೀಕ್ಷೆಯಿಂದ ವಿನಾಯಿತಿ ದೊರೆಯುತ್ತದೆ. ಅಲ್ಲದೇ ಪದವೀಧರರಾಗಿದ್ದು ಕನ್ನಡ ‘ರತ್ನ’ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ (No. E. 15-1053-236/57-58, dated 29th June 1966., Reference : Letter No. 1950/1-10-1965 from the Parishat, The ‘Ratna’ Examination conducted by the Parishat, Bangalore, is recognised) ಬೆಂಗಳೂರು ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯಗಳು ಕನ್ನಡ ಎಂ.ಎ.ಗೆ ಪ್ರವೇಶಾವಕಾಶ ಕಲ್ಪಿಸಿವೆ.

೨೦೨೪-೨೫ನೇ ಸಾಲಿನ ಸಾಹಿತ್ಯ ಪರೀಕ್ಷೆಗಳ ಫಲಿತಾಂಶ

೨೦೨೪-೨೫ನೇ ಸಾಹಿತ್ಯ ಪರೀಕ್ಷೆಗಳ ಅಂಕಪಟ್ಟಿ ವಿವರ

೨೦೨೩-೨೪ನೇ ಸಾಲಿನ ಸಾಹಿತ್ಯ ಪರೀಕ್ಷೆಗಳ ಪ್ರವೇಶ ಪತ್ರಗಳ ವಿವರ :

೧.ಕನ್ನಡ ಜಾಣ

೨. ಕನ್ನಡ ರತ್ನ

೩. ಕನ್ನಡ ಪ್ರವೇಶ

೪. ಕನ್ನಡ ಕಾವ

ಶಾಸನಶಾಸ್ತ್ರ ಡಿಪ್ಲೊಮಾ ಪರೀಕ್ಷೆಗಳ ನಿಯಾಮವಳಿ ಹಾಗು ಪಠ್ಯಕ್ರಮ ೨೦೨೩-೨೪ : ಡೌನ್ಲೋಡ್ ಮಾಡಿ

ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಪರೀಕ್ಷೆಗಳ ನಿಯಾಮವಳಿ 2023-24 : ಡೌನ್ಲೋಡ್ ಮಾಡಿ

ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳು

೨೦೨೨ – ೨೩ನೇ ಸಾಲಿನ ಪ್ರಶ್ನೆ ಪತ್ರಿಕೆಗಳು

ಕನ್ನಡ ಪ್ರವೇಶ ಪರೀಕ್ಷೆ : ೨೦೨೨ – ೨೩

೨೦೧೯-೨೦ನೇ ಸಾಲಿನ ಪ್ರಶ್ನೆ ಪತ್ರಿಕೆಗಳು

ಕನ್ನಡ ಜಾಣ ಪರೀಕ್ಷೆ : ೨೦೧೯-೨೦

ಕನ್ನಡ ಕಾವ ಪರೀಕ್ಷೆ : ೨೦೧೯-೨೦

ಕನ್ನಡ ಪ್ರವೇಶ ಪರೀಕ್ಷೆ : ೨೦೧೯-೨೦

೨೦೧೮-೧೯ನೇ ಸಾಲಿನ ಪ್ರಶ್ನೆ ಪತ್ರಿಕೆಗಳು

ಕನ್ನಡ ಜಾಣ ಪರೀಕ್ಷೆ – ೨೦೧೮

ಕನ್ನಡ ಕಾವ ಪರೀಕ್ಷೆ – ೨೦೧೮

ಕನ್ನಡ ಪ್ರವೇಶ ಪರೀಕ್ಷೆ – ೨೦೧೮

ಕನ್ನಡ ರತ್ನ ಪರೀಕ್ಷೆ – ೨೦೧೮

೨೦೧೫-೧೬ನೇ ಸಾಲಿನ ಪ್ರಶ್ನೆ ಪತ್ರಿಕೆಗಳು

೨೦೧೪ -೨೦೧೫ ನೇ ಸಾಲಿನ ಪ್ರಶ್ನೆ ಪತ್ರಿಕೆಗಳು

೨೦೧೩ -೨೦೧೪ ನೇ ಸಾಲಿನ ಪ್ರಶ್ನೆ ಪತ್ರಿಕೆಗಳು

ಸಂಶೋಧನೆ

ಸಂಶೋಧನೆಯ ವಿಧಿ -ವಿಧಾನಗಳು, ಪ್ರಾತ್ಯಕ್ಷಿಕೆ, ತರಬೇತಿ ಮುಂತಾದ ಕಾರ್ಯಕ್ರಮಗಳನ್ನು ಶಾಸನ ತರಗತಿಗಳ ಮೂಲಕ ಹಮ್ಮಿಕೊಂಡಿದೆ. ಇದಕ್ಕಾಗಿ ಸಂಶೋಧನಾ ಕೇಂದ್ರವನ್ನು ಪ್ರತ್ಯೇಕವಾಗಿ ಅಭಿವೃದ್ಧಿ ಗೊಳಿಸಲಾಗುತ್ತಿದೆ. ಸಂಶೋಧನಾಸಕ್ತರಿಗೆ ಮಾರ್ಗದರ್ಶನ ಕ್ಕಾಗಿ ವಿಶೇಷ ತರಬೇತಿ ಶಿಬಿರಗಳನ್ನು ಏರ್ಪಡಿಸ ಲಾಗುತ್ತಿದೆ. ಪ್ರಾಚೀನವಾದ ತಾಡೋಲೆಗಳ, ಕೈಬರಹದ ಅಮೂಲ್ಯ ಭಂಡಾರವನ್ನು ಪರಿಷತ್ತು ಹೊಂದಿದೆ. ಇವುಗಳು ಕೆಡದಂತೆ ವೈಜ್ಞಾನಿಕವಾಗಿ ಸಂರಕ್ಷಿಸಿಡಲಾಗಿದೆ. ಇವುಗಳ ಸಂಪಾದನೆ ಕಾರ್ಯ ಕೈಗೊಳ್ಳಲಾಗುತ್ತಿದೆ.

ದಕ್ಷಿಣ ದ್ರಾವಿಡ ಭಾಷಾ ಜ್ಞಾತಿ ಪದಕೋಶ

ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಲಿ ಎಂಬ ದೃಷ್ಟಿಯಿಂದ ಕನ್ನಡ ಸಾಹಿತ್ಯ ಪರಿಷತ್ತು “ದಕ್ಷಿಣ ದ್ರಾವಿಡ ಜ್ಞಾತಿ ಪದಕೋಶವನ್ನು” ಸಿದ್ಧಪಡಿಸಬೇಕೆಂದು ದಿನಾಂಕ ೨೦-೦೪-೨೦೧೧ರಂದು ನಡೆದ ತಜ್ಞರ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಡಾ. ಹಂಪ ನಾಗರಾಜಯ್ಯ, ಪ್ರೊ. ಎನ್. ಬಸವರಾಧ್ಯ, ಪ್ರೊ. ಎ.ವಿ. ನಾವಡ, ಪ್ರೊ. ಕಾರ್ಲೋಸ, ಪ್ರೊ. ಜಿ.ಎಸ್. ಮೋಹನ್, ಪ್ರೊ. ಮೋಹನ ಕುಂಟ್ಯಾರ, ಪ್ರೊ. ಕಷ್ಣಭಟ್ಟ ಅವರುಗಳು ಸದಸ್ಯರಾಗಿರುವ ಈ ಸಮಿತಿಯು, ಕನ್ನಡ ಭಾಷೆಯ ಜೊತೆಗೆ ಸುತ್ತಮುತ್ತಲ ದ್ರಾವಿಡ ಭಾಷೆಗಳಾದ(ಲಿಪಿ ಇರುವ) ತೆಲುಗು, ತಮಿಳು, ಮಲೆಯಾಳಂ ಅಲ್ಲದೆ ಕನ್ನಡದ ಉಪಭಾಷೆಗಳಾದ ತುಳು, ಕೊಡವ ಭಾಷೆಗಳನ್ನೊಳಗೊಂಡ ಜ್ಞಾತಿ ಪದಕೋಶವನ್ನು ಸಿದ್ಧಪಡಿಸಲು ನಿರ್ಧರಿಸಿತು. ಸಾಧ್ಯವಾದ ಕಡೆ ಹವ್ಯಕ ಭಾಷೆಯನ್ನೂಬಳಸಿಕೊಳ್ಳಲಾಗುವುದು. ಈಗಾಗಲೇ ಸಿದ್ಧತಾ ಕಾರ್ಯವನ್ನು ಆರಂಭಿಸಲಾಗಿದ್ದು, ಇನ್ನು ಆರು ತಿಂಗಳಲ್ಲಿ ಪದಕೋಶವನ್ನು ಪ್ರಕಟಿಸಿ ಕನ್ನಡಿಗರ ಕೈಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

Scroll to Top