ಕನ್ನಡ ಸಾಹಿತ್ಯ ಪರಿಷತ್ತು

ನಾಡೋಜ ಡಾ ಮಹೇಶ ಜೋಶಿ ಅಧ್ಯಕ್ಷರುಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಆಜೀವ ಸದಸ್ಯರು ಹಾಗೂ ಸಮಸ್ತ ಕನ್ನಡಿಗರ ಪರವಾಗಿ.  

ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ, ಕನ್ನಡ ಭಾಷೆಯ, ಸಂಸ್ಕೃತಿಯ, ಪರಂಪರೆಯ, ಎಲ್ಲಕ್ಕಿಂತ ಹೆಚ್ಚಿನದಾಗಿ, “ನಮ್ಮತನದ” ಅಂದರೆ “ಕನ್ನಡದ ಅಸ್ಮಿತೆಯ” ವಾಸ್ತವಿಕ ಚಿತ್ರಣವನ್ನು, ಮಾನ್ಯ ಉಚ್ಚ ಕರ್ನಾಟಕ ನ್ಯಾಯಾಲಯದಲ್ಲಿ ನೀಡುವ ಸಂದರ್ಭದಲ್ಲಿ, ತಮ್ಮ ಅಮೂಲ್ಯವಾದ ಬೆಂಬಲವನ್ನು , ಎಲ್ಲ ಮಾಧ್ಯಮಗಳ ಮುಖಾಂತರ, ಅಂದರೆ ಸಾಮಾಜಿಕ ಜಾಲತಾಣ, ಇಮೇಲ್, ಲಿಖಿತ ರೂಪ, ಮುಂತಾದವುಗಳ ಮುಖಾಂತರ ತಿಳಿಸಲು, ಏಳು ಕೋಟಿ ಕನ್ನಡಿಗರನ್ನು ಪ್ರತಿನಿಧಿಸುವ ಸಂಸ್ಥೆಯಾದ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ತಮ್ಮನ್ನು ಕೋರುತ್ತೇನೆ.

WhatsApp +91 94484 90240

Email: nadojamj@gmail.com

ವಿಶೇಷ ಮನವಿ.

ತಮಗೆ ಪರಿಚಯವಿರುವ, ಯಾವುದೇ ಭೌಗೋಳಿಕ ಹಾಗೂ ಆಡಳಿತಾತ್ಮಕ ಗಡಿ ಇಲ್ಲದೆ, ಎಲ್ಲಾ ಕನ್ನಡದ ಅಭಿಮಾನಿಗಳಿಗೆ ಹಾಗೂ ಕನ್ನಡ ಸಂಘ ಸಂಸ್ಥೆಗಳಿಗೆ ಈ ವಿಷಯ ತಿಳಿಸಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಬೆಂಬಲ ನೀಡಲು,  ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ,ತಾವು ಬೆಂಬಲ ಪಡೆಯಲು ತ ಮಗೆ ಸಂಪೂರ್ಣ ಸ್ವಾತಂತ್ರವಿರುತ್ತದೆ ಹಾಗೂ ಈ ಸಂಬಂಧವಾಗಿ ತಾವು ವಹಿಸುವ ಶ್ರಮಕ್ಕೆ,ಕನ್ನಡ ಸಾಹಿತ್ಯ ಪರಿಷತ್ತು ಗೌರವವನ್ನು ಸೂಚಿಸುತ್ತದೆ ಎಂಬುದನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ತಿಳಿಸುತ್ತಿದ್ದೇನೆ. ಹಾಗೂ ಈ ಸಂಬಂಧವಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೆ ತಮ್ಮ  ಮೂಲಕ ದೊರೆತ ಬೆಂಬಲದ ಮಾಹಿತಿಯನ್ನು  ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ತಿಳಿಸಲು ಕನ್ನಡ ಸಾಹಿತ್ಯ ಪರಿಷತ್ತಿಗೆ ಹೆಮ್ಮೆ ಎನಿಸುತ್ತದೆ.

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪ್ರಕಟ ಮಾಡುವುದಿಲ್ಲ.

Scroll to Top