ಸಾಹಿತ್ಯ ಸಮ್ಮೇಳನ-೭೨ : ಬೀದರ
ಜನವರಿ ೨00೬

೭೨ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಶಾಂತರಸ ಹೆಂಬೇರಾಳು ಕಾವ್ಯ-ಕಥೆ-ಕಾದಂಬರಿ-ಸಂಶೋಧನೆ-ಅನುವಾದ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಶಾಂತಯ್ಯ (ಹೆಂಬೇರಾಳು ಶಾಂತರಸರು) ನಿಜನಾಮ, (ಶಾಂತರಸ ಕಾವ್ಯನಾಮ) ಚೆನ್ನಬಸವಯ್ಯ-ಸಿದ್ಧಲಿಂಗಮ್ಮ ದಂಪತಿಗಳಿಗೆ ೭-೪-೧೯೨೪ರಲ್ಲಿ ಜನಿಸಿದರು. ಬಾಲ್ಯದ ವಿದ್ಯಾಭ್ಯಾಸ ಉರ್ದು ಮಾಧ್ಯಮದಲ್ಲಿ ಸಿರಿವಾರ, ಮುಷ್ಟೂರು, ಗುಲ್ಬರ್ಗ, ರಾಯಚೂರು, ಲಾತೂರುಗಳಲ್ಲಿ ನಡೆಯಿತು. ೧೯೩೯ರಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ […]

ಸಾಹಿತ್ಯ ಸಮ್ಮೇಳನ-೭೧ : ಮೂಡಬಿದರೆ
ಡಿಸೆಂಬರ್ ೨00೩

೭೧ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಕಮಲಾ ಹಂಪನಾ ಲೇಖಕಿಯಾಗಿ ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿರುವ ಕಮಲಾ ಹಂಪನಾ ಅವರು, ಬೆಂಗಳೂರು ಜಿಲ್ಲೆ ದೇವನಹಳ್ಳಿಯಲ್ಲಿ ಸಿ. ರಂಗಧಾಮನಾಯಕ್-ಲಕ್ಷಮ್ಮ ದಂಪತಿಗಳ ಪುತ್ರಿಯಾಗಿ ೨೮-೧0-೧೯೩೫ರಲ್ಲಿ ಜನಿಸಿದರು. ಚಳ್ಳಕೆರೆಯಲ್ಲಿ ಪ್ರಾರಂಭವಾದ ಪ್ರಾಥಮಿಕ ವಿದ್ಯಾಭ್ಯಾಸ ಬೇರೆ ಬೇರೆ ಊರುಗಳಲ್ಲಿ ಮುಂದುವರಿಯಿತು. ತುಮಕೂರಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವಾಗಿ, ೧೯೫೩ರಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿದರು. […]

ಸಾಹಿತ್ಯ ಸಮ್ಮೇಳನ-೭0 : ಬೆಳಗಾವಿ
ಮಾರ್ಚ್ ೨00೩

೭0ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಪಾಟೀಲ ಪುಟ್ಟಪ್ಪ ಪತ್ರಿಕೋದ್ಯಮ, ಸಾಹಿತ್ಯ ರಚನೆ ಮತ್ತು ಕನ್ನಡ ಹೋರಾಟದಲ್ಲಿ ಗಣ್ಯರಾದ ಪಾಟೀಲ ಪುಟ್ಟಪ್ಪನವರು `ಪಾಪು’ ಎಂದೇ ಪ್ರಸಿದ್ಧರಾಗಿದ್ದಾರೆ. ಇವರು ಹಾವೇರಿ ಜಿಲ್ಲೆಯ ಕುರುಬಗೊಂಡ ಗ್ರಾಮದಲ್ಲಿ ಸಿದ್ಧಲಿಂಗಪ್ಪ-ಮಲ್ಲಮ್ಮ ದಂಪತಿಗಳಿಗೆ ೧೪-೧-೧೯೨೨ರಲ್ಲಿ ಜನಿಸಿದರು. ಶಾಲಾ ಶಿಕ್ಷಣವನ್ನು ಹಲಗೇರಿ, ಬ್ಯಾಡಗಿ, ಚಿತ್ರದುರ್ಗ, ಹಾವೇರಿಗಳಲ್ಲಿ ಮುಗಿಸಿ ಧಾರವಾಡದ ಕರ್ನಾಟಕ […]

ಸಾಹಿತ್ಯ ಸಮ್ಮೇಳನ-೬೯ : ತುಮಕೂರು
ಫೆಬ್ರವರಿ ೨00೨

೬೯ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಯು.ಆರ್. ಅನಂತಮೂರ್ತಿ ಸಮಕಾಲೀನ ಬರಹಗಾರರಲ್ಲಿ ಅದಮ್ಯ ಚೇತನದ, ಬಹುಪ್ರತಿಭೆಯ ಯು.ಆರ್. ಅನಂತಮೂರ್ತಿ ಅವರು. ಉಡುಪಿ ರಾಜಗೋಪಾಲಾಚಾರ್ಯ-ಸತ್ಯಮ್ಮ ದಂಪತಿಗಳ ಹಿರಿಯ ಪುತ್ರರಾಗಿ ೨೧-೧೨-೧೯೩೨ರಲ್ಲಿ ತೀರ್ಥಹಳ್ಳಿಯ ಮೇಳಿಗೆಯಲ್ಲಿ ಮಲೆನಾಡಿಗರಾಗಿ ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. […]

ಸಾಹಿತ್ಯ ಸಮ್ಮೇಳನ-೬೮ : ಬಾಗಲಕೋಟೆ
ಜೂನ್ ೨000

೬೮ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಶಾಂತಾದೇವಿ ಮಾಳವಾಡ ಉತ್ತರ ಕರ್ನಾಟಕದಲ್ಲಿ ಮಹಿಳಾ ಸಾಹಿತ್ಯ ಪರಂಪರೆಯ ಪ್ರವರ್ತಕರಲ್ಲಿ ಒಬ್ಬರಾದ ಶಾಂತಾದೇವಿ ಮಾಳವಾಡರು ಸಾಹಿತಿಯಾಗಿ ಸಾಮಾಜಿಕ ಕಾರ್ಯಕರ್ತೆಯಾಗಿ ಶ್ರಮಿಸಿದವರು. ಕರ್ಜಗಿ ಮುರಗಪ್ಪ ಶೆಟ್ಟಿ-ಜಯವಂತಿ ದೇವಿ ದಂಪತಿಗಳಿಗೆ ಬೆಳಗಾವಿಯಲ್ಲಿ ೧0-೧೨-೧೯೨೨ರಲ್ಲಿ ಜನಿಸಿದ ಸುಪುತ್ರಿ ಶಾಂತಾದೇವಿಯವರ ಹುಟ್ಟು ಹೆಸರು ದಾನಮ್ಮ. ಬೆಳಗಾವಿ ವನಿತಾ ವಿದ್ಯಾಲಯದಲ್ಲಿ ಶಾಲಾ […]

ಸಾಹಿತ್ಯ ಸಮ್ಮೇಳನ-೬೭ : ಕನಕಪುರ
ಫೆಬ್ರವರಿ ೧೯೯೯

೬೭ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಎಸ್.ಎಲ್. ಭೈರಪ್ಪ ಗಳಗನಾಥರು ಮತ್ತು ಅನಕೃ ಅನಂತರ ಕನ್ನಡದಲ್ಲಿ ಕತೆ ಕಾದಂಬರಿ ಓದುವ ಸಾವಿರಾರು ಓದುಗರನ್ನು ಸೃಷ್ಟಿಸಿದವರೆಂದರೆ ಎಸ್.ಎಲ್. ಭೈರಪ್ಪನವರು. ಕಾದಂಬರಿಕಾರರೂ ಮೀಮಾಂಸಕರು ಆಗಿರುವ ಎಸ್.ಎಲ್. ಭೈರಪ್ಪನವರು ಹಾಸನ ಜಿಲ್ಲೆ ಚೆನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ ಲಿಂಗಣ್ಣಯ್ಯ-ಗೌರಮ್ಮ ದಂಪತಿಗಳಿಗೆ ೨0-೮-೧೯೩೧ರಲ್ಲಿ ಜನಿಸಿದರು. ತಮ್ಮ ಹುಟ್ಟೂರಿನ ಸುತ್ತಮುತ್ತಲ […]

ಸಾಹಿತ್ಯ ಸಮ್ಮೇಳನ-೬೬ : ಮಂಗಳೂರು
ಡಿಸೆಂಬರ್ ೧೯೯೭

೬೬ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಕಯ್ಯಾರ ಕಿಞ್ಞಣ್ಣ ರೈ ಗಡಿನಾಡಿನಲ್ಲಿ ಕನ್ನಡದ ದನಿಯಾಗಿ, ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಸತತವಾಗಿ ಹೋರಾಟ ನಡೆಸಿದ ಶಿಕ್ಷಕ, ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣದ ಮುಂದಾಳು, ಶತಾಯುಷಿ ಕಯ್ಯಾರ ಕಿಞ್ಞಣ್ಣರೈ ಅವರು ಕಾಸರಗೋಡು ತಾಲ್ಲೂಕಿನ ಪೆರಡಾಲದಲ್ಲಿ ದುಗ್ಗಪ್ಪ ರೈ ಮತ್ತು ಶ್ರೀಮತಿ ಕಯ್ಯಾರ ಯ್ಯ […]

ಸಾಹಿತ್ಯ ಸಮ್ಮೇಳನ-೬೫ : ಹಾಸನ
ಡಿಸೆಂಬರ್ ೧೯೯೬

೬೫ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಚೆನ್ನವೀರ ಕಣವಿ ಪ್ರಸಿದ್ಧ ಕವಿ, ವಿಮರ್ಶಕ ಚೆನ್ನವೀರ ಕಣವಿ ಅವರು ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಸಕ್ರಪ್ಪ-ಪಾರ್ವತವ್ವ ದಂಪತಿಗಳಿಗೆ ೨೮-೬-೧೯೨೮ರಲ್ಲಿ ಜನಿಸಿದರು. ಶಿರುಂಡ, ಗರಗಗಳಲ್ಲಿ ೧೯೪0-೪೬ರಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೫0ರಲ್ಲಿ ಬಿ.ಎ. ಪದವಿಯನ್ನು, ೧೯೫೨ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ […]

ಸಾಹಿತ್ಯ ಸಮ್ಮೇಳನ-೬೪ : ಮುಧೋಳ
ಜೂನ್ ೧೯೯೫

೬೪ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಹೆಚ್. ಎಲ್. ನಾಗೇಗೌಡ ಜಾನಪದ ವಿದ್ವಾಂಸ, ಕಾದಂಬರಿಕಾರ, ಅನುವಾದಕ, ದಕ್ಷ ಆಡಳಿತಗಾರ ಎನಿಸಿದ ಹೆಚ್.ಎಲ್. ನಾಗೇಗೌಡ ಅವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನ ಹಳ್ಳಿಯಲ್ಲಿ ಲಿಂಗೇಗೌಡ-ಹುಚ್ಚಮ್ಮದೇವಿ ದಂಪತಿಗಳಿಗೆ ೭-೧೨-೧೯೧೫ರಲ್ಲಿ ಜನಿಸಿದರು. ನಾಗತಿಹಳ್ಳಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಚೆನ್ನರಾಯಪಟ್ಟಣದಲ್ಲಿ ಲೋಯರ್ ಸೆಕೆಂಡರಿಯನ್ನು, ಬೆಂಗಳೂರಿನಲ್ಲಿ ಇಂಟರ್ ಡಿಯೇಟ್ […]

ಸಾಹಿತ್ಯ ಸಮ್ಮೇಳನ-೬೩ : ಮಂಡ್ಯ
ಫೆಬ್ರವರಿ ೧೯೯೪

೬೩ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಚದುರಂಗ ಕನ್ನಡದ ಸಣ್ಣ ಕಥೆಗಾರ, ಕಾದಂಬರಿಕಾರ, ನಾಟಕಕಾರ ಆದ ಚದುರಂಗರು (ಎಂ. ಸುಬ್ರಹ್ಮಣ್ಯರಾಜೇ ಅರಸ್ ಅವರು) ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ೧-೧-೧೯೧೬ರಂದು ಮುದ್ದುರಾಜೇ ಅರಸ್ ಮತ್ತು ಮರುದೇವಿ ಅರಸ್ ದಂಪತಿಗಳಿಗೆ ಸುಪುತ್ರರಾಗಿ ಜನಿಸಿದರು. ರಾಜಮನೆತನದ ಒಡನಾಟವಿದ್ದ ಇವರ ವಿದ್ಯಾಭ್ಯಾಸ ಮೈಸೂರಿನಲ್ಲಿ […]

1 2