ಜಯ ಭಾರತ ಜನನಿಯ ತನುಜಾತೆ
ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ! ಜಯ ಸುಂದರ ನದಿ ವನಗಳ ನಾಡೇ, ಜಯ ಹೇ ರಸಋಷಿಗಳ ಬೀಡೆ! ಭೂದೇವಿಯ ಮಕುಟದ ನವಮಣಿಯೆ, ಗಂಧದ ಚಂದದ ಹೊನ್ನಿನ ಗಣಿಯೆ; ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ ! ಜನನಿಯ ಜೋಗುಳ ವೇದದ ಘೋಷ, ಜನನಿಗೆ […]
ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ! ಜಯ ಸುಂದರ ನದಿ ವನಗಳ ನಾಡೇ, ಜಯ ಹೇ ರಸಋಷಿಗಳ ಬೀಡೆ! ಭೂದೇವಿಯ ಮಕುಟದ ನವಮಣಿಯೆ, ಗಂಧದ ಚಂದದ ಹೊನ್ನಿನ ಗಣಿಯೆ; ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ ! ಜನನಿಯ ಜೋಗುಳ ವೇದದ ಘೋಷ, ಜನನಿಗೆ […]
ಹೊತ್ತಿತೋ ಹೊತ್ತಿತು ಕನ್ನಡದ ದೀಪ ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ.. ಹೊತ್ತಿತೋ ಹೊತ್ತಿತು ಕನ್ನಡದ ದೀಪ ಹೊತ್ತಿತೋ.. ಹೊತ್ತಿತು…ಕನ್ನಡದ ದೀಪ ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ ಹರ್ಷ ಉಕ್ಕಿಸುವಂತೆ ಶೋಭಾಯಮಾನ.. ಕನ್ನಡದ ಮನೆಯಾಗೇ ಜ್ಯೋತಿರ್ನಿಧಾನ ಕನ್ನಡದ ಪ್ರಾಣ.. ಕನ್ನಡದ ಮಾನ .. ಹೊತ್ತಿತೋ ಹೊತ್ತಿತು ಕನ್ನಡದ ದೀಪ ಉರಿವವರು ಬೇಕಿನ್ನು […]
ಜಾತಿಸಂಕರವಿಲ್ಲ ಜಡದೇಹಿಗಳಿಲ್ಲ ನೀತಿ ಹೀನರು ಚೋರರಿಲ್ಲ ಘಾತುಕರಿಲ್ಲ ದುರ್ಜನರಿಲ್ಲ ಕರ್ಣಾಟಕ ರೀತಿಯನೆಂತು ಬಣ್ಣಿಪೆನು ತೊರೆಗೂಡಿದ ನದಿ ನದಿಯ ಕಾಲುವೆಗಳು ಪರಿದು ಕೂಡಿದ ಕೆರೆಯಿಂದ ಕೆರೆತೊರೆ ನಡಿಯಾರಾಮ ರಂಜಿಸುತಿಹ ಪುರವಿಹುವಾ ದೇಶದೊಳಗೆ ಸಾಹಿತ್ಯ: ಗೋವಿಂದ ವೈದ್ಯ (ಕ್ರಿ.ಶ. 1648 – ಕಂಠೀರವ ನರಸಿಂಹರಾಜ ವಿಜಯ)
ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ, ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ… ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ, ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ, ಓಲೆ ಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ ನಿತ್ಯೋತ್ಸವ ತಾಯಿ, […]
ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಭಿಮ್ಮನೆ ಬಂದಳೋ? ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲಿ ನಿಂದಳೋ? ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ? ಎಲ್ಲಿ ನೆಲವನು ತಣಿಸಿ, ಜನಮನ ಹೊಲದ ಕಳೆ ಕಳೆ ಕಳೆವಳೋ? ಅಲ್ಲಿ ಆ ಕಡೆ ನೋಡಲಾ! ಅಲ್ಲಿ ಕೊಡಗರ ನಾಡಲಾ! ಅಲ್ಲಿ […]
ಪಡುವಣ ತೀರದ ಕನ್ನಡ ನಾಡಿನ ಕಾರ್ಗಾಲದ ವೈಭವವೇನು? ಚೆಲ್ಲಿದರನಿತೂ ತೀರದ ನೀರಿನ ಜಡದೇಹದ ಕಾರ್ಮುಗಿಲೇನು? ಕೆರೆಗಳನುಕ್ಕಿಸಿ ತೊರೆಗಳ ಸೊಕ್ಕಿಸಿ ಗುಡ್ಡವ ಬೆಟ್ಟವ ಕೊರೆ ಕೊರೆದು ಕಡಲಿನ ತೆರೆಗಳ ರಿಂಗಣಗುಣಿಯಿಸಿ ಮೊರೆಮೊರೆವುದದೋ ಸರಿಸುರಿದು ಕುದುರೆಮೊಗದ ಕಡಿ ವಾಣದ ತೆರದಲಿ ಮಿಂಚುಗಳವು ಥಳಥಳಿಸುವುವು ಗೊರಸಿನ ಘಟ್ಟನೆ ಯಂತಿರೆ ಥಟ್ಟನೆ ಗುಡುಗುಗಳವು ಗುಡುಗಾಡಿಪುವು […]
ಪಡುವಣ ಕಡಲಿನ ನೀಲಿಯ ಬಣ್ಣ, ಮುಡಿಯೊಳು ಸಂಜೆಯ ಅಂಚಿನ ಚಿನ್ನ, ಹೊಳೆಗಳ ಸೆರಗಿನ ಪಚ್ಚೆಯ ಬಯಲು, ಬಿಡುಮಳೆಗಂಜದ ಬೆಟ್ಟದ ಸಾಲು, ಹುಲಿ ಕಾಡಾನೆಗಳಲೆಯುವ ಕಾಡಿದು ಸಿರಿಗನ್ನಡ ನಾಡು! ಕಲ್ಲಿಗೆ ಬಯಸಿದ ರೂಪವ ತೊಡಿಸಿ, ಮುಗಿಲಿಗೆ ತಾಗುವ ಮೂರ್ತಿಯ ನಿಲಿಸಿ, ದಾನ ಧರ್ಮಗಳ ಕೊಡುಗೈಯಾಗಿ, ವೀರಾಗ್ರಣಿಗಳ ತೊಟ್ಟಿಲ ತೂಗಿ, ಬೆಳಗಿದ […]
ಮೊದಲು ತಾಯ ಹಾಲ ಕುಡಿದು ನಲ್ಮೆಯಿಂದ ತೊದಲಿ ನುಡಿದು ಗೆಳೆಯರೊಡನೆ ಬೆಳೆದು ಬಂದ ಮಾತದಾವುದು ಸವಿಯ ಹಾಡ ಕತೆಯ ಕಟ್ಟಿ ಕಿವಿಯಲೆರದು ಕರುಳ ತಟ್ಟಿ ನಮ್ಮ ಜನರು ನಮ್ಮ ನಾಡು ಎನಿಸಿತಾವುದು ನಮ್ಮ ಕವಿಗಳೆಂಬ ಕೋಡು ತಲೆಗದಾವುದು ಕನ್ನಡ ನುಡಿ ನಮ್ಮ ಹೆಣ್ಣು ನಮ್ಮ ತೋಟದಿನಿಯ ಹಣ್ಣು ಬಳಿಕ […]
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ನಮ್ಮ ತಪ್ಪನೆನಿತೊ ತಾಳ್ವೆ ಅಕ್ಕರೆಯಿಂದೆಮ್ಮನಾಳ್ವೆ ನೀನೆ ಕಣಾ ನಮ್ಮ ಬಾಳ್ವೆ ನಿನ್ನ ಮರೆಯಲಮ್ಮೆವು ತನು ಕನ್ನಡ ಮನ ಕನ್ನಡ ನುಡಿ ಕನ್ನಡವೆಮ್ಮವು. ಹಣ್ಣನೀವ ಕಾಯನೀವ ಪರಿಪರಿಯ ಮರಂಗಳೋ ಪತ್ರಮೀವ ಪುಷ್ಪಮೀವ ಲತೆಯ […]
ಬಳಸಿ ಬಂದೆನು ಸುತ್ತ ಕನ್ನಡದ ನಾಡುಗಳ ಸಿರಿಯನೋಡುತ್ತ ತಾಯಡಿಯ ಹುಡಿಯ ತಲೆಗಾನುತ್ತ, ಹರಕೆಯ ಪವಿತ್ರ ಯಾತ್ರೆಯಲಿ ಏನು ಚೆಲುವಿನ ನಾಡು! ಚೆಲುವು ಚೆಲ್ಲುವ ನಾಡು! ಕನ್ನಡದ ನಾಡು! ಏನು ಚಿನ್ನದ ನಾಡು! ನನ್ನೊಲುಮೆಯಾ ನಾಡು! ನಮ್ಮಿನಿಯ ನಾಡು! ಕಾವೇರಿಯಿಂದ ಗೋದಾವರಿಯವರೆಗೆ ಚಾಚಿರುವ ನಾಡು! ಬಳಸಿದೆನು, ಸುತ್ತಿದೆನು, ಕಣ್ದಣಿಯೆ ನೋಡಿದೆನು, […]