ಹಚ್ಚೇವು ಕನ್ನಡದ ದೀಪ

ಹಚ್ಚೇವು ಕನ್ನಡದ ದೀಪ ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವಾ ದೀಪ | ಹಚ್ಚೇವು | ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು ಎಲ್ಲೆಲ್ಲಿ ಕನ್ನಡದ ಕಂಪು ಸೂಸ- ಲಲ್ಲಲ್ಲಿ ಕರಣ ಚಾಚೇವು ನಡು ನಾಡೆ ಇರಲಿ, ಗಡಿನಾಡೆ ಇರಲಿ ಕನ್ನಡದ ಕಳೆಯ ಕೆಚ್ಚೇವು ಮರತೇವು ಮರವ, ತೆರೆದೇವು ಮನವ, […]

ಕನ್ನಡನುಡಿ

ಎನಿತು ಇನಿದು ಈ ಕನ್ನಡ ನುಡಿಯು ಮನವನು ತಣಿಸುವ ಮೋಹನ ಸುಧೆಯು! ಗಾನವ ಬೆರೆಯಿಸಿ ವೀಣೆಯ ದನಿಯೊಳು ವಾಣಿಯ ನೇವುರ ನುಡಿಸುತೆ ಕುಣಿಯಲು ಮಾಣದೆ ಮೆರೆಯುವ ಮಂಜುಲ ರವವೋ? ಎನಿತು ಇನಿದು ಈ ಕನ್ನಡ ನುಡಿಯು ! ರಂಗನ ಮುರಲಿಯ ಹಿಂಗದ ಸರದಲಿ ಹೆಂಗಳೆಯರು ಬೆಳ ದಿಂಗಳಿರುಳಲಿ ಸಂಗೀತವನೊರೆದಂಗವಿದೇನೋ? […]

ಸುಲಿದ ಬಾಳೆಯ ಹಣ್ಣಿನಂದದಿ… ಕಬ್ಬಿನಂದದಿ

ಸುಲಿದ ಬಾಳೆಯ ಹಣ್ಣಿನಂದದಿ ಕಳೆದ ಸಿಗುರಿನ ಕಬ್ಬಿನಂದದಿ ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ ಗಳಿಸಿಕೊಂಡೊಡೆ ಸಾಲದೇ ಸಂಸ್ಕೃತದೊಳಿನ್ನೇನು? ಸಾಹಿತ್ಯ: ಮಹಲಿಂಗರಂಗ ( ಕ್ರಿ.ಶ. 1675 – ಅನುಭವಾಮೃತ)

ನನ್ನ ಕರ್ಣಾಟಕ

ಕರ್ನಾಟಕವೆಂಬುದೊಮ್ಮೆ ಕೂಗು, ಜಯ ಕರ್ನಾಟ ಕರ್ನಾಟವೆಂದೊಮ್ಮೆ ಕೂಗು! ಕರ್ನಾಟ ಶಬ್ದಗಳ ದಿವ್ಯ ಸಂಗೀತಕ್ಕೆ ನೂರು ಸಲ ತಲೆಯ ತೂಗು ಕರ್ನಾಟವೆಂಬುದು ಮಂತ್ರ; ಸಿಂಹನ ಧೈರ್ಯ ತುಂಬುವದು ಮೈಯಸೇರಿ! ಭೋರಿಡುವ ಸಾಗರದ ತೆರೆಗಳೊಲು ತುಂಬುವದು ಶಕ್ತಿತೆರೆ ಮೇರೆ ಮೀರಿ ಕರ್ನಾಟವೆಂಬುದಿದು ಗುಡುಗು, ಮುಗಿಲಿನ ಮಿಂಚು ಹರವುವದು ವಿಶ್ವದೊಳಗೆ! ಬೆಳಕು ಬೆಳಕಾಗುವದು, […]

ಕರ್ಣಾಟಕ ರೀತಿಯನೆಂತು ಬಣ್ಣಿಪೆನು

ಜಾತಿಸಂಕರವಿಲ್ಲ ಜಡದೇಹಿಗಳಿಲ್ಲ ನೀತಿ ಹೀನರು ಚೋರರಿಲ್ಲ ಘಾತುಕರಿಲ್ಲ ದುರ್ಜನರಿಲ್ಲ ಕರ್ಣಾಟಕ ರೀತಿಯನೆಂತು ಬಣ್ಣಿಪೆನು ತೊರೆಗೂಡಿದ ನದಿ ನದಿಯ ಕಾಲುವೆಗಳು ಪರಿದು ಕೂಡಿದ ಕೆರೆಯಿಂದ ಕೆರೆತೊರೆ ನಡಿಯಾರಾಮ ರಂಜಿಸುತಿಹ ಪುರವಿಹುವಾ ದೇಶದೊಳಗೆ ಸಾಹಿತ್ಯ: ಗೋವಿಂದ ವೈದ್ಯ (ಕ್ರಿ.ಶ. 1648 – ಕಂಠೀರವ ನರಸಿಂಹರಾಜ ವಿಜಯ)

‘ಕವಿರಾಜ ಮಾರ್ಗ’ದಲ್ಲಿ ಕನ್ನಡ ನಾಡಿನ ಬಣ್ಣನೆ

ಕಾವೇರಿಯಿಂದಮಾ ಗೋ ದಾವರಿವರಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸು ಧಾವಳಯ ವಿಲೀನ ವಿಶದ ವಿಷಯ ವಿಶೇಷಂ ಪದನರಿದು ನುಡಿಯಲುಂ ನುಡಿ ದುವನರಿದಾರಯಲುಮಾರ್ಪರಾ ನಾಡವರ್ಗಳ್ ಚದುರರ್ ನಿಜದಿಂ ಕುರಿತೋ ದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್ ಕಸವರಮೆಂಬುದು ನೆರೆ ಸೈ ರಿಸಲಾರ್ಪೊಡೆ ಪರ ವಿಚಾರಮುಂ ಧರ್ಮಮುಮಂ ಕಸವೇಂ ಕಸವರಮೇನು […]

1 2 3