ಕನ್ನಡ ಸಾಹಿತ್ಯ ಪರಿಷತ್ತು
೮೩ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ
೮೩ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ೨೦೧೭ರ ವರ್ಷದಲ್ಲಿ ಮೈಸೂರಿನಲ್ಲಿ ನಡೆಯಲಿದೆ.
ಮುಖ್ಯಮಂತ್ರಿಗಳೊಂದಿಗೆ ಭೇಟಿ
ಪರಿಷತ್ತಿನ ೨೫ನೇ ಅಧ್ಯಕ್ಷರಾಗಿ ಆಯ್ಕೆಗೊಂಡ ಡಾ. ಮನು ಬಳಿಗಾರ್ ಅವರ ಮುಖ್ಯಮಂತ್ರಿಗಳೊಂದಿಗಿನ ಭೇಟಿ
ಹೊರನಾಡ ಕನ್ನಡಿಗರ ರಾಷ್ಟ್ರೀಯ ಸಮಾವೇಶ
ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರ ಸಮರ್ಥ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತನ್ನ ನೂರೊಂದು ವರ್ಷಗಳ ಇತಿಹಾಸದಲ್ಲಿ, ಪ್ರಪ್ರಥವಾಗಿ “ಹೊರನಾಡ ಕನ್ನಡಿಗರ ರಾಷ್ಟ್ರೀಯ ಸಮಾವೇಶವನ್ನು” ೨೦೧೬ ವರ್ಷದ ಅಕ್ಟೋಬರ್ ೮ ಮತ್ತು ೯ ದಿನಗಳಂದು ದೇಶದ ರಾಜಧಾನಿಯಾದ ನವದೆಹಲಿಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಿತು. ಈ ಸಮಾವೇಶಕ್ಕೆ ಮಧ್ಯಪ್ರದೇಶದ ಅಮರಕಂಟಕದಲ್ಲಿರುವ ಇಂದಿರಾಗಾಂಧೀ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಹಾಗೂ ದೆಹಲಿ ಕರ್ನಾಟಕ ಸಂಘಗಳು […]
ಮಾತೃಭಾಷಾ ಶಿಕ್ಷಣ
ಮಾತೃಭಾಷಾ ಶಿಕ್ಷಣದ ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ, ಸಾಧ್ಯವಿರುವ ಪರಿಹಾರ ಕ್ರಮಗಳ ಕುರಿತಂತೆ ಕಾನೂನು ತಜ್ಞರುಗಳಾದ ಮಾಜಿ ರಾಜ್ಯಪಾಲರೂ – ನ್ಯಾಯಮೂರ್ತಿಗಳೂ ಆದ ಶ್ರೀ ರಾಮಾ ಜೋಯಿಸ್, ನ್ಯಾಯಮೂರ್ತಿಗಳಾದ ಶ್ರೀ ಎ.ಜೆ. ಸದಾಶಿವ, ನ್ಯಾಯಮೂರ್ತಿ ಶ್ರೀ ನಾಗಮೊಹನದಾಸ್, ಹಿರಿಯ ಸಾಹಿತಿಗಳಾದ ಪ್ರೊ. ಚಂದ್ರಶೇಖರ ಪಾಟೀಲ, […]
ಲೀಲಾದೇವಿ ಆರ್. ಪ್ರಸಾದ್ ಸನ್ಮಾನ
ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಲೇಖಕಿಯರ ಸಂಘದ ಸಹಯೋಗದಲ್ಲಿ ನಡೆಸುತ್ತಿರುವ ವಿನೂತನ ಕಾರ್ಯಕ್ರಮ ‘ಸಾಧಕರೊಡನೆ ಸಂವಾದ’ದಲ್ಲಿ ಡಾ. ಲೀಲಾದೇವಿ ಆರ್. ಪ್ರಸಾದ್ ಅವರಿಗೆ ಡಾ. ಸುಧಾಮೂರ್ತಿ ಅವರಿಂದ ಸನ್ಮಾನ.