ಕನ್ನಡ ಸಾಹಿತ್ಯ ಪರಿಷತ್ತು

Uncategorized

ನೃಪತುಂಗ ಪ್ರಶಸ್ತಿ

ನೃಪತುಂಗ ಪ್ರಶಸ್ತಿ ದೇ. ಜವರೇಗೌಡ ೨೦೦೭ ಪಾಟೀಲ ಪುಟ್ಟಪ್ಪ ೨೦೦೮ ಜಿ.ಎಸ್. ಶಿವರುದ್ರಪ್ಪ ೨೦೦೯ ಸಿ.ಪಿ. ಕೃಷ್ಣಕುಮಾರ್ ೨೦೧೦ ಎಂ. ಎಂ. ಕಲಬುರ್ಗಿ ೨೦೧೧ ಸಾರಾ ಅಬೂಬಕ್ಕರ್ ೨೦೧೨ ಬರಗೂರು ರಾಮಚಂದ್ರಪ್ಪ ೨೦೧೩ ಕುಂ. ವೀರಭದ್ರಪ್ಪ ೨೦೧೪ ಟಿ.ವಿ. ವೆಂಕಟಾಚಲಶಾಸ್ತ್ರಿ ೨೦೧೫ ನಾಡೋಜ ಡಾ. ಎಂ. ಚಿದಾನಂದಮೂರ್ತಿ ೨೦೧೬ ನಾಡೋಜ ಡಾ. ಎಸ್. ಎಲ್. ಭೈರಪ್ಪ ೨೦೧೭ ನಾಡೋಜ ಡಾ. ಸಿದ್ದಲಿಂಗಯ್ಯ ೨೦೧೮ ನಾಡೋಜ ಡಾ. ಚೆನ್ನವೀರ ಕಣವಿ ೨೦೧೯ ಜಿ. ಎಸ್. ಆಮೂರ ಮಲ್ಲೇಪುರಂ ಜಿ. ವೆಂಕಟೇಶ್‌

ಜ್ಞಾನಪೀಠ ಪ್ರಶಸ್ತಿ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಕೆ.ವಿ. ಪುಟ್ಟಪ್ಪ ೧೯೬೭ ದ.ರಾ. ಬೇಂದ್ರೆ ೧೯೭೨ ಶಿವರಾಮ ಕಾರಂತ ೧೯೭೭ ಮಾಸ್ತಿ ವೆಂಕಟೇಶ ಅಯ್ಯಂಗಾರ್ ೧೯೮೩ ವಿ.ಕೃ. ಗೋಕಾಕ್ ೧೯೯೦ ಯು.ಆರ್. ಅನಂತಮೂರ್ತಿ ೧೯೯೪ ಗಿರೀಶ್ ಕಾರ್ನಾಡ್ ೧೯೯೮ ಚಂದ್ರಶೇಖರ ಕಂಬಾರ ೨೦೧೦

ರಾಷ್ಟ್ರಕವಿಗಳು

ರಾಷ್ಟ್ರ ಕವಿಗಳು ಎಂ. ಗೋವಿಂದ ಪೈ ೧೯೪೯ ಕೆ.ವಿ. ಪುಟ್ಟಪ್ಪ ೧೯೬೪ ಜಿ.ಎಸ್. ಶಿವರುದ್ರಪ್ಪ ೨೦೦೬

Elementor #10122

ಚಂದ್ರಶೇಖರ ಕಂಬಾರ ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ, ಅಧ್ಯಾಪನ, ಆಡಳಿತ ಹೀಗೆ ವಿವಿಧಮುಖೀ ವಿದ್ವಾಂಸರಾದ ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ. ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು. ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ […]

Elementor #10113

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಚಿವರಾದ ಶ್ರೀ ಸುನಿಲ್ ಕುಮಾರ್ , ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ನಿರ್ದೇಶಕರಾದ ಶ್ರೀ ರಂಗಪ್ಪ ಹಾಗು ಕ.ಸಾ.ಪ. ನಿಕಟಪೂರ್ವ ಅಧ್ಯಕ್ಷರಾದ ಡಾ. ಮನು ಬಳಿಗಾರ್ ರವರೊಂದಿಗೆ , ನೂತನ ಕ.ಸಾ.ಪ. ಅಧ್ಯಕ್ಷರಾದ ನಾಡೋಜ ಡಾ . ಮಹೇಶ ಜೋಶಿ

Elementor #10108

ಕ.ಸಾ.ಪ. ಅಧ್ಯಕ್ಷರಾಗಿ ನಾಡೋಜ ಡಾ . ಮಹೇಶ ಜೋಶಿ ಅಧಿಕಾರ ಸ್ವೀಕಾರ

Elementor #10103

ಕನ್ನಡಾಂಬೆಗೆ ನೂತನ ಕ.ಸಾ.ಪ. ಅಧ್ಯಕ್ಷರಾದ ನಾಡೋಜ ಡಾ . ಮಹೇಶ ಜೋಶಿ ಅವರಿಂದ ಪುಷ್ಪಾರ್ಚನೆ

Elementor #10095

ಕ.ಸಾ.ಪ. ಅಧ್ಯಕ್ಷರಾಗಿ ನಾಡೋಜ ಡಾ . ಮಹೇಶ ಜೋಶಿ ಅಧಿಕಾರ ಸ್ವೀಕಾರ

ಮುಖ್ಯಮಂತ್ರಿಗಳನ್ನು ಮಂಡ್ಯದಲ್ಲಿ ಆಯೋಜನೆಗೊಂಡಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನಿಸಿದ ನಾಡೋಜ ಡಾ.ಮಹೇಶ ಜೋಶಿ

ಮುಖ್ಯಮಂತ್ರಿಗಳನ್ನು ಮಂಡ್ಯದಲ್ಲಿ ಆಯೋಜನೆಗೊಂಡಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನಿಸಿದ ನಾಡೋಜ ಡಾ.ಮಹೇಶ ಜೋಶಿ ಬೆಳಗಾವಿ: ಮಂಡ್ಯದಲ್ಲಿ ಅಯೋಜನೆಗೊಂಡಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಕಲಾಪಗಳ ಸಂದರ್ಭದಲ್ಲಿ ಭೇಟಿಯಾಗಿ ಅಧಿಕೃತವಾಗಿ ಆಹ್ವಾನಿಸಿದರು. ಇದಕ್ಕಾಗಿಯೇ ಅವರು ವಿಶೇಷವಾಗಿ ಬೆಳಗಾವಿಗೆ ತೆರಳಿದ್ದರು.  ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಚಲುವರಾಯ ಸ್ವಾಮಿ, ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್, ಮಂಡ್ಯ ಕ್ಷೇತ್ರದ ಶಾಸಕ ರವಿಕುಮಾರ್ ಗಣಿಗ, ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ಮುಖ್ಯಮಂತ್ರಿಗಳು ಆಹ್ವಾನ ಪತ್ರಿಕೆಯ ಕುರಿತು ಮತ್ತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ದತೆಗಳ ಕುರಿತು ಅಪಾರ ಮೆಚ್ಚಿಗೆಯನ್ನು ವ್ಯಕ್ತ ಪಡಿಸಿ ಸಮ್ಮೇಳನವು ದಾಖಲೆಯನ್ನು ಸೃಷ್ಟಿ ಮಾಡುವಂತೆ ಯಶಸ್ವಿಯಾಗುವುದರಲ್ಲಿ ಅನುಮಾನವೇ ಇಲ್ಲ ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದರು ಎಂದು ನಾಡೋಜ ಡಾ.ಮಹೇಶ ಜೋಶಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಇದೇ ಸಂದರ್ಭದಲ್ಲಿ ಕನ್ನಡ ಕಾವಲು ಸಮಿತಿ ಮೊದಲ ಅಧ್ಯಕ್ಷರಾಗಿ ತಾವು ಕೆಲಸ ಮಾಡಿದ ದಿನಗಳನ್ನು ಸ್ಮರಿಸಿ ಕನ್ನಡ ನಾಡು-ನುಡಿಯ ಕುರಿತು ಆಗ ಬೇಕಾದ ಪ್ರಮುಖ ಕಾರ್ಯಗಳ ಕುರಿತು ಚರ್ಚಿಸಿದರು. ಹಿಂದೆ ತಾವು ಮುಖ್ಯಮಂತ್ರಿಗಳಾಗಿದ್ದಾಗ ನಡೆದ ನಾಲ್ಕು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅನುಭವಗಳನ್ನು ಹಂಚಿ ಕೊಂಡು ತಮ್ಮ ಅವಧಿಯಲ್ಲಿ ಆಯೋಜನೆಗೊಂಡಿರುವ ಐದನೆಯದೆಯದಾದ ‘ಈ ಸಮ್ಮೇಳನವು ತುಂಬಾ ಯಶಸ್ವಿಯಾಗಲಿ, ಸರ್ಕಾರದ ಕಡೆಯಿಂದ ಎಲ್ಲಾ ನೆರವೂ ದೊರಕಲಿದೆ ಎಂಬ ಭರವಸೆಯನ್ನು ನೀಡಿದರು. ಇತ್ತೀಚೆಗೆ ನಮ್ಮನ್ನು ಅಗಲಿದ ರಾಜಕೀಯ ಮತ್ಸುದ್ದಿ ಎಸ್.ಎಂ.ಕೃಷ್ಣ ಅವರ ಹೆಸರನ್ನು ವೇದಿಕೆಗೆ ಇಡುವ ಮೂಲಕ ಅವರನ್ನು ಸ್ಮರಿಸುವ ಕಾರ್ಯ ಸಮ್ಮೇಳನದಲ್ಲಿ ನಡೆಯುತ್ತಿರುವುದರ ಕುರಿತೂ ಅವರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಎಂದು ನಾಡೋಜ ಡಾ. ಮಹೇಶ ಜೋಶಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top