ಕನ್ನಡ ಸಾಹಿತ್ಯ ಪರಿಷತ್ತಿನ ೨೦೨೩ನೆಯ ಸಾಲಿನ ವಿವಿಧ ಪುಸ್ತಕ ದತ್ತಿ ಪ್ರಶಸ್ತಿಯ ಕೊನೆಯ ದಿನಾಂಕ ಜೂನ್ 15 ಕ್ಕೆ

ಕನ್ನಡ ಸಾಹಿತ್ಯ ಪರಿಷತ್ತಿ ನಲ್ಲಿರುವ ವಿವಿಧ ದತ್ತಿ ನಿಧಿ ಪ್ರಶಸ್ತಿ ಗಳಿಗೆ ಪುಸ್ತಕ ಗಳನ್ನು ಕಳುಹಿಸಲು ದಿನಾಂಕ 29.4.2024 ರಿಂದ 31.5.2024ರವರೆಗೆ

ಫಾದರ್ ಚಸರಾ ದತ್ತಿ ಪ್ರಶಸ್ತಿ

ಡಾ .ಅಕ್ಕಯ್ಯ ಪದ್ಮಶಾಲಿ ಹಾಗೂ ರೆವರೆಂಡ್ ಡಾ .ಡಿ . ಮನೋಹರಚಂದ್ರ ಪ್ರಸಾದ್ ಇವರುಗಳಿಗೆ "ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ ...
Read More

ಮಾಹಿತಿ ಹಕ್ಕು ತಜ್ಞ ಜೆ.ಎಂ. ರಾಜಶೇಖರ

ಮಾಹಿತಿ ಹಕ್ಕು ತಜ್ಞ ಜೆ.ಎಂ. ರಾಜಶೇಖರ ದತ್ತಿ ಪ್ರಶಸ್ತಿ ಪ್ರದಾನ ...
Read More

ಡಾ. ಬಿ. ಸರೋಜಾದೇವಿ ಸಾಹಿತ್ಯ ದತ್ತಿ ಪ್ರಶಸ್ತಿ

ಡಾ. ಬಿ. ಸರೋಜಾದೇವಿ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ...
Read More

ದತ್ತಿನಿಧಿಗಳು

 

ಪರಿಷತ್ತಿನ ಖಾಯಂ ವಾರ್ಷಿಕ ಕಾರ್ಯಕ್ರಮಗಳಿಗೆ ಮೂಲಾಧಾರವೆಂದರೆ ದತ್ತಿನಿಧಿಗಳು. ಸಾಹಿತ್ಯ ಪರಿಷತ್ತು ಪ್ರಾರಂಭವಾದಾಗ ದತ್ತಿನಿಧಿ ಯೋಜನೆ ಇರಲಿಲ್ಲ. ಕೇವಲ ದಾನಿಗಳಿಂದ ದೇಣಿಗೆ ಸಂಗ್ರಹ ಮತ್ತು ವಿವಿಧವರ್ಗಗಳ ಸದಸ್ಯರಿಂದ ಚಂದಾ ವಸೂಲಿ ಆಧಾರದ ಮೇಲೆ ಕಾರ್ಯಕ್ರಮಗಳನ್ನು ನಡೆಯುತ್ತಿದ್ದವು.

ದತ್ತಿನಿಧಿ ಎಂದರೆ “ತಮ್ಮ ಹಿರಿಯರ ನೆನಪಿಗೆ ಅಥವಾ ತಮಗೆ ಉಪಕಾರ ಮಾಡಿದವರ ವಾರ್ಷಿಕ ಸ್ಮರಣೆಗೆ ಅಥವಾ ನಾಡು – ನುಡಿಗಳ ಬಗ್ಗೆ ಈ ರೀತಿಯ ಕಾರ್ಯಕ್ರಮಗಳನ್ನು ನಡೆಸಬೇಕೆಂಬ ತಮ್ಮ ಆಶಯವಿದ್ದಂತೆ, ಪರಿಷತ್ತಿನ ಸದಸ್ಯರು, ಹಿತೈಷಿಗಳು, ಸಾರ್ವಜನಿಕ ಗಣ್ಯರು, ಸಂಸ್ಥೆಗಳು ಶಾಶ್ವತ ಠೇವಣಿಯನ್ನು ಇಟ್ಟು ತಾವು ತಿಳಿಸಿದ ಪ್ರಕಾರ ಕಾರ್ಯಕ್ರಮಗಳನ್ನು ನಡೆಸಲು ವ್ಯವಸ್ಥೆ ಮಾಡುವುದು.” ಹೀಗೆ ಪ್ರತಿವರ್ಷ ದತ್ತಿದಾನಿಗಳ ಆಶಯದಂತೆ ಕಾರ್ಯಕ್ರಮಗಳನ್ನು ನಡೆಸುವುದು ಒಂದು ಬಗೆ.

ದತ್ತಿನಿಧಿ ಕಾರ್ಯಕ್ರಮಗಳಲ್ಲದೆ ಪ್ರತಿವರ್ಷ ತಪ್ಪದೆ ನಡೆಸಬೇಕಾದ ವಾರ್ಷಿಕಾಧಿವೇಶನ, ಸಾಹಿತ್ಯ ಸಮ್ಮೇಳನ, ಕಾವ, ಜಾಣ, ರತ್ನ, ಗಮಕ ಮುಂತಾದ ಪರೀಕ್ಷೆಗಳು ಇವೂ ಸಹ ಪ್ರತಿವರ್ಷದ ಖಾಯಂ ಕಾರ್ಯಕ್ರಮಗಳಾಗಿರುತ್ತವೆ.ದತ್ತಿನಿಧಿಯೋಜನೆ ಮೊದಲು ಕಾರ್ಯರೂಪಕ್ಕೆ ಬಂದದ್ದು ೧೯೩೫ರಲ್ಲಿ ಪರಿಷತ್ತಿನ ಅಧ್ಯಕ್ಷರಲ್ಲಿ ಒಬ್ಬರಾದ ಬಿ. ಎಂ. ಶ್ರೀ. ಅವರಿಂದ. ಮೊದಲ ದತ್ತಿ ಬಂದದ್ದು ಅವರಿಂದಲೆ. ಅದಾವುದೆಂದರೆ “೨೩-೭-೧೯೩೫ನೆಯ ತಾರೀಖಿನಲ್ಲಿ ಬಿ. ಎಂ. ಶ್ರೀಕಂಠಯ್ಯನವರು ೧000 ರೂಪಾಯಿಗಳನ್ನು ಗಮಕ ಕಲಾಭಿವೃದ್ಧಿಗಾಗಿ ಪರಿಷತ್ತಿನ ಮೂಲನಿಧಿಗೆ ದಾನಮಾಡಿರುತ್ತಾರೆ”

ಆ ನಂತರದಲ್ಲಿ  ಹಲವಾರು  ದತ್ತಿಗಳಿದ್ದು  ಆ  ವಿವರಗಳನ್ನು  ಪ್ರತ್ಯೇಕವಾಗಿ  ನೀಡಲಾಗಿದೆ.

ದಾನಿಗಳಿಗೆ ದತ್ತಿ ನಿಯಮಗಳು

.ದಾನಿಗಳು ತಮ್ಮ ಅಥವಾ ತಮಗೆ ಇಷ್ಟವೆನಿಸುವವರ ಹೆಸರಿನಲ್ಲಿ ದತ್ತಿ ಇಡಬಹುದು.

೨.ದತ್ತಿಯ ಮೊಬಲಗು ಕನಿಷ್ಠ ೧0,000 ರೂ. ಅದಕ್ಕಿಂತ ಹೆಚ್ಚಾಗಿ ಎಷ್ಟಾದರೂ ಇಡಬಹುದು.

೩.ದತ್ತಿಗೆ ನೀಡಿದ ಹಣಕ್ಕೆ ಪರಿಷತ್ತಿನ ಅಧಿಕೃತ ರಸೀತಿ ಕೊಡಲಾಗುವುದು.

೪.ದತ್ತಿ ಸ್ವೀಕಾರವಾದುದಕ್ಕೆ ಅಧಿಕೃತ ಅಂಗೀಕಾರ ಪತ್ರ ನೀಡಲಾಗುವುದು.

೫.ದಾನಿಗಳು ನೀಡಿದ ದತ್ತಿ ಹಣವನ್ನು ಪರಿಷತ್ತಿನ ಹೆಸರಿನಲ್ಲಿ ಅಧಿಕೃತ ಬ್ಯಾಂಕಿನಲ್ಲಿ ಶಾಶ್ವತ ಠೇವಣಿಯಲ್ಲಿಡಲಾಗುವುದು.

೬.ದತ್ತಿ ಮೊತ್ತದಿಂದ ಬರುವ ಬಡ್ಡಿಯ ಹಣದಿಂದ ದಾನಿಗಳ ಆಶಯದಂತೆ ಪ್ರತಿವರ್ಷ ಸಾಹಿತ್ಯ ಕಾರ್ಯಕ್ರಮ ನಡೆಸಿಕೊಂಡು ಬರಲಾಗುವುದು.

೭.ದತ್ತಿ ಕಾರ್ಯಕ್ರಮಗಳನ್ನು ರಾಜ್ಯದ ಮತ್ತು ಹೊರನಾಡುಗಳ ಬೇರೆಬೇರೆ ಸ್ಥಳಗಳಲ್ಲಿ ಪರಿಷತ್ತು ಏರ್ಪಡಿಸುವುದು.

೮.ದತ್ತಿ ಕಾರ್ಯಕ್ರಮದ ಕರೆಯೋಲೆಗಳನ್ನು ದಾನಿಗಳಿಗೆ ಕಳುಹಿಸಲಾಗುವುದು.

೯.ದತ್ತಿ ಕಾರ್ಯಕ್ರಮದ ಸಂದರ್ಭದಲ್ಲಿ ದಾನಿಗಳ ಪರಿಚಯದೊಂದಿಗೆ ಅವರ ಆಶಯವನ್ನು ಸಭೆಯಲ್ಲಿ ತಿಳಿಸಲಾಗುವುದು.

೧0.ದಾನಿಗಳೊಡನೆ ಸಮಾಲೋಚಿಸಿ ಅನಿವಾರ್ಯ ಸಂದರ್ಭಗಳಲ್ಲಿ ದತ್ತಿಯ ಕಾರ್ಯಕ್ರಮಗಳಲ್ಲಿ ಅಗತ್ಯವೆನಿಸುವ ಬದಲಾವಣೆ ಮಾಡಿಕೊಳ್ಳಲು ಪದಾಧಿಕಾರಿಗಳಿಗೆ ಅವಕಾಶವಿರುತ್ತದೆ.

೧೧.ದಾನಿಗಳು ತಮ್ಮ ದಾನ ಪತ್ರದಲ್ಲಿ ತಿಳಿಸುವ ಆಶಯಗಳನ್ನು ಬದಲಾಯಿಸಲು ಅವಕಾಶವಿರುವುದಿಲ್ಲ.

೧೨.ಉದ್ದೇಶಿತ ಕಾರ್ಯಕ್ರಮಕ್ಕೆ ದತ್ತಿ ಮೊತ್ತದ ಬಡ್ಡಿ ಹಣ ಸಾಲದಾಗುವ ಸಂದರ್ಭಗಳಲ್ಲಿ ಎರಡು ಮೂರು ದತ್ತಿಗಳನ್ನು ಸೇರಿಸಿ ಕಾರ್ಯಕ್ರಮ ನಡೆಸಲಾಗುತ್ತದೆ.

ವಿಶೇಷ ಸೂಚನೆ :

೧೩.ಕರ್ನಾಟಕ ಸರ್ಕಾರದ ಆದಾಯ ತೆರಿಗೆ ಅಧಿನಿಯಮ ೧೯೬೧-೮0 ಜಿ. ಪ್ರಕಾರ ಪರಿಷತ್ತಿಗೆ ನೀಡುವ ವಂತಿಕೆಗೆ ಆದಾಯ ತೆರಿಗೆ ವಿನಾಯಿತಿ ಇದೆ.

ಆದೇಶ ಸಂಖ್ಯೆ : No. Accts. ೭೧೮ / ೫೭/ ೮೬/ CIT – II  ದಿನಾಂಕ : ೨-೧೧-೧೯೯೨

ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಘಟಕಗಳಲ್ಲಿರುವ ದತ್ತಿ ವಿವರ ವೀಕ್ಷಣಾ ಕೊಂಡಿಗಳು