ಸಾಹಿತ್ಯ ಸಮ್ಮೇಳನ-೮೧ : ಶ್ರವಣಬೆಳಗೊಳ
(ಫೆಬ್ರವರಿ ೨0೧೫)
ಸಮ್ಮೇಳನಾಧ್ಯಕ್ಷರು : ಸಿದ್ದಲಿಂಗಯ್ಯ ಕವಿ, ಕನ್ನಡ ಪ್ರಾಧ್ಯಾಪಕ ಡಾ. ಸಿದ್ಧಲಿಂಗಯ್ಯನವರು ಹೋರಾಟಗಾರರೂ ಆಗಿದ್ದಾರೆ. ಇವರು ಮಾಗಡಿಯಲ್ಲಿ ವೆಂಕಮ್ಮ-ದೇವಯ್ಯ ದಂಪತಿಗಳಿಗೆ ೩-೨-೧೯೫೪ ರಲ್ಲಿ ಜನಿಸಿದರು. ಬಡತನದಲ್ಲಿಯೇ ಗ್ರಾಮೀಣ ಭಾಗದ ಶಾಲೆಗಳಲ್ಲಿ ತಮ್ಮ ಪ್ರಾರಂಭಿಕ ಶಾಲಾ ವಿದ್ಯಾಭ್ಯಾಸ ಮಾಡಿ ಎಂ.ಎ. ಪದವಿಗಳಿಸಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ, ನಿರ್ದೇಶಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. […]