ಅಧ್ಯಕ್ಷರ ನುಡಿ

ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡ ಜನತೆಯೊಂದಿಗೆ ಉತ್ತಮವಾದಂತಹ ಸಂವಹನ ಸಂಬಂಧ ಹೊಂದುವ ಮಹದಾಶಯದಲ್ಲಿ ಇದೀಗ ಪರಿಷತ್ತಿನ ನವೀಕೃತ ಅಂತರಜಾಲ ತಾಣ ತಮ್ಮ ಮುಂದಿದೆ. ಈ ಮೂಲಕ ಕನ್ನಡ ನಾಡಿನ ಏಕೀಕರಣ ಮತ್ತು ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಕಳೆದ ನೂರೊಂದು ವರ್ಷಗಳ ಅವಧಿಯಲ್ಲಿ ಪರಿಷತ್ತು ನಿರ್ವಹಿಸಿರುವ ಮಹತ್ವದ ಪಾತ್ರವನ್ನು ಸಮಗ್ರವಾಗಿ ಕನ್ನಡಿಗರೆದುರು ತೆರೆದಿಡುತ್ತಿರುವ ಧನ್ಯತೆಯನ್ನು ನಾವು ಅನುಭಾವಿಸುತ್ತಿದ್ದೇವೆ. […]