ಮಳಿಗೆ ನೋಂದಣಿ ಮುಂದುವರಿಯಲು, ದಯವಿಟ್ಟು ಈ ಹಂತಗಳನ್ನು ಅನುಸರಿಸಿ.
ಮುಂದುವರಿಸಲು `ಪುಸ್ತಕ ಮಳಿಗೆ` ಅಥವಾ `ವಾಣಿಜ್ಯ ಮಳಿಗೆ` ಆಯ್ಕೆಮಾಡಿ.
ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಒಮ್ಮೆ ಪೂರ್ಣಗೊಂಡ ನಂತರ ಅರ್ಜಿ ಅನ್ನು ಸಲ್ಲಿಸಿ.
ಮೊದಲಿಗೆ ವಿಳಾಸದ ಪುರಾವೆಗಾಗಿ ಅಗತ್ಯವಿರುವ ದಾಖಲಾತಿ ಸಲ್ಲಿಸಿ.
ಮಳಿಗೆಗಳ ವಿನ್ಯಾಸ ನಕ್ಷೆಯನ್ನು ಪರಿಶೀಲಿಸಿ ನಿಮಗೆ ಬೇಕಾದ ಮಳಿಗೆ ಆಯ್ಕೆಯನ್ನು ಮಾಡಲು, ಸಂಬಂಧಪಟ್ಟ ಮಳಿಗೆ ಮೇಲೆ ಕ್ಲಿಕ್ ಮಾಡಿ , ನಿಮ್ಮ ಆಯ್ಕೆಯನ್ನು ದೃಢೀಕರಿಸಿ ನಂತರ ಶುಲ್ಕ ಪಾವತಿ ಮಾಡಲು ಇರುವಂತಹ ಆಯ್ಕೆಯನ್ನು ಬಳಸಿಕೊಂಡು ಹಣ ಪಾವತಿಸಿ.
ಪುಸ್ತಕ ಮಳಿಗೆಗಳಿಗೆ ಸಂಬಂಧಪಟ್ಟಂತೆ ಮೂರು ದಿನಗಳ ಅವರಿಗೆ ಒಂದು ಮಳಿಗೆ ಕಾಯ್ದಿರಿಸುವ ಶುಲ್ಕ ರೂಪಾಯಿ ₹೪೦೦೦ (ನಾಲ್ಕು ಸಾವಿರ ಮಾತ್ರ).
ವಾಣಿಜ್ಯ ಮಳಿಗೆಗಳಿಗೆ ಒಂದು ಮಳಿಗೆಗೆ ಮೂರು ದಿನ ಕಾಯ್ದಿರಿಸುವ ಶುಲ್ಕ ₹೬೦೦೦ (ಆರು ಸಾವಿರ ಮಾತ್ರ).
ಮಳಿಗೆಗಳನ್ನು ಹಂಚುವ ಅಥವಾ ನೋಂದಣಿ ತಿರಸ್ಕರಿಸುವ ಹಕ್ಕನ್ನು ವಸ್ತು ಪ್ರದರ್ಶನ ಸಮಿತಿ ಹೊಂದಿರುತ್ತದೆ
ಬುಕ್ ಮಾಡಿದೆಪ್ರಗತಿಯಲ್ಲಿದೆಲಭ್ಯವಿದೆ
ಸೂಚನೆಗಳು:
(*)
ಈ ಗುರುತು ಹೊಂದಿರುವ ಜಾಗ ಕಡ್ಡಾಯವಾಗಿದ್ದು ಭರ್ತಿ ಮಾಡಬೇಕು.
ಮಳಿಗೆ ಸಮಯವು ಬೆಳಿಗ್ಗೆ೯:೦೦ ರಿಂದ ರಾತ್ರಿ ೧೦:೦೦ ವರೆಗೆ ಇರುತ್ತದೆ.
ದಿನಾಂಕ ೬ನೇ ಡಿಸೆಂಬರ್ನಿಂದ ಮಳಿಗೆ ನೋಂದಣಿ ಆರಂಭವಾಗಲಿದ್ದು, ೧೩ರ ರಾತ್ರಿ ನೋಂದಣಿ ಮುಕ್ತಾಯವಾಗಲಿದೆ.
ಮದ್ಯ ಮತ್ತು ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ.
ಮಳಿಗೆನಲ್ಲಿ ಅಡುಗೆ ಮಾಡುವುದನ್ನು ನಿಷೇಧಿಸಲಾಗಿದೆ.
ಪ್ರತಿಯೊಂದು ಮಳಿಗೆಗೆ ಸಮಿತಿ ಒದಗಿಸುವ ಸೌಲಭ್ಯಗಳು ಈ ಮುಂದಿನಂತಿವೆ ( ಒಂದು ಟೇಬಲ್, ಎರಡು ಕುರ್ಚಿ , ಒಂದು ಜಂಕ್ಷನ್ ಬಾಕ್ಸ್, ವಿದ್ಯುತ್ ಸೌಲಭ್ಯ).
ಮಳಿಗೆ ನೋಂದಣಿಯು ವಸತಿ ಸೌಲಭ್ಯವನ್ನು ಒಳಗೊಂಡಿರುವುದಿಲ್ಲ.
ದಿನಾಂಕ ೧೯ ಡಿಸೆಂಬರ್ ೨೦೨೪ ರಂದು ಹಂಚಿಕೆ ಮಾಡಲಾದ ಮಳಿಗೆಗಳನ್ನು ಸಂಬಂಧ ಪಟ್ಟ ನೋಂದಣಿ ದಾರರು ಹಸ್ತಾಂತರ ಪಡೆಯುವುದು.
ದಿನಾಂಕ ೨೦ ,೨೧, ೨೨ ಮೂರು ದಿನಗಳ ಅವಧಿಗೆ ಮಾತ್ರ ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ.
ಸಾಹಿತ್ಯ ಸಮ್ಮೇಳನದ ವಿನ್ಯಾಸ, ಪುಸ್ತಕ ಮಳಿಗೆ ಮತ್ತು ವಾಣಿಜ್ಯ ಮಳಿಗೆಗಳ ವಿನ್ಯಾಸವನ್ನು ಈ ಕೆಳಗೆ ತಮ್ಮ ಮಾಹಿತಿಗಾಗಿ ಒದಗಿಸಿದ್ದು ಈ ನಕ್ಷೆಯನ್ನು ಪರಿಶೀಲಿಸಿ ತಮ್ಮ ಇಚ್ಛೆಯ ಮಳಿಗೆಯನ್ನು ಕಾಯ್ದಿರಿಸಲು ಆಯ್ಕೆ ಮಾಡಲು ಕೋರಿದೆ.
ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ.
ಕಾನೂನುಬಾಹಿರ ಚಟುವಟಿಕೆಗಳಲ್ಲಿ ಅಥವಾ ಸಮಸ್ಯೆ ಸೃಷ್ಟಿಸುವ ಚಟುವಟಿಕೆಗಳಲ್ಲಿ ಯಾರೂ ಭಾಗವಹಿಸಬಾರದು.
ನಿಮ್ಮ ಆಯಾ ಮಳಿಗೆಗಳಲ್ಲಿ ತೆಗೆದುಕೊಳ್ಳಬೇಕಾದ ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು.