ಮೊಬೈಲ್ಗಳಲ್ಲಿ ಜುಲೈ ೨೦೧೭ರಿಂದ ಪೂರ್ಣಪ್ರಮಾಣದಲ್ಲಿ ಕನ್ನಡ ಲಭ್ಯ

kannada-in-mobiles

ಮೊಬೈಲ್ಗಳಲ್ಲಿ ಜುಲೈ ೨೦೧೭ರಿಂದ ಪೂರ್ಣಪ್ರಮಾಣದಲ್ಲಿ  ಕನ್ನಡ ಲಭ್ಯ

ಬರುವ ಜುಲೈ ೨೦೧೭ರಿಂದ ಮೊದಲ್ಗೊಂಡಂತೆ  ಎಲ್ಲಾ  ಮೊಬೈಲ್  ಉತ್ಪಾದನಾ ಸಂಸ್ಥೆಗಳೂ  ತಾವು ಭಾರತದಲ್ಲಿ ಮಾರಾಟ ಮಾಡುವ ಎಲ್ಲಾ ಮೊಬೈಲ್ಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವುದಾಗಿ ಭಾರತ ಸರ್ಕಾರಕ್ಕೆ ಆಶ್ವಾಸನೆ ನೀಡಿವೆ.  ಈ ನಿಟ್ಟಿನಲ್ಲಿ  ಕೇಂದ್ರ ಸರ್ಕಾರದ ಗಣಕ ತಂತ್ರಜ್ಞಾನ ಮಂತ್ರಿಗಳು ಹಾಗೂ     ಮೊಬೈಲ್ ಉತ್ಪಾದನಾ ಸಂಸ್ಥೆಗಳ ನಡುವೆ    ಏರ್ಪಟ್ಟ ಮಾತುಕತೆಗಳಲ್ಲಿ  ಈ ಫಲಪ್ರದ  ಒಪ್ಪಂದ ಏರ್ಪಟ್ಟಿದೆ.  ಈ ಒಪ್ಪಂದದ ಏರ್ಪಡುವಿಕೆಯಲ್ಲಿ ಮಹಾನ್ ಗಣಕ ತಂತ್ರಜ್ಞರೂ ಐ.ಬಿ.ಎಮ್ ಸಂಸ್ಥೆಯ ಹಿರಿಯ ಅಧಿಕಾರಿಗಳೂ ಆದ  ಕನ್ನಡಿಗ  ಉದಯ ಪುರಾಣಿಕ್  ಅವರು ಪ್ರಮುಖ ಪಾತ್ರವಹಿಸಿದ್ದಾರೆ.  ಗಣಕತಂತ್ರವನ್ನು ಕನ್ನಡದಲ್ಲಿ  ಬಳಕೆಗೆ ತರುವಲ್ಲಿ ಪ್ರಮುಖ ಸಾಧನೆಗಳಿಗೆ ಹೆಸರಾದ  ಉದಯ ಪುರಾಣಿಕ್ ಅವರು  ಬ್ಯಾಂಕಿಂಗ್ ಕ್ಷೇತ್ರದ  ‘ಎ.ಟಿ.ಎಮ್’ಗಳಲ್ಲಿ  ಕನ್ನಡವನ್ನು   ಬಳಕೆಗೆ  ತರುವುದರಲ್ಲಿ ಸಹಾ ಮಹತ್ವದ ಪಾತ್ರ ನಿರ್ವಹಿಸಿದ್ದವರು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಕನ್ನಡ ಹಾಗೂ ಇತರ ಪ್ರಮುಖ ಭಾರತೀಯ ಭಾಷೆಗಳ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಿರುವ ಮುಂಬರುವ ಮೊಬೈಲುಗಳಲ್ಲಿ ಕಾಣಬರುವ ಪ್ರಮುಖ ವೈಶಿಷ್ಟ್ಯಪೂರ್ಣ ವೆತ್ಯಾಸಗಳೆಂದರೆ ಹೆಚ್ಚಿನ ಕ್ಷಿಪ್ರ  ಕಾರ್ಯನಿರ್ವಹಣೆಗೆ ಅಗತ್ಯವಾದ ರಾಮ್ (ರಾಂಡಂ ಅಕ್ಸೆಸ್ ಮೆಮೊರಿ), ಕೆಲವೊಂದು ವಿನ್ಯಾಸದಲ್ಲಿನ ಬದಲಾವಣೆಗಳು, ಮೊಬೈಲ್ ಆಪ್ಗಳಲ್ಲಿ ಕನ್ನಡದ ಬಳಕೆಗೆ ಪೂರ್ಣ ಅವಕಾಶಗಳು, ಎಸ್.ಎಮ್.ಎಸ್ ಸೌಲಭ್ಯಗಳು, ಈ ಮೈಲ್ ಸೌಲಭ್ಯಗಳು, ಈ-ಪುಸ್ತಕಗಳು, ಮೊಬೈಲ್ ಆಡಳಿತ ನಿರ್ವಹಣಾ (e-governance) ವ್ಯವಸ್ಥೆಗಳು ಇತ್ಯಾದಿ.

 

1 Comment

  1. ಪ್ರತಿಯೊಂದು ಯೂನಿವರ್ಸಿಟಿ ನಲ್ಲಿ ಎಂ. ಎ ಮಾಡುವ ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್ ಆಗಿ ಒಂದು ಇಂಗ್ಲಿಷ್ ಅಥವಾ ಬೇರೆ ಭಾಷೆ ಪುಸ್ತಕವನ್ನು ಕನ್ನಡಕ್ಕೆ ಭಾಷಾಂತರ ಮಾಡುವ ಹಾಗೆ ಸಿಲ್ಲಬಸ್ ಬದಲಾಲಾವಣೆ ಮಾಡ ಬೇಕು . ಅದೇ ತರಹ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಒಂದು ತಾಂತ್ರಿಕ ಪುಸ್ತಕ ವನ್ನು ಕನ್ನಡಕ್ಕೆ ಅನುವಾದಿಸ ಬೇಕು ಅಥವಾ ವಿಕಿಪೀಡಿಯ ದಲ್ಲಿ ಇಂತಿಷ್ಟು ಇಂಗ್ಲಿಷ್ ಅನ್ನು ಕನ್ನಡಕ್ಕೆ ಭಾಷಾಂತರ ಮಾಡುವ ಹಾಗೆ ಮಾಡಲು ಒತ್ತಾಯಿಸ ಬೇಕು . ಕರ್ನಾಟಕ ದ ವಿ.ತಾ.ವಿ ತಾಂತ್ರಿಕ ಯೂನಿವರ್ಸಿಟಿ ಈ ನಿಟ್ಟಲ್ಲಿ ಮುಂದಾಗಬೇಕು .

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)