ಸದಸ್ಯತ್ವ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ ಕನ್ನಡ ಉಳಿಸುವ ಹಾಗೂ ಬೆಳೆಸುವ ತಮ್ಮ ನಿರ್ಧಾರಕ್ಕೆ ನಮ್ಮ ಶುಭಾಶಯಗಳು!

ಅರ್ಜಿಯನ್ನು ಮೂರು ಹಂತಗಳಲ್ಲಿ ವಿಂಗಡಿಸಲಾಗಿದೆ. ಮೊದಲಿಗೆ ತಮ್ಮ ವೈಯಕ್ತಿಕ ವಿವರ, ಎರಡನೆಯ ಹಂತದಲ್ಲಿ ತಮ್ಮ ವಿಳಾಸ ಹಾಗೂ ಕೊನೆಯ ಹಂತದಲ್ಲಿ ತಮ್ಮ ಸಾಹಿತ್ಯಿಕ ಹಾಗೂ ಇತರ ವಿವರಗಳನ್ನು ನಮೂದಿಸಬೇಕು. ಇದಾದ ಮೇಲೆ ತಮ್ಮ ಸದಸ್ಯತ್ವ ಆಯ್ಕೆ ಪ್ರಕಾರದ ಮೇಲೆ ತಮ್ಮನ್ನು ಪೇಮೆಂಟ್ ಗೇಟ್-ವೇ ಗೆ ಕರೆದೊಯ್ಯಲಾಗುವುದು. ತಮ್ಮ ಹಣ ಪಾವತಿ ಆದ ಕೂಡಲೆ ತಮಗೆ ಸದಸ್ಯತ್ವ ಸಂಖ್ಯೆಯನ್ನು ನೀಡಲಾಗುತ್ತದೆ.

ತಮ್ಮ ಅರ್ಜಿಯನ್ನು ತುಂಬುವ ಅಥವಾ ತಮ್ಮ ಮಾಹಿತಿಯನ್ನು ನವೀಕರಿಸುವ ಮುನ್ನ ಈ ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ ತಮ್ಮ ಬಳಿ ಇಟ್ಟುಕೊಳ್ಳಿ.

ಕ್ರ.ಮ. ಸಂ. ದಾಖಲೆಗಳ ವಿವರ
ತಮ್ಮ ಆಧಾರ್ ಗುರುತು ಸಂಖ್ಯೆ
ಸ್ಪಷ್ಟವಾಗಿರುವ ೧ ಎಂ.ಬಿ. ಒಳಗಿರುವ ತಮ್ಮ ಇತ್ತೀಚಿನ ಭಾವಚಿತ್ರ
ಹೊಸ ಸದಸ್ಯತ್ವಕ್ಕೆ ಅರ್ಜಿ
ಸಲ್ಲಿಸಲು ದಯವಿಟ್ಟು ಇಲ್ಲಿ ಒತ್ತಿ
ಈಗಾಗಲೇ ಸದಸ್ಯರಾಗಿದ್ದರೆ ತಮ್ಮ ವಿವರ
ನವೀಕರಿಸಲು ದಯವಿಟ್ಟು ಇಲ್ಲಿ ಒತ್ತಿ
ಸ್ಮಾರ್ಟ್ ಕಾರ್ಡ್ ಪಡೆಯಿರಿ
ಹಣ ಪಾವತಿ ಪೂರ್ಣಗೊಳಿಸಿ
ಸದಸ್ಯರಾಗಲು ಮಾನದಂಡಗಳು:
ಪರಿಷತ್ತಿನ ೬ನೆ ನಿಬಂಧನೆಯ ಅನುಸಾರ:

(೧) ಪರಿಷತ್ತಿನ ಧ್ಯೇಯೋದ್ದೇಶಗಳನ್ನು ಒಪ್ಪಿಕೊಂಡು ಅದರ ನಿಯಮ-ನಿಬಂಧನೆಗಳಿಗೆ ಬದ್ಧರಾಗುವ ಮತ್ತು ಕೆಳಕಾಣಿಸಿದ ಅರ್ಹತೆಯುಳ್ಳವರು ಪರಿಷತ್ತಿನ ಸದಸ್ಯತ್ವ ಪಡೆಯಬಹುದು.

(ಅ) ೧೮ ವರ್ಷಗಳ ವಯಸ್ಸನ್ನು ಪೂರ್ಣಗೊಳಿಸಿದವರು.

(ಆ) ವಿದ್ಯಾರ್ಹತೆ : ಕನ್ನಡ ವಿಷಯವನ್ನು ಒಳಗೊಂಡಂತೆ ಕನಿಷ್ಠ ಪ್ರಾಥಮಿಕ ಶಿಕ್ಷಣ ಪಡೆದ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಅಥವಾ ಸದಸ್ಯತ್ವ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಪರಿಷತ್ತು ನಡೆಸುವ ‘ಸರಳ ಕನ್ನಡ ಪರೀಕ್ಷೆ’ಯಲ್ಲಿ ಉತ್ತೀರ್ಣರಾದವರು. ಕನ್ನಡ ಓದು-ಬರಹ ಬಾರದ ವ್ಯಕ್ತಿಗಳು ಈಗಾಗಲೇ ಆಜೀವ ಸದಸ್ಯರಾಗಿದ್ದಲ್ಲಿ, ಅಂಥವರ ಸದಸ್ಯತ್ವ ಅಬಾಧಿತವಾಗಿ ಮುಂದುವರೆಯತಕ್ಕದ್ದು.

ವಿದ್ಯಾರ್ಹತೆಯಿಂದ ವಿನಾಯಿತಿ : ಜಾನಪದ, ನೃತ್ಯ, ಸಂಗೀತ, ರಂಗಭೂಮಿ, ಚಿತ್ರರಂಗ, ಚಿತ್ರಕಲೆ, ಯಕ್ಷಗಾನ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕಲಾವಿದರು, ಕೃಷಿಕರು, ಕುಶಲಕರ್ಮಿಗಳು, ಕಾರ್ಮಿಕರು, ಇನ್ನಿತರೆ ಸಾಮಾನ್ಯ ಹಾಗೂ ಕನ್ನಡ ನಾಡು, ನುಡಿ, ನೆಲ, ಜಲ - ಇವುಗಳ ರಕ್ಷಣೆಗಾಗಿ ಶ್ರಮಿಸಿದ ಓದು, ಬರಹ ಬಾರದ ಕನ್ನಡಿಗರು, ಪರಿಷತ್ತಿನ ಸದಸ್ಯತ್ವವನ್ನು ಬಯಸಿ ಅರ್ಜಿ ಸಲ್ಲಿಸಿದಲ್ಲಿ, ಕನಿಷ್ಠ ವಿದ್ಯಾರ್ಹತೆಯ ಈ ನಿಯಮ ಅನ್ವಯವಾಗತಕ್ಕದ್ದಲ್ಲ.

(ಇ) ಸದಸ್ಯತ್ವ ಬಯಸುವ ವ್ಯಕ್ತಿ, ತನ್ನ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ಯಾವುದೇ ಅಪರಾಧಿಕ ಪ್ರಕರಣ ವಿಚಾರಣೆಗೆ ಬಾಕಿ ಇರುವುದಿಲ್ಲ ಎಂಬುದಾಗಿ ಸ್ವ-ಘೋಷಿತ ಪ್ರಮಾಣಪತ್ರವನ್ನು ಸಲ್ಲಿಸತಕ್ಕದ್ದು. ಆದರೆ, ಇಂತಹ ವ್ಯಕ್ತಿ ಕನ್ನಡ ನಾಡು, ನುಡಿ, ನೆಲ, ಜಲ ಇವುಗಳ ರಕ್ಷಣೆಯ ಸಂಬಂಧವಾಗಿ ಜರುಗಿದ ಹೋರಾಟಗಳಲ್ಲಿ ಭಾಗಿಯಾಗಿದ್ದನೆನ್ನುವ ಕಾರಣಕ್ಕಾಗಿ, ಅಂತಹ ಅಪರಾಧಿಕ ಪ್ರಕರಣ ದಾಖಲಾಗಿದ್ದರೆ ಈ ನಿಯಮ ಅನ್ವಯಿಸುವುದಿಲ್ಲ. ಈ ಸಂಬಂಧ ಸೂಕ್ತ ದಾಖಲೆಯನ್ನು ಒದಗಿಸತಕ್ಕದ್ದು.

(ಈ) ಮತದಾರರ ಹೆಸರಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವ ಸಂಬಂಧವಾಗಿ ಕಾನೂನು ಜಾರಿಗೆ ಬಂದಲ್ಲಿ, ಅದರನ್ವಯ ಅದು ಜಾರಿಗೆ ಬಂದ ದಿನಾಂಕದಂದು ಇರುವ ಪರಿಷತ್ತಿನ ಸದಸ್ಯರಿಗೆ ಕೊಡಮಾಡುವ ಗುರುತಿನ ಚೀಟಿ ‘ಸ್ಮಾರ್ಟ್ ಕಾರ್ಡ್’ಗೆ ಆಧಾರ್ ಕಾರ್ಡ್ ಜೋಡಣೆ ಮಾಡತಕ್ಕದ್ದು.

(ಉ) ಪರಿಷತ್ತಿನ ಧ್ಯೇಯೋದ್ದೇಶಗಳನ್ನು ಒಪ್ಪಿಕೊಂಡು ಅದರ ನಿಯಮ-ನಿಬಂಧನೆಗಳಿಗೆ ಬದ್ಧವಾಗುವ ಯಾವುದೇ ಕನ್ನಡ ಸಂಘ-ಸಂಸ್ಥೆ, ಪರಿಷತ್ತಿನ ಅಂಗಸಂಸ್ಥೆಯಾಗಲು ಬಯಸಿ ಅರ್ಜಿ ಸಲ್ಲಿಸಿದಲ್ಲಿ ಅಂತಹ ಅರ್ಜಿಯೊಂದಿಗೆ ಸಂಸ್ಥೆಯ ನೋಂದಣಿ ಪತ್ರ ಮತ್ತು ಸಂಸ್ಥೆಯು ಅಂಗೀಕರಿಸಿದ ನಡೆವಳಿಯ ದೃಢೀಕೃತ ಪ್ರತಿಗಳನ್ನು ಸಲ್ಲಿಸಿ ನಿಗದಿತ ಶುಲ್ಕವನ್ನು ಪಾವತಿಸಿ ಸದಸ್ಯತ್ವ ಪಡೆಯಬಹುದು. ಅಂತಹ ಸಂಸ್ಥೆಯು ಸಕ್ಷಮ ಪ್ರಾಧಿಕಾರದಲ್ಲಿ ನೋಂದಣಿಗೊಂಡಿರದಿದ್ದಲ್ಲಿ ಪರಿಷತ್ತಿನ ಸದಸ್ಯತ್ವ ಪಡೆಯಬಹುದಾದರೂ ಅದು ಯಾವುದೇ ಚುನಾವಣೆಯಲ್ಲೂ ಮತ ಚಲಾಯಿಸುವ ಹಕ್ಕನ್ನು ಹೊಂದಿರುವುದಿಲ್ಲ.

ಪರಿಷತ್ತಿನ ಸದಸ್ಯರ ವರ್ಗಗಳು, ಅವರು ಸಲ್ಲಿಸಬೇಕಾದ ಶುಲ್ಕ:

ಸದಸ್ಯತ್ವ ವರ್ಗ ಶುಲ್ಕ
(ಅ) ಮಹಾ ಪೋಷಕರು ರೂ. ೧,೦೦,೦೦೦/- (ಒಂದು ಲಕ್ಷ)
(ಆ) ಪೋಷಕರು ರೂ. ೫೦,೦೦೦/- (ಐವತ್ತು ಸಾವಿರ)
(ಇ) ಆಜೀವ ಸದಸ್ಯರು ರೂ ೨೫೦/- (ಇನ್ನೂರ ಐವತ್ತು)
(ಈ) ಮಹಾ ಪೋಷಕ ಸಂಸ್ಥೆಗಳು ರೂ. ೨,೦೦,೦೦೦ (ಎರಡು ಲಕ್ಷ)
(ಉ) ಪೋಷಕ ಸಂಸ್ಥೆಗಳು ರೂ. ೧,೦೦,೦೦೦/- (ಒಂದು ಲಕ್ಷ)
(ಊ) ಸದಸ್ಯ/ದಾನಿ ಸಂಸ್ಥೆಗಳು ರೂ. ೨೫,೦೦೦/- (ಇಪ್ಪತ್ತೈದು ಸಾವಿರ)
(ಋ) ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಅಸ್ತಿತ್ವದಲ್ಲಿ ಇರುವ ಸಂಘ-ಸಂಸ್ಥೆ ರೂ. ೫,೦೦೦/- (ಐದು ಸಾವಿರ)
(ಎ) ಭಾರತೀಯ ಸೇನೆ, ಅರೆಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ / ನಿವೃತ್ತರಾಗಿರುವ ಕನ್ನಡ ಸೈನಿಕರಿಗೆ ಹಾಗೂ ದಿವ್ಯಾಂಗಚೇತನರಿಗೆ ಆಜೀವ ಸದಸ್ಯತ್ವವನ್ನು ಮತ್ತು ಸ್ಮಾರ್ಟ್ ಕಾರ್ಡನ್ನು ಶುಲ್ಕರಹಿತ(ಉಚಿತ)ವಾಗಿ ನೀಡತಕ್ಕದ್ದು.
(ಏ) ಹೊರದೇಶದ ಕನ್ನಡಿಗರು ಅಮೆರಿಕದ ೧೦ ಡಾಲರುಗಳಿಗೆ ಸರಿಸಮಾನವಾದ ಭಾರತದ ರೂಪಾಯಿಗಳನ್ನು ಆಜೀವ ಸದಸ್ಯತ್ವದ ಶುಲ್ಕವಾಗಿ ಪಾವತಿಸತಕ್ಕದ್ದು.

ಸದಸ್ಯತ್ವ ಪಡೆಯುವ ಪ್ರಕ್ರಿಯೆ::

(೧) ಸದಸ್ಯತ್ವ ಪಡೆಯಬಯಸುವ ಆಯಾ ವರ್ಗಗಳ ವ್ಯಕ್ತಿಗಳು ಹಾಗೂ ಸಂಸ್ಥೆಗಳು ನೇರವಾಗಿ, ಪರಿಷತ್ತಿನ ಜಾಲತಾಣ (ವೆಬ್ಸೈಟ್) / ಮೊಬೈಲ್ ಆ್ಯಪ್ ಮೂಲಕ ನಿಗದಿಪಡಿಸಿರುವ ನಮೂನೆಯಲ್ಲಿ ಅರ್ಜಿಯನ್ನು ಭರ್ತಿಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಆನ್ಲೈನ್ ಮೂಲಕ ಶುಲ್ಕವನ್ನು ಪಾವತಿಸತಕ್ಕದ್ದು. ಇಂತಹ ಅರ್ಜಿಯನ್ನು ಹಾಗೂ ದಾಖಲೆಗಳು, ಭಾವಚಿತ್ರಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಪರಿಶೀಲಿಸಿದ ನಂತರ ಸದಸ್ಯತ್ವವನ್ನು ನೀಡಲಾಗುವುದು.

(೨) ಈಗಾಗಲೇ ಸದಸ್ಯತ್ವ ಪಡೆದು ಗುರುತಿನ ಚೀಟಿ ಹೊಂದಿದವರು, ಅಪೇಕ್ಷೆಪಟ್ಟಲ್ಲಿ ಹಾಗೂ ಹೊಸದಾಗಿ ಸದಸ್ಯತ್ವ ಪಡೆಯುವವರು ಆಧುನಿಕ ಗುರುತಿನ ಚೀಟಿ ‘ಸ್ಮಾರ್ಟ್ ಕಾರ್ಡ್’ಅನ್ನು ಕಡ್ಡಾಯವಾಗಿ ಪಡೆಯತಕ್ಕದ್ದು. ಈ ಸಂಬಂಧ ರೂ. ೧೫೦-೦೦ (ಒಂದುನೂರ ಐವತ್ತು ರೂಪಾಯಿ) ಗಳನ್ನು ಹೆಚ್ಚುವರಿಯಾಗಿ (ಆಧುನಿಕ ʻಸ್ಮಾರ್ಟ್ ಕಾರ್ಡ್’ ವೆಚ್ಚ ಮತ್ತು ಅಂಚೆ ವೆಚ್ಚ ಸೇರಿ) ಪಾವತಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಈ 'ಸ್ಮಾರ್ಟ್ ಕಾರ್ಡ್’ ಅನ್ನು ದುರ್ಬಳಕೆ ಮಾಡಿಕೊಳ್ಳುವಂತಿಲ್ಲ.

(೩) ಪರಿಷತ್ತಿನಿಂದ ಪ್ರಕಟಣೆಗೊಳ್ಳುತ್ತಿರುವ ‘ಕನ್ನಡ ನುಡಿ’ ಪತ್ರಿಕೆಯನ್ನು ಎಲ್ಲ ಸದಸ್ಯರುಗಳು ಉಚಿತವಾಗಿ ಆ್ಯಪ್ / ಜಾಲತಾಣದ ಮೂಲಕ ಪಡೆಯಬಹುದು.

(೪) ಸದಸ್ಯತ್ವ ಒಮ್ಮೆ ಅಂಗೀಕಾರವಾದ ನಂತರ ಅದರ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸುವಂತಿಲ್ಲ.

(೫) ಸಾಮಾನ್ಯ / ವಿಶೇಷ ಸಭೆಯಲ್ಲಿ ಭಾಗವಹಿಸಲು ಮತ್ತು ಇಂಥ ಸಭೆಗಳಲ್ಲಿ ಹಾಗೂ ಚುನಾವಣೆಯಲ್ಲಿ ಮತದಾನ ಮಾಡಲು ಅಲ್ಲದೇ ಪರಿಷತ್ತಿನ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಲು ಸದಸ್ಯರು ಪರಿಷತ್ತಿನ ಗುರುತಿನ ಚೀಟಿ/ಸ್ಮಾರ್ಟ್ ಕಾರ್ಡ್ ಅನ್ನು ಹೊಂದಿರಬೇಕು. ಗುರುತಿನ ಚೀಟಿ/ಸ್ಮಾರ್ಟ್ ಕಾರ್ಡ್ ಹೊಂದದೆ ಇರುವವರು ಜನತಾ ಪ್ರಾತಿನಿಧ್ಯ ಕಾಯ್ದೆಯಲ್ಲಿ ಸೂಚಿಸಿರುವ ಗುರುತಿನ ಚೀಟಿಯಲ್ಲಿ ಒಂದನ್ನು ತೋರಿಸಿ ಮತದಾನ ಹಾಗೂ ಸದಸ್ಯರ ಸಭೆಯಲ್ಲಿ ಭಾಗವಹಿಸುವುದು.

(೬) ಯಾವುದೇ ಸದಸ್ಯನ ಅಥವಾ ಸದಸ್ಯ ಸಂಸ್ಥೆಯ ವರ್ತನೆಯು ಪರಿಷತ್ತಿನ ಘನತೆ, ಗೌರವಗಳಿಗೆ ಹಾಗೂ ಧ್ಯೇಯೋದ್ದೇಶಗಳಿಗೆ ವಿರುದ್ದವಾಗಿದ್ದುದು ಕಂಡುಬಂದಲ್ಲಿ, ಅಂತಹ ಸದಸ್ಯರಿಂದ ಅಥವಾ ಸದಸ್ಯ ಸಂಸ್ಥೆಯಿಂದ ವಿವರಣೆಯನ್ನು ಪಡೆದು, ಪರಿಶೀಲನೆ ಮಾಡಿ ಮೇಲ್ನೋಟಕ್ಕೆ ಆರೋಪ ಸರಿ ಇದೆ ಎಂದು ಕಂಡುಬಂದಲ್ಲಿ, ಅಂತಹ ವ್ಯಕ್ತಿಯ / ಸಂಸ್ಥೆಯ ಸದಸ್ಯತ್ವವನ್ನು ಮುಂದಿನ ಆದೇಶದವರೆಗೆ ಅಮಾನತ್ತಿನಲ್ಲಿರಿಸುವ ಅಧಿಕಾರವು ಕೇಂದ್ರ ಪರಿಷತ್ತಿನ ಅಧ್ಯಕ್ಷರಿಗೆ ಇರತಕ್ಕದ್ದು. ಈ ಸಂಬಂಧ ತಮ್ಮ ನಿರ್ಣಯಕ್ಕೆ ಅಧ್ಯಕ್ಷರು ಕಾರ್ಯಕಾರಿ ಸಮಿತಿ ಸಭೆಯ ಅನುಮೋದನೆ ಪಡೆಯಬೇಕು.

(೭) ಕಾರ್ಯಕಾರಿ ಸಮಿತಿಯ ಅಥವಾ ಆಜೀವ ಸದಸ್ಯರಲ್ಲಿ ಯಾರಾದರೂ ಅಪರಾಧಿಕ ಅಪರಾಧದ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಗಾದಲ್ಲಿ ಅಥವಾ ಅವರು ಪರಿಷತ್ತಿನ ಘನತೆ, ಗೌರವಗಳಿಗೆ ಧಕ್ಕೆಯುಂಟು ಮಾಡಿದಲ್ಲಿ ಅಂಥವರು ಪರಿಷತ್ತಿನ ಸದಸ್ಯತ್ವದಿಂದ ಅಮಾನತ್ತು ಗೊಳಿಸಲ್ಪಡುತ್ತಾರೆ. ಅಪರಾಧಿಕ ಅಪರಾಧಗಳಿಗೆ ಶಿಕ್ಷೆಗೆ ಒಳಗಾದಲ್ಲಿ, ಅಂತಹವರಿಗೆ ಹೇಳಿಕೆ ನೀಡಲು ಅವಕಾಶ ಕಲ್ಪಿಸಿ, ಅವರು ಎಸಗಿದ ಅಪರಾಧದ ತೀಕ್ಷ್ಣತೆಯನ್ನು ಪರಿಗಣಿಸಿ, ಅವರನ್ನು ಪರಿಷತ್ತಿನ ಸದಸ್ಯತ್ವದಿಂದ ವಜಾಗೊಳಿಸಲಾಗುತ್ತದೆ.

(೮) ಯಾವುದೇ ಸದಸ್ಯ, ಸದಸ್ಯ ಸಂಸ್ಥೆಯು ಪರಿಷತ್ತಿನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದಲ್ಲಿ ಅದನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಕೇಂದ್ರ ಪರಿಷತ್ತಿನ ಅಧ್ಯಕ್ಷರಿಗೆ ಇರುತ್ತದೆ. ಅಧ್ಯಕ್ಷರು ತಮ್ಮ ನಿರ್ಣಯವನ್ನು ಕಾರ್ಯಕಾರಿ ಸಮಿತಿ ಸಭೆಯಲ್ಲಿ ದಾಖಲಿಸುವುದು ಅವಶ್ಯ.

ಸದಸ್ಯರ ಮತ್ತು ಸದಸ್ಯ-ಸಂಸ್ಥೆಗಳ ಹಕ್ಕು-ಬಾಧ್ಯತೆಗಳು ಹಾಗೂ ಸೌಲಭ್ಯಗಳು::

(೧) ಪರಿಷತ್ತಿನ ಉತ್ಸವ, ಉಪನ್ಯಾಸ, ಗೋಷ್ಠಿ, ಸಮ್ಮೇಳನ ಇತ್ಯಾದಿ ಕಾರ್ಯಕ್ರಮಗಳಲ್ಲಿ ಹಾಜರಾಗುವ ಮಹಾಪೋಷಕರು, ಪೋಷಕರು ಹಾಗೂ ಮಹಾಪೋಷಕ ಸಂಸ್ಥೆ / ಪೋಷಕ ಸಂಸ್ಥೆಯ ಪ್ರತಿನಿಧಿಯೊಬ್ಬರಿಗೆ, ದಾನಿಗಳಿಗೆ, ದಾನಿ ಸಂಸ್ಥೆಗಳ ಪ್ರತಿನಿಧಿಯೊಬ್ಬರಿಗೆ ವೇದಿಕೆಯ ಮುಂಭಾಗದಲ್ಲಿ ಸೂಕ್ತ ಆಸನದ ವ್ಯವಸ್ಥೆ ಮಾಡಿ ಅವರನ್ನು ಗೌರವಿಸುವುದು.

(೨) ಎಲ್ಲ ವರ್ಗಗಳ ಸದಸ್ಯರೂ ಪರಿಷತ್ತಿನ ಆಜೀವ ಸದಸ್ಯರೆಂದು ಪರಿಗಣಿಸಲ್ಪಟ್ಟು ಅವರು ಪುಸ್ತಕ ಭಂಡಾರ, ವಾಚನಾಲಯ ಮೊದಲಾದವುಗಳ ಸೌಲಭ್ಯಗಳನ್ನು ಪಡೆಯಲು ಹಾಗೂ ಚುನಾವಣಾ ನಿಯಮಗಳಿಗೆ ಒಳಪಟ್ಟು ಚುನಾವಣೆಗಳಲ್ಲಿ ಮತದಾನ ಮಾಡಲು ಅರ್ಹರಾಗಿರುತ್ತಾರೆ.

(೩) ಪರಿಷತ್ತಿನ ಪ್ರಕಟಣೆಗಳ ಕುರಿತಾಗಿ ಸದಸ್ಯರಿಗೆ ವಿಶೇಷ ರಿಯಾಯತಿ ನೀಡಲಾಗುವುದು.

(೪) (ಅ) ಯಾವುದೇ ಸದಸ್ಯನು ಕೇಂದ್ರ ಪರಿಷತ್ತಿನ ಅಥವಾ ತನಗೆ ಸಂಬಂಧಿಸಿದ ಘಟಕದ ಕಾರ್ಯಕಾರಿ ಸಮಿತಿಯ ಯಾವುದೇ ನಿರ್ಣಯದಿಂದ / ಗೊತ್ತುವಳಿಯಿಂದ ಬಾಧಿತನಾದಲ್ಲಿ ಅಂತಹ ಸದಸ್ಯನು ವಾರ್ಷಿಕ / ವಿಶೇಷ ಸಾಮಾನ್ಯ ಸಭೆಗೆ ಮೇಲ್ಮನವಿಯನ್ನು ಸಲ್ಲಿಸುವ ಹಕ್ಕು ಹೊಂದಿರುತ್ತಾನೆ.

(ಆ) ಪ್ರತಿ ಅರ್ಹ ಸದಸ್ಯರಿಗೆ ಸಾಮಾನ್ಯ ಸಭೆಯಲ್ಲಿ / ವಿಶೇಷ ಸಭೆಯಲ್ಲಿ / ಚುನಾವಣೆಯಲ್ಲಿ ಮತದಾನ ಮಾಡುವ ಸಂದರ್ಭದಲ್ಲಿ ಒಂದೇ ಮತ ಚಲಾಯಿಸಲು ಅವಕಾಶವಿರತಕ್ಕದ್ದು.

(೭) ಯಾವುದೇ ಸಭೆಯಲ್ಲಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಪರ ಮತ್ತು ವಿರೋಧವಾಗಿ ಸಮಾನ ಮತಗಳು ಬಂದಲ್ಲಿ ಆ ಸಭೆಯ ಅಧ್ಯಕ್ಷರಿಗೆ ಹೆಚ್ಚುವರಿಯಾಗಿ ಒಂದು ನಿರ್ಣಾಯಕ ಮತವನ್ನು ಚಲಾಯಿಸಲು ಅಧಿಕಾರ ಇರತಕ್ಕದ್ದು.

  ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಗಳನ್ನು ಓದಿರುತ್ತೇನೆ ಹಾಗೂ ಅವನ್ನು ಪಾಲಿಸಲು ಸಿದ್ಧನಿದ್ದೇನೆ
ದೃಢೀಕರಣ
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆಯಲು ದಯವಿಟ್ಟು ತಾವು ಉಪಯೋಗಿಸುವ ಮೊಬೈಲ್ ಸಂಖ್ಯೆಯನ್ನೇ ಬಳಸಿ.

ದಯವಿಟ್ಟು ಗಮನಿಸಿ:
ಕೆಲವು ಹೊರ ಜಗತ್ತಿನ ವ್ಯಾವಹಾರಿಕ ಹಾಗೂ ತಾಂತ್ರಿಕ ಕಾರಣಗಳಿಗೊಸ್ಕರ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ರಕ್ತ ಗುಂಪು ಹಾಗೂ ಕೆಲವು ಇತರೆ ಮಾಹಿತಿಗಳನ್ನು ಅರ್ಜಿ ನಮೂನೆಯಲ್ಲಿ ಸೂಚಿಸಿದಂತೆ ಆಂಗ್ಲ ಭಾಷೆಯಲ್ಲಿ ತುಂಬಿ.

ಅಥವಾ ತಾವು ತಮ್ಮ e-mail ಗೆ OTP ಕಳಿಸಿಕೊಳ್ಳಬಹುದು
ನಕ್ಷತ್ರ (*) ಗುರುತಿರುವ ಮಾಹಿತಿ ತುಂಬುವುದು ಕಡ್ಡಾಯ
ವೈಯಕ್ತಿಕ ವಿವರ
ನೀವು ಕರ್ನಾಟಕ ರಾಜ್ಯದ ಹೊರಗೆ ವಾಸಿಸುತ್ತಿದ್ದರೆ ತಮ್ಮ ವಿಳಾಸವನ್ನು ಪತ್ರ ವ್ಯವಹಾರ ನಡೆಸಲು ಅನುಕೂಲ ಮಾಡಿಕೊಡುವ ಸಲುವಾಗಿ ಇಂಗ್ಲಿಷ್‌ನಲ್ಲಿ ತುಂಬಿರಿ
ನಕ್ಷತ್ರ (*) ಗುರುತಿರುವ ಮಾಹಿತಿ ತುಂಬುವುದು ಕಡ್ಡಾಯ
ವಿಳಾಸ

೧೩. ನೀವು ಕರ್ನಾಟಕ ರಾಜ್ಯ ಅಥವಾ ದೇಶದ ಹೊರಗೆ ವಾಸಿಸುತ್ತಿದ್ದರೆ ಪತ್ರ ವ್ಯವಹಾರ ನಡೆಸಲು ಅನುಕೂಲ ಮಾಡಿಕೊಡುವ ಸಲುವಾಗಿ ತಮ್ಮ ವಿಳಾಸವನ್ನು ಇಂಗ್ಲಿಷ್‌ನಲ್ಲಿ ತುಂಬಿರಿ

ನಕ್ಷತ್ರ (*) ಗುರುತಿರುವ ಮಾಹಿತಿ ತುಂಬುವುದು ಕಡ್ಡಾಯ
ಇತರ ವಿವರ
ಇದೆ
ಇಲ್ಲ
೨೯.ಊ. ನಾನು ಕನ್ನಡ ಪರ ಹೋರಾಟಗಾರ/ಹೋರಾಟಗಾರ್ತಿ ಆಗಿದ್ದರಿಂದ ನನಗೆ ಪೊಲೀಸ ಮೊಕದ್ದಮೆ ನಿಬಂಧನೆಯಿಂದ ರಿಯಾಯಿತಿ ಇರುತ್ತದೆ
ನಕ್ಷತ್ರ (*) ಗುರುತಿರುವ ಮಾಹಿತಿ ತುಂಬುವುದು ಕಡ್ಡಾಯ
ತಮ್ಮ ವಿವರ ಪರಿಶೀಲಿಸಿ
ಈ ನಮೂನೆಯಲ್ಲಿ ತುಂಬಿರುವ ಮಾಹಿತಿ ನನ್ನ ಅರಿವಿಗೆ ತಿಳಿದಷ್ಟು ಮಟ್ಟಿಗೆ ಸರಿ ಹಾಗೂ ನಿಜವಾಗಿದೆ. ಇದರಲ್ಲಿ ಏನಾದರೂ ತಪ್ಪು ಹಾಗೂ ಸುಳ್ಳು ಮಾಹಿತಿ ಎಂದು ಕಂಡುಬಂದಲ್ಲಿ ಕಸಾಪ ನನ್ನ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬಹುದು ಹಾಗೂ ಯಾವುದೇ ಮುಂಚಿತ ಮಾಹಿತಿ ಇಲ್ಲದೇ ನನ್ನ ಸದಸ್ಯತ್ವ ರದ್ಧುಗೊಳಿಸಬಹುದು.

Photo
ಗೌರವಸೂಚಕ
ಮೊದಲ ಹೆಸರು
ಮಿಂಚಂಚೆ
ಆಧಾರ್ ಸಂಖ್ಯೆ
ಲಿಂಗ
ಜನ್ಮ ದಿನಾಂಕ
ರಕ್ತ ಗುಂಪು
ವಿದ್ಯಾರ್ಹತೆ
ಉದ್ಯೋಗ
ವಿಳಾಸ (ಸಾಲು ೧)
ವಿಳಾಸ (ಸಾಲು ೨)
ಜಿಲ್ಲೆ
ವಿಧಾನಸಭಾ ಕ್ಷೇತ್ರ
ತಾಲ್ಲೂಕು
ಹೋಬಳಿ
ಹಳ್ಳಿ
ನಗರ
ರಾಜ್ಯ
ದೇಶ
ಅಂಚೆ ಸೂಚ್ಯಂಕ
ದೂರವಾಣಿ ಸಂಖ್ಯೆ
ಮೊಬೈಲ್ ಸಂಖ್ಯೆ
ವಾಟ್ಸ್ಆ್ಯಪ್ ಸಂಖ್ಯೆ
ತುರ್ತು ಸಂಪರ್ಕ (ಮೊಬೈಲ್ ಸಂಖ್ಯೆ)
ಸಾಹಿತ್ಯ ಕೃಷಿ
ವಿಶೇಷ ಅರ್ಹತೆ
ತಮ್ಮ ಮೇಲೆ ಯಾವುದಾದರೂ ಪೋಲೀಸ್ ಠಾಣೆಯಲ್ಲಿ (ಭಾರತ ಅಥವಾ ವಿದೇಶ) ಮೊಕದ್ದಮೆ ಇದೆಯೇ?
No
ಮೊಕದ್ದಮೆ ಸಂಖ್ಯೆ
ಪೊಲೀಸ್ ಠಾಣೆ
ಯಾವ ನ್ಯಾಯಾಲಯದಲ್ಲಿ?
ಸದಸ್ಯತ್ವ ಶುಲ್ಕ ಕೆಳಕಂಡಂತೆ ಇರುತ್ತದೆ

ಧನ್ಯವಾದಗಳು. ತಮ್ಮ ಮಾಹಿತಿಯನ್ನು ನವೀಕರಿಸಲಾಗಿದೆ.

ದಯವಿಟ್ಟು ತಮ್ಮ ಸದಸ್ಯತ್ವದ ವರ್ಗ ಆಯ್ಕೆಮಾಡಿ:
ಸದಸ್ಯತ್ವ ವರ್ಗ ಪಾವತಿ ಮಾಡಬೇಕಾದ ಮೊತ್ತ
ವ್ಯಕ್ತಿಗತ
ಆಜೀವ ಸದಸ್ಯರು ರೂ. ೨೫೦
ಮಹಾ ಪೋಷಕರು ರೂ. ೧,೦೦,೦೦೦
ಪೋಷಕರು ರೂ. ೫೦,೦೦೦
ಸಂಸ್ಥೆಗಳು
ಮಹಾ ಪೋಷಕ ಸಂಸ್ಥೆಗಳು ರೂ. ೨,೦೦,೦೦೦
ಪೋಷಕ ಸಂಸ್ಥೆಗಳು ರೂ. ೨,೦೦,೦೦೦
ಸದಸ್ಯ/ದಾನಿ ಸಂಸ್ಥೆಗಳು ರೂ. ೨೫,೦೦೦
ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಅಸ್ತಿತ್ವದಲ್ಲಿ ಇರುವ ಸಂಘ-ಸಂಸ್ಥೆ ರೂ. ೫,೦೦೦
ಹೊರದೇಶದ ಕನ್ನಡಿಗರು ಅಮೆರಿಕದ ಹತ್ತು ಡಾಲರುಗಳಿಗೆ ಸರಿಸಮಾನವಾದ ಭಾರತದ ರೂಪಾಯಿಗಳನ್ನು ಆಜೀವ ಸದಸ್ಯತ್ವದ ಶುಲ್ಕವಾಗಿ ಪಾವತಿಸತಕ್ಕದ್ದು ರೂ. ೮೦೦

ಸ್ಮಾರ್ಟ್ ಕಾರ್ಡ್ ರೂ. ೧೫೦
ಪರಿಷ್ಕರಣಾ ಶುಲ್ಕ ರೂ. ೧೦

ಪಾವತಿಸಬೇಕಾದ ಒಟ್ಟು ಮೊತ್ತ
ರೂ. ೪೧೦
ನಾನು ಭಾರತೀಯ ಸೇನೆ, ಅರೆಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ/ನಿವೃತ್ತರಾಗಿರುವ ಕನ್ನಡ ಸೈನಿಕ
ನಾನು ದಿವ್ಯಾಂಗಚೇತನ
ಹಣ ಪಾವತಿಸಲು ತಮ್ಮನ್ನು ಸುರಕ್ಷಿತ ಪೇಮೆಂಟ್ ಗೇಟ್ ವೇ ಗೆ ಕೊಂಡೊಯ್ಯಲಾಗುವುದು

ಧನ್ಯವಾದಗಳು. ತಮ್ಮ ವಿವರಗಳನ್ನು ಪರಿಶೀಲಿಸಿ ಮುಂದಿನ ಕ್ರಮಕ್ಕೆ ನಮ್ಮ ಕಚೇರಿಯು ತಮ್ಮನ್ನು ಮಿಂಚಂಚೆ ಮೂಲಕ ಸಂಪರ್ಕಿಸುವುದು.

ಅಭಿನಂದನೆಗಳು!
ತಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಅರ್ಜಿಗೆ ತಾತ್ಪೂರ್ತಿಕ ಸಮ್ಮತಿ ನೀಡಲಾಗಿದೆ. ತಮ್ಮ ವಿವರಗಳನ್ನು ಪರಿಶೀಲಿಸಿ ಅಗತ್ಯ ಬಂದರೆ ನಮ್ಮ ಕಚೇರಿಯು ತಮ್ಮನ್ನು ಸಂಪರ್ಕಿಸಬಹುದು.

ತಮ್ಮ ಸದಸ್ಯತ್ವ ಗುರುತು ಸಂಖ್ಯೆ: .

ಹೆಚ್ಚಿನ ಮಾಹಿತಿಗಾಗಿ ಪರಿಷತ್ತನ್ನು ಸಂಪರ್ಕಿಸಿ contact@kasapa.in