ಶಂ.ಬಾ. ಜೋಶಿ

ನಮ್ಮ ನಾಡಿನ ಪ್ರಖ್ಯಾತ ವಿದ್ವಾಂಸರಾದ ಶಂಕರ ಬಾಳದೀಕ್ಷಿತ ಜೋಶಿ ಅವರು ‘ಶಂ. ಬಾ.’ ಎಂದೇ ಪ್ರಖ್ಯಾತರು. ಅವರು ಹುಟ್ಟಿದ್ದು ದಿನಾಂಕ 4ನೆ ಜನವರಿ 1896ರಲ್ಲಿ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಗುರ್ಲಹೊಸೂರು ಇಂದು ಮಲಪ್ರಭಾ ಪ್ರವಾಹದಿಂದ ಮುಳುಗಡೆ ಆಗಿರುವ ಊರು. ಆ ಊರಿನಲ್ಲಿಯೇ ಶಂ. ಬಾ. ಅವರು ಜನಿಸಿದ್ದು. […]

ಬಿ.ಎಂ.ಶ್ರೀ

ಬಿ. ಎಂ.ಶ್ರೀ ಕಳೆದ ಶತಮಾನದಲ್ಲಿ ಸಾಮಾಜಿಕ ಬದುಕಿನಲ್ಲಿ ಮತ್ತು ಸಾಹಿತ್ಯ ಲೋಕದಲ್ಲಿ ಕನ್ನಡವನ್ನು ಉಳಿಸಿ ಬೆಳೆಳೆಸಿ ಪೋಷಿಸುವುದರಲ್ಲಿ ಮಹತ್ವದ ಪಾತ್ರ ನಿರ್ವಹಿಸಿದವರಲ್ಲಿ ಆಚಾರ್ಯ ಬಿ. ಎಂ. ಶ್ರೀಕಂಠಯ್ಯನವರು ಪ್ರಮುಖರಾಗಿದ್ದಾರೆ. ಕನ್ನಡ ನವೋದಯ ಕಾರ್ಯಪ್ರವರ್ತಕ, ಕನ್ನಡದ ಕಣ್ವ, ಕರ್ನಾಟಕದ ಅಚಾರ್ಯಪುರುಷ ಎಂದು ಖ್ಯಾತ ನಾಮರಾದ ಪ್ರೊಫೆಸರ್ ಬಿ.ಎಂ. ಶ್ರೀಕಂಠಯ್ಯನವರು ಜನಿಸಿದ […]

ದೇವುಡು

ಕನ್ನಡ ಸಾಹಿತ್ಯಲೋಕದ ಮಹತ್ಕಾದಂಬರಿಗಳಾದ  ‘ಮಹಾಬ್ರಾಹ್ಮಣ’, ‘ಮಹಾಕ್ಷತ್ರಿಯ’, ‘ಮಹಾದರ್ಶನ’, ‘ಮಯೂರ’, ‘ಅಂತರಂಗ’ ಮುಂತಾದವನ್ನು ಸೃಷ್ಟಿಸಿದವರು ದೇವುಡು ನರಸಿಂಹ ಶಾಸ್ತ್ರಿಗಳು.  ರಂಗಭೂಮಿ ಮತ್ತು ಚಲನಚಿತ್ರಗಳಲ್ಲೂ ದೇವುಡು ಕೆಲಸ ಮಾಡಿದವರು.   ಮೈಸೂರಿನಲ್ಲಿ ರಾಜಪುರೋಹಿತರೂ, ಆಸ್ಥಾನ ಪಂಡಿತರೂ ಎಂದು ಹೆಸರುವಾಸಿಯಾದ ವಂಶದಲ್ಲಿ ಡಿಸೆಂಬರ್ 27, 1897ರಂದು ದೇವುಡು ಜನಿಸಿದರು. ಇವರ ತಂದೆ 1880ರಲ್ಲಿ ಸ್ಥಾಪನೆಯಾದ […]

ಯು.ಆರ್. ಅನಂತಮೂರ್ತಿ

ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ 1932 ಡಿಸೆಂಬರ್ 21ರಂದು ರಾಜಗೋಪಾಲಾಚಾರ್ಯ-ಸತ್ಯಮ್ಮ ದಂಪತಿಗಳ ಹಿರಿಯ ಮಗನಾಗಿ ಜನಿಸಿದರು. ಅವರ ತಾತ ಪದ್ಮನಾಭಾಚಾರ್ಯ ಅಂಗಿ ತೊಡದೆ ಧೋತ್ರ ಹೊದೆದು ಜುಟ್ಟಿನಲ್ಲಿ ತುಳಸಿ ಮುಡಿಯುತ್ತಿದ್ದ ಶುದ್ಧ ವೈದಿಕ ಬ್ರಾಹ್ಮಣ, ಸಾಹಸಪ್ರಿಯ, ಅಲೆಮಾರಿ. ತಂದೆ ರಾಜಗೋಪಾಲಾಚಾರ್ಯರು ಆ ಕಾಲದಲ್ಲೇ ಲಂಡನ್ ಮೆಟ್ರಿಕ್ಯುಲೇಷನ್ […]

ಬೊಳುವಾರು ಮಹಮದ್ ಕುಂಞಿ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡದ ಪ್ರಸಿದ್ಧ  ಕಥೆಗಾರರಾದ ಮಹಮದ್‌ ಕುಂಞಿ ಅವರು ಅಕ್ಟೋಬರ್ 22, 1951ರಂದು  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೊಳುವಾರು ಎಂಬಲ್ಲಿ ಜನಿಸಿದರು. ತಂದೆ ಅಬ್ಬಾಸ್ ಬ್ಯಾರಿ, ತಾಯಿ ಕುಲ್ಸುಂ.  ಅವರ ಪ್ರಾರಂಭಿಕ ಶಿಕ್ಷಣ ಬೊಳುವಾರು, ಪುತ್ತೂರು, ಮಂಗಳೂರುಗಳಲ್ಲಿ ನೆರವೇರಿತು. ಮೈಸೂರು ವಿಶ್ವವಿದ್ಯಾಲಯದಿಂದ ಕುವೆಂಪು ಚಿನ್ನದ ಪದಕದೊಡನೆ ಎಂ.ಎ. (ಕನ್ನಡ) […]

ಎಸ್. ಸಿ. ನಂದೀಮಠ

ಎಸ್. ಸಿ. ನಂದೀಮಠ ಸಂಸ್ಕೃತ, ಕನ್ನಡಗಳಲ್ಲಿ ಪಾಂಡಿತ್ಯ ಪಡೆದ ಎಸ್. ಸಿ. ನಂದೀಮಠರು  (ಶಿವಲಿಂಗಯ್ಯ ಚನ್ನಬಸವಯ್ಯ ನಂದೀಮಠ) ೧೨-೧೨-೧೯00ರಲ್ಲಿ ಗೋಕಾಕ ತಾಲ್ಲೂಕಿನ ನಂದೀಗ್ರಾಮದಲ್ಲಿ ಜನಿಸಿದರು. ಗೋಕಾಕ ಮತ್ತು ಬೆಳಗಾವಿಗಳಲ್ಲಿ ಆರಂಭದ ವಿದ್ಯಾಭ್ಯಾಸ ಮಾಡಿದ ಇವರು ಧಾರವಾಡದಲ್ಲಿ ಬಿ.ಎ. ಪದವಿಯನ್ನೂ, ೧೯೨೬ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನೂ ಗಳಿಸಿದರು. ಲಂಡನ್ನಿಗೆ […]

ಸಿ. ಕೆ. ವೆಂಕಟರಾಮಯ್ಯ

ಪ್ರಸಿದ್ಧ ವಾಗ್ಮಿಗಳು, ಗ್ರಂಥಕರ್ತರೂ ಆದ ಸಿ. ಕೆ. ವೆಂಕಟರಾಮಯ್ಯನವರು ಕೃಷ್ಣಪ್ಪ-ನಂಜಮ್ಮನವರಿಗೆ ಪುತ್ರರಾಗಿ ೧0-೧೨-೧೮೯೬ರಲ್ಲಿ ಜನಿಸಿದರು. ಸೋಲೂರು, ಕುಂದೂರು ಮಾಗಡಿ, ಚೆನ್ನಪಟ್ಟಣಗಳಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದ ಮೇಲೆ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ಬಿ.ಎ. ಪದವಿ ಗಳಿಸಿದರು.  ಮುಂಬೈಗೆ ಹೋಗಿ ಎಂ.ಎ. ಮತ್ತು ಎಲ್.ಎಲ್.ಬಿ. ಪದವಿ ಪಡೆದರು. ಶ್ರೀರಂಗಪಟ್ಟಣದಲ್ಲಿ ವಕೀಲಿ […]

ಶಾಂತಾದೇವಿ ಮಾಳವಾಡ

ಶಾಂತಾದೇವಿ ಮಾಳವಾಡ ಅವರು ಸಾಹಿತಿಯಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ ಕರ್ನಾಟಕದ ಸಾಂಸ್ಕೃತಿಕ ವಲಯದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದಾರೆ.  ತಮ್ಮ  ಆಪ್ತವೆನಿಸುವ ವ್ಯಕ್ತಿತ್ವದಿಂದಾಗಿ ಎಲ್ಲರಲ್ಲೂ ‘ಶಾಂತಕ್ಕ’ನೆಂದು ಹೆಸರುವಾಸಿಯಾಗಿದ್ದವರು. ಶಾಂತಾದೇವಿಯವರು 1922ರ ಡಿಸೆಂಬರ್ 10ರಂದು ಬೆಳಗಾಂವಿಯಲ್ಲಿ ಜನಿಸಿದರು.  ಅಪ್ಪ ಅಮ್ಮ ಇಟ್ಟ ಹೆಸರು ದಾನಮ್ಮ.  ಚಿಕ್ಕವಯಸ್ಸಿನಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡು “ಬಾಲ್ಯದಲ್ಲಿ ನಾನು […]

ಮೊಬೈಲ್ಗಳಲ್ಲಿ ಜುಲೈ ೨೦೧೭ರಿಂದ ಪೂರ್ಣಪ್ರಮಾಣದಲ್ಲಿ ಕನ್ನಡ ಲಭ್ಯ

ಮೊಬೈಲ್ಗಳಲ್ಲಿ ಜುಲೈ ೨೦೧೭ರಿಂದ ಪೂರ್ಣಪ್ರಮಾಣದಲ್ಲಿ  ಕನ್ನಡ ಲಭ್ಯ ಬರುವ ಜುಲೈ ೨೦೧೭ರಿಂದ ಮೊದಲ್ಗೊಂಡಂತೆ  ಎಲ್ಲಾ  ಮೊಬೈಲ್  ಉತ್ಪಾದನಾ ಸಂಸ್ಥೆಗಳೂ  ತಾವು ಭಾರತದಲ್ಲಿ ಮಾರಾಟ ಮಾಡುವ ಎಲ್ಲಾ ಮೊಬೈಲ್ಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವುದಾಗಿ ಭಾರತ ಸರ್ಕಾರಕ್ಕೆ ಆಶ್ವಾಸನೆ ನೀಡಿವೆ.  ಈ ನಿಟ್ಟಿನಲ್ಲಿ  ಕೇಂದ್ರ ಸರ್ಕಾರದ ಗಣಕ ತಂತ್ರಜ್ಞಾನ ಮಂತ್ರಿಗಳು ಹಾಗೂ […]

ಸಾಲು ಮರದ ತಿಮ್ಮಕ್ಕ ಕುರಿತಾದ ಕವನ “ಭರವಸೆ”

ತಾಯಿ ತಿಮ್ಮಕ್ಕ, ಬಾಯಿಮಾತಲ್ಲ ನಿನ್ನ ದಿವ್ಯಕಾಯಕ. ನೂರುಗಟ್ಟಲೆ ಸಸಿಗಳನ್ನು ನೆಟ್ಟಿದ್ದೀಯೇ, ದೂರದಿಂದ ನೀರು ಹೊತ್ತು ತಂದಿದ್ದೀಯೆ, ಕೈಯಾರೆ ಎರೆದು ಬೆಳೆಸಿದ್ದೀಯೆ, ಬೆವರ ಹನಿ ಬೆರೆಸಿದ್ದೀಯೆ, ನೀ ನೆಟ್ಟ ಮರಗಳಲ್ಲಿ ಹಕ್ಕಿಗಳು ಗೂಡು ಕಟ್ಟಿವೆ ಮಕ್ಕಳು ಜೋಕಾಲಿ ಆಡಿದ್ದಾರೆ, ಬಿಸಿಲ ಕೋಲು ರಂಗೋಲಿ ರಚಿಸಿದೆ, ದಾರಿಹೋಕರು ದಣಿವಾರಿಸಿಕೊಂಡಿದ್ದಾರೆ, ಬುತ್ತಿ ಬಿಚ್ಚಿ […]

1 2 3 4