ಸಾಹಿತ್ಯ ಪರೀಕ್ಷೆಗಳು

೧೯೪೦ನೇ ಇಸವಿಯಿಂದ ಪ್ರಾರಂಭವಾಗಿರುವ ಸಾಹಿತ್ಯ ಪರೀಕ್ಷೆಗಳು ಪರಿಷತ್ತಿನ ಜನಪ್ರಿಯ ಕಾರ್ಯ ಚಟುವಟಿಕೆಗಳಲ್ಲಿ ಒಂದು. ಕನ್ನಡ ಸಾಹಿತ್ಯ-ಸಂಸ್ಕೃತಿಯ ತಿಳುವಳಿಕೆ ನೀಡುವ ಕನ್ನಡ ಕಾವ, ಜಾಣ, ರತ್ನ ಪರೀಕ್ಷೆಗಳನ್ನು ಪ್ರತಿ ವರ್ಷ ನಡೆಸಿಕೊಂಡು ಬರುವುದರ ಜೊತೆಗೆ ಹೊಸದಾಗಿ ಕನ್ನಡ ಕಲಿಯುವ ಆಸಕ್ತರಿಗಾಗಿ ‘ಕನ್ನಡ ಪ್ರವೇಶ’ವೆಂಬ ಪರೀಕ್ಷೆಯನ್ನು ಏರ್ಪಡಿಸುತ್ತಿದೆ. ಪರೀಕ್ಷೆಗಳು ಸರ್ಕಾರದಿಂದ ಅಂಗೀಕಾರ ಪಡೆದಿರುತ್ತವೆ. ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಜನ ಸಾಹಿತ್ಯ ಪರೀಕ್ಷೆಗಳ ಪ್ರಯೋಜನ ಪಡೆದಿದ್ದಾರೆ.

 

೨೦೨೪-೨೫ನೆಯ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ ಹಾಗೂ ರತ್ನ ಪರೀಕ್ಷೆಗಳಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನ

ಕನ್ನಡ ಸಾಹಿತ್ಯ ಪರಿಷತ್ತು ೨೦೨೪-೨೫ನೆಯ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ ಹಾಗೂ ರತ್ನ ಪರೀಕ್ಷೆಗಳಿಗೆ   ಅರ್ಹರಿಂದ  ಅರ್ಜಿಯನ್ನು ೨೦೨೪ರ ಸೆಪ್ಟೆಂಬರ್ ೧೫ರವರೆಗೆ ದಂಡದ ಶುಲ್ಕ ರೂ. ೫೦-೦೦  ಅನ್ನು  ಹೆಚ್ಚುವರಿಯಾಗಿ  ನೀಡಿ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿತ್ತು. ಸಾರ್ವಜನಿಕರ ಹಿತಾಸಕ್ತಿ ಮೇರೆಗೆ ಅರ್ಜಿಯನ್ನು ಸಲ್ಲಿಸಲು ದಿನಾಂಕ 30-09-2024ರ ಅವಧಿಯನ್ನು ವಿಸ್ತರಿಸಲಾಗಿದೆ.  ಪರೀಕ್ಷಾರ್ಥಿಗಳು ಇದರ ಸದುಪಯೋಗವನ್ನು ಪಡೆಯಬಹುದು.

ಅಪ್ಲಿಕೇಶನ್ ೨೦೨೪-೨೦೨೫

ಪರೀಕ್ಷೆಗಳ ನಿಯಮಾವಳಿ
ಬೆಂಗಳೂರು: ಜನ ಸಾಮಾನ್ಯರಲ್ಲಿ ಅದರಲ್ಲಿಯೂ ವಿಶೇಷವಾಗಿ ಕನ್ನಡ ಯುವಜನತೆಯಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಕುರಿತು ಆಸಕ್ತಿ ಮೂಡಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಬಿ.ಎಂ.ಶ್ರೀಯವರು ರೂಪಿಸಿದ ಮುಖ್ಯ ಯೋಜನೆ ಕನ್ನಡ ಸಾಹಿತ್ಯ ಪರೀಕ್ಷೆಗಳು. 1940ರ ಜೂನ್ ತಿಂಗಳಿನಿಂದ ‘ಕನ್ನಡ ಅಣುಗ’ ‘ಕನ್ನಡ ಕಾವ’ ‘ಕನ್ನಡ ಜಾಣ’ ಪರೀಕ್ಷೆಗಳು ಆರಂಭವಾದವು. 1948ರಲ್ಲಿ ‘ಅಣುಗ’ವನ್ನು ಕೈ ಬಿಡಲಾಯಿತು. 1966ರಲ್ಲಿ ‘ಕನ್ನಡ ರತ್ನ’ ಪರೀಕ್ಷೆ ಆರಂಭವಾಗಿದ್ದು 1992ರಲ್ಲಿ ‘ಕನ್ನಡ ಪ್ರವೇಶ’ ಆರಂಭವಾಯಿತು. ಈ ಎಲ್ಲಾ ಪರೀಕ್ಷೆಗಳು ಲಕ್ಷಾಂತರ ಕನ್ನಡಿಗರಲ್ಲಿ ಭಾಷೆ ಮತ್ತು ಸಾಹಿತ್ಯದ ಕುರಿತು ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದು ನಿರಂತರವಾಗಿ ನಡೆದು ಕೊಂಡು ಬರುತ್ತಿವೆ.

ಕನ್ನಡ ಸಾಹಿತ್ಯ ಪರಿಷತ್ತು ೨೦೨೪-೨೫ನೆಯ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ ಹಾಗೂ ರತ್ನ ಪರೀಕ್ಷೆಗಳಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ೨೦೨೪ರ ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯುವ ಮೇಲ್ಕಂಡ ಪರೀಕ್ಷೆಗಳಿಗೆ ಅರ್ಜಿಯನ್ನು ಸಲ್ಲಿಸಲು ೨೦೨೪ರ ಆಗಸ್ಟ್ ೩೧ ಕೊನೆಯ ದಿನಾಂಕವಾಗಿದ್ದು, ೨೦೨೪ರ ಸೆಪ್ಟೆಂಬರ್ ೧೫ರವರೆಗೆ ದಂಡದ ಶುಲ್ಕ ರೂ. ೫೦-೦೦ ಅನ್ನು ಹೆಚ್ಚುವರಿಯಾಗಿ ನೀಡಿ ಅರ್ಜಿ ಸಲ್ಲಿಸಬಹುದು.

ಪರೀಕ್ಷಾ ನಿಯಮಾವಳಿ ಹಾಗೂ ಅರ್ಜಿಯನ್ನು ರೂ. ೨೫-೦೦ಗಳ ಶುಲ್ಕ ಪಾವತಿಸಿ, ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಮಾರಾಟ ಮಳಿಗೆಯಲ್ಲಿ (ಬೆಂಗಳೂರು) ದಿನಾಂಕ ೦೧-೦೭-೨೦೨೪ ರಿಂದ ಪಡೆಯಬಹುದು. ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಈ ಹೆಸರಿಗೆ ಮೂವತ್ತು ರೂಪಾಯಿಗಳನ್ನು ಮನಿಯಾರ್ಡರ್ ಮಾಡಿದರೆ ಅರ್ಜಿಯನ್ನು ತಾವು ನೀಡಿರುವ ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಲಾಗುವುದು.

ಪರೀಕ್ಷಾ ಅರ್ಜಿಗಳನ್ನು ಅಂತರ್ಜಾಲ ತಾಣ www.kasapa.in ಮೂಲಕ ಸಹ ಪಡೆದು ಕೊಳ್ಳಬಹುದು. ಇವರು ನಿಗದಿತ ಪರೀಕ್ಷಾ ಶುಲ್ಕದೊಂದಿಗೆ ಅರ್ಜಿ ಶುಲ್ಕ ರೂ.೨೫/-ಗಳನ್ನು ಪ್ರತ್ಯೇಕವಾಗಿ ಪಾವತಿಸುವುದು.

 

 

೨೦೨೩-೨೦೨೪ನೇ ಸಾಲಿನ ಸಾಹಿತ್ಯ ಪರೀಕ್ಷೆಗಳ ಫಲಿತಾಂಶ

೧.ಕನ್ನಡ ಜಾಣ

೨.ಕನ್ನಡ ಕಾವ

೩.ಕನ್ನಡ ಪ್ರವೇಶ

೪.ಕನ್ನಡ ರತ್ನ

೨೦೨೩-೨೦೨೪  ನೇ ಸಾಹಿತ್ಯ ಪರೀಕ್ಷೆಗಳ ಅಂಕಪಟ್ಟಿ ವಿವರ

ಕನ್ನಡ ಪ್ರವೇಶ ಪರೀಕ್ಷೆಯ ಅಂಕಪಟ್ಟಿ ವಿವರ

ಕನ್ನಡ ಕಾವ ಪರೀಕ್ಷೆಯ ಅಂಕಪಟ್ಟಿ ವಿವರ

ಕನ್ನಡ ಜಾಣ ಪರೀಕ್ಷೆಯ ಅಂಕಪಟ್ಟಿ ವಿವರ

ಕನ್ನಡ ರತ್ನ ಪರೀಕ್ಷೆಯ ಅಂಕಪಟ್ಟಿ ವಿವರ

೨೦೨೩-೨೪ನೇ ಸಾಲಿನ ಸಾಹಿತ್ಯ ಪರೀಕ್ಷೆಗಳ ಪ್ರವೇಶ ಪತ್ರಗಳ ವಿವರ :

೧. ಕನ್ನಡ ಜಾಣ 

೨. ಕನ್ನಡ ರತ್ನ

೩. ಕನ್ನಡ ಪ್ರವೇಶ 

೪. ಕನ್ನಡ ಕಾವ 

೨೦೨೩-೨೪ನೇ ಸಾಲಿನ ಸಾಹಿತ್ಯ ಪರೀಕ್ಷೆಗಳ ವೇಳಾಪಟ್ಟಿ : ಡೌನ್ಲೋಡ್ ಮಾಡಿ

ಶಾಸನಶಾಸ್ತ್ರ ಡಿಪ್ಲೊಮಾ ಪರೀಕ್ಷೆಗಳ ಅರ್ಜಿ ೨೦೨೩-೨೪ : ಡೌನ್ಲೋಡ್ ಮಾಡಿ

ಶಾಸನಶಾಸ್ತ್ರ ಡಿಪ್ಲೊಮಾ ಪರೀಕ್ಷೆಗಳ ನಿಯಾಮವಳಿ ಹಾಗು ಪಠ್ಯಕ್ರಮ ೨೦೨೩-೨೪ : ಡೌನ್ಲೋಡ್ ಮಾಡಿ
ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಪರೀಕ್ಷೆಗಳ ನಿಯಾಮವಳಿ 2023-24 : ಡೌನ್ಲೋಡ್ ಮಾಡಿ

 

ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳು

೨೦೨೨ – ೨೩ನೇ ಸಾಲಿನ ಪ್ರಶ್ನೆ ಪತ್ರಿಕೆಗಳು

ಕನ್ನಡ ಜಾಣ ಪರೀಕ್ಷೆ : ೨೦೨೨ – ೨೩

ಕನ್ನಡ ಕಾವ ಪರೀಕ್ಷೆ : ೨೦೨೨ – ೨೩

ಕನ್ನಡ ಪ್ರವೇಶ ಪರೀಕ್ಷೆ : ೨೦೨೨ – ೨೩

ಕನ್ನಡ ರತ್ನ ಪರೀಕ್ಷೆ : ೨೦೨೨ – ೨೩

೨೦೧೯-೨೦ನೇ ಸಾಲಿನ ಪ್ರಶ್ನೆ ಪತ್ರಿಕೆಗಳು

ಕನ್ನಡ ಜಾಣ ಪರೀಕ್ಷೆ : ೨೦೧೯-೨೦

ಕನ್ನಡ ಕಾವ ಪರೀಕ್ಷೆ : ೨೦೧೯-೨೦

ಕನ್ನಡ ಪ್ರವೇಶ ಪರೀಕ್ಷೆ : ೨೦೧೯-೨೦

ಕನ್ನಡ ರತ್ನ ಪರೀಕ್ಷೆ : ೨೦೧೯-೨೦

೨೦೧೮-೧೯ನೇ ಸಾಲಿನ ಪ್ರಶ್ನೆ ಪತ್ರಿಕೆಗಳು

ಕನ್ನಡ ಜಾಣ ಪರೀಕ್ಷೆ – ೨೦೧೮

ಕನ್ನಡ ಕಾವ ಪರೀಕ್ಷೆ – ೨೦೧೮

ಕನ್ನಡ ಪ್ರವೇಶ ಪರೀಕ್ಷೆ – ೨೦೧೮

ಕನ್ನಡ ರತ್ನ ಪರೀಕ್ಷೆ – ೨೦೧೮

೨೦೧೫-೧೬ನೇ ಸಾಲಿನ ಪ್ರಶ್ನೆ ಪತ್ರಿಕೆಗಳು

ಕನ್ನಡ ಜಾಣ ಪರೀಕ್ಷೆ – ೨೦೧೫

ಕನ್ನಡ ಕಾವ ಪರೀಕ್ಷೆ – ೨೦೧೫

ಕನ್ನಡ ಪ್ರವೇಶ ಪರೀಕ್ಷೆ – ೨೦೧೫

ಕನ್ನಡ ರತ್ನ ಪರೀಕ್ಷೆ – ೨೦೧೫

೨೦೧೪ -೨೦೧೫ ನೇ ಸಾಲಿನ ಪ್ರಶ್ನೆ ಪತ್ರಿಕೆಗಳು

ಕನ್ನಡ ಜಾಣ ಪರೀಕ್ಷೆ – ೨೦೧೪

ಕನ್ನಡ ಕಾವ ಪರೀಕ್ಷೆ – ೨೦೧೪

ಕನ್ನಡ ಪ್ರವೇಶ ಪರೀಕ್ಷೆ – ೨೦೧೪

ಕನ್ನಡ ರತ್ನ ಪರೀಕ್ಷೆ – ೨೦೧೪

೨೦೧೩ -೨೦೧೪ ನೇ ಸಾಲಿನ ಪ್ರಶ್ನೆ ಪತ್ರಿಕೆಗಳು

ಕನ್ನಡ ಜಾಣ ಪರೀಕ್ಷೆ – ೨೦೧೩

ಕನ್ನಡ ಕಾವ ಪರೀಕ್ಷೆ – ೨೦೧೩

ಕನ್ನಡ ಪ್ರವೇಶ ಪರೀಕ್ಷೆ – ೨೦೧೩

ಕನ್ನಡ ರತ್ನ ಪರೀಕ್ಷೆ – ೨೦೧೩

ಸಂಶೋಧನೆ

ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಸಾಹಿತ್ಯ ಪರೀಕ್ಷೆಗಳು, ಶಾಸನಶಾಸ್ತ್ರ ಡಿಪ್ಲೊಮಾ ತರಗತಿಗಳು ಮತ್ತು ಪಿಎಚ್.ಡಿ. ಸಂಶೋಧನಾ ಪ್ರಗತಿ   

ಸಂಶೋಧನೆಯ ವಿಧಿ -ವಿಧಾನಗಳು, ಪ್ರಾತ್ಯಕ್ಷಿಕೆ, ತರಬೇತಿ ಮುಂತಾದ ಕಾರ್ಯಕ್ರಮಗಳನ್ನು ಶಾಸನ ತರಗತಿಗಳ ಮೂಲಕ ಹಮ್ಮಿಕೊಂಡಿದೆ. ಇದಕ್ಕಾಗಿ ಸಂಶೋಧನಾ ಕೇಂದ್ರವನ್ನು ಪ್ರತ್ಯೇಕವಾಗಿ ಅಭಿವೃದ್ಧಿ ಗೊಳಿಸಲಾಗುತ್ತಿದೆ. ಸಂಶೋಧನಾಸಕ್ತರಿಗೆ ಮಾರ್ಗದರ್ಶನ ಕ್ಕಾಗಿ ವಿಶೇಷ ತರಬೇತಿ ಶಿಬಿರಗಳನ್ನು ಏರ್ಪಡಿಸ ಲಾಗುತ್ತಿದೆ. ಪ್ರಾಚೀನವಾದ ತಾಡೋಲೆಗಳ, ಕೈಬರಹದ ಅಮೂಲ್ಯ ಭಂಡಾರವನ್ನು ಪರಿಷತ್ತು ಹೊಂದಿದೆ. ಇವುಗಳು ಕೆಡದಂತೆ ವೈಜ್ಞಾನಿಕವಾಗಿ ಸಂರಕ್ಷಿಸಿಡಲಾಗಿದೆ. ಇವುಗಳ ಸಂಪಾದನೆ ಕಾರ್ಯ ಕೈಗೊಳ್ಳಲಾಗುತ್ತಿದೆ.

ದಕ್ಷಿಣ ದ್ರಾವಿಡ ಭಾಷಾ ಜ್ಞಾತಿ ಪದಕೋಶ

ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಲಿ ಎಂಬ ದೃಷ್ಟಿಯಿಂದ ಕನ್ನಡ ಸಾಹಿತ್ಯ ಪರಿಷತ್ತು “ದಕ್ಷಿಣ ದ್ರಾವಿಡ ಜ್ಞಾತಿ ಪದಕೋಶವನ್ನು” ಸಿದ್ಧಪಡಿಸಬೇಕೆಂದು ದಿನಾಂಕ ೨೦-೦೪-೨೦೧೧ರಂದು ನಡೆದ ತಜ್ಞರ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಡಾ. ಹಂಪ ನಾಗರಾಜಯ್ಯ, ಪ್ರೊ. ಎನ್. ಬಸವರಾಧ್ಯ, ಪ್ರೊ. ಎ.ವಿ. ನಾವಡ, ಪ್ರೊ. ಕಾರ್ಲೋಸ, ಪ್ರೊ. ಜಿ.ಎಸ್. ಮೋಹನ್, ಪ್ರೊ. ಮೋಹನ ಕುಂಟ್ಯಾರ, ಪ್ರೊ. ಕಷ್ಣಭಟ್ಟ ಅವರುಗಳು ಸದಸ್ಯರಾಗಿರುವ ಈ ಸಮಿತಿಯು, ಕನ್ನಡ ಭಾಷೆಯ ಜೊತೆಗೆ ಸುತ್ತಮುತ್ತಲ ದ್ರಾವಿಡ ಭಾಷೆಗಳಾದ(ಲಿಪಿ ಇರುವ) ತೆಲುಗು, ತಮಿಳು, ಮಲೆಯಾಳಂ ಅಲ್ಲದೆ ಕನ್ನಡದ ಉಪಭಾಷೆಗಳಾದ ತುಳು, ಕೊಡವ ಭಾಷೆಗಳನ್ನೊಳಗೊಂಡ ಜ್ಞಾತಿ ಪದಕೋಶವನ್ನು ಸಿದ್ಧಪಡಿಸಲು ನಿರ್ಧರಿಸಿತು. ಸಾಧ್ಯವಾದ ಕಡೆ ಹವ್ಯಕ ಭಾಷೆಯನ್ನೂಬಳಸಿಕೊಳ್ಳಲಾಗುವುದು. ಈಗಾಗಲೇ ಸಿದ್ಧತಾ ಕಾರ್ಯವನ್ನು ಆರಂಭಿಸಲಾಗಿದ್ದು, ಇನ್ನು ಆರು ತಿಂಗಳಲ್ಲಿ ಪದಕೋಶವನ್ನು ಪ್ರಕಟಿಸಿ ಕನ್ನಡಿಗರ ಕೈಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.