ನಾಡೋಜ ಡಾ ಮಹೇಶ ಜೋಶಿ ಅಧ್ಯಕ್ಷರುಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಆಜೀವ ಸದಸ್ಯರು ಹಾಗೂ ಸಮಸ್ತ ಕನ್ನಡಿಗರ ಪರವಾಗಿ.  

ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ, ಕನ್ನಡ ಭಾಷೆಯ, ಸಂಸ್ಕೃತಿಯ, ಪರಂಪರೆಯ, ಎಲ್ಲಕ್ಕಿಂತ ಹೆಚ್ಚಿನದಾಗಿ, “ನಮ್ಮತನದ” ಅಂದರೆ “ಕನ್ನಡದ ಅಸ್ಮಿತೆಯ” ವಾಸ್ತವಿಕ ಚಿತ್ರಣವನ್ನು, ಮಾನ್ಯ ಉಚ್ಚ ಕರ್ನಾಟಕ ನ್ಯಾಯಾಲಯದಲ್ಲಿ ನೀಡುವ ಸಂದರ್ಭದಲ್ಲಿ, ತಮ್ಮ ಅಮೂಲ್ಯವಾದ ಬೆಂಬಲವನ್ನು , ಎಲ್ಲ ಮಾಧ್ಯಮಗಳ ಮುಖಾಂತರ, ಅಂದರೆ ಸಾಮಾಜಿಕ ಜಾಲತಾಣ, ಇಮೇಲ್, ಲಿಖಿತ ರೂಪ, […]

ಕನ್ನಡದ ಜ್ಞಾನಸೀಮೆಯನ್ನು ವಿಸ್ತರಿಸಿದ ವರಕವಿ ಬೇಂದ್ರೆ: ನಾಡೋಜ ಡಾ.ಮಹೇಶ ಜೋಶಿ

ಬೆಂಗಳೂರು: ಬೇಂದ್ರೆಯವರ ದೃಷ್ಟಿ ‘ಬಡತನ ಸಿರಿತನ ಕಡೇತನಕ ಉಳಿದಾವೇನ’ ಎಂಬುದು.  ಅಲ್ಲದೆ ಅವರ ಕಾವ್ಯದ ಮೂಲದೃಷ್ಟಿ – ಎನ್ನಪಾಡೆನಗಿರಲಿ ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ – ಎಂಬ ರಸಯೋಗಿಯ ಸಂಕಲ್ಪದಿಂದ ಪ್ರಚೋದಿತವಾದದ್ದು.  ರಸವೆ ಜನನ ವಿರಸ ಮರಣ ಸಮರಸವೇ ಜೀವನ ಎಂದು ಬದುಕನ್ನು ಎದೆಗಪ್ಪಿಕೊಂಡು ಅರಳಿದ ಕಾವ್ಯಚೇತನ […]

ಫೆಬ್ರವರಿ 7,8 ಮತ್ತು 9 ರಂದು ಕನ್ನಡ ಸಾಹಿತ್ಯ ಪರಿಷತ್ತಿನಕನ್ನಡ ಪ್ರವೇಶ, ಕಾವ, ಜಾಣ ಪರೀಕ್ಷೆಗಳು

ಬೆಂಗಳೂರು  : ಜನ ಸಾಮಾನ್ಯರಲ್ಲಿ ಅದರಲ್ಲಿಯೂ ವಿಶೇಷವಾಗಿ ಕನ್ನಡ ಯುವಜನತೆಯಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಕುರಿತು ಆಸಕ್ತಿ ಮೂಡಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಬಿ.ಎಂ.ಶ್ರೀಯವರು ರೂಪಿಸಿದ ಮುಖ್ಯ ಯೋಜನೆ ಕನ್ನಡ ಸಾಹಿತ್ಯ ಪರೀಕ್ಷೆಗಳು. 1940ರ ಜೂನ್ ತಿಂಗಳಿನಿಂದ `ಕನ್ನಡ ಅಣುಗ’, ಕನ್ನಡ ಕಾವ, ಕನ್ನಡ ಜಾಣ […]

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತ :  ನಾಡೋಜ ಡಾ.ಮಹೇಶ ಜೋಶಿ ಆತಂಕ

ಬೆಂಗಳೂರು : ಪ್ರಥಮ್ ಎಂಬ ಸ್ವಯಂ ಸೇವಾ ಸಂಸ್ಥೆ ವಾರ್ಷಿಕ ಶೈಕ್ಷಣಿಕ ಪ್ರಗತಿ ಸಮೀಕ್ಷಾ ವರದಿಯ ಪ್ರಕಾರ ಸರ್ಕಾರಿ ಶಾಲೆಗಳಲ್ಲಿನ ದಾಖಲಾತಿಯ ಪ್ರಮಾಣ ಹಿಮ್ಮುಖವಾಗಿರುವುದು ಆತಂಕತದ ಬೆಳವಣಿಗೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ. ಕನ್ನಡ ಉಳಿದು ಬೆಳೆಯುತ್ತಿರುವುದು ಸರ್ಕಾರಿ ಶಾಲೆಗಳ ಮೂಲಕ. […]

ಬೇಂದ್ರೆ, ಕುವೆಂಪು ಸಾಹಿತ್ಯಕ್ಕೆ ಹೊಸ ನೆಲೆಗಳನ್ನು ನೀಡಿದ್ದ ನಾಡೋಜ ಡಾ.ಜಿ.ಕೃಷ್ಣಪ್ಪ: ನಾಡೋಜ ಡಾ.ಮಹೇಶ ಜೋಶಿ ನುಡಿ ನಮನ

ಬೆಂಗಳೂರು: ಮಂಡ್ಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಳ್ಳುವ ಕೆಲವು ದಿನಗಳ ಹಿಂದಷ್ಟೇ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗೆ ಭೇಟಿ ನೀಡಿ ಸುದೀರ್ಘವಾಗಿ ನನ್ನೊಂದಿಗೆ ಬೇಂದ್ರೆ ಕಾವ್ಯದ ನೆಲೆಗಳನ್ನು ಚರ್ಚಿಸಿದ್ದ ಬೇಂದ್ರೆ ಕೃಷ್ಣಪ್ಪ ‘ ಎಂದೇ ಹೆಸರಾಗಿದ್ದ ಡಾ.ಜಿ.ಕೃಷ್ಣಪ್ಪ ಇನ್ನಿಲ್ಲ ಎನ್ನುವ ಸುದ್ದಿ ನಿಜಕ್ಕೂ ಆಘಾತಕಾರಿಯಾಗಿದೆ ಎಂದು […]

ಕನ್ನಡ ಸಾಹಿತ್ಯ ಪರಿಷತ್ತನ್ನು ಬಹುಮುಖಿಯಾಗಿ ಬೆಳೆಸಿದ ಸಾ. ಶಿ. ಮರುಳಯ್ಯ :ನಾಡೋಜ ಡಾ.ಮಹೇಶ ಜೋಶಿ ವಿಶ್ಲೇಷಣೆ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿಗೆ ಪರಂಪರೆಯ ಜೊತೆಗೆ ಆಧುನಿಕತೆಯ ಸ್ಪರ್ಶವನ್ನು ನೀಡಿದ ಸಾ.ಶಿ.ಮರುಳಯ್ಯನವರು ಪರಿಷತ್ತನ್ನು ಬಹುಮುಖಿಯಾಗಿ ಬೆಳೆಸಿದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ವಿಶ್ಲೇಷಿಸಿದರು, ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜನೆಗೊಂಡಿದ್ದ ಸಾ.ಶಿ.ಮರುಳಯ್ಯನವರ  94ನೆಯ ಜನ್ಮದಿನೋತ್ಸದವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸಾ.ಶಿ.ಮರುಳಯ್ಯನವರೊಂದಿಗಿನ ತಮ್ಮ […]

1 2 3 24