ಡಿ.ವಿ. ಗುಂಡಪ್ಪ

ಕನ್ನಡ ಸಾಹಿತ್ಯಲೋಕದ ಪರಮ ಪೂಜ್ಯ ಡಿ.ವಿ. ಗುಂಡಪ್ಪನವರ ಹುಟ್ಟುಹಬ್ಬದ ಪುಣ್ಯ ದಿನ ಮಾರ್ಚ್ 17, 1887. ಡಿ.ವಿ.ಜಿ ಅವರನ್ನು ನೆನೆಯುತ್ತಿದ್ದರೆ ಒಂದು ರೀತಿಯ ಗೌರವ ಹೃದಯದಲ್ಲಿ ಸ್ಥಾಪಿತವಾಗುತ್ತದೆ. ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ವಿಧಿ ಮಳೆಯ ಸುರಿಸೆ ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ಎಲ್ಲರೊಳಗೊಂದಾಗು ಮಂಕುತಿಮ್ಮ […]

ಮ. ರಾಮಮೂರ್ತಿ

ಕನ್ನಡ ಸಮಾರಂಭಗಳಲ್ಲಿ ನಾವು ಉಪಯೋಗಿಸುವ ಕನ್ನಡ ಭಾವುಟವನ್ನು ಸೃಜಿಸಿದ ಮಹನೀಯ ಮ. ರಾಮಮೂರ್ತಿ.  ಅವರು ಕನ್ನಡ ಬಾವುಟವನ್ನು ಮಾತ್ರ ಸೃಜಿಸಲಿಲ್ಲ.  ಕನ್ನಡಿಗರು ತಲೆ ಎತ್ತಿ ಗೌರವದಿಂದ ಬಾಳುವ ಹಾಗೆ ಕನ್ನಡದ ಬಾವುಟವು ನಿರಂತರ ಹಾರಾಡುವ ಹಾಗೆ ತಮ್ಮ ಕೊನೆಯ ಉಸಿರಿರುವವರೆಗೂ ಕನ್ನಡ ನಾಡು ನುಡಿಗಾಗಿ ಶ್ರಮಿಸಿದರು. 1960ರ ದಶಕದಲ್ಲಿ […]

ಕೋ. ಚೆನ್ನಬಸಪ್ಪ

ನಿವೃತ್ತ ನ್ಯಾಯಮೂರ್ತಿಗಳು, ಸ್ವಾತಂತ್ರ್ಯ ಮತ್ತು ಏಕೀಕರಣ ಹೋರಾಟಗಾರರು, ಕನ್ನಡದ ಹಿರಿಯ ಬರಹಗಾರರು ಹೀಗೆ ವಿವಿಧ ಮುಖೀ ವ್ಯಕ್ತಿತ್ವದ ನ್ಯಾಯಮೂರ್ತಿ ಕೋ. ಚೆನ್ನಬಸಪ್ಪನವರು ಫೆಬ್ರವರಿ 27, 1922ರಂದು ಬಳ್ಳಾರಿ ಜಿಲ್ಲೆಯ ಆಲೂರಿನ ಸಮೀಪದ ಕಾನಮಡುಗು ಎಂಬಲ್ಲಿ ಜನಿಸಿದರು.  ತಂದೆ ವೀರಣ್ಣನವರು ಮತ್ತು ತಾಯಿ ಬಸಮ್ಮನವರು. ಕಾನಮಡುಗು ಮತ್ತು ಬಳ್ಳಾರಿಯಲ್ಲಿ ಶಾಲಾ […]

ಅ. ರಾ. ಮಿತ್ರ

ನಮ್ಮ ನಾಡಿನ ಶ್ರೇಷ್ಠರ ಸಾಲಿನ ಹಾಸ್ಯಜ್ಞ, ಉಪನ್ಯಾಸಕ, ವಿದ್ವಾಂಸ, ಅಧ್ಯಾಪಕ, ಬರಹಗಾರ, ವಿಮರ್ಶಕ, ಸಜ್ಜನರಲ್ಲಿ ಸಜ್ಜನ ಮನೋಧರ್ಮದ ಅ. ರಾ. ಮಿತ್ರ  ಅವರು ಫೆಬ್ರುವರಿ 25, 1935ರಂದು ಬೇಲೂರಿನಲ್ಲಿ ಜನಿಸಿದರು. ಅವರ ಪೂರ್ಣ ಹೆಸರು ಅಕ್ಕಿ ಹೆಬ್ಬಾಳು ರಾಮಣ್ಣ ಮಿತ್ರ. “ಅ. ರಾ ಮಿತ್ರರೆಂದರೆ ನಮಗೆಲ್ಲಾ ತುಂಬಾ ನೆನಪಾಗುತ್ತಾರೆ. […]

ಪಂಜೆ ಮಂಗೇಶರಾಯರು

ಪಂಜೆ ಮಂಗೇಶರಾಯರು ತಮ್ಮ ‘ಕಿರುಗತೆ-ಕಿರುಗವನಗಳು’ ಮೂಲಕ ಹೊಸಸಾಹಿತ್ಯದ ಹರಿಕಾರರಲ್ಲಿ ಒಬ್ಬರೆಂದು ಚಿರಸ್ಮರಣೀಯರು.  ರಾಮಪ್ಪಯ್ಯ ಮತ್ತು ಶಾಂತಾದುರ್ಗಾ ದಂಪತಿಗಳ ಮಗನಾಗಿ ಮಂಗೇಶರಾಯರು 1874ನೆಯ ಫೆಬ್ರವರಿ 22ರಂದು ಬಂಟವಾಳದಲ್ಲಿ ಜನಿಸಿದರು.  ಅವರ ಪೂರ್ವಿಕರು ಮೂಲತಃ ಪುತ್ತೂರಿಗೆ ಸಮೀಪದ ‘ಪಂಜ’ದವರಾಗಿದ್ದರು.   ಅವರು ವಿವಾಹವಾಗಿದ್ದು ನಾಡಿನಲ್ಲಿ ಪ್ರಸಿದ್ಧರಾದ ಬೆನಗಲ್ ರಾಮರಾಯರ ತಂಗಿ ಗಿರಿಜಾಬಾಯಿ ಅವರನ್ನು. […]

ಪ್ರೊ. ಎಲ್ ಎಸ್. ಶೇಷಗಿರಿರಾವ್

ಕನ್ನಡದ ಪ್ರಸಿದ್ಧ ವಿದ್ವಾಂಸ, ವಿಮರ್ಶಕ,   ಹೋರಾಟಗಾರ, ಪ್ರಾಧ್ಯಾಪಕ ಮತ್ತು ಹಿರಿಯ ಬರಹಗಾರರಾದ ಪ್ರೊ. ಎಲ್. ಎಸ್. ಶೇಷಗಿರಿರಾವ್ ಅವರು ಫೆಬ್ರವರಿ 16, 1925ರಂದು ಬೆಂಗಳೂರಿನಲ್ಲಿ ಜನಿಸಿದರು.  ಅವರು ಮೂಲತಃ ಧಾರವಾಡದ ಹತ್ತಿರದ ಲಕ್ಷ್ಮೇಶ್ವರ ದೇಶಪಾಂಡೆ ಮನೆತನದವರು.  ಕನ್ನಡ ಸಾಹಿತ್ಯ ಲೋಕದಲ್ಲಿ ಅವರು ಎಲ್ ಎಸ್ ಎಸ್ ಎಂದೇ ಪ್ರಸಿದ್ಧರು.  […]

ವೈದೇಹಿ

ವೈದೇಹಿ ಅವರು ಕನ್ನಡ ನಾಡಿನ ಸಮಕಾಲೀನ ಬರಹಗಾರರಲ್ಲಿ ವಿಶಿಷ್ಟರಾಗಿದ್ದಾರೆ.  ಕುಂದಾಪುರದ  ಎ.ವಿ.ಎನ್. ಹೆಬ್ಬಾರ್ ಮತ್ತು ಮಹಾಲಕ್ಷ್ಮಿಯಮ್ಮ ದಂಪಂತಿಗಳ ಮಗಳಾಗಿ 12ನೆ ಫೆಬ್ರವರಿ 1945ರಂದು ಜನಿಸಿದ ವೈದೇಹಿಯವರ ನಿಜನಾಮ ಜಾನಕಿ.  ಅವರು ಬಿ.ಕಾಂ ಪದವೀಧರೆಯಾಗಿ ಸುತ್ತಮುತ್ತಲಿನವರಿಗೆ ಪರಿಚಯವಾದದ್ದು ಜಾನಕಿ ಹೆಬ್ಬಾರ್ ಎಂದು.  ಆ ಹಂತದಲ್ಲಿ ‘ನೀರೆಯರ ದಿನ’ ಎಂಬ ಒಂದು […]

ಪ್ರೊ. ಎ. ಆರ್. ಕೃಷ್ಣಶಾಸ್ತ್ರಿ

ಪ್ರೊ. ಕೃಷ್ಣಶಾಸ್ತ್ರಿಗಳ ಬಹುಮುಖ ವ್ಯಕ್ತಿತ್ವದ, ಬಹುಮುಖ ಪ್ರತಿಭೆಯ ಜೀವನವೇ ಒಂದು ಪವಾಡ ಸದೃಶವಾದದ್ದು.  ಅವರು ಬಾಳಿದ ಜೀವನಮೌಲ್ಯಗಳು ಇಂದಿನ ಸಮಾಜದಲ್ಲಿ ಕಾಣಸಿಗುವಂಥವುಗಳಲ್ಲ.  ಹತ್ತೊಂಬತ್ತನೆಯ ಶತಮಾನದಲ್ಲಿ ಅವತರಿಸಿದ ಶ್ರೇಷ್ಠ ಮಹನೀಯರಂತೆ ಕೃಷ್ಣಶಾಸ್ತ್ರಿಗಳು ತಮ್ಮ ಬದುಕಿನ ಬೆಲೆಯನ್ನು ಅರಿತು ಅದಕ್ಕೆ ತಕ್ಕಂತೆ ಬಾಳಿ ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಂಡದ್ದೇ ಅಲ್ಲದೆ ಸಮಾಜದ […]

ಬೆಳ್ಳಾವೆ ವೆಂಕಟನಾರಣಪ್ಪ

ಕನ್ನಡದ ಮಹಾನ್ ವಿದ್ವಾಂಸರೂ, ಸಾಹಿತಿಗಳೂ, ಅದರಲ್ಲೂ ಕನ್ನಡದ ಪ್ರಥಮ ವಿಜ್ಞಾನ ಬರಹಗಾರರು ಎಂದು ಪ್ರಸಿದ್ಧಿ ಪಡೆದ, ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಮಾಣದಲ್ಲಿ  ಪ್ರಧಾನ ಪಾತ್ರಧಾರಿಗಳಾದ ಬೆಳ್ಳಾವೆ ವೆಂಕಟನಾರಣಪ್ಪನವರು ಫೆಬ್ರವರಿ 10, 1872ರ ವರ್ಷದಲ್ಲಿ ತುಮಕೂರಿನ ಬಳಿಯ ಬೆಳ್ಳಾವೆಯಲ್ಲಿ ಜನಿಸಿದರು.  ತಂದೆ ವೆಂಕಟಕೃಷ್ಣಯ್ಯನವರು ಮತ್ತು ತಾಯಿ ಲಕ್ಷ್ಮೀದೇವಮ್ಮನವರು.  ತಮ್ಮ ಪೂರ್ವಿಕರ […]

ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ

ಎಸ್. ವಿ ಪರಮೇಶ್ವರ ಭಟ್ಟ ‘ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ ನೀ ಬಂದು ನಿಂತಿಲ್ಲಿ ದೀಪ ಹಚ್ಚ, ನಲ್ಲ ನೀ ಬಂದಂದು ಕಣ್ಣಾರೆ ಕಂಡದು ಮನೆಯೆಲ್ಲ ಹೊಳೆದಂತೆ ದೀಪ ಹಚ್ಚ’ ಈ ಗೀತೆಯನ್ನು ಅದೆಷ್ಟು ಸಲ ಕೇಳಿದ್ದರೂ ಪ್ರತಿಬಾರಿ ಕೇಳುವಾಗಲೂ ಹೊಸದಾಗಿ ದೀಪ ಹಚ್ಚಿದಂತೆ ಹೃದ್ಭಾವ […]

1 2 3 4