ಕನ್ನಡ ಡಿಂಡಿಮ

ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯಶಿವ! ಸತ್ತಂತಿಹರನು ಬಡಿದೆಚ್ಚರಿಸು; ಕಚ್ಚಾಡುವರನು ಕೂಡಿಸಿ ಒಲಿಸು. ಹೊಟ್ಟೆಯಕಿಚ್ಚಿಗೆ ಕಣ್ಣೀರ್ ಸುರಿಸು; ಒಟ್ಟಿಗೆ ಬಾಳುವ ತೆರದಲಿ ಹರಸು! ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯಶಿವ! ಕ್ಷಯಿಸೆ ಶಿವೇತರ ಕೃತಿಕೃತಿಯಲ್ಲಿ ಮೂಡಲಿ ಮಂಗಳ ಮತಿಮತಿಯಲ್ಲಿ: ಕವಿ ಋಷಿ ಸಂತರ ಆದರ್ಶದಲಿ ಸರ್ವೋದಯವಾಗಲಿ […]

ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ |

ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ | ಕನ್ನಡದ ನೆಲದ ನೀರ್ವೊಲೆನಗೆ ಜೀವನದಿ ಕನ್ನಡದ ನೆಲದ ಕಲ್ಲೆನಗೆ ಸಾಲಿಗ್ರಾಮ ಶಿಲೆ ಕನಡವೆ ದೈವಮೈ ಕನ್ನಡ ಶಬ್ದಮೆನಗೋಂಕಾರಮೀಯೆನ್ನ | ಕನ್ನಡದ ನುಡಿಯೆ ಗಾಯತ್ರಿಯದ್ಭುತ ಮಂತ್ರ ಮಿನ್ನಾವುದೈಪೆರೆತು ಕನ್ನಡದ ಸೇವೆಯಿಂದಧಿಕಮೀಜಗಧೊಳೆನಗೆ? ಸಾಹಿತ್ಯ: ಸಾಲಿ ರಾಮಚಂದ್ರರಾವ್ (ಕ್ರಿ.ಶ. ೧೮೮೮ – ೧೯೭೮)

ವಿಶ್ವವಿನೂತನ, ವಿದ್ಯಾಚೇತನ, ಸರ್ವಹೃದಯ ಸಂಸ್ಕಾರಿ

ವಿಶ್ವವಿನೂತನ, ವಿದ್ಯಾಚೇತನ, ಸರ್ವಹೃದಯ ಸಂಸ್ಕಾರಿ ಜಯಭಾರತಿ, ಕರುನಾಡ ಸರಸ್ವತಿ ಗುಡಿಗೋಪುರ ಸುರಶಿಲ್ಪ ಕಲಾಕೃತಿ ಕೃಷ್ಣೆ, ತುಂಗೆ, ಕಾವೇರಿ ಪವಿತ್ರಿತ ಕ್ಷೇತ್ರ ಮನೋಹಾರಿ. ಗಂಗ, ಕದಂಬ, ರಾಷ್ಟ್ರಕೂಟ ಬಲ ಚಾಲುಕ್ಯ, ಹೊಯ್ಸಳ, ಬಲ್ಲಾಳ ಹಕ್ಕ, ಬುಕ್ಕ, ಪುಲಕೇಶಿ, ವಿಕ್ರಮರ ಚೆನ್ನಮ್ಮಾಜಿಯ ವೀರಶ್ರೀ. ಆಚಾರ್ಯತ್ರಯ ಮತಸಂಸ್ಥಾಪನ ಬಸವಾಲ್ಲಮ ಅನುಭಾವ ನಿಕೇತನ ಶರಣ, […]

ಒಂದೇ ಒಂದೇ ಒಂದೇ ಕರ್ನಾಟಕ ಒಂದೇ

ಒಂದೇ ಒಂದೇ ಒಂದೇ ಕರ್ನಾಟಕ ಒಂದೇ ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇ ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇ ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ ಇಲ್ಲಿಯ ಜನ ಮನ ಭಾಷೆಯು ಕನ್ನಡವದು ಒಂದೇ ಒಂದೇ ಜಗವು ಮನವು ಕನ್ನಡಿಗರು ಎಂದೆ ಕುಲವೊಂದೇ ಛಲವೊಂದೇ ನೀತಿಯ ನೆಲೆಯೊಂದೇ ಹೀಗೆನ್ನದ ಹೆರವರು ಅವರಿದ್ದರು […]

ಎಲ್ಲಾದರು ಇರು; ಎಂತಾದರು ಇರು;

ಎಲ್ಲಾದರು ಇರು; ಎಂತಾದರು ಇರು; ಎಂದೆಂದಿಗು ನೀ ಕನ್ನಡವಾಗಿರು. ಕನ್ನಡ ಗೋವಿನ ಓ ಮುದ್ದಿನ  ಕರು, ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು! ನೀ ಮೆಟ್ಟುವ ನೆಲ – ಅದೆ ಕರ್ನಾಟಕ; ನೀನೇರುವ ಮಲೆ – ಸಹ್ಯಾದ್ರಿ. ನೀ ಮುಟ್ಟುವ ಮರ – ಶ್ರೀಗಂಧದ ಮರ; ನೀ ಕುಡಿಯುವ ನೀರ್ – […]

ಕನ್ನಡಕೆ ಹೋರಾಡು ಕನ್ನಡದ ಕಂದಾ

ಸಾಹಿತ್ಯ: ಕುವೆಂಪು   ಕನ್ನಡಕೆ ಹೋರಾಡು ಕನ್ನಡದ ಕಂದಾ; ಕನ್ನಡವ ಕಾಪಾಡು ನನ್ನ ಆನಂದಾ! ಜೋಗುಳದ ಹರಕೆಯಿದು ಮರೆಯದಿರು, ಚಿನ್ನಾ; ಮರೆತೆಯಾದರೆ ಅಯ್ಯೊ ಮರೆತಂತೆ ನನ್ನ!   ಮೊಲೆಯ ಹಾಲೆಂತಂತೆ ಸವಿಜೇನು ಬಾಯ್ಗೆ; ತಾಯಿಯಪ್ಪುಗೆಯಂತೆ ಬಲುಸೊಗಸು ಮೆಯ್ಗೆ; ಗುರುವಿನೊಳ್ನುಡಿಯಂತೆ ಶ್ರೇಯಸ್ಸು ಬಾಳ್ಗೆ; ತಾಯ್ನುಡಿಗೆ ದುಡಿದು ಮಡಿ, ಇಹಪರಗಳೇಳ್ಗೆ!   […]

ಕನ್ನಡದ ಬಾವುಟ

ಏರಿಸಿ, ಹಾರಿಸಿ, ಕನ್ನಡದ ಬಾವುಟ ಹಾರಿಸಿ ತೋರಿಸಿ ಕೆಚ್ಚೆದೆಯ ಬಾವುಟ ಬಾಳ್ ಕನ್ನಡ ತಾಯ್ ಏಳ್ ಕನ್ನಡ ತಾಯ್ ಆಳ್ ಕನ್ನಡ ತಾಯ್ ಕನ್ನಡಿಗರೊಡತಿ ಓ ರಾಜೇಶ್ವರಿ ರಾಜೇಶ್ವರೀs…. ಕನ್ನಡದ ಬಾವುಟವ ಹಿಡಿಯದವರಾರು ಕನ್ನಡದ ಬಾವುಟಕೆ ಮಡಿಯದವರಾರು ನಮ್ಮ ಈ ಬಾವುಟಕೆ ಮಿಡಿಯದವರಾರು ಹೇಳಿರೋ ಹೆಸರೊಂದು ನೆನಹಿನಲಿ ಸುಳಿದರೆ […]

ಕನ್ನಡ ಪದಗೊಳು

‘ಯೆಂಡ ಕುಡಿಯಾದ್ ಬುಟ್ ಬುಡ್ ರತ್ನ!’ ಅಂತ್ ಔನ್ ಏನಾರ್ ಅಂದ್ರೆ ! ಮೂಗ್ ಮೂರ್ ಚೂರಾಗ್ ಮುರಸ್ಕೋಂತೀನಿ ದೇವರ್ ಮಾತ್ಗ್ ಅಡ್ಬಂದ್ರೆ ! ‘ಯೆಂಡ ಬುಟ್ಟೆ, ಯೆಡ್ತೀನ್ ಬುಟ್ ಬುಡ್!’ ಅಂತ್ ಔನ್ ಏನಾರ್ ಅಂದ್ರೆ – ಕಳದೋಯ್ತ್ ಅಂತ ಕುಣದಾಡ್ತೀನಿ ದೊಡ್ಡ್ ಒಂದ್ ಕಾಟ !, […]

ಬಲ್ಲೆಯೇನು ನೀನು

ಕಣ್ಣು ತೆರೆದು ಮೊದಲ ಬೆಳಕು ನೋಡಿದಾಗ ನಾನು ಕೇಳಿದಂಥ ಮಾತು ಇದುವೆ ಬಲ್ಲೆಯೇನು ನೀನು? ತಾಯ ತೊಡೆಯ ತೊಟ್ಟಿಲಲ್ಲಿ ಮಲಗಿದಾಗ ನಾನು ತೊದಲಿದಂಥ ಮಾತು ಇದುವೆ ಬಲ್ಲೆಯೇನು ನೀನು? ಪ್ರೀತಿ ಹೊಂದಿ ಮನೆಯ ಮಂದಿ ಆಡಿದಾಗ ನಾನು ಕಲಿತುಕೊಂಡ ಮಾತು ಇದುವೆ ಬಲ್ಲೆಯೇನು ನೀನು? ಕನಸಿನಲ್ಲಿ ನೆನಸಿನಲ್ಲಿ ಕಷ್ಟ-ಸುಖದಿ […]

ಕನ್ನಡಾಂಬೆಯ ಹಿರಿಮೆ

ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ ಕನ್ನಡವೆ ಎನ್ನುಸಿರು ಪೆತ್ತೆನ್ನ ತಾಯಿ ಕನ್ನಡವೆ ಧನಧಾನ್ಯ ಕನ್ನಡವೆ ಮನೆಮಾನ್ಯ ಕನ್ನಡವೆ ಯೆನಗಾಯ್ತು ಕಣ್ಣು ಕಿವಿ ಬಾಯಿ ಕನ್ನಡದ ಸವಿಮಾತು ಮನ್ನಣೆಯ ಪಳಮಾತು ಕನ್ನಡ ಸರಸ್ವತಿಯು ನವ ಕಲ್ಪಲತೆಯು ಕನ್ನಡದ ವರಚರಿತೆ ವಿಮಲ ಗಂಗಾ ಸರಿತೆ ಕನ್ನಡವು ಸಿರಿಪೆಂಪು ಎನಗೆ ನರುಗಂಪು ಕನ್ನಡ ಸನ್ಮಾನ […]

1 2 3