ಯು.ಆರ್. ಅನಂತಮೂರ್ತಿ

ura

ತಮ್ಮ ಸಮಕಾಲೀನ ಬರಹಗಾರರಲ್ಲಿ ಅದಮ್ಯ ಚೇತನದ, ಬಹುಪ್ರತಿಭೆಯ ಯು.ಆರ್. ಅನಂತಮೂರ್ತಿ ಅವರು. ಉಡುಪಿ ರಾಜಗೋಪಾಲಾಚಾರ್ಯ-ಸತ್ಯಮ್ಮ ದಂಪತಿಗಳ ಹಿರಿಯ ಪುತ್ರರಾಗಿ ೨೧-೧೨-೧೯೩೨ರಲ್ಲಿ ತೀರ್ಥಹಳ್ಳಿಯ ಮೇಳಿಗೆಯಲ್ಲಿ ಮಲೆನಾಡಿಗರಾಗಿ ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ೧೯೬೬ರಲ್ಲಿ ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿ.ಎಚ್ ಡಿ ಪದವಿ ಪಡೆದರು.

೧೯೫೬ರಲ್ಲಿ ಹಾಸನದ ಕಾಲೇಜಿನಲ್ಲಿ ಅಧ್ಯಾಪಕರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ೧೯೮೭-೯೧ ಅವಧಿಯಲ್ಲಿ ಕಾರ್ಯನಿರ್ವಹಿಸಿದರು. ೧೯೯೨-೯೩ರಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷರಾಗಿ, ದೆಹಲಿಯ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೋಷಿಯಲ್ ಅಧ್ಯಕ್ಷರಾಗಿ ಸೇವೆಸಲ್ಲಿಸಿದರು. ೨00೩ರಲ್ಲಿ ಕೇಂದ್ರ ಸರ್ಕಾರದ ಫಿಲಿಂ ಇನ್ಸಿಟ್ಯೂಟ್ ಅಂಡ್ ಟೆಲಿವಿಷನ್ ಪೂನಾದ ಅಧ್ಯಕ್ಷರಾಗಿ ನಿಯುಕ್ತರಾಗಿದ್ದರು.

ಇಂಗ್ಲಿಷಿನಲ್ಲಿ ಎಂ.ಎ. ನಲ್ಲಿ ಸ್ವರ್ಣಪದಕ ಪಡೆದ ಇವರು ೧೯೭0ರಲ್ಲಿ ಸಂಸ್ಕಾರ ಕಥೆಗೆ ಚಲನಚಿತ್ರ ಪ್ರಶಸ್ತಿ, ೧೯೮೩ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ೧೯೮೪ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ೧೯೯೪ರಲ್ಲಿ ಜ್ಞಾನಪೀಠ ಪ್ರಶಸ್ತಿ, ೧೯೯೫ರಲ್ಲಿ ಡಿಲಿಟ್ ಗೌರವ, ೧೯೯೫ರಲ್ಲಿ ಶಿಖರ ಸನ್ಮಾನ್, ೧೯೯೮ರಲ್ಲಿ ಪದ್ಮಭೂಷಣ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದರು.

ಕನ್ನಡದಲ್ಲಿ ನವ್ಯಸಾಹಿತಿಯಾಗಿ, ವಾದವಿವಾದಗಳನ್ನೆಬ್ಬಿಸಿದಂಥ ಸಂಸ್ಕಾರ ಕಾದಂಬರಿಯನ್ನು ಬರೆದ ಅನಂತಮೂರ್ತಿ ಅವರು ಅನೇಕ ಕಥೆ ಕಾದಂಬರಿಗಳನ್ನು ವಿಮರ್ಶಾ ಗ್ರಂಥಗಳನ್ನು ರಚಿಸಿದ್ದಾರೆ. ಕೆಲವು ಪ್ರಮುಖ ಕೃತಿಗಳಿವು : ಸಂಸ್ಕಾರ, ಭಾರತೀಪುರ, ಘಟಶ್ರಾದ್ಧ, ಅವಸ್ಥೆ, ದಿವ್ಯ (ಕಾದಂಬರಿಗಳು) ಸೂರ್ಯನ ಕುದುರೆ, ಆಕಾಶ ಬೆಕ್ಕು ವಡಾನಿ, ಪ್ರಶ್ನೆ (ಕಥೆಗಳು) ಆವಾಹನೆ (ನಾಟಕ) ಸನ್ನಿವೇಶ, ಸಮಕ್ಷಮ (ವಿಮರ್ಶೆ) ದಾವ್ ದ ಜಿಂಗ್ (ಭಾಷಾಂತರ) ಇತ್ಯಾದಿ.

ಇವರು ದಿನಾಂಕ ೨೧-೧೨-೨0೧೪ ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

Tag: U.R. Anantamurthy, Jnanapitha

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)