ವೀರಪ್ಪ ಮೊಯ್ಲಿ

ವೀರಪ್ಪ ಮೊಯ್ಲಿ ಅವರು ಕರ್ನಾಟಕ ರಾಜ್ಯದ ೧೩ನೇ ಮುಖ್ಯಮಂತ್ರಿಗಳಾಗಿ ಮತ್ತು ಕೇಂದ್ರಸಚಿವರಾಗಿ ರಾಜಕಾರಣದಲ್ಲಿ ಸೇವೆ ಸಲ್ಲಿಸಿರುವುದರ ಜೊತೆಗೆ ಸಾಹಿತ್ಯಕೃಷಿಯಲ್ಲೂ ಮಹತ್ವದ ಸಾಧನೆ ಮಾಡಿದವರಾಗಿದ್ದಾರೆ. ವೀರಪ್ಪ ಮೊಯ್ಲಿಯವರು ೧೯೪೦ ಜನೆವರಿ ೧೨ರಂದು ಜನಿಸಿದರು. ಇವರ ತಾಯಿ ಪೂವಮ್ಮ ಮತ್ತು ತಂದೆ ತಮ್ಮಯ್ಯ ಮೊಯ್ಲಿ ಅವರು. ಮೊಯ್ಲಿಯವರು ತಮ್ಮ ಪ್ರಾಥಮಿಕ ಹಾಗು […]

ಎಸ್.ಎಲ್. ಭೈರಪ್ಪ

ಗಳಗನಾಥರು ಮತ್ತು ಅನಕೃ ಅನಂತರ ಕನ್ನಡದಲ್ಲಿ ಕತೆ ಕಾದಂಬರಿ ಓದುವ ಸಾವಿರಾರು ಓದುಗರನ್ನು ಸೃಷ್ಟಿಸಿದವರೆಂದರೆ ಎಸ್.ಎಲ್. ಭೈರಪ್ಪನವರು. ಕಾದಂಬರಿಕಾರರೂ ಮೀಮಾಂಸಕರು ಆಗಿರುವ ಎಸ್.ಎಲ್. ಭೈರಪ್ಪನವರು ಹಾಸನ ಜಿಲ್ಲೆ ಚೆನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ ಲಿಂಗಣ್ಣಯ್ಯ-ಗೌರಮ್ಮ ದಂಪತಿಗಳಿಗೆ ೨0-೮-೧೯೩೧ರಲ್ಲಿ ಜನಿಸಿದರು. ತಮ್ಮ ಹುಟ್ಟೂರಿನ ಸುತ್ತಮುತ್ತಲ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮೈಸೂರಿಗೆ […]