ಸಾಹಿತ್ಯ ಸಮ್ಮೇಳನ-೮೧

ಸಮ್ಮೇಳನಾಧ್ಯಕ್ಷರು : ಸಿದ್ದಲಿಂಗಯ್ಯ  ಕವಿ, ಕನ್ನಡ ಪ್ರಾಧ್ಯಾಪಕ ಡಾ. ಸಿದ್ಧಲಿಂಗಯ್ಯನವರು ಹೋರಾಟಗಾರರೂ ಆಗಿದ್ದಾರೆ. ಇವರು ಮಾಗಡಿಯಲ್ಲಿ ವೆಂಕಮ್ಮ-ದೇವಯ್ಯ ದಂಪತಿಗಳಿಗೆ ೩-೨-೧೯೫೪ ರಲ್ಲಿ ಜನಿಸಿದರು. ಬಡತನದಲ್ಲಿಯೇ ಗ್ರಾಮೀಣ ಭಾಗದ ಶಾಲೆಗಳಲ್ಲಿ ತಮ್ಮ ಪ್ರಾರಂಭಿಕ ಶಾಲಾ ವಿದ್ಯಾಭ್ಯಾಸ ಮಾಡಿ ಎಂ.ಎ. ಪದವಿಗಳಿಸಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ, ನಿರ್ದೇಶಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. […]

ಸಾಹಿತ್ಯ ಸಮ್ಮೇಳನ-೮0

೮0ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು     ನಾ. ಡಿಸೋಜ ಪರಿಸರದ ನಾಶವಾದರೆ ಮಾನವ ಜನಾಂಗದ ವಿನಾಶ, ಪರಿಸರವನ್ನು ರಕ್ಷಿಸುವುದರಿಂದ ಮಾನವನ ಬಾಳು ಸಂತೋಷವಾಗಲು ಶಕ್ಯ ಎಂಬ ಧ್ಯೇಯದ ಹಿನ್ನೆಲೆಯಲ್ಲಿ ಸಾಹಿತ್ಯ ಕೃತಿಗಳನ್ನು ರಚಿಸಿರುವ ನಾ. ಡಿಸೋಜ ಅವರು ಎಫ್.ಪಿ. ಡಿಸೋಜ-ರೂಪಿನಾ ಬಾಯಿ ದಂಪತಿಗಳ ಪುತ್ರರಾಗಿ ೬-೬-೧೯೩೭ರಲ್ಲಿ ಜನಿಸಿದರು. ಬಾಲ್ಯದಿಂದಲೂ ಸಾಹಿತ್ಯಿಕ ವಾತಾವರಣದಲ್ಲಿ […]

ಸಾಹಿತ್ಯ ಸಮ್ಮೇಳನ-೭೯

೭೯ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು       ಕೋ. ಚೆನ್ನಬಸಪ್ಪ ನ್ಯಾಯಾಧೀಶರಾಗಿ, ಸಾಹಿತಿಗಳಾಗಿ, ಚಳುವಳಿಕಾರರಾಗಿ ನಾಡುನುಡಿಗೆ ಸೇವೆ ಸಲ್ಲಿಸಿರುವ ಕೋ. ಚೆನ್ನಬಸಪ್ಪ ಅವರು ಬಳ್ಳಾರಿ ಜಿಲ್ಲೆಯವರು. ಇವರು ಬಸಮ್ಮ-ವೀರಣ್ಣ ದಂಪತಿಗಳ ಸುಪುತ್ರರಾಗಿ ೨೭-೨-೧೯೨೨ರಂದು ಜನಿಸಿದರು. ತವರೂರಿನಲ್ಲಿ ಶಾಲಾವಿದ್ಯಾಭ್ಯಾಸ ಮುಗಿಸಿ ಕಾಲೇಜು ಶಿಕ್ಷಣವನ್ನು ಅನಂತಪುರದಲ್ಲಿ ಪಡೆಯುತ್ತಿದ್ದಾಗ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಶಾಲೆಗೆ ತಿಲಾಂಜಲಿಯಿತ್ತರು. […]

ಸಾಹಿತ್ಯ ಸಮ್ಮೇಳನ-೭೮

೭೮ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು       ಸಿ.ಪಿ. ಕೃಷ್ಣಕುಮಾರ್ ಸಿ.ಪಿ.ಕೆ. ಎಂಬ ಮೂರಕ್ಷಗಳಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಚಿರಪರಿಚಿತರಾಗಿರುವ  ಚಿಕ್ಕನಾಯಕನಹಳ್ಳಿ ಪುಟ್ಟೇಗೌಡ ಕೃಷ್ಣಕುಮಾರ್ ಅವರು ೮-೪-೧೯೩೯ರಲ್ಲಿ ಮೈಸೂರು ಜಿಲ್ಲೆಯ ಕೃಷ್ಣರಾಜ ನಗರದ ಚಿಕ್ಕನಾಯಕನಹಳ್ಳಿಯಲ್ಲಿ ಜನಿಸಿದರು. ಬಾಲ್ಯದ ವಿದ್ಯಾಭ್ಯಾಸವನ್ನು ಚಿಕ್ಕನಾಯಕನಹಳ್ಳಿ ಸಾಲಿಗ್ರಾಮದಲ್ಲಿ ಪೂರೈಸಿ ಮೈಸೂರಿನಲ್ಲಿ ಕಾಲೇಜು ಶಿಕ್ಷಣ ಮುಂದುವರಿಸಿ ೧೯೬೧ರಲ್ಲಿ ಎಂ.ಎ. ಪದವಿ […]

ಸಾಹಿತ್ಯ ಸಮ್ಮೇಳನ-೭೭

೭೭ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಪ್ರೊ. ಜಿ. ವೆಂಕಟಸುಬ್ಬಯ್ಯ ಶತಾಯುಷಿಯಾದ ಕನ್ನಡ ವಿದ್ವಾಂಸ ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಶ್ರೀರಂಗಪಟ್ಟಣದ ಗಂಜಾಂಗ್ರಾಮಕ್ಕೆ ಸೇರಿದವರು. ಶಿಕ್ಷಕರೂ ವಿದ್ವಾಂಸರೂ ಆದ ಗಂಜಾಂ ತಿಮ್ಮಣ್ಣಯ್ಯ ಮತ್ತು ತಾಯಿ ಸುಬ್ಬಮ್ಮ ದಂಪತಿಗಳ ಜ್ಯೇಷ್ಠಪುತ್ರರಾಗಿ ೨೩-೮-೧೯೧೩ರಂದು ಜನಿಸಿದರು. ೧೯೨೭ ರಿಂದ ೧೯೩0ರ ವರೆಗೆ ಪ್ರೌಢಶಾಲೆ ಶಿಕ್ಷಣವನ್ನು […]

ಸಾಹಿತ್ಯ ಸಮ್ಮೇಳನ-೭೬

೭೬ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಗೀತಾ ನಾಗಭೂಷಣ ಕನ್ನಡದ ಹೆಸರಾಂತ ಲೇಖಕಿಯರಲ್ಲಿ ಒಬ್ಬರಾದ ಶ್ರೀಮತಿ ಗೀತಾ ನಾಗಭೂಷಣ ಅವರು ಗುಲ್ಬರ್ಗದ ಬಡ ಕುಟುಂಬದಲ್ಲಿ ಶಾಂತಪ್ಪ-ಶರಣಮ್ಮ ದಂಪತಿಗಳಿಗೆ ಮಗಳಾಗಿ ೨೫-೩-೧೯೪೨ರಲ್ಲಿ ಜನಿಸಿದರು. ಇವರು ಮೆಟ್ರಿಕ್ ಮುಗಿಸಿದ ಮೇಲೆ ಕೆಲವುಕಾಲ ಕಲೆಕ್ಟರ್ ಕಛೇರಿಯಲ್ಲಿ ಉದ್ಯೋಗ ಮಾಡಿ ಬೆಳಗಿನ ಶಾಲೆಯಲ್ಲಿ ಓದಿ ಪದವಿ ಪಡೆದು, […]

ಸಾಹಿತ್ಯ ಸಮ್ಮೇಳನ-೭೫

೭೫ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಎಲ್. ಬಸವರಾಜು ಕನ್ನಡದಲ್ಲಿ ಶ್ರೇಷ್ಠ ವಿದ್ವಾಂಸರಾಗಿ ಹಳಗನ್ನಡದಲ್ಲಿ ಪ್ರಭುತ್ವ ಪಡೆದಿದ್ದ ಎಲ್. ಬಸವರಾಜು ಅವರು ಕೋಲಾರದ ಇಡಗೂರಿನಲ್ಲಿ ೭-೧0-೧೯೧೯ರಂದು ಲಿಂಗಪ್ಪ-ಈರಮ್ಮ ದಂಪತಿಗಳಿಗೆ ಸುಪುತ್ರರಾಗಿ ಜನಿಸಿದರು. ಬಾಲ್ಯದಲ್ಲಿ ಬಡತನದ ಬವಣೆಯಿಂದ ಊರಿನ ಭೀಮೇಶ್ವರ ದೇಗುಲದಲ್ಲಿ ಅರ್ಚಕರಾಗಿದ್ದರು. ಸಿದ್ಧಗಂಗೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಕನ್ನಡ ಎಂ.ಎ. ಪದವಿಯನ್ನು […]

ಸಾಹಿತ್ಯ ಸಮ್ಮೇಳನ-೭೪

೭೪ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಎಲ್.ಎಸ್. ಶೇಷಗಿರಿರಾವ್ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಪ್ರಬುದ್ಧ ವಿಮರ್ಶಕರೆನಿಸಿರುವ ಎಲ್.ಎಸ್. ಶೇಷಗಿರಿರಾಯರು ಸ್ವಾಮಿರಾವ್-ಕಮಲಾಬಾಯಿ ದಂಪತಿಗಳ ಸುಪುತ್ರರಾಗಿ ೧೬-೨-೧೯೨೫ರಲ್ಲಿ ಜನಿಸಿದರು. ಬೆಂಗಳೂರು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ನಾಗಪುರ ವಿ.ವಿ.ಯಲ್ಲಿ ಇಂಗ್ಲಿಷ್ ಎಂ.ಎ. ಪದವೀಧರರಾದರು. ಕಾಲೇಜು ಶಿಕ್ಷಣ ಇಲಾಖೆಗೆ ಸೇರಿ ಕೋಲಾರ, ಮಡಿಕೇರಿ, ಬೆಂಗಳೂರುಗಳಲ್ಲಿ ಕಾಲೇಜು ಅಧ್ಯಾಪಕರಾಗಿ […]

ಸಾಹಿತ್ಯ ಸಮ್ಮೇಳನ-೭೩

೭೩ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಕೆ.ಎಸ್. ನಿಸಾರ್ ಅಹಮದ್ ನಿತ್ಯೋತ್ಸವ ಕವಿಯಾಗಿ ಪ್ರಸಿದ್ಧರಾದ ಕೆ.ಎಸ್. ನಿಸಾರ್ ಅಹಮದ್ ಅವರು ಮೈಸೂರು ಸರಕಾರದಲ್ಲಿ ರೆವೆನ್ಯೂ ಅಧಿಕಾರಿಯಾಗಿದ್ದ ಕೆ.ಎಸ್. ಹೈದರ್ ಮತ್ತು ಗೃಹ ವಿಜ್ಞಾನ ಪದವೀಧರೆ ಹಮೀದಾ ಬೇಗಂ ದಂಪತಿಗಳ ಪುತ್ರರು. ಇವರು ಜನಿಸಿದ್ದು ೫-೨-೧೯೩೬ರಂದು. ಬೆಂಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು, ಹೊಸಕೋಟೆಯಲ್ಲಿ ಪ್ರೌಢಶಾಲಾ […]