ಕನ್ನಡ ಕಸ್ತೂರಿ

‘ಕವಿರಾಜ ಮಾರ್ಗ’ದಲ್ಲಿ ಕನ್ನಡ ನಾಡಿನ ಬಣ್ಣನೆ

ಶ್ರೀವಿಜಯ (ಕ್ರಿ.ಶ. 877)
ಕಾವೇರಿಯಿಂದಮಾ ಗೋ ದಾವರಿವರಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸು ಧಾವಳಯ ವಿಲೀನ ವಿಶದ ವಿಷಯ ವಿಶೇಷಂ ಪದನರಿದು ನುಡಿಯಲುಂ ನುಡಿ ದುವನರಿದಾರಯಲುಮಾರ್ಪರಾ ನಾಡವರ್ಗಳ್ ಚದುರರ್ ನಿಜದಿಂ ಕುರಿತೋ ದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್ ಕಸವರಮೆಂಬುದು ನೆರೆ ಸೈ ರಿಸಲಾರ್ಪೊಡೆ ಪರ ವಿಚಾರಮುಂ ಧರ್ಮಮುಮಂ ಕಸವೇಂ ಕಸವರಮೇನು ಬ್ಬಸಮಂ ಬಸಮಲ್ಲದಿರ್ದು ಮಾಡುವರೆಲ್ಲಂ ಶ್ರೀವಿಜಯ (ಕ್ರಿ.ಶ ... ಪೂರ್ಣಕವಿತೆಗೆ ದಾರಿ

ಕರ್ಣಾಟಕ ರೀತಿಯನೆಂತು ಬಣ್ಣಿಪೆನು

ಗೋವಿಂದ ವೈದ್ಯ
ಜಾತಿಸಂಕರವಿಲ್ಲ ಜಡದೇಹಿಗಳಿಲ್ಲ ನೀತಿ ಹೀನರು ಚೋರರಿಲ್ಲ ಘಾತುಕರಿಲ್ಲ ದುರ್ಜನರಿಲ್ಲ ಕರ್ಣಾಟಕ ರೀತಿಯನೆಂತು ಬಣ್ಣಿಪೆನು ತೊರೆಗೂಡಿದ ನದಿ ನದಿಯ ಕಾಲುವೆಗಳು ಪರಿದು ಕೂಡಿದ ಕೆರೆಯಿಂದ ಕೆರೆತೊರೆ ನಡಿಯಾರಾಮ ರಂಜಿಸುತಿಹ ಪುರವಿಹುವಾ ದೇಶದೊಳಗೆ ಸಾಹಿತ್ಯ: ಗೋವಿಂದ ವೈದ್ಯ (ಕ್ರಿ.ಶ. 1648 - ಕಂಠೀರವ ನರಸಿಂಹರಾಜ ವಿಜಯ) ... ಪೂರ್ಣಕವಿತೆಗೆ ದಾರಿ

ನನ್ನ ಕರ್ಣಾಟಕ

ಶ್ರೀಧರ ಖಾನೋಳ್ಕರ (ಕ್ರಿ.ಶ 1896 – 1965)
ಕರ್ನಾಟಕವೆಂಬುದೊಮ್ಮೆ ಕೂಗು, ಜಯ ಕರ್ನಾಟ ಕರ್ನಾಟವೆಂದೊಮ್ಮೆ ಕೂಗು! ಕರ್ನಾಟ ಶಬ್ದಗಳ ದಿವ್ಯ ಸಂಗೀತಕ್ಕೆ ನೂರು ಸಲ ತಲೆಯ ತೂಗು ಕರ್ನಾಟವೆಂಬುದು ಮಂತ್ರ; ಸಿಂಹನ ಧೈರ್ಯ ತುಂಬುವದು ಮೈಯಸೇರಿ! ಭೋರಿಡುವ ಸಾಗರದ ತೆರೆಗಳೊಲು ತುಂಬುವದು ಶಕ್ತಿತೆರೆ ಮೇರೆ ಮೀರಿ ಕರ್ನಾಟವೆಂಬುದಿದು ಗುಡುಗು, ಮುಗಿಲಿನ ಮಿಂಚು ಹರವುವದು ವಿಶ್ವದೊಳಗೆ! ಬೆಳಕು ಬೆಳಕಾಗುವದು, ಜಗವೆಲ್ಲ ಬೆಳಗುವದು, ಸಾಟಿ ರವಿ ಕಿರಣಗಳಿಗೆ ... ಪೂರ್ಣಕವಿತೆಗೆ ದಾರಿ

ಸುಲಿದ ಬಾಳೆಯ ಹಣ್ಣಿನಂದದಿ… ಕಬ್ಬಿನಂದದಿ

ಮಹಲಿಂಗರಂಗ
ಸುಲಿದ ಬಾಳೆಯ ಹಣ್ಣಿನಂದದಿ ಕಳೆದ ಸಿಗುರಿನ ಕಬ್ಬಿನಂದದಿ ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ ಗಳಿಸಿಕೊಂಡೊಡೆ ಸಾಲದೇ ಸಂಸ್ಕೃತದೊಳಿನ್ನೇನು? ಸಾಹಿತ್ಯ: ಮಹಲಿಂಗರಂಗ ( ಕ್ರಿ.ಶ. 1675 - ಅನುಭವಾಮೃತ) ... ಪೂರ್ಣಕವಿತೆಗೆ ದಾರಿ

ಕನ್ನಡನುಡಿ

ಆನಂದಕಂದ (ಬೆಟಗೇರಿ ಕೃಷ್ಣಶರ್ಮ)
ಎನಿತು ಇನಿದು ಈ ಕನ್ನಡ ನುಡಿಯು ಮನವನು ತಣಿಸುವ ಮೋಹನ ಸುಧೆಯು! ಗಾನವ ಬೆರೆಯಿಸಿ ವೀಣೆಯ ದನಿಯೊಳು ವಾಣಿಯ ನೇವುರ ನುಡಿಸುತೆ ಕುಣಿಯಲು ಮಾಣದೆ ಮೆರೆಯುವ ಮಂಜುಲ ರವವೋ? ಎನಿತು ಇನಿದು ಈ ಕನ್ನಡ ನುಡಿಯು ! ರಂಗನ ಮುರಲಿಯ ಹಿಂಗದ ಸರದಲಿ ಹೆಂಗಳೆಯರು ಬೆಳ ದಿಂಗಳಿರುಳಲಿ ಸಂಗೀತವನೊರೆದಂಗವಿದೇನೋ? ಎನಿತು ಇನಿದು ಈ ಕನ್ನಡ ನುಡಿಯು! ... ಪೂರ್ಣಕವಿತೆಗೆ ದಾರಿ

ಹಚ್ಚೇವು ಕನ್ನಡದ ದೀಪ

ಡಾ. ಡಿ.ಎಸ್. ಕರ್ಕಿ
ಹಚ್ಚೇವು ಕನ್ನಡದ ದೀಪ ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವಾ ದೀಪ | ಹಚ್ಚೇವು | ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು ಎಲ್ಲೆಲ್ಲಿ ಕನ್ನಡದ ಕಂಪು ಸೂಸ- ಲಲ್ಲಲ್ಲಿ ಕರಣ ಚಾಚೇವು ನಡು ನಾಡೆ ಇರಲಿ, ಗಡಿನಾಡೆ ಇರಲಿ ಕನ್ನಡದ ಕಳೆಯ ಕೆಚ್ಚೇವು ಮರತೇವು ಮರವ, ತೆರೆದೇವು ಮನವ, ಎರೆದೇವು ಒಲವ-ಹಿರಿ ನೆನಪ ನರನರವನೆಲ್ಲ ಹುರಿಗೊಳಿಸಿ ... ಪೂರ್ಣಕವಿತೆಗೆ ದಾರಿ

ಕನ್ನಡಾಂಬೆಯ ಹಿರಿಮೆ

ಬೆನಗಲ್ ರಾಮರಾವ್
ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ ಕನ್ನಡವೆ ಎನ್ನುಸಿರು ಪೆತ್ತೆನ್ನ ತಾಯಿ ಕನ್ನಡವೆ ಧನಧಾನ್ಯ ಕನ್ನಡವೆ ಮನೆಮಾನ್ಯ ಕನ್ನಡವೆ ಯೆನಗಾಯ್ತು ಕಣ್ಣು ಕಿವಿ ಬಾಯಿ ಕನ್ನಡದ ಸವಿಮಾತು ಮನ್ನಣೆಯ ಪಳಮಾತು ಕನ್ನಡ ಸರಸ್ವತಿಯು ನವ ಕಲ್ಪಲತೆಯು ಕನ್ನಡದ ವರಚರಿತೆ ವಿಮಲ ಗಂಗಾ ಸರಿತೆ ಕನ್ನಡವು ಸಿರಿಪೆಂಪು ಎನಗೆ ನರುಗಂಪು ಕನ್ನಡ ಸನ್ಮಾನ ವೆನಗದುವೆ ವರಮಾನ ಕನ್ನಡಿಗರ ಸ್ವತಂತ್ರವದೆ ಪರಮ ... ಪೂರ್ಣಕವಿತೆಗೆ ದಾರಿ

ಬಲ್ಲೆಯೇನು ನೀನು

ಪಳಕಳ ಸೀತಾರಾಮಭಟ್ಟ
ಕಣ್ಣು ತೆರೆದು ಮೊದಲ ಬೆಳಕು ನೋಡಿದಾಗ ನಾನು ಕೇಳಿದಂಥ ಮಾತು ಇದುವೆ ಬಲ್ಲೆಯೇನು ನೀನು? ತಾಯ ತೊಡೆಯ ತೊಟ್ಟಿಲಲ್ಲಿ ಮಲಗಿದಾಗ ನಾನು ತೊದಲಿದಂಥ ಮಾತು ಇದುವೆ ಬಲ್ಲೆಯೇನು ನೀನು? ಪ್ರೀತಿ ಹೊಂದಿ ಮನೆಯ ಮಂದಿ ಆಡಿದಾಗ ನಾನು ಕಲಿತುಕೊಂಡ ಮಾತು ಇದುವೆ ಬಲ್ಲೆಯೇನು ನೀನು? ಕನಸಿನಲ್ಲಿ ನೆನಸಿನಲ್ಲಿ ಕಷ್ಟ-ಸುಖದಿ ನಾನು ನೆನೆವ, ನುಡಿವ ಮಾತು ಇದುವೆ ... ಪೂರ್ಣಕವಿತೆಗೆ ದಾರಿ

ಕನ್ನಡ ಪದಗೊಳು

ಜಿ . ಪಿ . ರಾಜರತ್ನಂ
‘ಯೆಂಡ ಕುಡಿಯಾದ್ ಬುಟ್ ಬುಡ್ ರತ್ನ!’ ಅಂತ್ ಔನ್ ಏನಾರ್ ಅಂದ್ರೆ ! ಮೂಗ್ ಮೂರ್ ಚೂರಾಗ್ ಮುರಸ್ಕೋಂತೀನಿ ದೇವರ್ ಮಾತ್ಗ್ ಅಡ್ಬಂದ್ರೆ ! ‘ಯೆಂಡ ಬುಟ್ಟೆ, ಯೆಡ್ತೀನ್ ಬುಟ್ ಬುಡ್!’ ಅಂತ್ ಔನ್ ಏನಾರ್ ಅಂದ್ರೆ – ಕಳದೋಯ್ತ್ ಅಂತ ಕುಣದಾಡ್ತೀನಿ ದೊಡ್ಡ್ ಒಂದ್ ಕಾಟ !, ತೊಂದ್ರೆ ! ‘ಕನ್ನಡ್ ಪದಗಳ್ ಆಡೋದ್ನೆಲ್ಲ ... ಪೂರ್ಣಕವಿತೆಗೆ ದಾರಿ
Loading...